ಹವೀಕ ಭಾಷೆ

ಹವೀಕ ಭಾಷೆ ರಾಶಿ ಚೆಂದ
ಕೇಳುಲಕ್ಕೆ ಕರ್ಣಾನಂದ
ಮಾತಾಡ್ದಂಗೆ ಬೆಳೆತು ಬೆಳೆತು
ನಮ್ಮವ್ರ ಪ್ರೀತಿ ಬಂಧ ||

ಒಂದೊಂದ್ ಬದಿಗೆ ಒಂದೊಂದ್ ಭಾಷೆ
ಆದ್ರೂ ಎಲ್ಲಾ ಹವೀಕ ಭಾಷೆ
ನಂಗ್ಳಾ ಭಾಷೆ ನಂಗ್ಳೂರು ನಂಗೊ ಹೇಳ್ಕಂಬ್ಲೆ
ಹೆಮ್ಮೆ ಈ ಭಾಷೆ ||

ಸೀಮೆ ಸೀಮೆಗ್ ಒಂದೊಂದ್ ರೂಢಿ
ಸಂಪ್ರದಾಯ ಭಿನ್ನಾ ನೋಡಿ
ಆದ್ರೂ ನಂಗೊಯೆಲ್ಲವೊಂದೆ
ಹವೀಕ ಸಂಘದ ಸದಸ್ಯರೆಂದೆ ||

ಹವೀಕ ಬ್ರಾಹ್ಮಣ್ರ ಕೂಟ
ಹಸಿ ತಂಬ್ಳಿ ವಿಶೇಷ್ದ ಊಟ
ಮರೆದಾಂಗೆ ಮುಂದುವರೀಲಿ
ನಂಗ್ಳೆಲ್ಲರ ಮನರನ್ಜನೆ ಆಟ ||

ಹವೀಕ ಭಾಷೆ ಅಳುಲಾಗ
ಉತ್ಸಾಹ ಸ್ಪೂರ್ತಿ ಕುಗ್ಗುಲಾಗ
ಸಾಹಿತ್ಯ ಕ್ಷೇತ್ರಾ ವಿಸ್ತಾರಾಗಿ
ಜಗತ್ನಲ್ಲಿ ಮೊಳಗ್ಲಿ ಬೇಗಾ ||

You may also like...

1 Response

  1. harE rAma, oLLe arthapUrNa kavana kalpana

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *