“ಹುಟ್ಟು ಗುಣ ಗಟ್ಟ ಹತ್ತಿರೂ ಹೋಗ”-(ಹವ್ಯಕ ನುಡಿಗಟ್ಟು-82)

April 2, 2017 ರ 10:23 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹುಟ್ಟುಗುಣ ಗಟ್ಟ ಹತ್ತಿರೂ ಹೋಗ-(ಹವ್ಯಕ ನುಡಿಗಟ್ಟು-82)

“ಅರುಣಕ್ಕ ಅಮೇರಿಕಂದ ನಿನ್ನೆ ಬಯಿಂದಾಡ. ಅದರ ಮಗ ಆಚಕರೆ ತೋಟಂದ ದೆನಿಗೇಳಿದಾಳಿ; ತೋಡಿಂಗೆ ವಸ್ತ್ರ ಒಗವಲೆ ಹೋದೋಳು ಆಚಕರಗೆ ಮೇಗೆ ಹತ್ತಿ ಮಾತಾಡಿಕ್ಕಿ ಬಂದೆ ಅತ್ತೆ. ಅದಿತಿಗೆ,ಸೊಸೆ ವಾರುಣಿಯ ಹೊಸ ಶುದ್ದಿ ಸಿಕ್ಕಿತ್ತು.

“ಅಪ್ಪೊ, ಎಂತಾಡ ಅದರ  ವಿಶೇಷ ವರ್ತಮಾನಂಗೊ?. ಅಮೇರಿಕಲ್ಲಿ ಹೇಂಗಾವುತ್ತಾಡ?.” ಅದಿತತ್ತೆಯ ಕುತೂಹಲ!.

“ಅಮೇರಿಕದ ಶುದ್ದಿ ಹೇಳಿ ಮುಗಿಯ,ಆಚಕರೆ ಅಣ್ಣ ಆಸರಿಂಗೆ ಕೊಂಡಾಳಿ ಹೇಳಿದ್ದೂ ಅದಕ್ಕೆ ಕೇಪಿದ್ದಿಲ್ಲೆ. ಆನು ಕೇಳಿದ್ದಕ್ಕೆ ಒಂದಕ್ಕೂ ಉತ್ತರ ಇಲ್ಲೆ. ಅದುವೇ ವೀಡಿಯೋ ಸ್ವಿಚ್ ಹಾಕಿದಾಂಗೆ ಹೇಳೆಂಡು ಹೋವುತ್ತು. ಅಲ್ಲಿಗೆ ಹೋಗೆಂಡು ಬಂದಪ್ಪಗ ಅದು ಬದಲಕ್ಕು ಜಾನ್ಸಿದ್ದೆ ಅತ್ತೆ. ಆದರೆ ಅದರ ಮದಲಾಣ ಅಭ್ಯಾಸ ಬಿಟ್ಟಿದಿಲ್ಲೆ!!.”

“ ಅಯ್ಯೋ ನಿನ ಪೊಡುಂಬು. ಹುಟ್ಟುಗುಣ ಗಟ್ಟ ಹತ್ತೀರೂ ಹೋಪಲಿದ್ದೊ? ಹೇಳುಗು ಮದಲಾಣವು. ಹಾಂಗೇ ಸಮುದ್ರ ಹಾರಿ ಬೇರೆ ದೇಶಕ್ಕೆ ಹೋಗಿ ಬಂದರೂ ಹುಟ್ಟುಗುಣ ಬಿಟ್ಟು ಹೋಗ ಮಿನಿಯಾ”.

ಅದಪ್ಪು ಈ ಅತ್ತೆ-ಸೊಸೆ ಮಾತಾಡಿದಾಂಗೆ,ಕೆಲವು ಜೆನಕ್ಕೆ, ವಿದ್ಯೆಲಿ ಸುಧಾರಣೆ ಆದರೂ ವಿಚಾರಲ್ಲಿ ಬದಲೊವು. ಮನುಷ್ಯರ ಸ್ವಭಾವ, ಗುಣನಡತೆ ಬದಲಾಗ. ಈ ಗಾದೆ ಮಾತುಗೊಲ್ಲ ಮದಲಾಣವರ ತಲೆ ತಲಾಂತರದ ಅನುಭವದ ಮಾತುಗೊ.

——–೦——–

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಎಲ್ಲಿಹೋದರೂ ನಿಜ ಸ್ವಭಾವ ಬಿಟ್ಟುಹೋಗ.

  [Reply]

  ವಿಜಯತ್ತೆ

  ವಿಜಯತ್ತೆ Reply:

  ಅದಪ್ಪು ಗೋಪಾಲ, ಎಲ್ಲಿ ಹೋದರೂ ನಿಜ ಸ್ವಭಾವ ಬೇರೆ ಬದಲ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ
“ಇಂದ್ರಾಣ ಮಕ್ಕೊ ಮುಂದಿನ ಜನಾಂಗ. ಅವಕ್ಕೆ ನಮ್ಮ ಗೋತ್ರ-ಸೂತ್ರ, ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ, , ಒಳ್ಳೆದು,... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಪುತ್ತೂರುಬಾವದೊಡ್ಡಭಾವವೇಣೂರಣ್ಣಶರ್ಮಪ್ಪಚ್ಚಿಬಟ್ಟಮಾವ°ಪ್ರಕಾಶಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ವೆಂಕಟ್ ಕೋಟೂರುವಾಣಿ ಚಿಕ್ಕಮ್ಮನೆಗೆಗಾರ°ಸುಭಗಮುಳಿಯ ಭಾವಗೋಪಾಲಣ್ಣಚೆನ್ನೈ ಭಾವ°ಬಂಡಾಡಿ ಅಜ್ಜಿಡಾಗುಟ್ರಕ್ಕ°ಜಯಗೌರಿ ಅಕ್ಕ°ಬೋಸ ಬಾವದೇವಸ್ಯ ಮಾಣಿಅಕ್ಷರ°ಕಾವಿನಮೂಲೆ ಮಾಣಿಡಾಮಹೇಶಣ್ಣಅಕ್ಷರದಣ್ಣಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ