Oppanna.com

ಈ ಮರ್ಯಾದಿ ನವಗೆ ಬೇಕೋ

ಬರದೋರು :   ಕೇಜಿಮಾವ°    on   31/01/2013    16 ಒಪ್ಪಂಗೊ

ಪಂಕ್ತಿಭೇದ ಇಂದು ನಾವು ದಿನ ನಿತ್ಯ ಕೇಳುವ/ಓದುವ ವಿಷಯ ಆದ ಹಾಂಗೆ ಕಾಣ್ತು.
ಇದಕ್ಕೆ ಕಾರಣ ಆರು? ಬ್ರಾಹ್ಮಣ ಹೇಳುಸಿಗೊಂಬ ನಾವು ಮಾಂತ್ರವೋ ಅಥವ ಸಮಾಜಲ್ಲಿಪ್ಪ ಇನ್ನಿತರ ಜಾತಿಯವರ ಪಾಲೂ ಇದ್ದೋ? ಎನ್ನ ಅನುಭವದ ಪ್ರಕಾರ ಹಿಂದಾಣ ಕಾಲಲ್ಲಿ ಪ್ರಾರಂಭ ಆದ ಈ ಕ್ರಮವ ಮುಂದುವರಿಶಿಯೊಂಡು ಹೋದ್ದದರಲ್ಲಿ ಅನ್ಯ ಜಾತಿಯವರ ಪಾಲು ಸಾಕಷ್ಟಿದ್ದು.
ಆನು ಶಾಲಗೆ ಹೋಗಿಯೊಂಡಿಪ್ಪಾಗ ಎನ್ನ ಸ್ನೇಹಿತ ಒಬ್ಬನ ಮನಗೆ ಮಾಂತ್ರ ಎನಗೆ ಹೋಪಲೆ ಮನೆಯವರ ಒಪ್ಪಿಗೆ.ಅವ° ಅನ್ಯ ಜಾತಿಯವ° ಹೇಳೆಕ್ಕು ಹೇಳೀ ಇಲ್ಲೆನ್ನೆ.
ಅಲ್ಲಿ ಹೋದರೆ ಎನಗೆ ಏವಗಳೂ ಬೊಂಡ,ಬಾಳೆ ಹಣ್ಣು ಸಿಕ್ಕುಗಷ್ಟೆ ಅಲ್ಲದ್ದೆ ಬೆಶಿ ಮಾಡಿದ ಯಾವದೇ ವಸ್ತು ಸಿಕ್ಕ.ಆ ಪ್ರಾಯಲ್ಲಿ ಹೀಂಗೆಂತಕೆ ಹೇಳುದರ ಪ್ರಶ್ನೆ ಮಾಡಿದ್ದು ಎನಗೆ ನೆಂಪಿಲ್ಲೆ.
ಮತ್ತೆ ಅನು ವಿದ್ಯಾಭ್ಯಾಸ ಮುಗಿಶಿಕ್ಕಿ ಮನಗೆ ಬಂದೆ.ಎನ್ನ ಅದೇ ಸ್ನೇಹಿತನ ಅಣ್ಣ ಎಂಗೊಗೆಲ್ಲಾ (ಎನ್ನ ಅಪ್ಪಂಗೂ) ತುಂಬಾ ಬೇಕಾದವ°.ಮನಗೆ ಬಂದು ಅಕ್ಕಾ° ,ಇಂದು ಎನಗೆ ಮೇಲಾರವುದೇ ಹಸರು ಪಾಯಸವೂ ಬೇಕು ಹೇಳಿಯೋ ಇನ್ನೆಂತದೋ ತಿನ್ನೆಕ್ಕು ಹೇಳಿಯೋ ಹೇಳಿ ಕೇಳಿ ಮಾಡ್ಸಿ ತಿಂದಿಕ್ಕಿ ಹೋಕು.ಹಾಂಗಿಪ್ಪ ಒಂದು ದಿನ ಅವ° ಮನಗೆ ಬಂದು ಉಂಬಲೆ ಕೂಪಗ ಒಂದು ಬಾಳೆ ಅದ್ದ ಹಂತಿ ಹಾಕಿಯೊಂಡಿತ್ತು.(ಎನಗೆ ಮದಲೂ ಇಂದೂ ಜಾತಿ ಭೇದ ಇಲ್ಲೆ. ಯೇವದೇ ಜಾತಿಯವರ ಮನೆಲಿ ,ಅವು ಸ್ವಛ್ಛ ಇದ್ದರೆ ಆನು ಉಂಬಲೆ ತಿಂಬಲೆ ತಯಾರು.) ಅದರ ನೋಡಿ ಅನು ಆ ಬಾಳೆ ಎಲೆಯ ತಿರುಗುಸಿ ಎನ್ನ ಬಾಳೆಯ ಹತ್ತರೆ ಮಡಗಿ ಆ ಸ್ನೇಹಿತನ ಬಾ,ಕೂರು ಹೇಳಿ ದಿನಿಗೊಳಿದೆ.
ಅವ° ಬಂದವನೇ ಪುನಃ ಆ ಎಲೆಯ ಮಣೆ ಸಮೇತ ತಿರುಗುಸಿ,ನಿನ್ನ ಈ ಕೋಲೇಜಿನ ಬುದ್ಧಿ ಎಲ್ಲ ಬೇಡ,ಆನು ಹೀಂಗೇ ಕೂಪದು ಹೇಳಿ ಕೂದ°.ಅದು ಸರಿಯಲ್ಲ ಹೇಳಿದ್ದಕ್ಕೆ ಅವನ ಉತ್ತರ(ಅವನುದೇ ಆ ಕಾಲಲ್ಲಿ ಕೋಲೇಜಿಲ್ಲಿ ಕಲ್ತವ° ಆಢ್ಯ ಮನೆತನದವ°),”ಗೋಪಾಲ,ಆನು ಬ್ರಾಹ್ಮಣರ ಮನೆಲಿ ಮಾಂತ್ರ ಅಡ್ಡ ಹಂತಿಲಿ ಕೂಪದು,ಬಟ್ರುಗಳ ಮನೆಲಿ ಇಲ್ಲೆ” ಅವನ ಅರ್ಥ ಗೊಂತಾತಲ್ಲದೋ.ಕುಡಿವವು ತಿಂಬವು ಬಟ್ರುಗೋ.ಅಲ್ಲಿ ಅಡ್ಡ ಹಂತಿಲಿ ಕೂರ್ತಿಲ್ಲೆ ,ಲಾಯಕ ವಿಷ್ಲೇಶಣೆ ,ಅಲ್ಲದೋ?
ಎನ್ನ ಕೋಲೇಜಿನ ಕಾಲದ ಒಬ್ಬ° ಸ್ನೇಹಿತನ ಮನೆಲಿ ಕೂಡಾ ಎನಗೆ ಊಟ( ಬೆಂಗ್ಳೂರಿಲ್ಲಿಪ್ಪವು) ಸಿಕ್ಕೆಕ್ಕಾರೆ ಆನು ಬೇರೆ ಜಾತಿಯವರ ಮನೆಲಿ ಉಂಡಿದೆ ಹೇಳಿ ಒಪ್ಪಿಗೊಳ್ಳೆಕ್ಕಾಗಿ ಬಂದಿತ್ತು.ಆವು ಮದಲಾಗಿ ಒಬ್ಬ ಬ್ರಾಹ್ಮಣಂಗೆ ಊಟ ಕೊಟ್ಟು ಅವನ ಜಾತಿ ಕೆಡುಸಲೆ ತಯಾರಿತ್ತಿದ್ದವಿಲ್ಲೆ.
ಇತ್ತೀಚಗೆ ವಿಟ್ಳಲ್ಲಿ ದೇವಸ್ಥಾನದ ಬ್ರಹ್ಮಕಲಶ ನೆಡದತ್ತು.ತುಂಬಾ ಗೌಜಿಲಿ.ಏನಿಲ್ಲದ್ದರೂ ೧೩ ದಿನಲ್ಲಿ ನಾಲ್ಕೂವರೆ ಲಕ್ಶ ಜೆನ ಉಂಡಿದವು.
ಅಲ್ಲಿ ನಮ್ಮ ಬ್ರಾಹ್ಮಣರದ್ದು ಬೇರೇ ಹಂತಿ ಆಯೆಕ್ಕು,ಬೇಡ ಹೇಳ್ತ ಚರ್ಚೆ ದೊಡ್ಡ ಸಂಗತಿಯಾತು.ಸಮಾಜದ ಎಲ್ಲಾ ಮಟ್ಟಲ್ಲೂ ವಿವಾದ.ಎಲ್ಲಿ ವರೆಗೆ ನಮ್ಮ ದೂಷಣೆ ಆಗಿತ್ತು ಗೊಂತಿದ್ದೋ?
ಒಬ್ಬ° ಗಂಗಸರ ಮಾರ್ತವ° ಹೇಳಿದ್ದಿದು-“ಬಲ್ಲೆ ಎನ್ನ ಅಂಗಡಿಗ್,ಏತ್ ಜನ ಬ್ರಾಣೆರ್ ರಾತ್ರಿ ಬತ್ತ್ ಪರ್ಪೆರ್ ತೂಲೆ,ಅಂಚಿನಕ್ಳೆಗ್ ಒಣಸ್ ಮಾತೆರ್ನ ಒಟ್ಟುಗ್ ಮಾಲ್ಪಿಯಾರ ದಾನೆಯೇ” ಹೇಳಿ.
ಕುಡಿವದು ತಿಂಬದರ ಬಗ್ಗೆ ಎನ್ನದೇನೂ ಅಭಿಪ್ರಾಯ ವೈಯಕ್ತಿಕವಾಗಿ ಇಲ್ಲೆ.ಅವಕ್ಕೆ ಬೇಕಾದ್ದದರ ಮಾಡ್ತದಕ್ಕೆ ಪ್ರಾಯಕ್ಕೆ ಬಂದವಕ್ಕೆ ಸ್ವಾತಂತ್ರ್ಯ ಇದ್ದು,ಆದರೆ ಮತ್ತೆ ಹೀಂಗೇನಾದರೂ ಸಂದರ್ಭಲ್ಲಿ ಮಾತು ಕೇಳಿಯೊಂಬದು ಬೇಕೋ ಹೇಳ್ತದು ಅಲಾಯದ.
ಎನ್ನ ಉದ್ದೇಶ ಇಲ್ಲಿ ಅದಲ್ಲ.
ನಾವು ನಮ್ಮ ಜಾತಿಯವರ ಸಂಘಟನೆ ಮಾಡುವಾಗ ಒಂದು ವಿಷಯ ನೆಂಪು ಮಡಿಕ್ಕೊಳೆಕ್ಕು.ನಮ್ಮ ಘನಸ್ತಿಕೆಯ ಒಳಿಶಿಗೊಳೆಕ್ಕಾದರೆ ನಾವು ಬೇರೆ ಹಂತಿಲಿ ಮಾಂತ್ರ ಉಂಬದು ಹೇಳ್ತ ವಿಷಯ ಬಪ್ಪಲಾಗ.
ಯಾವುದೇ ಬ್ರಾಹ್ಮಣ ಜಾತಿಯವ° ಬೇರೆ ಹಂತಿಲಿ ಕೂದು ಉಣ್ತಿಲ್ಲೆ ಹೇಳಿರೆ ಬ್ರಾಹ್ಮಣ ಸಮರಾಧನೆ ಆಯೆಕ್ಕಾದಲ್ಲಿ ಎಂತ ಮಾಡ್ತವು ಹೇಳ್ತದರ ಚೆಂದ ನೋಡುವೊ°.
ಅದು ಬಿಟ್ಟು “ಎನಗೆ ಚೆಂಡು ಬೇಕೇ” ಹೇಳಿ ಹಟ ಹಿಡಿವ ಮಕ್ಕಳ ಹಾಂಗೆ “ಎಂಗೊಗೆ ಬೇರೆ ಹಂತಿ ಆಯೆಕ್ಕೆ” ಹೇಳಿ ನಾವೆಂತಕೆ ಮರ್ಯಾದಿ ಕಳಕ್ಕೊಂಬದು?
ಅಷ್ಟಕ್ಕೂ ನಮ್ಮ ಪೈಕಿ ಎಷ್ಟು ಜನ ದಿನಕ್ಕೆ ಒಂದು ಹತ್ತು ಗಾಯತ್ರೀ ಜಪ ಮಾಡ್ತವು?ಸಂಧ್ಯಾವಂದನೆಯಂತೂ ಮಾಡುವವು ಇಂತಿಷ್ಟೇ ಹೇಳಿ ಲೆಕ್ಕ ಹಾಕ್ಲಕ್ಕು.
ನಾವು ಬ್ರಾಹ್ಮಣ್ಯ ಒಳಿಶಿಗೊಳದ್ದೇ ಬ್ರಾಹ್ಮಣ ಹೇಳ್ಸಿಗೊಳೆಕ್ಕು ಹೇಳ್ತ ಮನೊಭಾವ ಸರಿ ಅಲ್ಲ.
ಇದಕ್ಕೆಂತ ಮಾಡುವೊ°?
ನಾವಾರೂ ಬೇರೆ ಹಂತಿಲಿ ಕೂರದ್ದೇ ಎಲ್ಲೋರೊಟ್ಟಿಂಗೆ ಉಣ್ಣ್ತೆಯೊ° ಹೇಳೆಕ್ಕು.
ಬೇರೆ ಜಾತಿಯವರಲ್ಲಿ ಹೋದರೆ ಬೊಂಡ ಬಾಳೆ ಹಣ್ಣು ತಿಂದು ಬಪ್ಪಲಾಗ.ಆನು ಉಂಡಿಕ್ಕಿಯೇ ಹೋಪದು ಹೇಳಿ ಖಂಡಿತವಾಗಿ ಹೇಳೆಕ್ಕು.
ಬೇರೆ ಜಾತಿಯವು ಪೂಜೆ/ಹೋಮ ಮಾಡ್ಸಲೆ ದೆನಿಗೊಳಿರೆ ಬತ್ತಿಲ್ಲೆ ಹೇಳಿ ಸ್ಫಷ್ಟವಾಗಿ ಹೇಳೆಕ್ಕು.
ನಾವು ಒಂದು ಸಂಘಟನೆ ಮಾಡಿ ಪುರೋಹಿತರಿಂಗಪ್ಪ ನಷ್ಟವ ತುಂಬ್ಸಿ ಕೊಡೆಕು.
ಸತ್ಯ ಹೇಳ್ತೆ,ಬೇರೆ ಜಾತಿಯವರಲ್ಲಿ ಹೋಗಿ ಆನು ಉಂಡಿಕ್ಕಿಯೇ ಹೋಪದು ಹೇಳ್ತ ನಿರ್ಧಾರ ಮಾಡಿರೆ/ಸಂತರ್ಪಣೆಗಳಲ್ಲಿ ಬೇರೆ ಹಂತಿಲಿ ಕೂದು ಕೈನ್ನೀರು ಹಾಕ್ಸಿ ಉಣ್ತಿಲ್ಲೆ/ಪೂಜೆ/ಹೋಮ ಮಾಡ್ಸಲೆ ಬತ್ತಿಲ್ಲೆ ಹೇಳ್ತ ನಿರ್ಧಾರ ನಮ್ಮ ಈಗಾಣ “ಬೇರೆ ಹಂತಿಲೇ ಉಂಬದು” ಹೇಳ್ತದಕ್ಕಿಂತ ಎಷ್ಟೋ ಬೇಗ ಫಲ ಕೊಡುಗು.
ನಮ್ಮ ಮರ್ಯಾದಿಯೂ ಹೆಚ್ಚುಗು.

ಕೇಜಿಮಾವ°
Latest posts by ಕೇಜಿಮಾವ° (see all)

16 thoughts on “ಈ ಮರ್ಯಾದಿ ನವಗೆ ಬೇಕೋ

  1. ಪ್ರೀತಿಯ ಲೇಕಕರೇ, ನಮಸ್ಕಾರಗಳು.
    ನಿಮ್ಮ ಅನಿಸಿಕೆಗಳನ್ನು ಓದಿ ಬೇಸರವಾಯಿತು. ಈ ಕಾಲಕ್ಕೆ ನಮ್ಮ ಸಮಾಜದ ಪರಿಸ್ತಿತಿ (ಹಿಂದು ಸಮಾಜ)ಎಲ್ಲಾ ಕಡೆಗಳಿಂದಲೂ
    ಧಾಳಿಗೆ ಒಳಪಟ್ಟದೆ. ಮಾಧ್ಯಮಗಳೂ ನಮಗೆ ತಿರುಗಿ ಬಿಡ್ಡಿವೆ. ಹೀಗಿರುವಾಗ ನಾವು ಜಾತಿವಾದಿಗಳಾಗುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ನಿಂತು ನಮ್ಮ ಹಿಂದೂ ಸಮಜದ ತಪ್ಪುಗಳನ್ನ ಸಾಧ್ಯವಾದಮಟ್ಟಗೆ ತಿದ್ದಿ, ಒಗ್ಗಟ್ಟಿನಿಂದ ಮುಂದುವರಿಯಬೇಕೆಂದು ನನ್ನ ಅನಿಸಿಕೆ.
    ಇಂತೀ ತಮ್ಮ ವಿಶ್ವಾಸಿ,
    ಕೆ. ವಿ. ಭಟ್.

  2. {ನಾವು ಬ್ರಾಹ್ಮಣ್ಯ ಒಳಿಶಿಗೊಳದ್ದೇ ಬ್ರಾಹ್ಮಣ ಹೇಳ್ಸಿಗೊಳೆಕ್ಕು ಹೇಳ್ತ ಮನೊಭಾವ ಸರಿ ಅಲ್ಲ.}
    ಹಾಂಗೆಯೇ – ಯೋಗ್ಯತೆ ಇಲ್ಲದ್ದೆಯೇ ಯೋಗ್ಯ ಹೇಳಿ ಹೇಳಿಸಿಕೊಳ್ಳಲೆ ಪ್ರಯತ್ನಿಸುವದು ಸಹಜ ಸ್ವಭಾವವೋ ಏನೋ? (ಸಂಸ್ಕಾರ ಅಲ್ಲ). ಎಲ್ಲಾ ಕಾರ್ಯಂಗಳಲ್ಲಿಯೂ ಇಪ್ಪದೇ.
    ಸತ್ಯ, ನಾವೆಲ್ಲೋರುದೆ ಆತ್ಮವಿಮರ್ಶೆ ಮಾಡೆಕಾದ ವಿಚಾರ.

    ಹಾಂಗಾಗಿ ಕೆಲವು ಜೆನ (ಪ್ರಾಮಾಣಿಕ ಧೈರ್ಯಶಾಲಿಗ!) ಬ್ರಾಹ್ಮಣ ಜಾತಿಲ್ಲಿ ಹುಟ್ಟಿಯೂ “ಎನಗೆ ಬ್ರಾಹ್ಮಣ್ಯ ಇಲ್ಲೆ, ಎನ್ನ ಬ್ರಾಹ್ಮಣ ಹೇಳದ್ರೂ ಅಡ್ಡಿ ಇಲ್ಲೆ” ಹೇಳಿ ಹೇಳ್ವದು! ಸಮಸ್ಯೆ ಸುರುವಾದ್ದು ಇಲ್ಲಿಂದ ಅಲ್ಲದೊ?
    ಬ್ರಾಹ್ಮಣ್ಯವ ತಿಳ್ಕೊಳ್ಳೆಕು, ಪಡಕ್ಕೊಳ್ಳೆಕು, ಬ್ರಾಹ್ಮಣ ಹೇಳಿಸಿಕೊಳ್ಳೆಕು ಹೇಳಿ ಅನಿಸಿರೆ ಪರಿಹಾರ ಕಾರ್ಯವೂ ಸುರುವಕ್ಕು.

    ಇಲ್ಲಿ (ಪ್ರಸ್ತುತ ಪಂಕ್ತಿಭೋಜನಲ್ಲಿ) ಬ್ರಾಹ್ಮಣರ ಹಂತಿ ಹೇಳಿರೆ ಸಂಸ್ಕಾರಯುಕ್ತ ಅಥವಾ ಕ್ರಮಬದ್ಧವಾದ ಭೋಜನಕ್ರಮ ಇಪ್ಪ ಹಂತಿ ಹೇಳಿ ಅರ್ಥೈಸಿಗೊಂಬಲಕ್ಕಾಯಿಕ್ಕು.

    ಸಂಧ್ಯಾವಂದನೆ ಮಾಡದ್ದವಂಗುದೆ ಹೀಂಗೆ ಉಂಬಲೆ ಅವಕಾಶ ಬೇಕು.

    1. {ಇಲ್ಲಿ (ಪ್ರಸ್ತುತ ಪಂಕ್ತಿಭೋಜನಲ್ಲಿ) ಬ್ರಾಹ್ಮಣರ ಹಂತಿ ಹೇಳಿರೆ ಸಂಸ್ಕಾರಯುಕ್ತ ಅಥವಾ ಕ್ರಮಬದ್ಧವಾದ ಭೋಜನಕ್ರಮ ಇಪ್ಪ ಹಂತಿ ಹೇಳಿ ಅರ್ಥೈಸಿಗೊಂಬಲಕ್ಕಾಯಿಕ್ಕು} – ನಿಂಗೊ ಹೇಳಿದ್ದು ಅಕ್ಷರಶ: ನಿಜ.
      ಅಂತಹ ಭೋಜನಕ್ರಮ ಎಲ್ಲರುದೇ ಅನುಸರಿಸಿದರೆ ತೊಂದರೆ ಇಲ್ಲೆ. ಆದರೆ ಹೆರಜಾತಿಯವರಲ್ಲಿ ಎಷ್ಟು ಜೆನ ಇಂತಹ ಕ್ರಮ ಅನುಸರಿಸುಗು ಹೇಳುದು ಮಾತ್ರ ಒಂದು ಯಕ್ಷ ಪ್ರಶ್ನೆಯೇ ಸರಿ.
      ಎಂತ ಹೇಳ್ತಿ…?

        1. ಊರು ಬಿಟ್ಟ ಮೇಲೆ (ಬೆಂಗಳೂರು/ಮಂಗಳೂರು ಹೋದಪ್ಪಗ) ಎಲ್ಲವೂ ನೆಡತ್ತು. ಆದರೆ ಊರಿಲಿ ಮಾತ್ರ ಪ್ರತ್ಯೇಕ ಹಂತಿಯೇ ಆಯೆಕ್ಕಡ 🙂

        2. ಆನುದೇ ಅದೇ ಮನೋಭಾವದವ°.ಆದರೆ ಮೊನ್ನೆ ಒಂದು ಸಮಾರಂಭಲ್ಲಿ ಇದೊಂದು ದೊಡ್ಡ ಸಂಗತಿಯಾದ ಕಾರಣ ಈ ವಿಷಯ ಪ್ರಸ್ತಾಪ ಮಾಡಿದ್ದು.ಆನು ಸಂಧ್ಯಾವಂದನೆಯೂ ಮಾಡ್ತಿಲ್ಲೆ,ಬ್ರಾಹ್ಮಣ ಹೇಳಿಯೂ ಹೇಳಿಗೊಳ್ತಿಲ್ಲೆ,ಆದರೆ ಸಮಾಜ ಅಂತೂ ಒಪ್ಪಿಗೊಂಬಲೆ ತಯಾರಿಲ್ಲೆನ್ನೇ,”ಆರ್ ಬಟ್ರ್ ಅತ್ತೋ” ಹೇಳದ್ದಿಕ್ಕೋ?

      1. ಅದಕ್ಕೆ ಅಲ್ಲದಾ ಯಕ್ಷಗಾನ ಆಟಲ್ಲಿ ” ಬ್ರಾಹ್ಮಣರದ್ದು ಊಟ… ಒಳುದವು ಊಟ ಮಾಡುದು ಅಲ್ಲ… ಮುಕ್ಕುದು” ಹೇಳಿ ಟಾಂಟ್ ಕೊಡುದು….

  3. ಸಾರ್ವಜನಿಕಲ್ಲಿ ಊಟವ ಎಷ್ಟೊ ಜನ ಬ್ರಾಹ್ಮಣರು ಮಾಡುತ್ತವು.ವೈದಿಕರಿಂಗೆ ಪ್ರತ್ಯೇಕ ಹಂತಿ ಹಾಕುದು,ಮತ್ತೆ ಎಲ್ಲರಿಂಗೂ ಸಾಮೂಹಿಕ ಭೋಜನ-ಈ ಪದ್ಧತಿ ಜಾರಿಗೆ ಬಕ್ಕು,ಅನುಮಾನ ಇಲ್ಲೆ.ಕೆಲವು ಕಾಲ ಹೋಯೆಕ್ಕು,ಅಷ್ಟೆ.ಈಗ ನಮ್ಮಲ್ಲಿ ಬೇರೆ ಜಾತಿಂದ ನಮ್ಮ ಮಾಣಿಂಗೊ ,ಕೂಸುಗೊ ಮದುವೆ ಅಪ್ಪದು ಜಾಸ್ತಿ ಆವುತ್ತಾ ಇದ್ದು-ಹೀಂಗಾಗಿ ಈ ರೀತಿಯ ಪಂಕ್ತಿಭೇದ ಹೆಚ್ಚು ಕಾಲ ಒಳಿಯ.ಅದು ಕ್ರಮೇಣ ಅರ್ಥ ಕಳಕೊಳ್ಳುಗು.
    ಅದೆಲ್ಲಾ ಸರಿ,ಬೇರೆ ಜಾತಿಯವು ದಿನುಗೋಳಿರೆ,ಪೂಜೆ,ಹೋಮ ಮಾಡುಸಲೆ ಹೋಪಲಾಗ ಹೇಳಿದ್ದು ಸರಿಯೋ-ಎನಗೆ ಅನುಮಾನ.ಧರ್ಮರಕ್ಷಣೆಲಿ ಇದು ಪುರೋಹಿತರ ಕರ್ತವ್ಯ,ಅವು ಬ್ರಾಹ್ಮಣ ವರ್ಣಕ್ಕೆ ಮಾತ್ರ ಪುರೋಹಿತರು ಅಲ್ಲನ್ನೇ!

  4. ಬ್ರಾಹ್ಮಣ್ಯ ಹೇಳುದು ಒಂದು ಅತ್ಯುನ್ನತವಾದ ಪಂಗಡ ಹೇಳಿ ಆನು ಸುಮಾರು ಪುಸ್ತಕಲ್ಲಿ ಓದಿದ್ದೆ, ಕೇಳಿದ್ದೆ.

    {ನಾವು ಬ್ರಾಹ್ಮಣ್ಯ ಒಳಿಶಿಗೊಳದ್ದೇ ಬ್ರಾಹ್ಮಣ ಹೇಳ್ಸಿಗೊಳೆಕ್ಕು ಹೇಳ್ತ ಮನೊಭಾವ ಸರಿ ಅಲ್ಲ} – ಕೇಜಿಮಾವನ ಈ ವಾದವ ಆನು ಒಪ್ಪುತ್ತೆ. ಆದರೆ ಎನ್ನದೊಂದು ಸಣ್ಣ ಪ್ರಶ್ನೆ:

    {ನಾವಾರೂ ಬೇರೆ ಹಂತಿಲಿ ಕೂರದ್ದೇ ಎಲ್ಲೋರೊಟ್ಟಿಂಗೆ ಉಣ್ಣ್ತೆಯೊ° ಹೇಳೆಕ್ಕು.}- ಹೇಳ್ತ ಕೇಜಿಮಾವ ಎಲ್ಲರೊಟ್ಟಿಂಗೆ (ಸಾರ್ವಜನಿಕ) ಉಂಬಲೆ ಕೂತರೆ ಅಲ್ಲಿ ಕೈನ್ನೀರು ತೆಗತ್ತೀರಾ? ಎಂತಗೆ ಹೇಳಿರೆ ಎಲ್ಲರ ಒಟ್ಟಿಂಗೆ ಕೂದ ಮೇಲೆ ನಾವು ಮಾತ್ರ ಕೈನ್ನೀರು ತೆಗೆದರೆ ಅದು ಬೇಧಭಾವ ಮಾಡಿದ ಹಾಂಗೆ ಆತಲ್ಲದಾ? ಅಥವಾ ಕೈನ್ನೀರು ತೆಗೆಯದ್ದೇ ಇದ್ದರೆ ನಮ್ಮ ಬ್ರಾಹ್ಮಣ್ಯವ ಬಿಟ್ಟ ಹಾಂಗೇ ಆತಲ್ಲದಾ?

    ಮತ್ತೆ ಬೇರೆ ಪಂಗಡದ ಕೆಲವು ಜೆನ ಪಾಯಸ ಬಂದಪ್ಪಗ ಎದ್ದು ಹೋಪಲೆ ಶುರು ಮಾಡ್ತವು. ಆದರೆ ಎಂಜಲು, ಕೊಳೆ ಇತ್ಯಾದಿ ಕೆಲವು ಆಚಾರಂಗೊ ಇಪ್ಪ ನಾವು ಇದರ ಸಹಿಸುಲೆ ಎಡಿಗೊ?

    ಇತ್ಯಾದಿ ಸುಮಾರು ಪ್ರಶ್ನೆಗೊ ಎನ್ನ ಮನಸ್ಸಿಲಿ ಬತ್ತಾ ಇದ್ದು. ಎಲ್ಲವನ್ನೂ ಇಲ್ಲಿ ಹಾಕಿ ಆನು ತರ್ಕಕ್ಕೆ ನಿಲ್ಲುತ್ತಿಲ್ಲೆ.

    ಮತ್ತೆ ಮಂಗ್ಳೂರು ಮಾಣಿಯ ಒಪ್ಪ {..ಈಗಾಣ ಕಾಲಲ್ಲಿ ನೂಲು ಹಾಕಿದವ ನೇರ್ಪಕೆ ಇದ್ದರೇ ಮರ್ಯಾದೆಲಿ ಬದುಕ್ಕಲೆಡಿಗಷ್ಟೆ”..}ಕಂಡು ಕೊಶಿ ಆತು.

    (ವಿಸೂ:ಒಪ್ಪಲ್ಲಿ ತಪ್ಪಿದ್ದರೆ ಕ್ಷಮೆಯಿರಲಿ)

    1. ಭಾವಾ!
      {ಎಲ್ಲರ ಒಟ್ಟಿಂಗೆ ಕೂದ ಮೇಲೆ ನಾವು ಮಾತ್ರ ಕೈನ್ನೀರು ತೆಗೆದರೆ ಅದು ಬೇಧಭಾವ ಮಾಡಿದ ಹಾಂಗೆ ಆತಲ್ಲದಾ? }
      ಅದು ಹೇಂಗೆ? ಹೀಂಗೆಯೇ ಊಟ ಸುರುಮಾಡೆಕು ಹೇಳಿ ಅಲ್ಲಿ ಕ್ರಮ ಇಲ್ಲೆ ಅನ್ನೆ?
      ಸಮಾನತೆಲ್ಲಿಯೂ ತನಗೆ ಬೇಕಾದ ಹಾಂಗಿಪ್ಪಲೆ ರಜ್ಜ ಸ್ವಾತಂತ್ರ್ಯ ಇದ್ದು.
      ಪಾಯಸ ಕೇಳಿಯೊಂಡು ಬಪ್ಪಗ ಆನೊಬ್ಬನೇ ಹಾಕಿಸಿಕೊಂಡರೆ ಎಂತ ತಿಳ್ಕೊಂಗೋ ಹೇಳಿ ತಿಳ್ಕೊಂಬದು ಭೇದಭಾವ ಅಲ್ಲ. ಅದು ಮುಜುಗರವೋ ನಾಚಿಕೆಯೋ ಹೇಳಿ ಹೇಳಿರೆ ಸರಿಯಕ್ಕು.
      [ಸಾಮೂಹಿಕಭೋಜನಲ್ಲಿ ಕೈನೀರು ತೆಕ್ಕೊಳ್ಳೆಕೋ ಬೇಡದೋ ಹೇಳ್ವದಕ್ಕೆ `ಭೇದಭಾವ ಆವ್ತು’ ಹೇಳ್ವ ಕಾರಣ ಸಮಂಜಸ ಅಲ್ಲ ಅಲ್ಲದೊ?]

      1. {ಸಮಾನತೆಲ್ಲಿಯೂ ತನಗೆ ಬೇಕಾದ ಹಾಂಗಿಪ್ಪಲೆ ರಜ್ಜ ಸ್ವಾತಂತ್ರ್ಯ ಇದ್ದು} – ಈ ಮಾತಿನ ಒಪ್ಪುತ್ತೆ. ಆದರೆ ಎನ್ನ ಸಂಶಯ ಅದಲ್ಲ.
        ಇದೇ ಬೈಲಿಲಿ ಊಟ ಮಾಡುವ ಕೆಲವು ಕ್ರಮಂಗಳ ಹೇಳಿ ಕೊಟ್ಟಿದವು. ಆದರೆ ಸಾರ್ವಜನಿಕರಲ್ಲಿ 100ರಲ್ಲಿ ಕೇವಲ 20%ನಷ್ಟು ಮಾತ್ರ ಬ್ರಾಹ್ಮಣರು ಇಕ್ಕಷ್ಟೆ. ಅಂಬಗ ನಾವು majority ಜೆನ ಮಾಡುವ ಕ್ರಮವ follow ಮಾಡೆಕ್ಕಷ್ಟೆ (ಎಂತಗೆ ಕೇಳಿರೆ ಉತ್ತರ ಹೇಳುಳೆ ಕಷ್ಟ ಅಕ್ಕು. Becoz ಸದ್ಯದ ಸ್ಥಿತಿಲಿ ಸಮಾಜಲ್ಲಿ ಈ ರೀತಿ ನೆಡೆತ್ತಾ ಇದ್ದು).
        {ಪಾಯಸ ಕೇಳಿಯೊಂಡು ಬಪ್ಪಗ ಆನೊಬ್ಬನೇ ಹಾಕಿಸಿಕೊಂಡರೆ ಎಂತ ತಿಳ್ಕೊಂಗೋ ಹೇಳಿ ತಿಳ್ಕೊಂಬ}
        ಪಾಯಸ ಎಷ್ಟು ಸರ್ತಿ ಬೇಕಾದರೂ ಹಾಕಿಯೊಂಬಲೆ ಅಕ್ಕು. ಆನು ಉದ್ದೇಶಿಸಿದ್ದು ಕೆಲವು ಸಾರ್ವಜನಿಕರು ಪಾಯಸ ಉಂಡ ಕೂಡಲೇ ಎದ್ದು ಹೋವ್ತವು. ಅವಕ್ಕೆ ಮಜ್ಜಿಗೆ ಬಪ್ಪನ್ನಾರ ಕಾದು ಕೂಪ ವ್ಯವಧಾನ ಇರ್ತಿಲ್ಲೆ. ಆದರೆ ಇದು ನಮ್ಮ ಊಟದ “ಕ್ರಮ”ಕ್ಕೆ ಹೊಂದಿಕೆ ಆಗ ಅಲ್ಲದಾ???

        1. ಭಾವಾ!
          ಪಾಯಸದ ಉದಾಹರಣೆ ಕೈನೀರಿನ ವಿಷಯಕ್ಕೆ ಹೋಲಿಕೆ ಕೊಡ್ಳೆ ಹೇಳಿದ್ದದು!

          “ಎಲ್ಲರ ಒಟ್ಟಿಂಗೆ ಕೂದ ಮೇಲೆ ನಾವು ಮಾತ್ರ ಕೈನ್ನೀರು ತೆಗೆದರೆ ಅದು ಬೇಧಭಾವ ಮಾಡಿದ ಹಾಂಗೆ”
          ಹೇಳಿ ಆದರೆ,
          “ಎಲ್ಲೋರು ಪಾಯಸ ಬೇಡ ಹೇಳಿಯಪ್ಪಗ ಆನೊಬ್ಬನೇ ಹಾಕಿಸಿಯೊಂಡರೆ” ಅದುದೆ ಭೇದಭಾವ ಹೇಳಿಯೋ? ಹೇಳಿ ಹೋಲಿಕೆ ಅಷ್ಟೆ.

          1. ಆನು ಕೈನ್ನೀರು ಹೇಳ್ವದರ ಬ್ರಾಹ್ಮಣರ “ಭೋಜನಕ್ರಮ”ದ ಒಂದು ಸಣ್ಣ ಉದಾಹರಣೆ ಆಗಿ ಕೊಟ್ಟದಷ್ಟೆ. 🙂
            ಬ್ರಾಹ್ಮಣರ ಹಂತಿ ಹೇಂಗೆ ಇರೆಕ್ಕು/ಇಪ್ಪದು ಹೇಳಿ ಮೊದಲೇ ಈ ಬೈಲಿಲಿ ಬೈಲಿನ ಹಿರಿಯೋರು, ಒಪ್ಪಣ್ಣ ಎಲ್ಲ ತುಂಬಾ ಒಪ್ಪವಾಗಿ ಬರದ್ದವು. ಕೆಲವು ಸಂಕೊಲೆಗೊ ಇಲ್ಲಿದ್ದು:

            https://oppanna.com/lekhana/bhojana-sveekara

            https://oppanna.com/oppa/bhojana-kale-parvati-pataye-choornike

            ಭೋಜನಕಾಲೇ by ಮುಳಿಯಭಾವ:

            https://oppanna.com/hundupadya/bhojana-kale_bhamini

            https://oppanna.com/hundupadya/bhojanakaalee-2-bhaaminili

            https://oppanna.com/hundupadya/bhojanakaale-3

            https://oppanna.com/hundupadya/bhojanakaale-4-bhaaminili

      2. ಆನು ಹೇಳ್ತಾ ಇಪ್ಪದು ಅದಲ್ಲ.ಬ್ರಾಹ್ಮಣರಿಂಗೆ ಬೇರೆ ಹಂತಿ ಇಲ್ಲದ್ದಲ್ಲಿ ಒತ್ತಿಂಗೆ ಕೂದು/ನಿಂದು ಉಂಬಲೆ ಇಷ್ಟ ಇಲ್ಲದ್ದವು ಮನಗೆ ಬಂದು ಉಂಬ°. ನವಗಲ್ಲಿ ಮರ್ಯಾದಿ ಕೊಡ್ತವು ಇಲ್ಲದ್ದರೆ ಉಂಡೇ ಆಯೆಕ್ಕು ಹೇಳ್ತ ಅನಿವಾರ್ಯತೆ ಇಂದ್ರಾಣ ಕಾಲಲ್ಲಿ ಇಲ್ಲೆನ್ನೆ.ಮತ್ತೆ ಪೌರೋಹಿತ್ಯ ನಿರಾಕರಣೆ ಎಂತಕೆ ಹೇಳಿದರೆ ನಮ್ಮ ಬೆಲೆ ಗೊಂತಾಗಲಿ,ನಾವು ಹೇಳಿಯೊಂಬದು ಬೇಡ ಹೇಳ್ತ ಭಾವಲ್ಲಿ.

  5. ಕೇಜಿ ಮಾವನ ಇಂಜೆಕ್ಷನು ಹೇಳಿರೆ ಇಂಜೆಕ್ಷನೇ…
    ಅಪ್ಪು ಮಾವ° ನಿಂಗೊ ಹೇಳಿದ್ದು ಸರಿ ಇದ್ದು.

    ಆನು ಗ್ರೇಶುದು – ‘ಇತ್ತೀಚೆಗೆ ಬ್ರಾಹ್ಮರ ದೂರುವವ್ವೇ ಹೆಚ್ಚಾಯಿದವು. ಬ್ರಾಹ್ಮರು ಬ್ರಾಹ್ಮಣ್ಯವ ಬಿಟ್ಟದೇ ಇದಕ್ಕೆ ಕಾರಣವೋ ಹೇಳಿ ಕಾಂಬದೆನಗೆ. ಹೆರ ಜಾತಿಯವ ಮನಸ್ಸಿನ ಒಳಾದಿಕೆ ಬ್ರಾಹ್ಮಣ್ಯ ಒಳಿಶಿಗೊಂಡೋರು ನಮ್ಮಂದ ಹೆಚ್ಚಿಗೆ ಹೇಳ್ತ ಭಾವನೆ ಇದ್ದು.
    ಅದು ಅವರ ಮೇಲೆ ಕೆಲಾವು ಶತಮಾನಂದ ಇಪ್ಪ ಕಾರಣ, ಒಳಂದೊಳದಿಕೆ ಈ ಬಗ್ಗೆ ಅಸಮಾಧಾನವೂ ಇದ್ದು. ಹಾಂಗಾಗಿಯೇ ಸರಿಯಾದ ನಡತೆ ಇಪ್ಪವನ “ಭಟ್ರೇ” ಹೇಳಿ ದಿನಿಗೇಳಿರೂ – ಬ್ರಾಹ್ಮಣ ಜಾತಿಲಿ ಹುಟ್ಟಿದವ° ನಡತೆಲಿ ರಜ್ಜ ಮಾಲಿಯರೂ “ಇಂಬೆ ಬಟ್ಟೆ” ಹೇಳ್ಲೆ ಸುರು ಮಾಡುದು.
    (ಉದಾ: ಇತ್ತೀಚೆಗೆ ವೆಂಕಟರಮಣ ಭಟ್ಟರ ಕೊಲೆ ಕೇಸು ಉದಯವಾಣಿ ಪೇಪರಿಲ್ಲಿ ಬಂದದು ನೆಂಪಿಕ್ಕು. ಅವ° ಕೊಲೆ ಮಾಡಿದ್ದ° ಹೇಳಿ ಅನುಮಾನ ಬಂದಪ್ಪಗಳೇ – ಏನೂ ಸಾಕ್ಷಿ ಇರದ್ದರೂ ‘ ವೆಂಕಟರಮಣ ಭಟ್ಟ ತನ್ನ ಹೆಂಡತಿ ಮಕ್ಕಳನ್ನು ಕೊಂದು ಓಡಿ ಹೋಗಿದ್ದಾನೆ ಎಂದು ವಿಮಲಾ ನಾಯ್ಕರ ತಂದೆ xxxನಾಯ್ಕರು ತಿಳಿಸಿದರು’ ಹೇಳಿ ಬರದವು. ಅದೇ ಅವನೂ ಕೊಲೆ ಆಯಿದ° ಹೇಳಿ ಗೊಂತಪ್ಪಗ, ಭಟ್ಟ ಹೋಗಿ ಭಟ್ಟರು ಹೇಳಿ ಆಗಿತ್ತು ) ಮೇಲಿದ್ದವನ ತೊಳಿಯೆಕು ಹೇಳುದು ಈಗ ಸಾಮಾನ್ಯ ಆಯಿದು.

    {ನಮ್ಮ ಪೈಕಿ ಎಷ್ಟು ಜನ ದಿನಕ್ಕೆ ಒಂದು ಹತ್ತು ಗಾಯತ್ರೀ ಜಪ ಮಾಡ್ತವು?ಸಂಧ್ಯಾವಂದನೆಯಂತೂ ಮಾಡುವವು ಇಂತಿಷ್ಟೇ ಹೇಳಿ ಲೆಕ್ಕ ಹಾಕ್ಲಕ್ಕು.} – ಇದೇ ತೊಂದರೆ ಆದ್ದು. ಯಾವಾಗ ನಮ್ಮ ಮೇಲೆ ನವಗೆ ಪ್ರೀತಿ ಇರ್ತೋ ಅವಗ ನಾವು ನಮ್ಮ ಗೌರವಿಸುತ್ತು. ಪ್ರೀತಿ ಮತ್ತೆ ಗೌರವ ಒಟ್ಟೊಟ್ಟಿಂಗೇ ಇಪ್ಪದು. ನಮ್ಮ ವಿಷಯಂಗಳ ನಾವೇ ಪ್ರೀತಿಸದ್ದೇ ಗೌರವಿಸದ್ದೇ ಇದ್ದರೆ, ಇನ್ನೊಬ್ಬರೂ ಮರ್ಯಾದೆ ಕೊಡವು. ಮರ್ಯಾದೆ ಬೇಕು ಹೇಳಿ ಆದರೆ ಅದರ ಪಡಕ್ಕೊಂಬ ಅರ್ಹತೆ ಪಡಕ್ಕೊಳ್ಳೆಕು. 🙂
    ಯಾವಗ ಒಬ್ಬ ಬ್ರಾಹ್ಮಣ ಜಾತಿಲಿ ಹುಟ್ಟಿದವ° ದಿನಕ್ಕೆರಡು ಸರ್ತಿ ಸರಿಯಾಗಿ ಜೆಪ ಮಾಡ್ತನೋ ಅವಗ ಎಲ್ಲೋರು ಅವಕ್ಕೇ ಗೊಂತಾಗದ್ದ ಹಾಂಗೆ ಬ್ರಾಹ್ಮಣಂಗೆ ಮರ್ಯಾದಿ ಕೊಡ್ಲೆ ಸುರು ಮಾಡ್ತವು. ಎಲ್ಲಿವರೆಗೆ ಬ್ರಾಹ್ಮರು ಕುಡಿವದು – ಸಿಗರೇಟು ಎಳವದು – ಲೊಟ್ಟೆ ಹೇಳುದು – ಇನ್ನೊಬ್ಬನ ಸಿಕ್ಕಿಸಿ ಹಾಕುದು ಮಾಡಿಯೊಂಡಿರ್ತವೋ ಅಲ್ಲಿವರೆಗೆ ಇದು ನಿಲ್ಲ.

    ಮೊದಲು ನಾವು ಮಾಡೆಕಾದ ಕೆಲಸ ನಮ್ಮ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ನಡತೆಗಳ ಸರಿ ಮಾಡಿಗೊಂಬದು.
    ಅವಗ ಬೇಡ ಬೇಡ ಹೇಳಿರೂ ಮರ್ಯಾದಿ ಅದಾಗಿಯೇ ಬಕ್ಕು. ನಮ್ಮಲ್ಲೇ ಕೊರತ್ತೆ ಇಪ್ಪಗ ಮರ್ಯಾದಿ ಕೊಡಿ ಹೇಳಿ ಕೇಳುದಾದರೂ ಹೇಂಗೆ?
    ಎನ್ನ ಅಪ್ಪ° ಹೇಳಿದ ಮಾತು ನೆಂಪಾವುತ್ತು “ಈಗಾಣ ಕಾಲಲ್ಲಿ ನೂಲು ಹಾಕಿದವ ನೇರ್ಪಕೆ ಇದ್ದರೇ ಮರ್ಯಾದೆಲಿ ಬದುಕ್ಕಲೆಡಿಗಷ್ಟೆ” ಹೇಳಿ. ಅಪ್ಪು ಹೇಳಿ ಕಾಣ್ತೆನಗೆ. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×