Oppanna.com

ಈಗ್ನ ಕಾಲ

ಬರದೋರು :   ಕಲ್ಪನಾ ಅರುಣ್    on   06/04/2014    6 ಒಪ್ಪಂಗೊ

ಈಗ್ನ ಕಾಲ್ದಲ್ ಮದ್ವೆಯಾಗೋ ಅಂದ್ರೆ ಹಳ್ಳಿ ಬಿಡೊ
ಜಾತಿ ಮತ ಬೇಕೂಂದ್ರೆ ಪೇಟೆಲ್ ಇರೋ
ನೌಕ್ರಿ ಹಿಡ್ದು ಬಾಡ್ಗೆ ಮನೆ ಗಾಡಿ ತಕಳೊ
ಮಾಡರ್ನಾಗಿ ಇಂಗ್ಲೀಷ ಮಾದ್ರಿ ವೇಷಾ ತಳ್ಯೊ||
 
ಹಳ್ಳಿ ಜಮೀನು ವಟ್ನ ಸಂಸಾರ್ದಲ್‌ಯೆಲ್ಲಿ ಸೊಗ್ಸು
ಅಂತದ್ದೆಲ್ಲಾ ವಂಟಿ ಜೀವ್ನಕ್ ಇದ್ದಾ ಹೊಲ್ಸು
ಹವೀಕ್ರು ಅಂದ್ರೆ ಮಾಡರ್ನಾಗಿ ಜೀವ್ನ ನಡೆಸೊ
ಹೆಣ್ಮಕ್ಳ ಆಸೆ ನೆರವೇರ್ಸವಂತಾ ಮನ್ಸಾ ಇಡಸೊ||
 
ಈಗಣ್ಣ ಕಾಲ್ದಲ್ ಹೆಣ್ಮಕ್ಕನೂ ನೌಕ್ರಿ ಮಾಡ್ತೊ
ಲಕ್ಷ ಲಕ್ಷ ದುಡ್ಡು ಕಾಸು ಸಂಪಾದ್ನೆ ಮಾಡ್ತೊ
ಹಾಂಗಾಗ್ ಅಕ್ಳ ಆಸೆ ರಾಶಿ ಇರ್ತು
ಹಳ್ಳಿ ಗಂಡ್ನ ಒಪ್ಪಕಂಬೂಲೇ ಕಷ್ಟಾ ಆಗ್ತು||
 
ಬೆಂಗ್ಳೂರನಂತಾ ಶಹರದಲ್ಲಿ ಸುತ್ತತಾ ಇರೋ
ಗಂಡಾಹೆಂಡ್ತಿ ಸೇರಿ ನೌಕ್ರಿ ಜೀವ್ನ ಮಾಡೋ
ಹೊಟೇಲು ಪಾರ್ಕು ಸಿನೇಮಾ ಹೇಳಿ ವೀಕೆಂಡ್ ಕಳ್ಯೊ
ಕ್ರೆಡಿಟ್ ಕಾರ್ಡಲ್ ಮಜಾಮಾಡಿ ಶಾಪಿಂಗ್ ಮಾಡೋ||
 
ಗಂಡು ಹೆಣ್ಣೀನ ಸ್ಥಿತಿ ಈಗಾ ಸಮಾ ಆಯ್ದು
ಒಬ್ರಿಗೊಬ್ರು ಅರ್ಥಾ ಮಾಡ್ಕಂಬ್ದ ತಡಾ ಆಯ್ದು
ಡೈವೋಸ್ ಕೇಸು ಈಗೀಗ ಬಲಾ ಆಯ್ದು
ಮದ್ವೆ ಅಂದ್ರೆ ಮಕ್ಳ ಆಟ್ಕೆ ತರಾ ಆಯ್ದು||
 
ಈಗ್ನ ಕಾಲ್ದವ್ಕ ಇರೋ ಪೆಂಟು ಶರ್ಟು ಹೇರ್‌ಕಟ್ಟು
ಕಾರು ಗೀರು ಸ್ವಂತ ಮನೆ ಸಾಲಕ್ಕಿಷ್ಟು
ಹೆಂಡ್ತಿ ದುಡ್ಡಲ್ ಗಂಡಂಗಂತೂ ಮಜಾ ಬೇರೆ
ಹುಸಿನೆಗೆ ಚೆಲ್ಲಾಟ ಜೀವ್ನ್ದ ಲೀಲೆ||
 
ಹವೀಕ ಸಂಸ್ಕೃತಿ ದಿನಾ ಹೋದಾಂಗ್ ಕಳೇತಾ ಇದ್ದು
ಮುಂದೊಂದ ದಿನಾ ಗತಿಯಿಲ್ದೆ ತೀರ್ತಾ ಇರ್ತು
ವಿದ್ಯೆ ಕಲ್ತಾ ಕೂಸು ಮಾಣಿ ವಿಚಾರ ಮಾಡೋ
ತಂಗ್ಳತನಕ್ ಎಲ್ಲಿದ್ರೂ ಬೆಲೆ ಕೊಡೊ||
 
ಗಜಿಬಿಜಿ ಜೀವ್ನ್ದಲ್ಲೂ ಹವೀಕ್ರ ಹುಡ್ಕೊ
ಸ್ನೇಹಾ ಪ್ರೀತಿ ಸಂಬಂಧಾನ ಗಟ್ಟಿಗೊಳ್ಸೊ
ನಮ್ಮಜಾತಿ ಬಗ್ಗೆಲ್ಲಾ ಮಕ್ಕೊಗ್ ತಿಳ್ಸೊ
ಹವೀಕ ದಾಂಪತ್ಯ ಪದ್ಧತೀನಾ ಮುಂದೂ ಉಳ್ಸೊ||

6 thoughts on “ಈಗ್ನ ಕಾಲ

  1. ನಮಸ್ತೇ ಅಕ್ಕಾ ರಾಶಿ ಕುಶಿಯಾತುನಿಮ್ಮ ಪದ್ಯ ಓದಿ. ನಿಮ್ಮ ಕಳಕಳಿ ಮೆಚ್ಚಿಗೆ ಆತು.ಶುಭಾಶಯ೦ಗೊ. ಹೀ೦ಗೇನೆಬರೀತಾ ಇರಿ.

  2. ರಾಶಿ ವಿಚಾರಂಗ್ಳಿಂದ ಕೂಡ್ದ ನಿಂಗ್ಳ ಪದ್ಯ ಚೆಲೋ ಆಯ್ದು.

  3. ಚನೈ ಬಾವಾ ತುಂಬ ಕ್ರತಜ್ನತೆ ನಿಂಗ್ಳ ಒಪ್ಪಕ್ಕೆ

  4. ಪದ್ಯ ಲಾಯಕ ಆಯ್ದು. ನಿಂಗ್ಳ ಕವನ ಬರವ ಶೈಲಿ, ಹವೀಕ ಭವಿಷ್ಯದ ಕಳಕಳಿ ಶ್ಲಾಘನೀಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×