“ಹಳೆಕೈ ಹೊಟ್ಟಗೊಳ್ಳೆದು, ಹೊಸಕೈ ಹೊಳಪಿಂಗೊಳ್ಳೆದು” {ಹವ್ಯಕ ನುಡಿಗಟ್ಟು-46}

February 4, 2016 ರ 7:14 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಹಳೆ ಕೈ ಹೊಟ್ಟಗೊಳ್ಳೆದು,ಹೊಸ ಕೈ ಹೊಳಪಿಂಗೊಳ್ಳೆದು” {ಹವ್ಯಕ ನುಡಿಗಟ್ಟು-46}

 

ನಮ್ಮ ನಾಣಂ[’ನಾರಾಯಣ’. ಅಜ್ಜನ ಹೆಸರು.  ಅಜ್ಜಿಗೆ ಹಾಂಗೆ ದೆನಿಗೇಳುಲೆಡಿಗೊ?ಅಜ್ಜಿ ಒಟ್ಟಿಂಗೆ ಎಲ್ಲೋರು ನಾಣ ಹೇಳುದು]ಗೆ,ಕೂಸಿನ ಹುಡುಕ್ಕಿ,ಹುಡುಕ್ಕೀ ಇವಾರಿ ಮದುವೆ ಆತು ಹೇಳುವೊಂ.ನಾಣ ಒಂದು ಕಾಸಗಿ ಯು.ಪಿ.ಶಾಲೆಲಿ ಮಾಸ್ಟ್ರು. ಆ ಒಪ್ಪಕ್ಕನೂ ಅದೇ ಶಾಲೆ ಟೀಚರು. ಅತ್ತೂ –ಇತ್ತೂ ಕೊಂಡೊಪದು, ಕೊಡುವದೂಳಿ ಮಾತು ಒರಪ್ಪಿ ಅಪ್ಪಗ ಮಾಣಿ ಮನೆವಕ್ಕಾದ ಸಂತೋಷ ಅಷ್ಟಿಷ್ಟಲ್ಲ!. ಕಾರಣ, ಕೂಸು ಬಹು ಚೆಂದ!. ಮದುವೆ ಗೌಜಿಲಿ ಕಳಾತು. ಎನ್ನ ಎಜಮಾಂತಿ ಚೆಂದದ ಚೆಲುವೆ ಹೇಳಿ ನಾಣಂಗೆ ಒಣ   ಜಂಬ. ಸೊಸೆ ಚೆಂದದ ಚೆಲುವೆ ಹೇಳಿ ಅತ್ಯೋರಿಂಗೂ ಹೆಮ್ಮೆ!.

ದಿನ ಉರುಳಿತ್ತು. ಮದ-ಮದಾಲು ಸೊಸೆ ಹತ್ರೆ ಕೆಲಸ ಹೇಳದ್ರೂ ಮತ್ತೆ-ಮತ್ತೆ ಮಾಡ್ಸದ್ದೆ ಕೂಬ್ಬಲೆಡಿತ್ತೋ?.ಸುರು-ಸುರುವಿಂಗೆ  ಹೇದಾಂಗೆ ಮಾಡೆಂಡಿದ್ದ ಸೊಸೆ; ಈಗೀಗ “ಎನ ಶಾಲೆಂದ ಬಂದಪ್ಪಗ ಬಚ್ಚುತ್ತು” ಹೇದು ರಾಗ ತೆಗವಲೆ ಸುರುಮಾಡಿತ್ತು. ’ಒತ್ತಾಯಕ್ಕೆ ಶಂಭಟ್ಟನ ರುಜು’  ಹೇದೊಂಡು ಮಾಡೀರೂ ಮಾಡಿದ ಪಾಕಾಯಿತನ ತಿಂಬಲೆ ಮೆಚ್ಚ!.ಒಂದೋ ಉಪ್ಪು ಹೆಚ್ಚ,ಅಲ್ಲದ್ರೆ ಮೆಣಸು ಹೆಚ್ಚ!. ಅಶನ ಹೇಳುಸ್ಸು ಬೆಂದರೆ;  ಬೆಂದು ಅಂಬಲಿ!, ಇಲ್ಲದ್ರೆ ಮುಗುಳಕ್ಕಿ!!. ಈ ಸನ್ನಿವೇಶ ಕಂಡ ಮಾವನೋರು “ಹಳೆ ಕೈ ಹೊಟ್ಟಗೊಳ್ಳೆದು, ಹೊಸಕೈ ಹೊಳಪಿಂಗೊಳ್ಳೆದು” ಹೇಳ್ಳೆ ಸುರುಮಾಡಿದೊವು.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಚೆನ್ನೈ ಬಾವ°
    ಚೆನ್ನೈ ಭಾವ°

    ಮಾವನೋರ ಮಾತು ಕೇಟು ನೆಗೆ ಬಂದದಪ್ಪು ಸುರುವಿಲ್ಲಿ ಒಂದರಿ. ನುಡಿಗಟ್ಟು ಇಪ್ಪದರ ಇಪ್ಪಾಂಗೆ ವಿಜಯತ್ತೆ ಹೇದ್ದಂತೂ ಲಾಯಕ ಆಯಿದು. ಹರೇ ರಾಮ.

    [Reply]

    VA:F [1.9.22_1171]
    Rating: 0 (from 0 votes)
  2. ಗೋಪಾಲಣ್ಣ
    S.K.Gopalakrishna Bhat

    ಒಳ್ಳೆ ಕತೆ, ಒಳ್ಳೆ ನುಡಿಗಟ್ಟು , ಒಳ್ಳೆ ವಿವರಣೆ .

    [Reply]

    VA:F [1.9.22_1171]
    Rating: 0 (from 0 votes)
  3. ವಿಜಯತ್ತೆ

    ಒಪ್ಪಕೊಟ್ಟ ಚೆನ್ನೈ ಭಾವಂಗೂ ಗೋಪಾಲಂಗೂ ಧನ್ಯವಾದಂಗೊ. ಬರದ ಶುದ್ದಿಯ ಮುಂದೆ ಒಪ್ಪ ಕೊಡ್ತ ಕಾಲಮಿಲ್ಲಿ ‘೦’ ಕಂಡ್ರೆ ಮುಂದಾಣದ್ದು ಬರವಲೆ ಉತ್ಸಾಹ ಬತ್ತಿಲ್ಲೆಯಿದ .

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಬಟ್ಟಮಾವ°ಡಾಮಹೇಶಣ್ಣರಾಜಣ್ಣನೆಗೆಗಾರ°ದೊಡ್ಡಮಾವ°ನೀರ್ಕಜೆ ಮಹೇಶಚೆನ್ನಬೆಟ್ಟಣ್ಣವಾಣಿ ಚಿಕ್ಕಮ್ಮಪುತ್ತೂರಿನ ಪುಟ್ಟಕ್ಕದೀಪಿಕಾವಿದ್ವಾನಣ್ಣವೆಂಕಟ್ ಕೋಟೂರುಉಡುಪುಮೂಲೆ ಅಪ್ಪಚ್ಚಿಶ್ರೀಅಕ್ಕ°ಸಂಪಾದಕ°ಬೊಳುಂಬು ಮಾವ°ಕೆದೂರು ಡಾಕ್ಟ್ರುಬಾವ°ಜಯಗೌರಿ ಅಕ್ಕ°ಪುತ್ತೂರುಬಾವಕಜೆವಸಂತ°ಶೀಲಾಲಕ್ಷ್ಮೀ ಕಾಸರಗೋಡುಚುಬ್ಬಣ್ಣದೊಡ್ಮನೆ ಭಾವಸುಭಗvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ