Oppanna.com

“ಉಂಡವಂಗೆ ಹಶು ಹೆಚ್ಚು, ತಿಂದವಂಗೆ ಕೊದಿ ಹೆಚ್ಚು”-(ಹವ್ಯಕ ನುಡಿಗಟ್ಟು-65)

ಬರದೋರು :   ವಿಜಯತ್ತೆ    on   21/08/2016    12 ಒಪ್ಪಂಗೊ

“ಉಂಡವಂಗೆ ಹಶು ಹೆಚ್ಚು,ತಿಂದವಂಗೆ ಕೊದಿ ಹೆಚ್ಚು.”-(ಹವ್ಯಕ ನುಡಿಗಟ್ಟು-65)

ಆನು ಪ್ರಾಥಮಿಕ ಶಾಲೆ ಕಲಿವಗ ಅಜ್ಜನಮನೆಲಿದ್ದೊಂಡು ಕುಂಬಳೆಸೀಮೆಯ ಇಚ್ಲಂಪಾಡಿ(ಕಳತ್ತೂರು) ಶಾಲಗೆ ಹೋದ್ದಿದ. ಮೀಶುದು, ತಲೆಬಾಚಿ ಕಟ್ಟುದು ಅಜ್ಜಿಯಾದರೆ, ಇರುಳು ಉಂಡಿಕ್ಕಿ ಕತೆ ಹೇಳುದು ಹಣ್ಣುಗೊ ಎಂತಾರಿದ್ದರೆ ಕೊರದು ಕೊಡುದೆಲ್ಲ ಅಜ್ಜನ ಕೆಲಸಾಗೆಡಿಂಕ್ಕು.  ಮನೆಲಿ ಎಷ್ಟು ಜೆನ ಇದ್ದೋ ಅಷ್ಟು ಪಾಲುಮಾಡಿ ತಟ್ಟೆಲಿ ಬೇರೆ-ಬೇರೆ ಮಡುಗುದು ಅಜ್ಜᵒ.ಇದೆಲ್ಲ ಹೆರಾಣ ವಿಶಾಲ ಚಾವಡಿಲಿ. ಅದರ ಹಂಚಲೆ ಎಂಗೊ ಮಕ್ಕಳತ್ರೆ ಏಪುಸುಗು. ಎನ್ನ ಜೆತಗೆ  ಎನ್ನ ಸೋದರಮಾವನ ಮಕ್ಕಳೂ ಇಕ್ಕು. ಅವು ಎನ್ನಂದ ಒಂದೊರುಷ,ಎರಡೂವರೆವರ್ಷ, ನಾಲ್ಕು ವರ್ಷ, ಹೀಂಗೆ ಸಣ್ಣವು, ಮೂರು ಜೆನ ಬಾವಂದ್ರು. ಈ ಹಣ್ಣುಗಳ ಹಂಚುಲೆ ಎಂಗೊ ನಾಲ್ಕೂ ಜೆನಕ್ಕೆ ಪೈಪೋಟಿ. ಎಂತಕೆ ಆಗೆಂಡಿಕ್ಕು!?.ಅದಲ್ಲಿಪ್ಪದಿದ ವಿಷಯ!!. ಅಜ್ಜᵒ-ಅಜ್ಜಿ, ಎರಡುಜೆನ ಸೋದರಮಾವಂದ್ರು, ಎರಡುಜೆನ ಅತ್ತೆಕ್ಕೊ, ಮತ್ತೆ ಎಂಗೊ ನಾಲ್ಕು ಮಕ್ಕೊ. ಹೀಂಗೆ ಹಂಚೆಕ್ಕಪ್ಪದು. ಅಜ್ಜನ ಒಟ್ಟಿಂಗೆ ಎಂಗೊ ಪುಳ್ಳಿಯಕ್ಕೊ ಚಾವಡಿಲಿದ್ದರೆ; ಮತ್ತಿದ್ದವೆಲ್ಲ ಅವರವರ ಕೆಲಸಲ್ಲಿ ಇಕ್ಕಿದ. ಅವೆಲ್ಲ ಇದ್ದಲಿಂಗೆ ಎಂಗೊ ಹೋಗಿ ಕೊಡೆಕಪ್ಪದು.

ಬೇರೆ ಆರಿಂಗೆ ಕೊಡ್ಳೆ ಸಿಕ್ಕದ್ರೂ ತೊಂದರೆ ಇಲ್ಲೆ. ಅಜ್ಜಿಗೆ ಆನು ಕೊಡ್ತೇಳಿ ಆನು ಹೇಳಿರೆ; ಆನು ಕೊಡ್ತೆ,ಆನು ಕೊಡ್ತೆ, ಹೇಳಿ ಬಾವಂದ್ರೂ ವಾದ ಮಾಡುಗು. ಈ ಗುಟ್ಟಿನ ನಿಂಗಳತ್ರೂ ಕೆಮಿಲಿ ಹೇಳೀತೆ . ಅಜ್ಜಿ, ಆರು ಹಂಚಲೆ ತೆಕ್ಕಂಡು ಬಂದವೋ .ಅವಕ್ಕೇ ಅದರ ಕೊಡುಗು. ಒಳ್ಳೆ ಹಣ್ಣುಗಾದರೆ, ಆ ಪಾಲಿಂಗೆ ಎಂಗೊಲ್ಲ ಮುಗಿ ಬೀಳುಸ್ಸೂ ಇಕ್ಕು.ಓಡಿಂಡು ಬಂದರೆ ಅಜ್ಜಿ, ಅದಲ್ಲಿದ್ದರ ಎಲ್ಲೋರಿಂಗು ಹಂಚಿಕೊಡುಗು. ಒಂದೋ ಎರಡೋ ಹೋಳು ಇಪ್ಪದಷ್ಟೇಳಿಯಾದರೆ ಎಲ್ಲೋರಿಂಗು ಸಿಕ್ಕಯಿದ.

ಹೀಂಗೆ ವಾದಾಂಟ ಮಾಡುವಗ ಒಂದಿನ ಅಜ್ಜᵒ “ತಿಂದವಂಗೆ ಕೊದಿಹೆಚ್ಚು,ಉಂಡವಂಗೆ ಹಶು ಹೆಚ್ಚು. ಹೇಳಿ ಒಂದು ಗಾದೆ ಇದ್ದು ಹಾಂಗೆ ಮಾಡ್ತೆಂತಕೆ ಮಕ್ಕಳೆ?”.

“ ಅದೇಂಗೆ ಅಜ್ಜᵒ ಹೇಳಿ?”.

“ ತಿಂದವಂಗೆ ಕೊದಿ ಹೆಚ್ಚು. ಹೇಳ್ತಕ್ಕೀಗ ನಿಂಗಳೇ ಉದಾಹರಣೆ. ಒಳ್ಳೆ ’ಅಲ್ಪನ್ಸ್’ ಮಾವಿನ ಹಣ್ಣು. ಇಂದ್ರಾಣದ್ದು. ಅದು ಇನ್ನೂ ಇನ್ನೂ ಬೇಕು ಹೇಳ್ತ ಚಪಲ ನಿಂಗೊಗೆ!. ಹಾಂಗೇ ಒಳ್ಳೆ.. ತಾಳು, ಕಾನಕಲಟೆ ಮೇಲಾರ, ಬೊಂಡಬದನೆ ಸುಟ್ಟಾಕಿದ ಬಜ್ಜಿ, ಹೀಂಗಿದ್ದೆಲ್ಲ ರುಚಿ-ರುಚಿ ಆತೂಳಿ ಆದರೆ; ಹೊಟ್ಟೆ ತುಂಬಿರೂ ಇನ್ನೊಂದು ಸೌಟು ಅಶನ ಉಂಬಲಕ್ಕೂಳಿ ಆಶೆ ಅಪ್ಪದು”. ಹೇಳಿದೊವು.

ಹೀಂಗೆ ಮತ್ತೂ ಮತ್ತೂ ಬೇಕೂಳಿ  ಆಶೆ, ಆಗ್ರಹಕ್ಕೆಲ್ಲ ಈ ನುಡಿಗಟ್ಟಿನ ಉಪಯೋಗುಸುತ್ತೊವು. ಸಣ್ಣದಿಪ್ಪಗ ಸಿಕ್ಕಿದ ಅನುಭವದ ಮಾತುಗೊ ಇದೆಲ್ಲ. ಎಂತ ಹೇಳ್ತಿ?.

—-೦—-

12 thoughts on ““ಉಂಡವಂಗೆ ಹಶು ಹೆಚ್ಚು, ತಿಂದವಂಗೆ ಕೊದಿ ಹೆಚ್ಚು”-(ಹವ್ಯಕ ನುಡಿಗಟ್ಟು-65)

  1. ವಿಜಯತ್ತೆ, ನವಗೆ ಇಷ್ಟದ್ದು ಸಿಕ್ಕಿದರೆ ಅದರ ಕೊದಿ ಯಾವಾಗಲೂ ಹೆಚ್ಚೇ ಅಲ್ಲದಾ? ಹಳೆ ನುಡಿಗಟ್ಟಿನ ವಿವರಣೆ ಲಾಯ್ಕ ಆಯಿದು.
    ಧನ್ಯವಾದಂಗೊ..

  2. ಶಿವರಾಮಣ್ಣ, “ಕಡುದ ಕೈಗೆ ಉಪ್ಪು ಹಾಕದ್ದ ಜಾತಿ” ಆನು ಬರದ 43 ನೇ ನುಡಿಗಟ್ಟು ನೋಡಿ, ಮತ್ತೆ ಕೇಡು ಹೇದರೆ…. ಅದಕ್ಕೆ 60 ನೇ ನುಡಿಗಟ್ಟು ನೋಡಿ ಓದಿ. ಒಂದಾರಿ ನಿಂಗೊ ಆನಿಷ್ಟರವರೆಗೆ ಹಾಕಿದ ಎಲ್ಲದರನ್ನೂ ಓದಿ. ನಿಂಗಳ ಆತ್ಮೀಯತೆಗೆ ಮನತುಂಬಿದ ಧನ್ಯವಾದಂಗೊ.

  3. ಎರಡು ಮೂರು ನುಡಿಗಟ್ಟುಗಳ ಬರೆತ್ತೆ ವಿಜಯಕ್ಕ. ನಿಂಗೊಗೆ ಪುರುಸೋತ್ತಪಗ ವಿವರಣೆ ಕೊಡಿ ಅಂಬೆರ್ಪಿಲ್ಲೇ ಎಂಜಲು ಕೈಲಿ ಕಾಕೆ ಓಡ್ಸ. ಕಡುದ ಕೈಗೆ ಉಪ್ಪು ಹಾಕ. ಕೇಡು ಹೇದರೆ ಅದು ಕೊಟ್ರಿದ್ದು.

  4. ಜನ್ಮ ದಿನದ ಶುಭಾಶಯ ಹೇಳಿದ ನರಸಿಂಹಣ್ಣಂಗೆ ಧನ್ಯವಾದ ಹೇಳ್ತಾ ನುಡಿಗಟ್ಟಿಂಗೆ ಒಪ್ಪಕೊಟ್ಟ ಎಲ್ಲರಿಂಗೂ ಕೃತಜ್ಞತೆ ಹೇಳ್ತಾಇದ್ದೆ. ಸೇಡಿಗುಮ್ಮೆ ಗೋಪಾಲ ಹೇಳುದುದೆ ಸತ್ಯ. ಏವದೇ ಆದರೂ ಒಂದು ಹಂತಕ್ಕೊರೆಗೆ ’ಕೊದಿ’. ಮತ್ತೆ ’ಬೊಡಿ’.
    ನುಡಿಗಟ್ಟು ಹೇಳ್ವದು ಜನಪದೀಯ ವಿಭಾಗಕ್ಕೆ ಸೇರಿದ್ದದು. ತಲೆಮಾರಿಲ್ಲಿ ಒಬ್ಬನಿಂದ ಒಂದು ನುಡಿಗಟ್ಟು ಸುರುವಾದರೆ; ಮತ್ತೆ, ಮತ್ತೆ ಹಾಂಗಿಪ್ಪ ಪ್ರಸಂಗ ಬಂದರೆ; ಅದರ ಉದಾಹರಣೆ ಕೊಟ್ಟು ಬಳಸುತ್ತಾ ಬಪ್ಪದು. ಇದುಆಯಾಯ ಭಾಷೆಯ ಸಂಸ್ಕೃತಿ, ಸೊಗಸು. ಇಪ್ಪಂತದು. ಎಂತ ಹೇಳ್ತಿ?

  5. ಎಲ್ಲಾ ಬರಹಂಗಳನ್ನೂ ಓದುತ್ತಾ ಇದ್ದೆ . ಭಾರೀ ಲಾಯಕಾಗಿ ಬತ್ತಾ ಇದ್ದು. ಜನುಮ ದಿನದ ಶುಭಾಶಯಂಗೊ.

  6. ಅರ್ಥಶಾಸ್ತ್ರಲ್ಲೂ ಇಪ್ಪ ವಿಷಯ -ಒಂದು ವಸ್ತುವಿನ ಉಪಯೋಗಿಸುವಾಗ ಅಥವಾ ಹೊಂದುವಾಗ ಮೊದಲು ಮೊದಲು ಅದ್ರಿಂದ ಹೊಂದುವ ಸಂತೋಷ ಜಾಸ್ತಿ ಆವುತ್ತ ಹೋವುತ್ತು.ಮತ್ತೆ ಮತ್ತೆ ಅದೇ ವಸ್ತುವ ಪಡೆದರೆ ,ಅದರಿಂದ ಸಿಕ್ಕುವ ತುಷ್ಟಿ ಕಮ್ಮಿ ಆವುತ್ತು. ಬಹುಶಃ ಮಾವಿನಹಣ್ಣು ಸುರುವಿಂಗೆ ತಿನ್ನುತ್ತಾ ಇಪ್ಪಗ ಅದರಿಂದ ನಮಗೆ ಸಿಕ್ಕುವ ತೃಪ್ತಿ ಯಾ ತುಷ್ಟಿ [ಸಂತೋಷ]ಮೂರು ನಾಕು ಹಣ್ಣಿನ ವರೆಗೆ ಹೆಚ್ಚಾವುತ್ತು.[ ಮತ್ತೆ ತಿಂದ ಹಾಂಗೆ ತಿಂಬಲೆ ಎಡಿಯ.]ಈ ನುಡಿಗಟ್ಟು ಹೀಂಗೆ ತುಷ್ಟಿಗುಣ ಹೆಚ್ಚಪ್ಪ ಹಂತದ್ದು .ಮತ್ತೆ ಮತ್ತೆ ಕಮ್ಮಿ ಆಗಿ ಆಗಿ ಇದು ಬೇಡವೇ ಬೇಡ ಹೇಳುವ ಹಂತಕ್ಕೆ ಬತ್ತು .Law of diminishing marginal utility.ಪೈಸೆಯ ಮಟ್ಟಿಂಗೆ ಇದಿಲ್ಲೆ,ಸಿಕ್ಕಿದಷ್ಟೂ ಮತ್ತೆ ಬೇಕು,ಉಂಡಷ್ಟು ಹಶು ಹೆಚ್ಚು,ತಿಂದಷ್ಟು ಕೊಡಿ ಹೆಚ್ಚು ! ಬಹಳ ವಾಸ್ತವವಾದ ನುಡಿಗಟ್ಟು ಚಿಕ್ಕಮ್ಮ.ಆಸೆಗೆ ಮಿತಿ ಇಲ್ಲೇ ಹೇಳುವ ಆಧ್ಯಾತ್ಮಿಕ ನಿಲುವನ್ನೂ ಇದು ಸರಳವಾಗಿ ಹೇಳುತ್ತು ನೋಡಿ.

  7. ಈ ನುಡಿಗಟ್ಟು ತುಂಬಾ ಸರ್ತಿ ಕೇಳಿದ್ದೆ. ಹಿನ್ನೆಲೆ ಕತೆ ಸಹಿತ ಒಳ್ಳೆದಾಯಿದು.’ಓ ಅತ್ತೆ ಹೋವ್ತ ಕೊದಿ ಇತ್ತೆ ಬಾ,ಹೇಳಿ ರಜ್ಜವೇ ಮಾಡಿದ್ದೋ ?’ -ಹೇಳಿ ಎನ್ನ ಅಜ್ಜಿ ಹೇಳುಗು ,ಮನೇಲಿ ಎಂತಾದರೂ ಸಿಹಿ ತಿಂಡಿ ರಜವೇ ಮಾಡಿದರೆ !ಅದರ ಬಗ್ಗೆ ಬರೆಯಿ ಚಿಕ್ಕಮ್ಮ

  8. ಯೇವ ಕಾಲಕ್ಕುದೆ ಸರಿ ಹೊಂದುವ ನುಡಿಗಟ್ಟು ಲಾಯಕಾಯಿದು ವಿಜಯಕ್ಕ. ಈಗಾಣ ಕಾಲದ ಮಕ್ಕೊ ಆ ಕುರೆಕುರೆ, ಲೇಸು, ಹೇಳಿ ಸೊಯ್ತು ಕಟ್ಟಿ ತಿಂತವು. ಒಂದು ಪೇಕೆಟ್ಟು ಮುಗುದರೆ ಮತ್ತೊಂದು. ಯೋ ದೇವರೇ. ಅವರ ಅವಸ್ಥೆ ಕಾಂಬಲಾವ್ತಿಲ್ಲೆ. ಮನೆಲಿ ಸೇಮಗೆ, ಪತ್ರಡೆ ಮಾಡಿರೆ ಬೇಡ ಅವಕ್ಕೆ.

  9. ಶಿವರಾಮಣ್ಣ ನಿಂಗೊ ನಿನ್ನೆ ಕೇಳಿದ್ದಿ.ಅಷ್ಟಪ್ಪಗಳೆ ಎನ ನೆಂಪಾತಿದ ಈ ನುಡಿಗಟ್ಟು. ನಿಂಗೊಗೆ ದೊಡ್ಡ ನಮಸ್ಕಾರ

  10. ಆದರೆ ಪ್ರತಿಯೊಂದು ನುಡಿಗಟ್ಟಿಂಗೆ hiriyaratranda ತಿಳ್ಕೊಂಡ ವಿವರಣೆಯ ನೆಂಪು ಮಡಿಕ್ಕೊಂಡದು ಗ್ರೇಟ್ ವಿಜಯಕ್ಕ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×