ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

October 10, 2017 ರ 10:47 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಹಾಡುಗೊ

ಬಡೆಕ್ಕಿಲ ಸರಸ್ವತಿ ಅತ್ತೆ ಅವರ ಸಂಗ್ರಹಂದ ಕೆಲವು ಹವ್ಯಕ ಹಾಡುಗಳ ನವಗಾಗಿ ಕಳ್ಸಿಕೊಟ್ಟಿದವು.ಬಡೆಕ್ಕಿಲ ಸರಸ್ವತಿ

 

ಕಳುದ ಶತಮಾನಕ್ಕೂ ಹಿಂದಾಣ ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

ಮಗುವೆ ಬಾ ಮುದ್ದುಮುಗುಳೆ ಬಾ
ವಜ್ರ..ದಾ ಹರಳೇ ಬಾ….
ಅಜ್ಜನಾ ಕೊರಳ… ಪದಕಾವೇ ಬಾ
ಎಂದೂ ಅಜ್ಜಿ ಮೊಮ್ಮಗನ
ಕರೆವಾಳೂ ಕರೆವಳೂ

ಏಕಳುವೇ ಎಲೆ ರಂಗಾ
ಬೇಕಾದ್ದೂ ನಿನಗುಂಟೂ
ನಾಕೆಮ್ಮೆ…ಕರೆದಾ ನೊರೆಹಾಲೂ
ನೊರೆಹಾಲು ನಿನಗುಂಟೂ ನಿನಗುಂಟೂ
ನೀ ಕೇಳಿದಾಗ…. ಕೊಡುವೇ…..
ಕೊಡುವೆನು ಕೊಡುವೆನೂ

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲಾ
ಎತ್ತಿಕೊಳ್ಳೆಂಬ ಹಟವಿಲ್ಲಾ ಹಟವಿಲ್ಲಾ
ನಿನ್ನಂಥಾ ಹತ್ತೂ ಮಕ್ಕಾಳಿರಬಹುದೂ
ಇರಬಹುದೂ….

ಅಳುವಾಗಾ ಮಕ್ಕೊಗೇ ಅಳಗೇಲಿ ಪಾಯಸಾ
ತಳಿಗೇಲಿ ನೂರೂ ಎಳ್ಳುಂಡೆ ಮಾಡೀ
ಮಡುಗಿದರೇ….
ಅಳುವಾಗ ಒಂದೊಂದು  ಕೊಡ್ಳಕ್ಕೂ
ಕೊಡ್ಳಕ್ಕೂ….

ತುಪ್ಪಶನ ಉಂಬಲೆ ತುಳುನಾಡಿಂಗ್ಹೋಯೆಕ್ಕೂ
ಅಕ್ಕಿಯ ಮೇಲೇ…ಬರೆ ಇಲ್ಲೇ…
ತುಳುನಾಡ ಮಕ್ಕಳಾ ಮೇಲೇ
ಕಲೆ ಇಲ್ಲೇ ಕಲೆ ಇ….ಲ್ಲೇ

೬ ಮನೆ ಮನೆ ದೋಸೆ

ಅಪ್ಪಚ್ಚೀ ಅಳಿಯಂಗೇ
ಸೊಪ್ಪಿನಾ…ಮೇಲ್ಲಾರಾ
ಹುಲ್ಲಕ್ಕೀ  ಅಶನಾ ಕಸಂಟೆಣ್ಣೇ…
ಕಸಂಟೆಣ್ಣೆ ಬಳ್ಸಿದರೇ..
ಅಪ್ಪಚ್ಚಿ ಅಳಿಯಾ° ಸವಿದುಂಗೂ
ಸವಿದುಂಗೂ

ತಾಯಿದ್ರೆ ತವರ್ಹೆಚ್ಚು
ತಂದಿದ್ರೆ ಬಳಗ್ಹೆಚ್ಚು
ದೇವರಿಗೂ ಹೆಚ್ಚು ಪತಿರಾಯಾ
ಎಲ್ಲರಿಗೂ ಹೆಚ್ಚು ರಾಮಚಂದ್ರನಂಥಾ
ಮಗ ಹೆಚ್ಚು
ಮಗನೇ ಹೆಚ್ಚು

ಉಪ್ಪರಿಗೆಯೊಳಗೇ…
ಪುತ್ರನ ತೊಟ್ಟಿಲ ಕಟ್ಟೀ ಜೋಗುಳ ಹಾಡಿ
ಒಪ್ಪಾಗೀ ಮೊಸರಾ ಕಡೆದಾಳೂ
ಒಪ್ಪಾಗೀ ಮೊಸರಾ ಕಡೆವಳು ನಮ್ಮಮ್ಮ
ಪಟ್ಟೆಪೀತಾಂಬರ ಮಡಿಯುಟ್ಟೂ…
ಪಟ್ಟೆಪೀತಾಂಬರ ಮಡಿಯುಟ್ಟು ಕಡೆವಾಗ
ಕೊಪ್ಪಿನ ಬೆಳಕೀಗೇ ಮಗನೆದ್ದಾ… (ಕೊಪ್ಪು= ಕರ್ಣಾಭರಣ)

೯ ನತದೃಷ್ಟ

ಕಣ್ಣು ಕಾಣದ ಪಕ್ಷೀ ಹಣ್ಣುಳ್ಳ ಮರಕ್ಹೋಗೀ
ಹಣ್ಣೆಂದು ತಿಂಗೂ ಕಸುಕಾಯಾ ಕಸುಕಾ…ಯಾ..
ಆ ಹ್ಗಕ್ಕೀ ಹಾಲೆಂದೂ ಕುದಿಗೂ ಹಣಿನೀರಾ…
ಹಣಿ ನೀ…ರಾ.

೧೦ ಸವತಿ

ನಾ ಮುಚ್ಚಿ ಮುಡಿವ ಮಲ್ಲಿಗೆಯ ಹೂವಾ…
ಅವಳೊಮ್ಮೆ ಮುಡಿಯಲಿ… ನಗಲ್ಹೇಳು
ನಾ ಮುಚ್ಚಿ ಮುಡಿವ ಕೇದಿಗೆಯ ಹೂವ
ಅವಳೊಮ್ಮೆ ಮುಡಿಯಲಿ… ನಗಲ್ಹೇಳು


೧೧. ಸಂಸಾರ

ಸಂತೆ ಸೂಳೆಯ ನಂಬೀ…
ಮನೆಯ ಹೆಂಡತ್ತಿಯ ಬಿಟ್ಟಾ°…
ತನದುದ್ದಾ ಬೆಳದಾ…ಹರುವೇಯ ನಂಬಿ…
ಕರವೆಮ್ಮೆ ಬಿಟ್ಟಾ°… ಅತಿ ಹೆಡ್ಡಾ°
ಅತಿ ಹೆಡ್ಡಾ°

~~~~~****~~~~~

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್
ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026
9019274678

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶ್ಯಾಮಣ್ಣ
  Shyamanna

  ಪದ್ಯಂಗೋ ಲಾಯ್ಕಿದ್ದು….

  [Reply]

  VA:F [1.9.22_1171]
  Rating: 0 (from 0 votes)
 2. Venugopal Kambaru

  ಲಾಯಕ ಇದ್ದು

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಬಾವ

  ಒಪ್ಪ

  [Reply]

  VA:F [1.9.22_1171]
  Rating: 0 (from 0 votes)
 4. pattaje shivarama bhat

  aanu ನಿನ್ನೆ ಅತ್ತಿಗೆಯ ಮೂಲಕ badekkila ಅತ್ತೆಯ ಹತ್ರೆ ಕೇಳಿದ್ದಷ್ಟೇ ಏಕೆ ಹೊಸ ಕಥೆ, ಕವನ ಬರದ್ದು ಹೇಳಿ. ಅದಾ ಬಂತದ

  [Reply]

  VA:F [1.9.22_1171]
  Rating: 0 (from 0 votes)
 5. pattaje shivarama bhat

  ಇದಲ್ಲಿ ಒಂದು ಪದ್ಯ ಎನಗೆ ಸಣ್ಣ ಕ್ಲಾಸಿಲ್ಲಿ ಪಾಠಕ್ಕೆ ಇದ್ದತ್ತು. ತಾಯಿದ್ರ tavarecchu ತಂದಿದ್ರ ಬಳಗೆಚ್ಚು ಸಾವಿರಕೆ ಹೆಚ್ಚು ಪತಿ ಪುರುಷ, ಹೊಟ್ಟೆಯ ಮಾಣಿಕದ haralu ಮಗ ಹೆಚ್ಚು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣvreddhiಅಕ್ಷರ°ಮಾಲಕ್ಕ°ವಿಜಯತ್ತೆಕಜೆವಸಂತ°ಪೆಂಗಣ್ಣ°ಡೈಮಂಡು ಭಾವಜಯಶ್ರೀ ನೀರಮೂಲೆಅಜ್ಜಕಾನ ಭಾವನೀರ್ಕಜೆ ಮಹೇಶಚೆನ್ನಬೆಟ್ಟಣ್ಣಶ್ರೀಅಕ್ಕ°ಪೆರ್ಲದಣ್ಣಬೋಸ ಬಾವಪ್ರಕಾಶಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಅಡ್ಕತ್ತಿಮಾರುಮಾವ°ಸುಭಗಅನುಶ್ರೀ ಬಂಡಾಡಿಉಡುಪುಮೂಲೆ ಅಪ್ಪಚ್ಚಿಕಾವಿನಮೂಲೆ ಮಾಣಿವೆಂಕಟ್ ಕೋಟೂರುಪುಣಚ ಡಾಕ್ಟ್ರುಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ