Oppanna.com

“ಎಕ್ಕದ್ದ ಹೂಗು, ದೇವರ ತಲಗೆ”-(ಹವ್ಯಕ ನುಡಿಗಟ್ಟು-72)

ಬರದೋರು :   ವಿಜಯತ್ತೆ    on   13/11/2016    7 ಒಪ್ಪಂಗೊ

“ಎಕ್ಕದ್ದ ಹೂಗು ದೇವರ ತಲಗೆ”-(ಹವ್ಯಕ ನುಡಿಗಟ್ಟು-72)

ಆಚಮನೆ ಅಚ್ಚುಮಕ್ಕಂಗೆ ಕೊಂಗಾಟದ ಒಂದೇ ಒಂದು ಮಗಳು ಮಹಾಲಕ್ಷ್ಮಿ.ಏಳೆಂಟು ವರ್ಷಾಣ ಕೂಸು. ಅದರ ತಲೆಬಾಚಿ ಕಟ್ಟಿ, ಜೆಡೆನೈದು ಉದ್ದಾಕೆ ಮಲ್ಲಿಗೆ ಮಾಲೆ, ಇಲ್ಲದ್ರೆ ಕೇದಗೆಯೊ,ಗೆಂಟಿಗೆಯೊ,ಸಂಪಗೆಯೊ,ಪಾರಿಜಾತವೋ, ಸೂಡ್ಸುದು ಹೇಳಿರೆ; ಅಬ್ಬಗೂ ಪ್ರೀತಿ, ಮಗಳಿಂಗೂ ಕೊಶಿ.(ಮದಲಾಣ ಕಾಲ!.ಈಗ ಒಂದು ಹೂಗು ತಲಗೆ ಸಿಕ್ಕುಸುದೇ ಅಪರೂಪ). ಕೊಯಿದು ತಪ್ಪಲೆ ಮಗಳಿಂಗೆ ನೇಮಕ ಮಾಡ್ತು ಅಬ್ಬೆ.ಹೆಮ್ಮಕ್ಕೊಗೆ ಮನೆಕೆಲಸದ ಗಡಿಬಿಡಿ ಉದಿಯಪ್ಪಗ.

“ಒಳ್ಳೆ ಕೇದಗೆ ಕುಂಡಿಗೆ ಇದ್ದತ್ತು. ಬಾಕಿತ್ತಿಮರು ತೋಟದ ಕರೆಲಿದ್ದ ಕೇದಗೆ ಹಿಂಡಿಲ್ಲಿ. ಇಂದು ಶಾಲಗೆ ಹೋಪಗ ಸೂಡುವೆ ಜಾನ್ಸೀರೆ; ಅದು ಎನ ಎಕ್ಕಿತ್ತೇ ಇಲ್ಲೆಬ್ಬೆ!.” ಅಬ್ಬೆತ್ರೆ ಮಗಳು ತನ್ನ ಬೇಜಾರ ಹೇಳಿಯಪ್ಪಗ..

“ಹೋಗಲಿ, ಸಾರ ಇಲ್ಲೆ ಪುಟ್ಟಕ್ಕೊ. ನಿನ ಕೊಯಿವಲೆ  ಎಡಿಗಾಗದ್ರೆ ಬೇಡ, ಬಿಡು. ಅದು ದೇವರ ತಲಗಾತು.ಇಂದು ಗೆಂಟಿಗೆ ಮಾಲೆ ಇದ್ದನ್ನೆ ಅದರ ಸೂಡ್ಸುವೆ”. ಹೇಳಿಗೊಂಡತ್ತು,  ಮಗಳತ್ರೆ ಅಚ್ಚುಮಕ್ಕᵒ.

ಇದು ಒಂದು ಉದಾಹರಣೆ ಕೊಟ್ಟದಾನು. ನವಗೆ ಅತೀ ಅಗತ್ಯ ಇದ್ದು, ಬೇಕೂಳಿ ಆತತ್ಕಂಡ್ರೆ!, ಅದು ಸಿಕ್ಕಿದ್ದಿಲ್ಲೆ!. ಕೈಲಿ ಆತಿಲ್ಲೇಳಿ ಆದರೆ “ಎಕ್ಕದ್ದ ಹೂಗು ದೇವರ ತಲಗೆ” ಹೇಳಿಂಡು, ಅದರ ದೇವರಿಂಗೆ ಬಿಟ್ಟು ಸಮಾದಾನ ಮಾಡಿಗೊಂಬ ಅಭ್ಯಾಸ!!. ಈ ನುಡಿಗಟ್ಟಿನ ನಿಂಗಳೂ ಕೇಳಿಪ್ಪಿ. ಇದೊಳ್ಳೆ ಬಳಕೆಲಿಪ್ಪದು.

—–೦—–

7 thoughts on ““ಎಕ್ಕದ್ದ ಹೂಗು, ದೇವರ ತಲಗೆ”-(ಹವ್ಯಕ ನುಡಿಗಟ್ಟು-72)

  1. ಶರ್ಮಭಾವನ ವಿಶ್ಲೇಷಣೆ ಸಮಂಜಸ. ಎಕ್ಕದ (ಎಕ್ಕೆಯ) ಹೂಗು, ಹೋಮಕ್ಕೆ, ಶಿವಪೂಜಗೆಲ್ಲ ವಿಶೇಷಾಡ.

  2. ಎಕ್ಕದ್ದ ಹೂಗು ದೇವರಿಂಗಾತು,
    ಎಕ್ಕದ ಹೂಗು ದೇವರಿಂಗೆ ಪ್ರೀತಿ.
    ಕೂಸುಗೊ ಜೆಡೆ ತುಂಬಾ ಹೂಗು ಸೂಡಿಂಡು ಶಾಲೆಗೆ ಹೋಪ ಚೆಂದ ಈಗ ಕಾಂಬಲಿಲ್ಲೆನ್ನೆ, ಕಾಲಾಯ ತಸ್ಮೈ ನಮಃ

  3. ಸಂತೋಷಾತು ಶ್ರೀ ದೇವಿ. ನವಗೆ ಸಂತೋಷ ಎಕ್ಕುತ್ತಾಂಗಿರಲಿ. ದುಕ್ಕ ಎಕ್ಕದ್ದಲ್ಲಿರಲಿ. ಹಾಂಗೆ ಬೇಡಿಗೊಂಬೊ .

  4. ಈ ಮಾತಿನ ಮದಲು ಕೇಳಿತ್ತಿದ್ದೆ ವಿಜಯತ್ತೆ- ಇಲ್ಲಿ ನಿಂಗೊ ಬರದಪ್ಪಗ ನೆಂಪಾತು. ಹೂಗು ಕೊಯ್ವಗ ಎಕ್ಕದ್ದ ಹೂಗು ದೇವರಿಂಗೆ ಹೇಳಿ ಎಷ್ಟು ಸೂಕ್ಷ್ಮಲ್ಲಿ ಹೇಳಿದ್ದವು ಹೆರಿಯೋರು.
    ಸಿಕ್ಕಿದ್ದಿಲ್ಲೆ ಹೇಳಿ ಬೇಜಾರು ಮಾಡ್ಲಾಗ ಹೇಳಿ ಆದಿಕ್ಕು. ನವಗೆ ಕೊಡೆಕ್ಕಾದ್ದದರ ಅವ ಕೊಡ್ತ ನವಗೆ ಅಗತ್ಯ ಇಲ್ಲದ್ದದರ ಎಕ್ಕದ್ದ ಹಾಂಗೆ ಮಡುಗುತ್ತ ಅಲ್ಲದಾ? ಲಾಯ್ಕ ಆಯಿದು.

  5. ಹ್ಹೋ ಹಾಂಗೋ..!!

    ಎಕ್ಕದ್ದು ಎನಗಿಪ್ಪದಲ್ಲ ಹೇದು ಹೇದೊಂಡಿತಿದ್ದೆ ಇಷ್ಟನ್ನಾರ. ಇನ್ನಿದರ್ನೇ ಹೇದರೆ ಹೇಂಗೆ . ದೇವರ ನೆಂಪು ಮಾಡಿದಾಂಗೂ ಆವುತ್ತಪ್ಪೋ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×