Oppanna.com

ಅಜ್ಜಿ-ಪುಳ್ಳಿ ಸಂಭಾಷಣೆ

ಬರದೋರು :   ಗೋಪಾಲಣ್ಣ    on   16/03/2014    2 ಒಪ್ಪಂಗೊ

ಗೋಪಾಲಣ್ಣ

ರಾಧಮ್ಮ[ಅಜ್ಜಿ,ಸುಮಾರು ಎಪ್ಪತ್ತು ವರ್ಷ] ರಾಮಾ..ರಾಮಾ.. ನಾರಾಯಣ…[ಆಕಳಿಸಿ ಬಾಯಿ ಮುಚ್ಚುತ್ತವು]
ಕಿಟ್ಟ[ಪುಳ್ಳಿ,ಸುಮಾರು ಹನ್ನೆರಡು ವರ್ಷ]ಃ-ಅಜ್ಜಿ,ಅಜ್ಜಿ,ಒಂದು ದೇಶಲ್ಲಿ ರಾಮ ಹೇಳಿ ಮಕ್ಕೊಗೆ ಹೆಸರು ಮಡುಗಲಾಗಡ ಗೊಂತಿದ್ದೊ?
ರಾಧಮ್ಮಃ-ಏವ ಪೊಟ್ಟು ಕಾನೂನೋ ಅದು? ಏವ ಕಾಟುಗಳ ದೇಶ ಅದು?
ಕಿಟ್ಟಃ-ಅದು ಈ ಸಮುದ್ರಂದ ಆಚೆ-ನಮ್ಮದಲ್ಲ..ನಿನ್ನೆಯಾಣ ಪೇಪರಿಲಿ ಬೈಂದು.
ರಾಧಮ್ಮಃ-ಅಂದರೆ ಆಚವರದ್ದೊ?ಅರಬ್ಬಿಗಳದ್ದೊ?
ಕಿಟ್ಟಃ-ಎನ್ನ ಅಜ್ಜಿ ಎಷ್ಟು ಉಷಾರಿ? ಇಷ್ಟು ಬೇಗ ಗೊಂತಾದ್ದು ಹೇಂಗೆ?
ರಾಧಮ್ಮಃ-ಮತ್ತೆ? ಇಂತಾ ಉಷಾರಿ ಪುಳ್ಳಿಯಕ್ಕೊ ಇದ್ದರೆ ಉಷಾರಾಗೆಡದೊ ಅಜ್ಜಿಯಕ್ಕೊ? ಅಲ್ಲದ್ದರೆ ಬದುಕ್ಕಲೆಡಿಗೊ?
ಕಿಟ್ಟಃ-ಅಂತೂ ಅಜ್ಜಿಯಕ್ಕಳ ಉಷಾರಿ ಮಾಡಿದ್ದು ಎಂಗಳೇ!
ರಾಧಮ್ಮಃ-ಅದು ಹೋಗಲಿ,ರಾಮ ಹೇಳಿ ಹೇಳುಲಾಗ ಹೇಳುವ ಜೆನ ಆರದು?ಅದಕ್ಕೆ ಎಂತಾ ಗೊಂತು?
ಕಿಟ್ಟಃ-ಅದು ಅಲ್ಲಿಯಾಣ ಸರಕಾರ ಮಾಡಿದ್ದು.ಅಲ್ಲಿ ಒಂದು ರಾಜ ಇದ್ದು .ಸುಮಾರು ಹಿಂದು ಮತ್ತೆ ಕ್ರಿಶ್ಚನ್ ಹೆಸರು ಆಗ ಹೇಳಿ ಮಾಡಿತ್ತು.ಅದಕ್ಕೆ ನಿಂಗೊ ಸಹಸ್ರನಾಮ ಪುಸ್ತಕ ಕಳಿಸಿ.
ರಾಧಮ್ಮಃ-ಮಂಗ! ಸಹಸ್ರನಾಮ ಹೇಳಿರೆ ಏವದು? ವಿಷ್ಣುಸಹಸ್ರನಾಮವೇ ಸೈ. ಎಷ್ಟು ಲಾಯ್ಕ ಇದ್ದು.ಅದರ ಓದುವ ಯೋಗ ಅದಕ್ಕೆ ಬೇಡದೊ?
ಕಿಟ್ಟಃ-ನಿಂಗೊ ಕಳಿಸಿರೆ ಅದು ಓದುಗು!
ರಾಧಮ್ಮಃ-ಅಕ್ಕು,ಇಂದೇ ಪೋಷ್ಟು ಮಾಡು. [ನೆಗೆ ಮಾಡಿಂಡು]ಅಲ್ಲ,ಎನ್ನ ಪುಳ್ಳಿ ,ನೀ ಎಷ್ಟು ಸರ್ತಿ ಸಹಸ್ರನಾಮ ಓದಿದ್ದೆ ಹೇಳು. ಮತ್ತೆ ಆ ಆರಬ್ಬಿಯವಕ್ಕೆ ಎಂತರ ಕಲಿಸುದು?
ಕಿಟ್ಟಃ-ನಿಂಗೊ ಓದುತ್ತೀರನ್ನೆ? ಸಾಕು.ಅಜ್ಜಿ ಓದಿರೆ ಅದೇ ಪುಣ್ಯ ಎನಗೆ..ಅಜ್ಜಿಪುಣ್ಯ!
ರಾಧಮ್ಮಃ-ಅಪ್ಪಪ್ಪು.ಓದಲೆ ಅಜ್ಜಿ, ಪುಣ್ಯ ನಿನಗೆ! ವಿಷ್ಣುವಿನ ಸಹಸ್ರನಾಮಲ್ಲಿ ಅತಿ ಮುಖ್ಯವಾದ್ದು ಏವದು? ಹೇಳು.
ಕಿಟ್ಟಃ-ಅಯ್ಯೋ,ಸುಬ್ಬುಲಕ್ಷ್ಮಿ ಅಜ್ಜಿ ಉದಿಯಪ್ಪಗಳೇ ಹೇಳಿದ್ದನ್ನೆ? ಶ್ರೀ ರಾಮ ರಾಮ ರಾಮೇತಿ…
ರಾಧಮ್ಮಃ-ಹಾ,ಆ ಪದ್ಯ ಆನು ಹಾಕಿದ್ದು ಸಾರ್ಥಕ ಆತು.ರಾಮ ಹೇಳಿದರೆ ಸಾಕು.ಎಲ್ಲಾ ಪಾಪ ಹೋಕು,ಪುಣ್ಯ ಬಕ್ಕು. ಕಾಡಿನ ಬೇಡ ಕೂಡಾ ಮಹಾಕವಿ ಆತು.
ಕಿಟ್ಟಃ-ಅದು ನಿಂಗೊಗೆ ಬಪ್ಪ ಪುಣ್ಯ,ಅರಬ್ಬಿಯವಕ್ಕಲ್ಲ.ನಿಂಗಳ ಪವಿತ್ರ ವಸ್ತು ಅವಕ್ಕೆ ಅಶುಭ!
ರಾಧಮ್ಮಃ-ಇದು ಏವ ಹಿರಣ್ಯಕಶಿಪು ಜಾತಿದೋ ಏನೋ?
ಕಿಟ್ಟಃ-ಅದೆಂತಾ ಅಜ್ಜಿ?
ರಾಧಮ್ಮಃ-ಅದಕ್ಕೇ ಹೇಳುದು- ಮೂರು ಹೊತ್ತೂ ಟಿ ವಿ ನೋಡುತ್ತದು,ಕಂಪ್ಯೂಟರಿಲಿ ಗುರುಟುತ್ತು ಬಿಟ್ಟರೆ,ಒಂದು ಪುಣ್ಯಕತೆ ಹೇಳಿ ಕೇಳಿ ನಿನಗೆ ಗೊಂತಿದ್ದೊ?
ಕಿಟ್ಟಃ-ಗೊಂತಾಗದ್ದರೆ ಹೇಳುಲೆ ನಿಂಗೊ ಇಲ್ಲೆಯೊ? ಎನ್ನ ಅಜ್ಜಿ ಅಲ್ಲದೋ?
ರಾಧಮ್ಮಃ-ಸೇಲೆ ಸಾಕು.ಈ ಅಜ್ಜಿ ಎಂತ ಶಾಶ್ವತ ಅಲ್ಲ.ನಿಂಗೊ ತಿಳುಕ್ಕೊಳೆಕ್ಕು.ಹಿರಣ್ಯಕಶಿಪು ಮತ್ತೆ ಹಿರಣ್ಯಾಕ್ಷ ಅಣ್ಣ ತಮ್ಮಂದಿರು.ಜಯ-ವಿಜಯ ಹೇಳಿ ಮಹಾವಿಷ್ಣುವಿನ ಬಾಗಿಲು ಕಾವವು..
ಕಿಟ್ಟಃ-ಹಾಂ,ಗೊಂತಾತು..ಕಾಮಿಕ್ಸ್ ನೋಡಿದ್ದೆ ಆನು..ಹಿರಣ್ಯಕಶಿಪು ಶಿವ ಭಕ್ತ ,ವಿಷ್ಣುವಿನ ಹೆಸರು ಕೂಡ ಆಗ.
ರಾಧಮ್ಮಃ-ಅಪ್ಪು,ಬರೇ ದುಷ್ಟ.ಅದರ ಮಗ ಪ್ರಹ್ಲಾದ.ವಿಷ್ಣುಭಕ್ತ..
ಕಿಟ್ಟಃ-ಅವನ ರಕ್ಷಿಸಲೆ ನರಸಿಂಹ ಕಂಬ ಒಡದು ಬಪ್ಪದು…ಹಿರಣ್ಯಕಶಿಪುವಿನ ಕೊಲ್ಲುದು..ಅದೆಲ್ಲಾ ಅಪ್ಪಂತದ್ದೊ?
ರಾಧಮ್ಮಃ-ಅದೆಲ್ಲಾ ಆದ್ದು ಹೇಳಿ ಪುರಾಣದವು ಹೇಳ್ತವು.ರಜ್ಜ ಅತಿಶಯ ಇಪ್ಪಲೂ ಸಾಕು.ನೋಡು ಈಗಲೂ ಹಿರಣ್ಯಕಶಿಪು ಜಾತಿಯವು ಇದ್ದವೊ ಇಲ್ಲೆಯೊ?
ಕಿಟ್ಟಃ-ಆದರೆ ನರಸಿಂಹ ಬಾರ,ಮರದ ಕಂಬವೇ ಇಲ್ಲೆ,ಎಲ್ಲಾ ಕಾಂಕ್ರೀಟ್ ಪಿಲ್ಲರು!
ರಾಧಮ್ಮ;-ಸಾಕು ಹರಟೆ,ಒಳ ಅಮ್ಮ ಎಂತ ಮಾಡಿದ್ದು ನೋಡು.ನಮ್ಮ ಒಳವೇ ಹಿರಣ್ಯಕಶಿಪು,ನರಸಿಂಹ ,ಪ್ರಹ್ಲಾದ-ಎಲ್ಲಾ ಇಪ್ಪದು.ನಮಗೆ ಏವದು ಬೇಕೊ ,ಅದರ ತೆಕ್ಕೊಂಬದು.
ಕಿಟ್ಟಃ-ಈಗ ಎನಗೆ ಹೋರ್ಲಿಕ್ಸ್ ಬೇಕು…[ಹೆ ಹೆ ಹೆ ಹೇಳಿ ನೆಗೆ ಮಾಡಿಂಡು ಹೋವ್ತ]
ರಾಧಮ್ಮಃ-ಅಯ್ಯೋ ರಾಮ! ಇನ್ನಿನ್ನು ಎಂತದೆಲ್ಲಾ ಆವುತ್ತೋ ಏನೋ?…[ಚಿಂತಾಮಗ್ನರಾಗಿ ಕೂರ್ತವು]

2 thoughts on “ಅಜ್ಜಿ-ಪುಳ್ಳಿ ಸಂಭಾಷಣೆ

  1. 😀 ಲಾಯಕ ಆಯ್ದಿದು ಪಟ್ಟಾಂಗ. ಈಗಾಣೋರು ರಜಾ ಒಳ್ಳೆತ ಮಾಡೇಕ್ಕಾದ್ದಿದ್ದು ಕತೆಯೊಳಾಣ ತಿರುಳ ಅರ್ಥಮಾಡಿಗೊಂಡು. ಹರೇ ರಾಮ ಗೋಪಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×