ಹವಿಗನ್ನಡನುಡಿ ಹಿಡಿತ ಸಾಧಕ ಎಂ.ನಾ.ಚಂಬಲ್ತಿಮಾರ್

April 28, 2014 ರ 10:37 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

—ಹವಿಗನ್ನಡ,ನುಡಿ ಹಿಡಿತ ಸಾಧಕ, ಎಂ. ನಾ. ಚಂಬಲ್ತಿಮಾರು—-{ಕಳಿಸಿದ್ದು  ವಿಜಯತ್ತೆ}

“ಹವ್ಯಕ ಭಾಷೆ”ಲಿ  ಹವ್ಯಕದವರೊಟ್ಟಿಂಗೆ ಮಾತಾಡ್ತಾ  ಹವ್ಯಕಭಾಷೆ ಹೇಳಿರೆ ಎನಗೆ ಕುಶಿ ಇದ್ದು. ಈ ಭಾಷೆಲಿ ಮಾತಾಡ್ಲೂ ಎನಗೆ ಅಭ್ಯಾಸ ಇದ್ದು ಹೇಳ್ತ ಹಲಾವು ಜೆನ ಹವ್ಯಕೇತರರ ಆನು ಕಂಡಿದೆ. ನಮ್ಮೊಟ್ಟಿಂಗೆ  ಅಚ್ಚುಕಟ್ಟಾಗಿ ಮಾತಾಡ್ತವರನ್ನೂ ನೋಡಿದ್ದೆ..ಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭಲ್ಲಿ ಶ್ರೀಯುತ ಕುಂಬಳೆ ಸುಂದರಾವ್ ಕಾಂಬಲೆ ಸಿಕ್ಕಿದವು. “ಎನ್ನ ಗುರ್ತಸಿಕ್ಕಿತ್ತೊ ವಿಜಯಕ್ಕಂಗೆ?” ಕೇಳ್ತಾ ರಜ ಮಾತಾದಿದವು. ಎಲಾ..,ನಿಂಗೊ ಹವ್ಯಕಭಾಷೆ ಮಾತಾಡ್ತಿರೋ? ಕೇಳುವಗ “ಏಕೆ, ಆನು ಹವ್ಯಕದವರೊಟ್ಟಿಂಗೇ ಒಡನಾಡಿ ದೊಡ್ಡಾದವಂ”  ಹೇಳಿದವು. ಆದರೆ ಒಂದು ಸಭಾವೇದಿಕೆಲಿ  ಅಂಜಿಕೆ ಇಲ್ಲದ್ದೆ ನಿರರ್ಗಳವಾಗಿ ಹವಿಗನ್ನಡಲ್ಲಿ ಮಾತಾಡುವವರ ಆನು ಇಂದು ಕಂಡೆ!. ಎಲ್ಲಿ? ಹೇಳಿ ಕಾರ್ಯಕ್ರಮಕ್ಕೆ ಹೋದವಕ್ಕೆ ಈಗಾಗಲೇ ಅಂದಾಜಿ ಆಗಿಕ್ಕಲ್ಲೊ?.ಅಪ್ಪು.ನಿಂಗಳ ಊಹನೆ ಸರಿ. ಅದುವೇ 27/4/14ರಂದು ಪುತ್ತೂರಿನ  ಜೈನಭವನಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವಿಷುವಿಶೇಷ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮಲ್ಲಿ!. ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಶ್ರೀ ಎಂ.ನಾ.ಚಂಬಲ್ತಿಮಾರ್. ಮಾತಿನ ಓಘ,ಸ್ವರ-ಭಾರ ಎಲ್ಲ ಸರಿಯಾಗಿದ್ದು, ಭಾಷೆಯ ಹಿಡಿತಲ್ಲಿ ಮಾತಾಡಿದ ಹಾಂಗಿತ್ತು ಮಿನಿಯ!!. ಅವು ಮಾತಾಡ್ತಾ “ಎನ್ನ ಮನೆಭಾಷೆ ಮಲಯಾಳ.ಆದರೆ ಮನೆಒಳ ಎಂಗೊ ಕನ್ನಡ ಮಾತಾಡಿಯೇ ಅಭ್ಯಾಸ.ಸಣ್ಣಾದಿಪ್ಪಗಳೇ ಎನ ಹವ್ಯಕದವರೊಟ್ಟಿಂಗೆ ಒಡನಾಡಿ ಹವ್ಯಕ ಭಾಷೆ ಬತ್ತು.ಹಾಂಗಿದ್ದರೂ ಸಭಾವೇದಿಕೆಲಿ ಹವ್ಯಕ ಭಾಷೆ ಮಾತಾಡುವದು ಇದೇ ಮೊದಲು!.” ಹೇಳುತ್ತಾ  ಹವಿಗನ್ನಡ  ಸರಿಯಾಗಿ ಮಾತಾಡಿದ್ದವು.ಕೇಳುಗರೆಲ್ಲಾ ನಿಶ್ಶಬ್ದವಾಗಿ ಕೇಳುತ್ತಿತ್ತಿದ್ದವು.

ಸಭಾವೇದಿಕೆಂದ ಕೆಳ ಇಳುದ ಮೇಲೆ  “ಹೇಂಗೆ ಆನು ಮಾತಾಡಿದ್ದು ಸರಿ ಆಯಿದೋ” ಕೇಳಿದವು ಎನ್ನತ್ರೆ. ತುಂಬ ಒಳ್ಳೆದಾಯಿದು.ಒಂದೆರಡು ಕಡೆ  ’ನಮ್ಮ’  ಹೇಳಿ ಉಪಯೋಗಿಸುವಲ್ಲಿ ’ಎಂಗಳ’ ಹೇಳಿ ಉಪಯೋಗಿಸಿದ್ದಿ ತಿದ್ದೆಕ್ಕಾದ ಶಬ್ಧ ಅಷ್ಟೆ ಇಪ್ಪದು ಹೇಳಿದೆ. ಅಪ್ಪು ಅರ್ತಿಕಜೆವೂ ಹಾಂಗೇ ಹೇಳಿದವು. ’ಮುಂದೆ ಸರಿಮಾಡ್ತೆ.’ ಅವರ ಬಾಯಿಂದ ಬಿದ್ದಪ್ಪಗ  “ಮುಂದೆ ಇದೇ ಸ್ಪರ್ಧಾವೇದಿಕಗೆ ಸೇರಿ” ಹೇಳುವದ್ದೇ  ಖಂಡಿತ ಸೇರ್ತೆ  ಹೇಳೆಕ್ಕೋ!!. ಅಂತಾ ಮನಸ್ಸೇ ಬೇಕಪ್ಪದು. ಹವ್ಯಕ ಭಾಷೆಯ ಒಳಿಶಿ ಬೆಳಶುವ ಕಾರ್ಯ ನಿಂಗಳಂತವರಿಂದಲೂ ಆಗೆಡದೋ?” ಕೇಳಿದೆ.  ಎಂತಹೇಳ್ತಿ  ನಮ್ಮ ಬಯಲಿನವು?

——-೦——

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. m.narayana chambaltimar

  yenna havigannada nudiya mechi kongatadalli bareda vijayattege sashtanga pranama…yenage havyaka bashe matadale idarinda bari utsaha bayndu. anude hayvaka basheli sahitya rachane madutte. mundana varshada spardhege anude tayari madutte. ningala asheervada irali…

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ನಮ್ಮ ದೇಶಲ್ಲಿ ಸ೦ಸ್ಕೃತಿ ಮತ್ತೆ ಪ್ರಾದೇಶಿಕ ಭಾಷೆಗೊ ನಾಶ ಆವುತ್ತಾ ಈ ಕಾಲಘಟ್ಟಲ್ಲಿ ಚ೦ಬಳ್ತಿಮಾರಣ್ಣನ ಮಾತುಗೊ ಅರ್ಥಪೂರ್ಣ ಆಗಿತ್ತು.ಒಪ್ಪಣ್ಣನ ಬೈಲು ಮಾಡ್ತಾ ಇಪ್ಪ ಪ್ರಯತ್ನವೂ ಇದೇ ದಾರಿಲಿಪ್ಪದರ ಅವು ಚೆ೦ದಕೆ ಗುರುತಿಸಿದ್ದವು.
  ಇನ್ನು,ಹವಿಗನ್ನಡಲ್ಲಿ ಮಾತಾಡಿದ್ದು — ಭಾರೀ ಚೀಪೆ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ‘ಎಂನಾ ‘ ಮಾತಾಡಿದ್ದದು ಹವ್ಯಕ ಮನೆ ಮಾತಿನವು ಮಾತಾಡಿದಾಂಗೆ ಇತ್ತಿದ್ದು.ಕೆಲವೊಂದು ಕಡೆ ಅನುನಾಸಿಕ ಶಬ್ದಂಗೊ ಸರಿ ಆಯಿದಿಲ್ಲೆ .ಅದು ಕ್ಷಮ್ಯ .ಅವ ಹವ್ಯಕರೊಟ್ತಿಗೇ ಬೆಳದ ಮಾಣಿ ಅಲ್ಲದೋ! ಬೈಲಿಂಗೆ ‘ಎಂನಾ ‘ ರ ಹವ್ಯಕ ರಚನೆಗೊ ಖಂಡಿತ ಬರಲಿ.ಆತ್ಮೀಯ ಸ್ವಾಗತ .

  [Reply]

  VN:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ‘ಎಂನಾ’ನಿನ್ನೆ ಹವಿಗನ್ನಡಲ್ಲಿ ಮಾತಾಡಿದ್ದದು ಲಾಯಕಾಗಿದ್ದತ್ತು.ಹವೀಕರ ಒಟ್ಟಿಂಗೇ ಬೆಳದ ಮಾಣಿ ಅಲ್ಲದೋ!. ಕೆಲವೊಂದು ಅನುನಾಸಿಕ ಶಬ್ದ ಗಮನಲ್ಲಿ ಮಡಿಕ್ಕೊಳೆಕು.

  ಎಂನಾ,….ನಿಂಗಳ ಹವಿಗನ್ನಡ ರಚನೆಗೊ ಬೈಲಿಂಗೆ ಬರಲಿ,ಯಕ್ಷಗಾನ ದ ಲೇಖನಂಗೊ ಇಲ್ಲಿ ಬಂದದು ಭಾರೀ ಕಮ್ಮಿ .ಅದರಿಂದಲೇ ಸುರುವಾಗಲಿ.ಸ್ವಾಗತ .

  [Reply]

  m.narayana chambaltimar Reply:

  khandita praytnisutte. gurugala asheerwada sada bayasutte…

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಹರೇರಾಮ, ಚಂಬಲ್ತಿಮಾರ್ರ ಕುಶಿ ಕಂಡು ಎನಗೂ ಮತ್ತೂ ಸಂತೋಷಾತು. ಹೀಂಗಿದ್ದ ಉತ್ಸಾಹಿಗೊಕ್ಕೆ ಸ್ವಾಗತದೊಟ್ಟಿಂಗೆ ಶುಭ ಹಾರೈಕೆ

  [Reply]

  VN:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈಭಾವ°

  ಎಂನಾ ಚಂಬ್ಳಿತ್ತಿಮಾರಣ್ಣನ ಭಾಷಣ ಆನೂ ಕೇಳಿದೆ. ಕೊಶಿಯಾದ್ದಲ್ಲದ್ದೆ ಅಭಿಮಾನವೂ ಆತು ನಿಂಗಳ ಬಗ್ಗೆ. ನಿಂಗಳ ಸ್ಪರ್ಧಾತ್ಪಕ ಸೂರ್ತಿಗೆ ನಮೋ ನಮಃ । ನಿಂಗೊ ಬೈಲಿನ ಒಬ್ಬ° ಹೇಳ್ತರ್ಲಿ ಸಂಶಯ ಬೇಡ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಸುಭಗಕಜೆವಸಂತ°vreddhiಮಾಲಕ್ಕ°ಪೆರ್ಲದಣ್ಣವಿದ್ವಾನಣ್ಣಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಡಾಗುಟ್ರಕ್ಕ°ವಾಣಿ ಚಿಕ್ಕಮ್ಮಸರ್ಪಮಲೆ ಮಾವ°ನೆಗೆಗಾರ°ದೇವಸ್ಯ ಮಾಣಿಅನಿತಾ ನರೇಶ್, ಮಂಚಿಪವನಜಮಾವಪುತ್ತೂರಿನ ಪುಟ್ಟಕ್ಕಶಾಂತತ್ತೆಶ್ರೀಅಕ್ಕ°ಗಣೇಶ ಮಾವ°ವೆಂಕಟ್ ಕೋಟೂರುಪುತ್ತೂರುಬಾವಪಟಿಕಲ್ಲಪ್ಪಚ್ಚಿಪೆಂಗಣ್ಣ°ಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ