ಸುಭಾಷಿತ -೨೯

June 14, 2017 ರ 2:37 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಖಂ ಸ್ವಪಿತ್ಯನೃಣವಾನ್ ವ್ಯಾಧಿಮುಕ್ತಶ್ಚ ಯೋ ನರಃ।

ಸಾವಕಾಶೈಸ್ತು ಯೋ ಭುಂಕ್ತೇ ಯಸ್ತು ದಾರೈರ್ನ ಸಂಗತಃ।।

 

ಪದಚ್ಛೇದ:

ಸುಖಂ ಸ್ವಪಿತಿ ಅನೃಣವಾನ್ ವ್ಯಾಧಿಮುಕ್ತಃ ಚ ಯಃ ನರಃ।

ಸಾವಕಾಶೈಃ ತು ಯಃ ಭುಂಕ್ತೇ ಯಃ ತು ದಾರೈಃ ನ ಸಂಗತಃ।।

 

ಅನ್ವಯ/ಪ್ರತಿಪದಾರ್ಥ:

ಯಃ(ಯಾವ) ನರಃ(ವ್ಯಕ್ತಿ) ಅನೃಣವಾನ್(ಋಣ ಇಲ್ಲದೋನು), ವ್ಯಾಧಿಮುಕ್ತಃ (ರೋಗ ಇಲ್ಲದ್ದೋನು) ಚ (ಮತ್ತು) ಸಾವಕಾಶೈಃ(ನಿಧಾನವಾಗಿ) ಯಃ (ಆರು) ಭುಂಕ್ತೇ(ಉಣ್ಣುತ್ತನೋ)

ತು (ಹಾಗೂ) ಯೇ(ಆರು) ದಾರೈಃ(ಹೆಂಡತಿಯ) ನ ಸಂಗತೇ(ಸಾಂಗತ್ಯ ಹೊಂದಿದ್ದಯಿಲ್ಲೋ) ಸಃ (ಅವ) ಸುಖಂ (ಸುಖವಾಗಿ) ಸ್ವಪಿತಿ (ಒರಗುತ್ತ)

 

ಭಾವಾರ್ಥ:

ಸಾಲಸೋಲ ಇಲ್ಲದ್ದೋನು, ರೋಗಂಗಳಂದ ಮುಕ್ತಿ ಹೊಂದಿದವ,

ನಿಧಾನವಾಗಿ ಸಾವಕಾಶವಾಗಿ ಊಟಮಾಡುವವ ಮತ್ತು ಸ್ತ್ರೀ ಸಾಂಗತ್ಯ ಇಲ್ಲದವ ಯಾವಾಗಲೂ ಸುಖವಾಗಿ ಒರಗುಗು.

 

ಚಿಂತೆ ಇಲ್ಲದವಂಗೆ ಸಂತೆಲಿಯೂ ಒರಕ್ಕು ಬಕ್ಕು. ಸಾಲ ಇದ್ದರೆ ಚಿಂತೆ ತಪ್ಪಿದ್ದಲ್ಲ.ಸಾಲ ಇಲ್ಲದ್ದವ ಸುಖಲ್ಲಿ ಒರಗುಗು

 

ಆರೋಗ್ಯ ಸರಿ ಇಲ್ಲದ್ದೆ ಒರಗದ್ದವ ರೋಗಂದ ಬಿಡುಗಡೆ ಅಪ್ಪಗ ಒರಗುಗು.

 

ವಾಯು ಸಂಚಾರಕ್ಕೆ ತಕ್ಕಷ್ಟು ಹೊಟ್ಟೆಲಿ ಜಾಗೆ ಒಳಿವಾಂಗೆ ನಿಧಾನವಾಗಿ ಉಂಡರೆ ಲಾಯ್ಕ ಒರಕ್ಕು ಬಕ್ಕು. ಅದು ಬಿಟ್ಟು ಗಬಗಬನೆ ಮೂಗಿಂಗೆ ಮುಟ್ಟ ತಿಂದರೆ ಒರಕ್ಕು ಸರಿಯಾಗಿ ಬಾರ.

 

 

ಧಾರ್ಮಿಕ ಚೌಕಟ್ಟು ಮೀರಿದ ಸ್ತ್ರೀ ಸಾಂಗತ್ಯ ಇದ್ದರೆ ಅದು ಕಾಮುಕತೆ. ಕಾಮುಕಂಗೆ ಯಾವತ್ತೂ ನಿದ್ದೆ ಬಾರ. ಕಾಮವ ತ್ಯಜಿಸಿವ ಸುಖವಾಗಿ ಒರಗುಗು.

 

ವಿದುರನೀತಿಲಿಯೂ ಇದನ್ನೇ ಹೇಳ್ತ: ಹೃತಸ್ವಂ ಕಾಮಿನಂ ಚೋರಂ ಆವಿಶಂತಿ ಪ್ರಜಾಗರಾಃ :-

ಸಂಪತ್ತು ಕಳಕ್ಕೊಂಡವಂಗೆ, ಕಾಮುಕಂಗೆ, ಕಳ್ಳಂಗೆ ಒರಕ್ಕು ಬಾರ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಿಶ್ಚಿಂತಿತನಾಗಿ, ನಿರೋಗಿಯಾಗಿ ಸರಿಯಾಗಿ ಒರಗೆಕ್ಕಾದರೆ ಯಾವ ರೀತಿಯ ಜೀವನ ಶೈಲಿ ಅಳವಡಿಸೆಕ್ಕು ಹೇಳಿ ಚೆಂದಕೆ ವಿವರಿಸಿದ ಸುಭಾಷಿತ.
  ಒದಗಿಸಿದ ಡಾಕ್ಟ್ರಿಂಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆ ಮಾತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ
“ಇಂದ್ರಾಣ ಮಕ್ಕೊ ಮುಂದಿನ ಜನಾಂಗ. ಅವಕ್ಕೆ ನಮ್ಮ ಗೋತ್ರ-ಸೂತ್ರ, ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ, , ಒಳ್ಳೆದು,... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಡೈಮಂಡು ಭಾವಜಯಶ್ರೀ ನೀರಮೂಲೆಒಪ್ಪಕ್ಕವಸಂತರಾಜ್ ಹಳೆಮನೆವೆಂಕಟ್ ಕೋಟೂರುಶ್ರೀಅಕ್ಕ°ಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿವೇಣೂರಣ್ಣಮುಳಿಯ ಭಾವವಿದ್ವಾನಣ್ಣಕೊಳಚ್ಚಿಪ್ಪು ಬಾವಅಕ್ಷರದಣ್ಣವೇಣಿಯಕ್ಕ°ಅಕ್ಷರ°ಶಾ...ರೀಉಡುಪುಮೂಲೆ ಅಪ್ಪಚ್ಚಿವಿಜಯತ್ತೆರಾಜಣ್ಣಸಂಪಾದಕ°ಕಜೆವಸಂತ°ಚೆನ್ನಬೆಟ್ಟಣ್ಣಸುಭಗಶಾಂತತ್ತೆಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
Ram Kishan Sadashiva Rao Pallade

ಬೆಣಚ್ಚಿಪ್ಪಲ್ಲಿ ಹುಡ್ಕಲೆ