“ಹೆಡ್ಡಂಗೆ ಒಂದೇ ದಿಕೆ, ಗಟ್ಟಿಗಂಗೆ ಮೂರು ದಿಕೆ”-(ಹವ್ಯಕ ನುಡಿಗಟ್ಟು-85)

 

“ಹೆಡ್ಡಂಗೆ ಒಂದೇ ದಿಕೆ,ಗಟ್ಟಿಗಂಗೆ ಮೂರು ದಿಕೆ”-(ಹವ್ಯಕ ನುಡಿಗಟ್ಟು-85)

ಇದೆಂತದಪ್ಪ ಹೆಡ್ಡಂಗೆ ಒಂದೇ ದಿಕೆ!, ಗಟ್ಟಿಗಂಗೆ ಮೂರು ದಿಕೆ…….!.ಎನಗೂ ಕುತೂಹಲ ಆಯಿದು  ಆ ಒಂದುದಿನ!

ಎನ್ನಪ್ಪನ ಮನೆಲಿ ಗೆದ್ದೆ ಬೇಸಾಯ ಇದ್ದತ್ತಿದ. ಹಾಂಗಿದ್ದ ಮತ್ತೆ; ಬತ್ತ ಬೇಶುದು, ಹರಗುದು, ಒಣಗುಸುದು,ಮೆರಿವದು, ಅಕ್ಕಿ ಮಾಡುದು  ಇದೆಲ್ಲಾ ಇದ್ದತ್ತು ಹೇಳುವೊಂ.ದನಗಳ ಚಾಕ್ರಿ,ಬೇರೆ ಕೆಲವು ಪಡಿಚಾಕ್ರಿಗೆ ವಿದ್ಯೆಹತ್ತದ್ದ ಅರೆಜವ್ವನಿಗ  ’ಬಟ್ಯ’ ಹೆಸರಿನ ಆಣೊಂದು ಇದ್ದತ್ತು.ಮೇಗಾಣ ಉಪ್ಪರಿಗೆಲಿ ಬತ್ತ ಬೇಶಿ ಒಣಗಲೆ ಹರಗುದು.

 “ಆ ಬಾರ್ ಬರುಂಬುತು ಕೊಂಡು ಬಲ್ಲ  ಬಟ್ಯ ಮೂಲ್ಯ”  ಹೇಳಿದೊವು ಆ ಆಣಿನತ್ರೆ ಬತ್ತ ಮೆರಿವ ಹೆಣ್ಣುಗೊ. ಸಗಣ ಉದ್ದಿದ ಹೆಡಗೆಲಿ ಅಲ್ಲದ್ದೆ,ಅದು ಹಾಳೆಲಿ ರಜ ಬತ್ತವ ಬೇರೆ ಬಾಚೆಂಡು ಬಂದು “ಇಂದೆಟ್ ದಾನ್ನೋ ಏಸಿಗೆ ಉಂಡು. ಎನ್ನ ಕಾರ್ಗ್ ಆತಂಡ್”  ಹೇಳಿ ಕಾಲು ತೊಳದತ್ತು.ಅಷ್ಟಪ್ಪಗ  ಬತ್ತ ಮೆರಿತ್ತ  ’ಉಮ್ಮಕ್ಕೆ’ ಹೆಸರಿನ ಹೆಣ್ಣು “ಎಂಚಿನಾವು”  ಹೇಳೆಂಡು  ಬತ್ತಲ್ಲಿ ಮುಚ್ಚೆಂಡಿದ್ದ ಅದರ ಕಾಲ್ಲಿ ಜಾರ್ಸಿ, ಕೈಲಿ ತೆಗದು ಮೂಸಿ ನೋಡಿ “ಛೀ…,ಇಂದ್  ಪುಚ್ಚೆತ ಪೀ” ಹೇಳಿತ್ತು. ಅದರ  ಗಮನಿಸಿದ ಎನ್ನಪ್ಪ  “ನೋಡು ಮೋಳೆ, ಹೆಡ್ಡಂಗೆ ಒಂದೇ ದಿಕೆ, ಗಟ್ಟಿಗಂಗೆ ಮೂರು ದಿಕೆ ಹೇಳುಸ್ಸು ಇದಕ್ಕೆಯಿದ.ಬಟ್ಯಮೂಲ್ಯ ಹೆಡ್ಡ. ಅದರ ಕಾಲಿಂಗೆ ಮಾಂತ್ರ ಹೇಸಿಗೆ ಆದ್ದು.  ಗಟ್ಟಿಗಿತ್ತಿಗೆ , ಕಾಲು-ಕೈ-ಮೂಗು, ಮೂರೂ ದಿಕೆ ಆತಿದ ಹೇಳಿಂಡು ನೆಗೆ ಮಾಡುವಗ ; ಎನಗೂ ಅಬ್ಬಗೂ ನೆಗೆ ಬಂದು ಯೋಚಿಸುವಾಂಗಾತು!.

                                    ————-೦————

ವಿಜಯತ್ತೆ

   

You may also like...

13 Responses

 1. ಶರ್ಮಪ್ಪಚ್ಚಿ says:

  ನುಡಿಗಟ್ಟಿನ ಉದಾಹರಣೆ ಸಮೇತ ವಿವರುಸುವ ವಿಜಯತ್ತಿಗೆಗೆ ಅಭಿನಂದನೆಗೊ.

 2. sheelalakshmi says:

  ಒಳ್ಳೆ ಲಾಯಕಿದ್ದು ವಿಜಯಕ್ಕ. ಅಲ್ಲಿ `ದಿಕೆ’ ಹೇಳಿ ಬರದ್ದಿರಲ್ದಾ? ಅದು ` ದಿಕ್ಕೆ’ ಆಯೇಕಪ್ಪದಾ ಅಲ್ಲ ಹಿಂಗೇಯಾ?

 3. ಪ್ರಸನ್ನಾ ವಿ ಚೆಕ್ಕೆಮನೆ says:

  ವಿಜಯಕ್ಕಾ ನಿಂಗಳ ನಿರೂಪಣೆ ಲಾಯ್ಕ ಆಯಿದು.ಉದಾಹರಣೆ ಸಹಿತ ಇಪ್ಪ ಕಾರಣ ಬೇಗ ಅರ್ಥಾವ್ತು.

 4. ಲಾಯ್ಕಾಯ್ದು. ಗಾದೆ ಓದಿ ಆನು ಜಾನ್ಸಿದ್ದು ದಡ್ಡಂಗೆ ಒಂದು ಕಡೆ ಅವಕಾಶ ಮಾಡ್ಯೊಂಬಲೆ ಎಡಿಗಾದರೆ. ಗಟ್ಟಿಗಂಗೆ ಮೂರು ದಿಕ್ಕೆ ಅವಕಾಶ ಪಡಕ್ಕೊಂಬ ಸಾಮರ್ಥ್ಯ ಇದ್ದು ಹೇಳಿ. ಈ ವಿವರಣೆ ಲಾಯ್ಕ ಇದ್ದು.

 5. ಅನುಪಮಾ, ಪ್ರಸನ್ನಾ ,ಧನ್ಯವಾದಂಗೊ.

 6. ಈ ಎನ್ನ ಇಂಟರ್ನೆಟ್ ಮೋಡಮ್ಮಿನ ದೋಷಂದ ಒಂದು ಗಂಟೆ ಆತು ಇದಲ್ಲಿ ಪೆಣಙುದು . ಹುಳು ಸುತ್ತಿ ಸುತ್ತಿ ಬತ್ತಲ್ಲದ್ದೆ ಓಪನ್ ಅಪ್ಪಲೇ ಇಲ್ಲೆ. ಆದರೆ ಎರಡು ಸರ್ತಿ ಬಪ್ಪದು!!. ಶರ್ಮಭಾವಂಗೆ ಹಾಕಿದ್ದು!.

 7. ಬೊಳುಂಬು ಗೋಪಾಲ says:

  ನುಡಿಗಟ್ಟು ಲಾಯಕಿತ್ತು. ತಮಾಷೆಯು ಇತ್ತು. ಅಪ್ಪದು ಹೇಳಿ ಕಂಡತ್ತು.
  ಬೋದಾಳ ಒಂದೇ ರೀತಿ ಆಲೋಚನೆ ಮಾಡ್ತ, ಬುದ್ದಿವಂತ ಬೇರೆ ಬೇರೆ ರೀತಿ ಆಲೋಚನೆ ಮಾಡ್ತ, ಹೇಳಿ ಹೇಳುವನೊ ?

  • ಕೆಲವು ಸರ್ತಿ ಕೆಲವು ವಿಷಯಕ್ಕೆ ಹೆಚ್ಚು ಬುದ್ಧಿವಂತಿಗೆ ಬೇಡ ಹೇಳಿಯೂ , ಬೋಸುಗಳು ಚುರುಕಿರುತ್ತವು ಕೆಲವು ವಿಷಯಂಗಳಲ್ಲಿ ; ಇಲ್ಲಿ ಪರೋಕ್ಷವಾಗಿ ಹೇಳುತ್ತಲ್ಲೊ ಗೋಪಾಲ. ಧನ್ಯವಾದಂಗೊ

 8. S.K.Gopalakrishna Bhat says:

  ಒಳ್ಳೆದಾಯಿದು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *