“ಹದ ಅರ್ತು ಹರಗು, ಬೆದೆ ಅರ್ತು ಬಿತ್ತು”-{ಹವ್ಯಕ ನುಡಿಗಟ್ಟು-38}

 

-“ಹದ ಅರ್ತು ಹರಗು, ಬೆದೆ ಅರ್ತು ಬಿತ್ತು”.-{ಹವ್ಯಕ ನುಡಿಗಟ್ಟು-38}

ಈ ಹದ ಅರ್ತು  ಹರಗುದು  ಎಂತರಾಳಿ ಬೇಕನ್ನೆ!. ಕೇಳ್ತೀರೋ!?.ಸರಿ    ಇಲ್ಲಿ  ಕೇಳಿ ಒಂದಿಷ್ಟು..,ಮದಲಿಂಗೆ ಎಲ್ಲಾ ಕೃಷಿಕರಿಂಗು ಒಂದ್ರಜ  ಗೆದ್ದೆ ಬೇಸಾಯ ಇಲ್ಲದ್ದಿರ. ಅಂಬಗೆಲ್ಲ  ಅಕ್ಕಿ ಆಯೆಕ್ಕಾರೆ ಮನಗಳಲ್ಲೆ, ಭತ್ತ ಬೇಶುದು.ಅದರ ಒಣಗ್ಸಿ, ಒಣಕ್ಕೆಲಿ ಮೆರುದರೆ ಕುಚ್ಚಿಲಕ್ಕಿ, ಬೇಶದ್ದ ಭತ್ತ ಮೆರುದರೆ; ಬೆಣ್ತೆಕ್ಕಿ. ಆ ಭತ್ತ ಬೇವಗಳು ನೋಡಿಗೊಳೆಕ್ಕು. ಅದು ಹೆಚ್ಚು ಬೇವಲೂ ಆಗ, ಕಮ್ಮಿಯೂ ಅಪ್ಪಲಾಗ.ಈ ಹದಾಕೆ ಬೇಶಿದ ಭತ್ತವ  ಒಣಗಲೆ  ಹರಗೆಕ್ಕಿದ. ಇನ್ನು ’ಬೆದೆ ಅರ್ತು’ ಹೇಳಿರೆಂತ?. ಅದುವೋ.. ನೇಜಿ ಹಾಕಲೆ  ಭತ್ತ ಮುಂಗೆ ಬರುಸೆಕ್ಕಿದ. ಅದು ಬೆದೆ[ಮುಂಗೆ] ಬರೆಕಾರೆ ಭತ್ತ ಬೊದುಲುಸಿ, ಸಗಣ ಉದ್ದಿದ ಹೆಡಗೆಲಿ ತುಂಬ್ಸಿ, ಅದಕ್ಕೆ ಗೋಣಿ ಮುಚ್ಚಿ, ಭಾರ ಮಡಗೆಕ್ಕು.ಅದು ಒಂದೆರಡು ದಿನಲ್ಲಿ ಮುಂಗೆ ಬತ್ತು. ಅದರ ಬಿತ್ತುದು.[ಮನುಷ್ಯರ ಸಂತಾನ  ಕ್ರಿಯೆಲಿಯೂ ಬೆದೆ ಬರೆಕಾಡ. ಅದರ ವಿವರಣೆ ಇಲ್ಲಿ ಬೇಡ. ಡಾಕ್ಕ್ಟ್ರು ಮಾವ ಹೇಳುಗು]

ಈ  ಮಾತಿನ ಜೀವನಲ್ಲಿ ಎಂತಕೆ ಉದಾಹರಣೆ ಕೊಡುದು!?. ಉದಾಃ-  ಮಗಂಗೆ ಮದುವೆ ಮಾಡಿ ತಂದ ಸೊಸೆಯ ಒಂದೇ ಬಿಟ್ಟಿಂಗೆ ಹೇಳಿದಾಂಗೆ ಕೇಳ್ಸುವೆ ಹೇದು ಅತ್ತೇರತನ ಮಾಡೀರಕ್ಕೊ!?.ಹಾಂಗೆ ಮಾಡಿತ್ಕಂಡ್ರೆ 36 ಆಗೆಂಡಿಕ್ಕು.ಅದು 63 ಆಯೆಕ್ಕಾರೆ; ಅದರ ಕೊಂಗಾಟಲ್ಲಿ ಹೆತ್ತ ಮಗಳಾಂಗೆ ನೋಡಿಗೊಂಡು ಒಂದು ಹದಕ್ಕೆ ತರೆಕಿದ.ಮತ್ತೆ ಬೆದೆ ಬಂದಪ್ಪಗ ಬಿತ್ತೆಕ್ಕು. ಅಂಬಗ ಒಳ್ಳೆದಾಗಿ ನಾವು ಜಾನ್ಸಿದ ಅಕ್ಕಿಯೂ  ನೇಜಿಯೂ ಅಕ್ಕು.ಈ ಮಾತಿನ ಉದಾಹರಣೆ [ಸಾಮರಸ್ಯಕ್ಕೆ],  ಇದೊಂದೇ ವಿಷಯಕ್ಕಲ್ಲ. ಮಕ್ಕೊಗೆ  ಬುದ್ದಿ ಕಲುಶುಗ,  ಪಾಠ ಹೇಳಿಕೊಡುವಾಗ,ಕೆಲಸದ ಆಳುಗಳತ್ರೆ  ಹೆದರ್ಸುವಗ, ಹೀಂಗಿದ್ದ ಸಂದರ್ಭಲ್ಲೆಲ್ಲ ಉಪಯೋಗುಸುಗು. ಒಟ್ಟಿಲ್ಲಿ ಸಂದರ್ಭವ ನಮ್ಮ ಹಿಡಿತಕ್ಕೆ ತೆಕ್ಕೊಳೆಕ್ಕೂದು ಅರ್ಥ.

 

ವಿಜಯತ್ತೆ

   

You may also like...

2 Responses

  1. ಶರ್ಮಪ್ಪಚ್ಚಿ says:

    ಜೀವನಲ್ಲಿ ಬಪ್ಪ ಸಂದರ್ಭಂಗಳ ಯಾವ ರೀತಿ ಒಳ್ಳೆದಾಗಿಸಿಗೊಂಡು ಹೋಯೆಕ್ಕು ಹೇಳ್ತ ಸಂದೇಶ ಕೊಡುವ ನುಡಿಗಟ್ಟು. ವಿಜಯತ್ತಿಗೆಗೆ ಧನ್ಯವಾದಂಗೊ

  2. ಶರ್ಮಭಾವನಾದರೂ ಒಬ್ಬ ಓದಿ ನೋಡಿ ಅಭಿಪ್ರಾಯ ಹೇಳಿದ್ದಕ್ಕೆ ಸಂತೋಷಾತು .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *