Oppanna.com

“ಆರ ಅಬ್ಬೆ ಸತ್ತರೂ ನೆಗೆಯ ಅಬ್ಬೆ, ಸತ್ತಿದಿಲ್ಲೇಡ”-(ಹವ್ಯಕ ನುಡಿಗಟ್ಟು-87)

ಬರದೋರು :   ವಿಜಯತ್ತೆ    on   05/05/2017    6 ಒಪ್ಪಂಗೊ

“ಆರ ಅಬ್ಬೆ ಸತ್ತರೂ ನೆಗೆಯ ಅಬ್ಬೆ ಸತ್ತಿದಿಲ್ಲೇಡ”-(ಹವ್ಯಕ ನುಡಿಗಟ್ಟು-87)

ಒಂದು ಸೂತಕದ ಮನೆ.ಅಲ್ಲಿಯ ಎಜಮಾನನ ಅಬ್ಬೆ ತೊಂಭತ್ತೊರುಷಾಣ ಅಜ್ಜಿ ತೀರಿಹೋಗಿ, ಅಂತ್ಯಸಂಸ್ಕಾರಕ್ಕೆ ನೆರೆಕರೆವು,ಸಂಬಂಧ ಪಟ್ಟೊವು ಸೇರಿದ್ದೊವು. ಅಜ್ಜಿಯ ಸಣ್ಣ ಮಗಳು ದೂರದ ಊರಿಂದ ಬರೆಕಷ್ಟೆ.  ಹೊಲೆಯರು  ಬಂದು  ಕಾಷ್ಠ  ಓಶೆಕ್ಕಷ್ಟೆ.

ಈಗೀಗ ಆರೇ ಎಲ್ಲಿಗೇ ಹೋಗಲಿ; ಅವರ ಕೈಲಿ ಒಂದು ಸ್ಮಾರ್ಟ್ ಮೊಬೈಲು ಇರ್ತನ್ನೆ!.  ಎರಡು ಜೆನ ಜವ್ವನಿಗರು ಮೊಬೈಲು ಗುರುಟೆಂಡು ಎಂತದೋ ಜೋಕು ಓದೆಂಡು  ನೆಗೆ ಮಾಡ್ಳೆ ತೊಡಗಿದೊವು. “ಈ ಸೂತಕದ ,ಮನೆಲಿ ಹೀಂಗೊಂದು ನೆಗೆಮಾಡುಸ್ಸು ಸಮಂಜಸ ಅಲ್ಲ”.ಹಿರಿಯರೊಬ್ಬ ಹತ್ತರೆ ಬಂದು ಹೇಳುವಗ ; ಆ ಜೋಕಿನ ಅವಕ್ಕೂ ಓದಲೆ ತೋರ್ಸಿ, ಅವನೂ ನೋಡಿ ನೆಗೆ ಮಾಡುವಗ ; “ನಿಂಗಳೂ ನೆಗೆ ಮಾಡ್ತಿರನ್ನೆ” ಹೇದವು ಜವ್ವನಿಗರು. ಅಷ್ಟಪ್ಪಗ  “ಆರ ಅಬ್ಬೆ ಸತ್ತರೂ ನೆಗೆಯ ಅಬ್ಬೆ ಸಾವಲಿಲ್ಲೇಡ” ಹಾಂಗೆಯಿದ ನೆಗೆಯ  ಮರ್ಮ.ಹೇದು ಸಮಜಾಯಿಸಿಗೊಂಡವು ಹಿರಿಯರು. ಅವರ ನೆಗಗೆ ಎಂತಾ ಜೋಕು ಕೇಳೆಡಿ. 

 ನೆಗೆ ಬರೆಕಾರೆ  ಕುಶಾಲು ಬೇಕು. ಸತ್ತ ಮನೆಲಿ ಕುಶಾಲು ಮಾಡ್ಳಿದ್ದೊ!.ಆದರಿದು ಮೊಬೈಲ್ಲಿ ಬಂದದು.  ಜವ್ವನಿಗರ ಕುಶಾಲು ಹೇಳುವೊಂ . ಆದರೆ ಪ್ರಾಯ ಆದೋರು ಸತ್ತದು. ನೆಗೆ ಚಟಾಕಿ ನೇರಂ  ಪೋಕಿಂಗೆ!.ನೆಗೆ ಬಪ್ಪದೇ ಕುಶಾಲು ಪರಿಸ್ಥಿತಿಲಿ.ಹೇಳುವ ಅರ್ಥ ಅಲ್ಲೊ, ಎಂತ ಹೇಳ್ತಿ?.

                        ————೦———–

6 thoughts on ““ಆರ ಅಬ್ಬೆ ಸತ್ತರೂ ನೆಗೆಯ ಅಬ್ಬೆ, ಸತ್ತಿದಿಲ್ಲೇಡ”-(ಹವ್ಯಕ ನುಡಿಗಟ್ಟು-87)

  1. ಸುರು ಕೇಳಿದ ನುಡಿಗಟ್ಟು. ವಿಜಯಕ್ಕ ನ ವಿವರಣೆಂದಾಗಿ ಸರಿಯಾಗಿ ಅರ್ಥಾತು.ಒಪ್ಪಾಯಿದು ವಿಜಯಕ್ಕಾ..

    1. ಅಪ್ಪು ಅನ್ನಪೂರ್ಣ. ಇದು ಸಂದರ್ಭಕ್ಕೆ ಮಿಗಿಲಾತೊ ಹೇಳಿ ಕಾಂಬಗ ಈ ಗಾದೆ ಹುಟ್ಟಿಗೊಂಡದು.

  2. ಜೀವನಲ್ಲಿ ನೆಗೆ ನೆಗೆ ಮಾಡ್ಯೋಂಡಿದ್ದರೆ, ನಮ್ಮ ಆಯಸ್ಸು ಹೆಚ್ಚಕ್ಕಾಡ. ಅಪರೂಪದ ನುಡಿಗಟ್ಟು ವಿಜಯಕ್ಕ.

  3. ನೆಗೆಯ ಅಬ್ಬೆ ಸಾವಲಿಲ್ಲೆ. ಹಾಂಗಾಗಿ ನೆಗೆ ಯಾವಾಗಲೂ ಮಾಡ್ಲಕ್ಕು
    ಆದರೆ ಸಮಯ,ಸಂದರ್ಭವನ್ನೂ ನೋಡಿಗೊಳೆಕ್ಕು.
    ನುಡುಗಟ್ಟಿನ ಮೂಲಕ ಸಂದೇಶವನ್ನು ಕೊಡುವ ವಿಜಯತ್ತಿಗೆಗೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×