“ಹೊತ್ತುತ್ತ ಮನಗೆ ತೋಡುತ್ತ ಬಾವಿ”-{ಹವ್ಯಕ ನುಡಿಗಟ್ಟು-58}

June 26, 2016 ರ 11:48 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

-“ಹೊತ್ತುತ್ತ ಮನಗೆ ತೋಡುತ್ತ ಬಾವಿ”-{ಹವ್ಯಕ ನುಡಿಗಟ್ಟು-58}

ಮದಲಿಂಗೆ ಇಂದ್ರಾಣ ದಿನದಾಂಗಲ್ಲ . ಒಂದು ಮನೆಲಿ ತುಂಬ ಜೆನ ಇಕ್ಕು. ಅಬ್ಬೆ-ಅಪ್ಪಂಗೆ ಈಗಾಣ ಕಾಲದ ಹಾಂಗೆ ಒಂದೋ ಎರಡೋ ಮಕ್ಕೊ ಅಲ್ಲ!. ಮನೆ ಹೆಮ್ಮಕ್ಕೊಗೆ ಮನೆಕೆಲಸ ಸುಲಭ ಅಲ್ಲ.ಪೈಪಿನ ನೀರಿರ. ಗ್ಯಾಸ್ ಇರ.. ಕಡವಲೆ, ಹೊಡಿಮಾಡ್ಳೆ ಮಿಶನಿರ.ದನಗಳ ಹಟ್ಟಿಕೆಲಸ ಇಕ್ಕು.ಊಟ-ಚಾಯಕ್ಕೆ ಆಳುಗೊ ಇಕ್ಕು.

ಆನು ಸಣ್ಣಾದಿಪ್ಪಗ ಶಾಲಗೆ ಹೋಗೆಂಡಿಪ್ಪಗಣ ಮಾತು.ಮಳೆಗಾಲದ ಗೆದ್ದೆ ಬೇಸಾಯದ ಸಮಯ. ಮದ್ಯಾಹ್ನ ಒಂದು ಗಂಟೆಪ್ಪಗ; ಹೂಡುತ್ತ ಆಳು, ನೇಜಿ ಹೆಣ್ಣುಗೊ ಎಲ್ಲ ಒಟ್ಟಿಂಗೆ ಉಂಬಲೆ ಬಂದವು. ಎನ್ನಬ್ಬಗೆ ಅಡಿಗೆ ಪೂರ ಆಯಿದಿಲ್ಲೆ. ಅಪ್ಪನೂ ಮಿಂದಿಕ್ಕಿ ಬಂದು, “ಆಳುಗೊಕ್ಕೆ ಬಡುಸಿಕ್ಕಿ  ಎನ ಬಡುಸು” ಹೇಳಿಂಡು ಒಳ ಬಂದು ನೋಡಿರೆ, ಬೆಂದಿ ಕೊದಿಯೆಕ್ಕಷ್ಟೆ,ಒಗ್ಗರಣೆ ಹಾಕೆಕ್ಕಷ್ಟೇದು ಕಂಡಪ್ಪಗ . “ಇದೆಂತದು!.ಹೊತ್ತುತ್ತ ಮನಗೆ ತೋಡುತ್ತ ಬಾವಿ, ಹಾಂಗಾತನ್ನೆ”.ಹೇಳಿಗೊಂಡವು. ಎನಗೆ ಅದರ ಅರ್ಥ ಸಿಕ್ಕಿದ್ದಿಲ್ಲೆ. ಆಳುಗೊಕ್ಕೆ ಹೆರಮಡಗಿಕ್ಕಿ, ಅಪ್ಪಂಗೆ, ಮಕ್ಕೊಗೆ, ಎಲ್ಲೋರಿಂಗು ಉಂಡಾದ ಮತ್ತೆ , ಅಪ್ಪಂ   ರಜ್ಜ ಹೊತ್ತು ಮನುಗಿಕ್ಕಿ ಎದ್ದು; “ಒಂದು ಗ್ಲಾಸು ಚಾಯ ಮಾಡಿಕೊಂಡ ಮೋಳೆ”   ಹೇಳಿದವು. ಚಾಯ, ಕಾಪಿ, ಮಾಡ್ಳೆ ಸಣ್ಣದಿಪ್ಪಗಳೇ ಶಾಲಗೆ  ರಜೆ ಆದರೆ ಕೂಸುಗಳತ್ರೇ  ಹೇಳುಗು  .ಚಾಯ ತಂದುಕೊಟ್ಟಿಕ್ಕಿ ಆನುಕೇಳಿದೆ.

“ಎಂತಕೆ ನಿಂಗೊ  ’ಹೊತ್ತುತ್ತ ಮನಗೆ ತೋಡುತ್ತ ಬಾವಿ’ ಹೇಳಿದ್ದು” ಕೇಳಿದೆ.

“ಅದುವೋ .. ಒಂದು ಮನಗೆ ಕಿಚ್ಚು ಹಿಡುದರೆ ಅದಕ್ಕೆ ಅಂಬಗಳೇ ನೀರೆರದು ನನುಸೆಕ್ಕೋ ಅಲ್ಲಾ ಸುಮಾರು ಹೊತ್ತ ನೋಡೆಂಡು ಮತ್ತೋ?”.

“ಅಂಬಗಳೇ ಆಯೆಕ್ಕು” ಹೇಳಿದೆ.

“ ಹಾಂ..,ಅದೇ ಅರ್ಥಯಿದ. ಹಶುವಾಗಿ ಹೊಟ್ಟೆ ಕರಂಚುವಗ ಊಟ ಸಿಕ್ಕದ್ರೂ ಹಾಂಗೆ. ಅದದು ಹೊತ್ತಿಂಗೆ ಆಯೆಕ್ಕಾದ ಕೆಲಸ ಆಗದ್ದೆ  ಜಾಂಕೆಂಡು ಕೂರುತ್ತ ವಿಷಯಕ್ಕೆ  ಹೇಳುಸ್ಸು”.ಹೇಳಿದೊವು.

ಸಣ್ಣದಿಪ್ಪಗಣ ಹೀಂಗಿದ್ದ ಪ್ರಸಂಗ ಒಂದೊಂದು ನೆಂಪಾವುತ್ತು.

———೦——-

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಈ ಗಾದೆಮಾತಿನ ಅರ್ಥ ಹಿಂಗೂ ಇದ್ದಲ್ದಾ ವಿಜಯಕ್ಕಾ, ಸಮಯಕ್ಕಪ್ಪಗ ಹೆರಟ್ರೆ ಯಾವ ಕೆಲಸವೂ ಪ್ರಯೋಜನಕ್ಕೆ ಬಾರ. ಯುದ್ದ ಕಣ್ಣ ಮುಂದೆ ಇಪ್ಪಾಗ ಶಸ್ತ್ರಾಭ್ಯಾಸ ಮಾಡಿದ ಹಾಂಗೆ…. ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಅಪ್ಪು ಶೀಲ, ಆಯೆಕ್ಕಾದ ಕೆಲಸ ಸಮಯ ತಪ್ಪಿ ವಿಪರೀತ ದೀರ್ಘ ಅಪ್ಪಗ ಹೀಂಗೆ ಹೇಳ್ತವು.

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಸಮಯಕ್ಕೆ ಬೇಕಪ್ಪಗ ಸಿಕ್ಕದ್ದದು ಪ್ರಯೋಜನ ಇಲ್ಲೆ . ಒಳ್ಳೆ ನುಡಿಗಟ್ಟು ಅಕ್ಕ. ಮನಗೆ ಬೆಂಕಿ ಬಿದ್ದಪ್ಪಗ ಬಾವಿ ತೋಡಿದ ಹಾಂಗೆ ಆತು.
  .. ಬಪ್ಪಲಪ್ಪಗ ಹಿತ್ತಿಲು ಹುಡುಕ್ಕಿದ ಹಾಂಗಾತು. ಹೀಂಗಿಪ್ಪ ಕೆಲವು ಗಾದೆಮಾತುಗೊ ಇದಕ್ಕೆ ಹೊಂದುತ್ತು.

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಹಾಂ….., ಬೊಳುಂಬು ಗೋಪಾಲಂಗೆ ನೆಂಪಾತದ ಮತ್ತೊಂದು!! ಧನ್ಯವಾದ ಗೋಪಾಲಂಗೆ.

  [Reply]

  VN:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆದಿದ್ದು.ಸಂಸ್ಕೃತಲೂ ಇದಿದ್ದು

  [Reply]

  VA:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅರ್ಥಗರ್ಭಿತ ನುಡಿಗಟ್ಟು, ಧನ್ಯವಾದಂಗೊ ವಿಜಯತ್ತಿಗೆಗೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಬಟ್ಟಮಾವ°ಅನು ಉಡುಪುಮೂಲೆದೇವಸ್ಯ ಮಾಣಿಪುಣಚ ಡಾಕ್ಟ್ರುರಾಜಣ್ಣಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ಮಂಗ್ಳೂರ ಮಾಣಿಪ್ರಕಾಶಪ್ಪಚ್ಚಿವೇಣೂರಣ್ಣಅನಿತಾ ನರೇಶ್, ಮಂಚಿವಿಜಯತ್ತೆದೀಪಿಕಾವೇಣಿಯಕ್ಕ°ವೆಂಕಟ್ ಕೋಟೂರುಶ್ರೀಅಕ್ಕ°ಡಾಮಹೇಶಣ್ಣಚೆನ್ನೈ ಬಾವ°ಗಣೇಶ ಮಾವ°ಶಾಂತತ್ತೆಅಕ್ಷರದಣ್ಣಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕಕಾವಿನಮೂಲೆ ಮಾಣಿನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ