ಸುಭಾಷಿತ – ೩೧

ಕರೋತಿ ಸರ್ವಕರ್ಮಾಣಿ ಪ್ರಾಪ್ತುಮಾರಾಮಜೀವನಮ್।

ವಿರಾಮರಹಿತೋ ಭೂತ್ವಾ ಲಭತೇ ಕಷ್ಟಜೀವನಮ್।।

 

ಪದವಿಭಾಗ:

ಕರೋತಿ ಸರ್ವಕರ್ಮಾಣಿ ಪ್ರಾಪ್ತುಂ ಆರಾಮಜೀವನಮ್।

ವಿರಾಮರಹಿತಃ ಭೂತ್ವಾ ಲಭತೇ ಕಷ್ಟಜೀವನಮ್।।

 

ಅನ್ವಯಾರ್ಥ:

 

ಆರಾಮಜೀವನಂ (ಸುಖಜೀವನವ) ಪ್ರಾಪ್ತುಂ(ಪಡವಲೆ) ಸರ್ವಕರ್ಮಾಣಿ (ಏನೆಲ್ಲ ಕೆಲಸ) ಕರೋತಿ (ಮಾಡ್ತ)

ವಿರಾಮರಹಿತಃ ಭೂತ್ವಾ (ಪುರುಸೊತ್ತೇ ಇಲ್ಲದ್ದೆ) ಕಷ್ಟಜೀವನಂ ಲಭತೇ (ಕಷ್ಟ ಜೀವನವ ಪಡೆತ್ತ)

 

ಭಾವಾರ್ಥ:

 

ಇದು ಮಣಿಲ ಕದಲೀವನ ದಿವಂಗತ ಚ. ವಿಷ್ಣು ಶಾಸ್ತ್ರಿಗಳ ಸ್ವರಚಿತ ಶ್ಲೋಕ.

 

ಅನಾದಿ ಕಾಲಂದ ಆಧುನಿಕ ಕಾಲದವರೆಗೂ ಜೀವಿ ಏನೇ ಮಾಡಿದರೂ ಅದು ಕೇವಲ ಸುಖಕ್ಕಾಗಿ ಮಾತ್ರ.

ಅದು ಕ್ಷಣಿಕವಾದ ಬಾಯಾರಿಕೆ ಹಿಂಗುವ ಸುಖ ಆದಿಕ್ಕು ಅಥವಾ ಪಾರಮಾರ್ಥಿಕಸುಖವಾದ ಮೋಕ್ಷ ಸಾಧನೆಯೇ ಆದಿಕ್ಕು.

ಪ್ರಾಚೀನ ಋಷಿ ಮುನಿಗೊ ವೇದ ಶಾಸ್ತ್ರ ಪುರಾಣಾದಿಗಳ ಮೂಲಕ ಆ ಆತ್ಯಂತಿಕ ಸುಖಸಾಧನೆಯ ತೋರುಸುತ್ತವು.

 

ಆದರ ಸಾಮಾನ್ಯರಾದ ನಮ್ಮಂತಹ ಲೌಕಿಕರು ಸುಖದ ಮರೀಚಿಕೆಯ ಬೆನ್ನು ಹಿಡುದು ಪಾಡು ಪಡುದರ ಈ ಶ್ಲೋಕಲ್ಲಿ ಹೇಳಿದ್ದವು. ಮುಂದೆ ಸುಖ ಇದ್ದು ಹೇಳುವ ಭ್ರಮೆಲಿ ಮನುಷ್ಯ ಈಗ ಸಿಕ್ಕುವ ಸುಖವ ಅನುಭವಿಸದ್ದೆ ಸುಖದ ಭ್ರಮೆಲಿ ಪಾಡು ಪಡ್ತ.

ಆರಾಮ ಜೀವನ ಬೇಕಾರೆ ಸಂಪತ್ತು, ಆ ಸಂಪತ್ತು ಸಿಕ್ಕೆಕ್ಕು ಹೇಳಿ ಹಗಲಿರುಳು ದುಡಿತ್ತ.

ಅಪ್ಪ ಕಷ್ಟ ಪಟ್ಟು ಮಾಡಿದ ಮೂರೆಕ್ರೆ ಜಾಗೆಲಿ ಕೃಷಿ ಮಾಡಿ ಹನ್ನೆರಡು ಖಂಡಿ ಅಡಕ್ಕೆ ಅಪ್ಪಗ ಇನ್ನೊಂದಷ್ಟು ಜಾಗೆ ತೆಕ್ಕೊಂಡು ಕೃಷಿ ಮಾಡಿ ಮಾಡಿ ಇವ ಮುದ್ಕ ಆದ. ಆನು ಬಂಙ ಬಂದೇ ಮುದ್ಕ ಆದೆ, ಮಗ ಸುಖಲ್ಲಿ ಇರಲಿ ಹೇಳಿ ಜೀವನ ಮುಗುಸಿದ.

ಮಗ ಪುನಃ ಅಪ್ಪನ ಆಸ್ತಿಯ ದೊಡ್ಡ ಮಾಡ್ಲೆ ಕಷ್ಟಪಟ್ಟು ದುಡಿವಲೆ ಸುರು. ಅವಂಗೂ ಪುರುಸೊತ್ತೇ ಇಲ್ಲೆ.

ಹೀಂಗೆ ಆರಾಮಜೀವನಕ್ಕಾಗಿ ಪುರುಸೊತ್ತಿಲ್ಲದ್ದೆ ದುಡಿವದು,

ವಿರಾಮ ಇಲ್ಲದ್ದ ಕಷ್ಟ ಜೀವನವ ಪಡವದು.

ಕೃಷಿಕ ಆದರೂ ವೈದ್ಯ ಆದರೂ ಎಂಜಿನಿಯರೇ ಆದರೂ

ಕಥೆ ಎಲ್ಲೋರದ್ದೂ ಒಂದೇ .

ಪುಣಚ ಡಾಕ್ಟ್ರು

   

You may also like...

7 Responses

 1. ತಾನು ಮಾಡಿಮಡುಗಿದ ಸಂಪತ್ತಿನ ಅನುಭವಿಸಲಾದರೂ ರಜಾ ಪುರುಸೊತ್ತು ಮತ್ತೆ ಮನಸ್ಸು ಇರೆಕು.

 2. ಪುರುಸೊತ್ತು ಇದ್ದರೂ ಮನಸ್ಸು ಬತ್ತಿಲ್ಲೆ
  ಮನಸ್ಸು ಬಂದರೂ ಆಸೆ ಬಿಡ್ತಿಲ್ಲೆ
  ಅಕೇರಿಗಪ್ಪಗ ಆಸೆ ಬಿಟ್ಟರೂ
  ಖರ್ಚು ಮಾಡ್ಲೆ ಎಡಿತ್ತಿಲ್ಲೆ

 3. ಚೆನ್ನೈ ಬಾವ says:

  ಡಾಕ್ಟ್ರು ಭಾವನ ಸುಭಾಷಿತ ಒಪರೇಷನ್ ಲಾಯಕ ಆವ್ತಾ ಇದ್ದು. ಒಪ್ಪ

 4. ಪುಣ್ಚದ ಡಾಕ್ಟರೇ, ಕಬ್ಬಿಣದ ಕಡ್ಳೆಯ ಹಾಂಗೆ ಇಪ್ಪ ನಿಂಗಳ ಲೇಖನಕ್ಕೆ ಹೆಚ್ಚು ಅಭಿಪ್ರಾಯ ಬಾರದ್ದು ಸ್ವಾಭಾವಿಕ. ಅದು ಎಲ್ಲೋರಿಂಗು ಜೀರ್ಣ ಆವುತ್ತಿಲ್ಲೆ. ಅದ್ಭುತ ಲೇಖನ ವಿಷಯದ ದ್ರೃಷ್ಟಿಂದ.

 5. ನಿತ್ಯ ನೂತನವಾದ ಹಾಂಗೂ ಶಾಶ್ವತವಾಗಿ ಇಪ್ಪ ಲೇಖನ ಬರದ ಪುಣ್ಚದ ಡಾಕ್ಟರ್ಂಗೆ ನಮೋನಮಃ. ಅಜ್ಜಂದ್ರಿಂಗೆ ಅಡಕ್ಕೆ ಯ ಗುದ್ದಿ ಕೊಡುವ ಹಾಂಗೆ ಡಾಕ್ಟರ್ ರು ಪ್ರಯತ್ನ ಪಟ್ಟಿದವು. ಅದು ನಾಟಿದ್ದಿಲ್ಲೆ ಹೇದು ತೋರುತ್ತು.

  • ಬರವಣಿಗೆಗೆ ಆನು ಹೊಸಬ. ಇಷ್ಟರವರೆಗೂ ಬರೀ ಓದಿಗೊಂಡೇ ಇದ್ದದು
   ಆದಷ್ಟು ಪ್ರಯತ್ನ ಮಾಡ್ತೆ
   ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *