Oppanna.com

“ಆರಕ್ಕೆ ಏರ, ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92)

ಬರದೋರು :   ವಿಜಯತ್ತೆ    on   14/06/2017    13 ಒಪ್ಪಂಗೊ

 

“ಆರಕ್ಕೆ ಏರ,ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92)

ಅಪರೂಪಲ್ಲಿ ಹಳೇ ಜೆನ ನಾಣಣ್ಣ ಕಾಂಬಲೆ ಸಿಕ್ಕಿದ. ಅಡಿಗ್ಗೆ ಹೋಪವ. ಅಡಿಗೆಯನ್ನೇ ನಂಬಿಯೊಂಡು ಅದಲ್ಲೇ ಏಳಿಗೆ ಆದ ನಾಣಣ್ಣ ಅವನ ಮಕ್ಕೊಗೆಲ್ಲಾ ಒಳ್ಳೆ  ವಿದ್ಯಾಭ್ಯಾಸ ಕೊಟ್ಟು, ಚೆಂದದ ಅರಮನೆ ಹಾಂಗಿದ್ದ ಮನೆಯನ್ನೂ ಕಟ್ಟಿ,ಮಕ್ಕೊ,ಸೊಸೆಕ್ಕೊ,ಪುಳ್ಳಿಯಕ್ಕೊ ಹೇಳಿ ಬೇಕಾದಂತೆ ಇದ್ದೊಂಡು ಜೀವನ ಮಾಡುವ ಮನುಷ್ಯ.ಆದರೆ ಆ ಶ್ರೀಮಂತಿಕೆ, ಅವನ ಮನಸ್ಸಿಂಗಾಗಲೀ  ಸ್ವಭಾವಕ್ಕಾಗಲೀ ಬಯಿಂದಿಲ್ಲೆ!

ಹಲವು ಜೆನರ ಸ್ವಭಾವ ಹಲವು ರೀತಿ. ಕೆಲವು ಜೆನ ಇದ್ದದರಿಂದಲೂ ಹೆಚ್ಚು ದೊಡ್ಡಸ್ತಿಕೆ ಆಡಂಬರ ತೋರ್ಸೀರೆ, ಇನ್ನು ಕೆಲವು ಜೆನ ಇದ್ದದರನ್ನೂ ಪ್ರದರ್ಶಿಸುವದೆಂತಕೆ? ಹೇಳುವ ಮನೋಭಾವದೊವು. ಹಾಂಗೇ ಇನ್ನೊಂದು ಸ್ವಭಾವದೊವು “ಆರಕ್ಕೆ ಏರ,ಮೂರಕ್ಕೆ ಇಳಿಯ” ಹೇಳುವಾಂಗೆ ಹೆಚ್ಚಿಗೆಯೂ ಇಲ್ಲೆ ಕಮ್ಮಿಯೂ ಆಗ; ಹೇಳುವಾಂಗೆ ಇರ್ತವು. ಇದೊಂದು ರೀತಿಲಿ ನೇರ ನಡೆ ಹೇಳ್ಲಕ್ಕು.

13 thoughts on ““ಆರಕ್ಕೆ ಏರ, ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92)

    1. ಅದಕ್ಕೂ ಇದಕ್ಕೂ ವ್ಯತ್ಯಾಸ ಇದ್ದು.
      ಈ ನುಡಿಗಟ್ಟು ಪ್ರಕಾರ ಹದ ಹಾಳಿತಕೆ ಇಪ್ಪದು.
      ಒಂದೋ ಆರು ಮೊಳ ಇಲ್ಲದ್ರೆ ಮೂರು ಮೊಳ ಹೇಳುವಾಗ, ಎರಡು ಅತಿರೇಕಂಗೊ ವಿರುದ್ಧ ದಿಕ್ಕಿಲ್ಲಿ.
      ಇದರಲ್ಲಿ ಹದ ಹಾಳಿತಕೆ ಇಪ್ಪದು ಹೇಳ್ತ ಭಾವನೆ ಬತ್ತಿಲ್ಲೆ

      1. ಹ್ಹಾ°., ಹಾಂಗೂ ಒಂದಿದ್ದಪ್ಪೋ!

  1. ಪಟ್ಟಾಜೆ ಶಂಕರಣ್ಣ ಎಲ್ಲಿಗೆ ಕಳುಸುದು ಹೇಳಿ ನಿಂಗೊ ಉಲ್ಲೇಖ ಮಾಡಿದ್ದಿಲ್ಲಿ. ಆದರೂ ಆನು ಕಳುಸುವದರ ಹೇಳ್ತೆ. ಒಪ್ಪಣ್ಣ ಬಯಲಿಂಗಾದರೆ ಎನ್ನ ಲ್ಯಾಪ್ ಟಾಪಿಲ್ಲಿ(ಕಂಪ್ಯೂಟರ್) ಡಾಕಿಮೆಂಟ್ ಲೈಬ್ರೆರಿಲಿ ಟೈಪ್ ಮಾಡಿದ್ದರ ಅಲ್ಲಿಯೇ ಕೋಪಿ ಮಾಡಿ; ಮತ್ತೆ ಬಯಲಿಂಗೆ ಹೋಗಿ ಹೊಸಶುದ್ದಿ (ಅವರವರ ಪೇಜ್ ಲ್ಲಿ) ಹಾಕಲೇಳಿ ಇರುತ್ತು. ಅದಕ್ಕೆ ಹೋಗಿ ಅಲ್ಲಿ ಕೋಪಿಯ ಪೇಸ್ಟ್ ಮಾಡೆಕ್ಕು.ಮತ್ತೆ ಪಬ್ಲಿಷ್ ಕೊಡೆಕು. ಇನ್ನು ಬೇರೆ ಪತ್ರಿಕಗೊಕ್ಕೆ ಆದರೆ. ಡಾಕಿಮೆಂಟಿಲ್ಲಿ ಬರದ್ದರ ನಿಂಗೊ ಏವದಕ್ಕೆ ಕಳುಸುತ್ತೀರೊ ಆ ಪತ್ರಿಕೆಯ ಇಮೇಲ್ ಐಡಿ ಗೆ ಕಳುಸೆಕ್ಕು. ಇದಕ್ಕೆಲ್ಲ ರಜ ಅಭ್ಯಾಸ ಆದರೆ ಇದು ಸುಲಭಾವುತ್ತು. ಆನು ಮದಲೆಲ್ಲ ಪತ್ರಿಕೆಗೊಕ್ಕೆ ಕಾಗದಲ್ಲಿ ಬರದು ಪೋಸ್ಟ್ ಮಾಡೆಂಡಿತ್ತಿದ್ದೆ. ಈಗ ಐದಾರು ವರ್ಷಂದ ಇದೆಲ್ಲ ಕಲ್ತಿದೆ.

  2. ಮಧ್ಯಮ ವರ್ಗದವರ ಕತೆ ಇದಲ್ಲದೊ ಅಕ್ಕಾ ? ಮರ್ಜಿ ಮಾಡ್ಳೆ ಅವಕ್ಕೆ ಎಡಿಯ. ಕೀಳು ಮಟ್ಟಲ್ಲಿ ಜೀವಿಸಲು ಅವು ತಯಾರಿಲ್ಲೆ. ಇದೇ ಜೀವನ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×