“ಹೊತ್ತುತ್ತ ಕಿಚ್ಚಿಂಗೆ ತುಪ್ಪ ಎರದಾಂಗೆ”–(ಹವ್ಯಕ ನುಡಿಗಟ್ಟು-81)

March 26, 2017 ರ 6:23 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

-ಹೊತ್ತುತ್ತ ಕಿಚ್ಚಿಂಗೆ ತುಪ್ಪ ಎರದಾಂಗೆ-(ಹವ್ಯಕ ನುಡಿಗಟ್ಟು-81)

ಎಂಟು ವರ್ಷದ ಹರಿ ಹಾಂಗೂ ನಾಲ್ಕು ವರ್ಷದ ಹರ್ಷ, ಎರಡು  ಮಾಣಿಯಂಗೊ ಅಣ್ಣ-ತಮ್ಮಂದ್ರು ಸರೀ ಉರುಡಪ್ಪತ್ತ ಕಾದಿಯೊಂಡೊವು.ಹರಿಯ ಮೋರಗೆ ಹರುಂಕಿ, ಗಾಯ ಮಾಡಿದ ಹರ್ಷ. ಅವರ ಅಜ್ಜಿ ಬಂದು ಬಿಡುಸಿ ದೊಡ್ಡವನ ಎಳದು ಹತ್ತರೆ ಕೂರ್ಸೆಂಡವು. ಮಾಣಿಯ ಅಬ್ಬೆ, “ಹರಿ, ಎಂತಕೆ ತಮ್ಮನತ್ರೆ ಕಾದುತ್ತೆ?”, ಹೇಳಿ ಅಲ್ಲಿಗೆ ಬಂದು ದೊಡ್ಡವನ  ಕುಂಡಗೆರಡು ಬೀಸಿತ್ತು,

“ಹರ್ಷನೇ ಇವನತ್ರೆ ಹೋಂಟಿ ಹೋರೆಂಡು ಬಂದದು ಕೂಸೆ!.ಮದಾಲು ಮದಾಲು ತಮ್ಮಲ್ಲೊ ಹೇಳೆಂಡು ಸುಮ್ಮನೆ ಕೂದತ್ತು ಮಾಣಿ, ಮತ್ತೆ ಸುಖಾಸುಮ್ಮನೆ ಬೇನೆ ತಿಂಬಲೆ ಆರಾರು ತಯಾರಿಕ್ಕೊ?. ’ಹೊತ್ತುತ್ತ ಕಿಚ್ಚಿಂಗೆ ತುಪ್ಪ ಎರದಾಂಗೆ’  ಮಾಡೆಡ ನೀನು. ನೆಡೆ ಆಚಿಗೆ ಕರಕ್ಕೊಂಡೋಗವನ. ಇವ ಎನ್ನತ್ರೆ ಇರಳಿಲ್ಲಿ” ಅಜ್ಜಿ ಹೇಳಿತ್ತು.

ಎಲ್ಲಾ ಮನಗಳಲ್ಲೂ ಅಜ್ಜಿಯಕ್ಕೊಗೆ; ಮದಾಲು ಹುಟ್ಟಿದ ದೊಡ್ಡ ಪುಳ್ಳಿಯತ್ರೇ(ಅವಂಗೆ ಅಜ್ಜನ ಹೆಸರು!!) ಹೆಚ್ಚಿಗೆ ಪ್ರೀತಿಯಿದ. ಆದರೆ ಅಬ್ಬಗೆ ಸಣ್ಣವನತ್ರೆ ಕೊಂಗಾಟ.

ಈ ನುಡಿಗಟ್ಟಿಂಗೆ ಮಕ್ಕಳ ಉದಾಹರಣೆ ಕೊಟ್ಟರೂ ಪ್ರಾಮಾಣಿಕರ ಪರವಾಗಿ ನಿಲ್ಲದ್ದೆ; ಅಪ್ರಮಾಣಿಕರ ಪರವಾಗಿ ನಿಂದು, ಪ್ರಾಮಾಣಿಕರಿಂಗೆ ಬೇದ ಮಾಡಿ  ಮಾತಾಡುವಗೆಲ್ಲ ಇದರ ಬಳಸುತ್ತೊವು.

———೦——

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಯಾವುದಾದರೂ ಲಡಾಯಿಯ ದೊಡ್ಡ ಮಾಡುದಕ್ಕೆ ಹೇಳುವ ನುಡಿಗಟ್ಟು. ಹೊಸ ರೀತಿಲಿ ಪ್ರಸ್ತುತ ಪಡಿಸಿದ್ದು ಚಿಕ್ಕಮ್ಮನ ಪ್ರತಿಭೆ.ಲಾಯಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಅಪ್ಪು,ಲಡಾಯಿಗೆ ಹೆಚ್ಚಾಗಿ ಬಳಸುತ್ತೋವುಇದರ.ಮತ್ತೆ, ಮತ್ಸರಿಗೊಕ್ಕೆ ದುರಾಲೋಚನೆ ಕುತ್ತಿಕೊಟ್ಟು ದೊಡ್ದದು ಮಾಡುಸ್ಸಕ್ಕೂ ಹೇಳುತ್ತೊವು. ಸೇಡಿಗುಮ್ಮೆ ಗೋಪಾಲನ ಅನಿಸಿಕೆಗೆ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ
“ಇಂದ್ರಾಣ ಮಕ್ಕೊ ಮುಂದಿನ ಜನಾಂಗ. ಅವಕ್ಕೆ ನಮ್ಮ ಗೋತ್ರ-ಸೂತ್ರ, ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ, , ಒಳ್ಳೆದು,... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆಕೇಜಿಮಾವ°ಶರ್ಮಪ್ಪಚ್ಚಿಶೇಡಿಗುಮ್ಮೆ ಪುಳ್ಳಿಶ್ರೀಅಕ್ಕ°ದೀಪಿಕಾಪುಟ್ಟಬಾವ°ಗೋಪಾಲಣ್ಣಬೊಳುಂಬು ಮಾವ°ಚೂರಿಬೈಲು ದೀಪಕ್ಕಉಡುಪುಮೂಲೆ ಅಪ್ಪಚ್ಚಿಪೆರ್ಲದಣ್ಣಮುಳಿಯ ಭಾವಶುದ್ದಿಕ್ಕಾರ°ಕಜೆವಸಂತ°ಪ್ರಕಾಶಪ್ಪಚ್ಚಿಮಾಲಕ್ಕ°ಕಾವಿನಮೂಲೆ ಮಾಣಿಶಾಂತತ್ತೆಬಟ್ಟಮಾವ°ಡಾಗುಟ್ರಕ್ಕ°ಮಾಷ್ಟ್ರುಮಾವ°ಶೀಲಾಲಕ್ಷ್ಮೀ ಕಾಸರಗೋಡುಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
Ram Kishan Sadashiva Rao Pallade

ಬೆಣಚ್ಚಿಪ್ಪಲ್ಲಿ ಹುಡ್ಕಲೆ