Oppanna.com

“ಎಣ್ಣೆ ಹಾಕಿರೆ ಕಣ್ಣಿಂಗೆ ಗುಣ, ಮಣ್ಣು ಹಾಕಿರೆ ಮರಕ್ಕೆ ಗುಣ”-(ಹವ್ಯಕ ನುಡಿಗಟ್ಟು-67)

ಬರದೋರು :   ವಿಜಯತ್ತೆ    on   01/10/2016    15 ಒಪ್ಪಂಗೊ

ಎಣ್ಣೆ ಹಾಕಿರೆ ಕಣ್ಣಿಂಗೆ ಗುಣ, ಮಣ್ಣು ಹಾಕಿರೆ ಮರಕ್ಕೆ ಗುಣ”.-(ಹವ್ಯಕನುಡಿಗಟ್ಟು-67)

ನಾವೆಂತಕಪ್ಪ ಈ ನುಡಿಯ ಬಳಸುತ್ತು..?

ಇದರೆಡೆಲಿ, ಪುರೋಹಿತ ಭಟ್ರತ್ರೆ, “ಈ ಅಷ್ಟಗೆ, ತಿಥಿ ಎಲ್ಲ ಮಾಡೀರೆ ಎಂತ ಗುಣ ಇದ್ದು”? ಹೇಳಿ ಪ್ರಶ್ನೆ ಹಾಕಿದᵒ, ಒಬ್ಬᵒ. ಮಾಣಿ.   ಅಂಬಗ  ಭಟ್ರು ಈ ನುಡಿಗಟ್ಟಿನ ಉಪಯೋಗಿಸಿ,  ಮಾಣಿಗೆ  ಮನದಟ್ಟು ಮಾಡಿದೊವು. ದೇವಕಾರ್ಯ, ಪಿತೃ ಕಾರ್ಯಂದ ಅಂಬಗಳೆ ಅದರ ಫಲ ಸಿಕ್ಕುದಲ್ಲ, ಪರೋಕ್ಷವಾಗಿ ನಿಧಾನಂದ ಸಿಕ್ಕಿಯೇ ಸಿಕ್ಕುತ್ತು”. ಹೇಳಿದೊವು.

ಕಣ್ಣಿಂಗೆ ಗುಣ ಆಯೆಕ್ಕಾದ್ದಪ್ಪು ಆದರೆ ಎಣ್ಣೆ ಹಾಕೆಕ್ಕಾದ್ದೆಲ್ಲಿಗೆ? ಕಣ್ಣಿಂಗೊ..,? ಅಪ್ಪಲೇ ಅಲ್ಲ. ಹೊಟ್ಟೆ ತುಂಬೆಕ್ಕಾರೆ ಬಾಯಿಗೆ ಆಹಾರ ಹಾಕುತ್ತಾಂಗೆ, ಕಣ್ಣಿಂಗೆ ಒಳ್ಳೆದಾಯೆಕ್ಕಾರೆ ತಲಗೆ ಎಣ್ಣೆ ಹಾಕೆಕ್ಕು. ಮಕ್ಕೊಗೆ ಪಿತ್ತಂದಾಗಿ ಸೌಖ್ಯ ಇಲ್ಲದ್ದಾದರೆ  ಮದಲಾಣ ಅಜ್ಜಿಯಕ್ಕೊ ತಾಮರೆ ತಿಕ್ಕುಗು ಅದಕ್ಕೆ ಊರದನದ ಬೆಣ್ಣೆ ಅಗತ್ಯ.ಬೆಣ್ಣೆಲಿ ತಲೆ ತಿಕ್ಕಿ-ತಿಕ್ಕಿ, ನೊರೆ ಬರುಸುಗು. ಮತ್ತೆ ಗೋಲಂಡ ಸೊಪ್ಪಿನ ಹಾಲು ತಲಗೆ ಹಾಕಿ ಮೀಶುಗು.’ ಇಲ್ಲಿ ಇದರ ಉಲ್ಲೇಖ ಮಾಡಿದ್ದೆಂತಕೇಳಿರೆ, ’ತಾಮರೆ’ ಹೇದರೆ ;  ಅದರ ಸೂಕ್ಷ್ಮತೆ ಮುಂದಾಣವಕ್ಕೆ ಗೊಂತಾಗಲಿ.

ಎಣ್ಣೆ ಕಾಣದ್ದ ತಲೆ ಹೇಳಿರೆ; ಕೆಂಚುಕಟ್ಟಿದ ತಲೆ,ಕೆಂಪಾದ ಕಣ್ಣು,ಎಣ್ಣೆ ಅಭಾವದ ಶರೀರದ ಲಕ್ಷಣ. ಸಣ್ಣ ತರದ ಕೂಸುಗೊ ಎಣ್ಣೆಯೂ ಹಾಕದ್ದೆ ತಲೆಬಿಕ್ಕಿಹಾಕೆಂಡು ಅಜ್ಜಿಯಕ್ಕಳ ಎದುರಿಂಗೆ ಬಂದರೆ.., “ತಲಗೆ ರಜ ಎಣ್ಣೆಹಾಕಿ ಬಾಚಲಾಗದೊ ಕೂಸೆ?. ತಲೆ ಬಿಕ್ಕಿಹಾಕೆಂಡು  ’ದೂಮೃಕ್ಕಾಳಿ’ ಹಾಂಗೆ ತಿರುಗುಸ್ಸೆಂತಕೆ?” ಕೇಳುಗು. ತಲಗೆ ದಿನಾ ಎಣ್ಣೆ ಹಾಕಿ,ಬಾಚೆಂಡಿರೆಕು.  ವಾರಕ್ಕೊಂದರಿ ಆದರೂ ತಲಗೆ,ಮೈಗೆ ಎಣ್ಣೆಹಾಕಿ ಮಿಂದರೆ ಕಣ್ಣಿಂಗೊಳ್ಳೆದು.ಮಾಂತ್ರ ಅಲ್ಲ; ಶರೀರ ನುಸುಲಿಂಗೆ, ಚರ್ಮ ಕಾಂತಿಗೆ,ಅಗತ್ಯ.ಹೇದು ಹಳಬರ ಅನುಭವವೂ ಈಗಾಣ ಡಾಕ್ಟ್ರಕ್ಕಳ ಉಪದೇಶವೂ ಅಪ್ಪು.

ಇನ್ನು..,ನಾವು ಎಂತದೇ ಹಲ-ಫಲ ನೆಟ್ಟತ್ಕಂಡ್ರೆ, ಅದಕ್ಕೆ ಈಟು ಎಷ್ಟು ಮುಖ್ಯವೋ ಬುಡಕ್ಕೆ ಮಣ್ಣು ಹಾಕುದೂ ಅಷ್ಟೇ ಮುಖ್ಯ.ನಮ್ಮ ತಲಗೆ ಹಾಕಿದ, ಎಣ್ಣೆ; ತಲೆಲಿದ್ದ ಮೆದುಳು ನರಂಬು ಹೀರಿ ಒಳ್ಳೆ ಕಾರ್ಯ ಚಟುವಟಿಕೆ ಮಾಡ್ತಾಂಗೆ, ಈಟುದೆ ಮಣ್ಣಿಂಗೆ ಸೇರಿ ಬೇರಿಲ್ಲಿ ಹೀರಿ ಸಸ್ಯಂಗೊ ಬೆಳವಲೆ ಸಹಕಾರಿ ಆವುತ್ತದು ಕೃಷಿಕರಿಂಗೆ ಗೊಂತಿದ್ದ ವಿಚಾರವೆ.

ಎಂತ ಹೇಳ್ತಿ?.

——-0———

 

 

15 thoughts on ““ಎಣ್ಣೆ ಹಾಕಿರೆ ಕಣ್ಣಿಂಗೆ ಗುಣ, ಮಣ್ಣು ಹಾಕಿರೆ ಮರಕ್ಕೆ ಗುಣ”-(ಹವ್ಯಕ ನುಡಿಗಟ್ಟು-67)

  1. ಸಂತೋಷಾತು ಗೋಪಾಲ , ಹಳೆಬೇರು-ಹೊಸಚಿಗುರು ಹೇಳುಗು .ಅಪ್ಪು,ಹಳೆಬೇರಿನ ಎಳ್ಳಿಂದೇಳು ಭಾಗದ ಅನುಭವಂಗಳ ಎನಗೊಂತಿದ್ದದರ ನಿಂಗಳಲ್ಲಿ ಈ ವಿಜಯತ್ತೆ( ನಿನ ಚಿಕ್ಕಮ್ಮ ಹೇಳುವೊಂ) ಹಂಚಿಗೊಂಡಪ್ಪಗ ನಿಂಗಳ ಸ್ಪಂಧನ ಇದ್ದನ್ನೆ ಅದು ಸಾರ್ಥಕತೆ ಭಾವನೆ ತತ್ತು. ಈ ಬಯಲಿನವು ಹೀಂಗೇ ಸ್ಪಂಧಿಸಿ ಹೇಳ್ತಾ.. ಹರೇರಾಮ.
    ,

  2. ಸಂತೋಷ ಚಿಕ್ಕಮ್ಮ.ಎನ್ನ ಅಜ್ಜಿ ಹಾಂಗೆ ಹೇಳುದು ಕೇಳಿದ್ದೆ .ಹಾಂಗೆ ತಿಕ್ಕುದು ಅವು ವಿವರಿಸಿದ್ದವು.ಆನು ಕಂಡದು ಇಲ್ಲೆ.ಈಗ ಮರೆತೇ ಹೋದ ಒಂದು ವಿಷಯ ನೆಂಪು ಮಾಡಿದ್ದು ಒಳ್ಳೆದಾತು.

  3. ಹರೇರಾಮ. ಗೋಪಾಲ, ತಾಮರೆ ಹೇಳೀರೆ ಶಬ್ಧಾರ್ಥ ತಾವರೆ ಆದರೂ ನಮ್ಮ ಆಡು ಭಾಷೆಲಿ ಪಿತ್ತ ವಿಕೋಪಂದ ಬಪ್ಪಂತಾ ಒಂದು ಕಾಯಿಲಗೆ (ಆಯುರ್ವೇದ ಪ್ರಕಾರ ವಾತ,ಪಿತ್ತ, ಕಫ ಈ ಮೂರರ ಏರು ಪೇರು ಕಾಯಿಲಗೆ ಕಾರಣ ಅಲ್ಲೊ). ಮಾಡುವ ಪೂರ್ವ ನಿರ್ಬಂಧ ತಯಾರಿ. ಎರಡು ಅಥವಾ ಮೂರು ತಿಂಗಳಿಂಗೊಂದಾರಿ ತಾಮರೆ ತಿಕ್ಕೀರೆ ಅದಕ್ಕೆ ಸಂಬಂಧದ ಸೀಕು ಬತ್ತಿಲ್ಲೇಳಿ ಮದಲಾಣ ಅಜ್ಜಿಯಕ್ಕಳ ಅನುಭವ.ತಾಮರೆ ತಿಕ್ಕುವ ಕ್ರಮ ಎನ್ನ ಹೆರಿಯರು ಹೇಳೆಂಡಿದ್ದರ ಮೇಲೆ ಉಲ್ಲೇಖ ಮಾಡಿದ್ದೆ.

  4. ಬಂದೆ ಚಿಕ್ಕಮ್ಮ.ಹಲವು ಕೆಲಸಗಳ ಕಾರಣ ಲೇಖನ ಓದಲೇ ಆಯಿದಿಲ್ಲೆ.ತಾಮರೆ ಹೇಳಿರೆ ಎಂತದು?ಅದಕ್ಕೂ ತಾವರೆ ಹೂಗಿಂಗೂ ಎಂತ ಸಂಬಂಧ ?
    ಈ ಲೇಖನ ಒಳ್ಳೆದಾಯಿದು.

  5. ಎಣ್ಣೆ ಕಾಲಿಂಗೊರೆಗೆ ಬರೆಕೂಳಿರೆ ಸರೀ ಕಿಟ್ಟೆಕ್ಕಪ್ಪದು.. ತಲಗೆರದ ನೀರು ಸರೀ ಕಾಲಿಂಗಿಳಿಯೆಕ್ಕು. ಹೇಳಿರೆ; ಅಭ್ಯಂಜನ ಸ್ನಾನ!. ಇದರ ಎನ್ನ ಅಪ್ಪಂ ಬೇರೆಯವರತ್ರೆ ವಿವರುಸುದು ಕೇಳಿದ್ದೆ. ಅದ್ರಿಂದ ಹೆಚ್ಚು ವಾದುಸಲೆ ಆನು ಸಮರ್ಥೆ ಅಲ್ಲ..

  6. ಕಾಲಿಂಗಿಳಿವದು ಹೇಳಿ ಸರಿಮಾಡಿಗೊಳೆಕ್ಕು. (ಮೇಗೆ)ಅಷ್ಟರಲ್ಲಿ ಕರೆಂಟು ಹೋದಕಾರಣ ಬರದಮತ್ತೆ ನೋಡ್ಳೆ ಎಡಿಗಾತಿಲ್ಲೆ ಶಾಮಣ್ಣ. ಹರೇರಾಮ.

    1. ಹಾಂಗಾ? ಎಂಗಳ ಕಡೇಲಿ “ಎಣ್ಣೆ ಕಾಲಿಂಗಿಳಿವದು” ಹೇಳಿದ್ದು ಕೇಳಿದ್ದೆ. ಹಾಯಂಗೆ ಎಂಗ ಸಣ್ಣ ಇಪ್ಪಗ ದೀಪಾವಳಿ ದಿನ ಎಣ್ಣೆ ಮೀವಾಗ “ಇದಾ… ಸರಿ ತಲಗೆ ಎಣ್ಣೆ ಹಾಯ್ಕೊಳ್ಳಿ. ಕಾಲಿಂಗೆ ವರೆಗೆ ಬರೆಕ್ಕು ಹೇಳಿ ಅಬ್ಬೆ ಬಯ್ಕೊಂಡಿತ್ತದು ನೆನಪ್ಪಿದ್ದು…

  7. ಹರೇರಾಮ ಶಾಮಣ್ಣ.ನಿಂಗೊ ಬಯಲಿನ ಈ ಓಳಿಗೆ ಎತ್ತಯಪ್ಪಗ ಸಂತೋಷಾತಿದ. ಮತ್ತೆ ….ಎನ ಗೊಂತಿದ್ದ ಹಾಂಗೆ “ತಲಗೆರದ ನೀರು ಕಾಲಗಿಳಿವದು” ಎಣ್ಣೆಯ ಜೊರೋನೆ ಕಾಲಿಂಗಿಳಿವ ಹಾಂಗೆ ಎರವಲಿಲ್ಲೆ. ಎಣ್ಣೆ ತಲಗೆ ಹಾಕಿ ತಿಕ್ಕೀರೆ ನರಂಬು ಎಳವದು.

  8. ಹಾಂಗೇಳಿ ಜಾಸ್ತಿ ಎಣ್ಣೆ ಹಾಕುಲಾಗ. ಎಂತಕೆ ಹೇಳಿರೆ “ತಲಗೆ ಎರದ ಎಣ್ಣೆ ಕಾಲಿಂಗೆ ಇಳಿಯದ್ದೇ ಇಕ್ಕೋ “

  9. ಕೆಲಸದ ಒತ್ತಡಾಂದಾಗಿ ಒಂದೊಂದರಿ ಹಾಂಗೆ ಆವುತ್ತು

  10. ವಿಜಯಕ್ಕ, ನಿಂಗಳ ನುಡಿಗಟ್ಟು ಗಳಿಂದಾಗಿ ಸಾಮಾನ್ಯ ಜ್ಞಾನ ವೃದ್ಧಿ ಅಪ್ಪದ್ರಲ್ಲಿ ಸಂಶಯವೇ ಇಲ್ಲೇ. ನಿಂಗೊಗೂ ಹಬ್ಬದ ಶುಭಾಶಯಂಗೊ. ಅಪ್ಪು ವಿಜಯಕ್ಕ….ನಾವೆಲ್ಲರೂ ಆ ಪ್ರಾರ್ಥನೆಲಿ ಪಾಲ್ಗೊಳ್ಳುವಾ. ಹೋಪಲೆಡಿಯದ್ರೂ ಇಪ್ಪಲ್ಲಿಂದಾದ್ರು…

  11. ಬೊಳುಂಬು ಗೋಪಾಲ ಹೇಳುದು ಸರಿ .ನುಡಿಗಟ್ಟು ಬರೆತ್ತಿದ್ದಹಾಂಗೆ ಎನಗೆ ಮನಸ್ಸಿನೊಳ ನೆಗೆ ಬಯಿಂದು .ಈ ವಿಷಯ ಅಳಿಯಂದ್ರು ಆರಾರು ಉಲ್ಲೇಖ ಮಾಡದ್ದಿರವು ಜಾನ್ಸ್ಸಿದ್ದೇ . ಅಪ್ಪು. ಇಲ್ಲೆಲ್ಲವೂ ಶರಾಬಿಂಗೆ ಹಾಂಗೆ ಹೇಳ್ತವು ಗೋಪಾಲ. ಪಟ್ಟಾಜೆ ಶಿವರಾಮಣ್ಣನನ್ನೂ ಕಂಬಾರು ವೇಣು ಗೋಪಾಲನನ್ನೂ ಇತ್ತೀಚಗೆ ಕಾಂಬಲೇ ಇಲ್ಲೆನ್ನೆ!.ಹೀಂಗೆ ಮಾಡಿತ್ಕಂಡ್ರೆ ಅಸಕ್ಕ ಆವುತ್ತಿಲ್ಯೊ?.ಸರಿ ನಿಂಗೊಗೆಲ್ಲಾ ನವರಾತ್ರಿಯ( ಮಾರ್ಣಮಿ) ಶುಭಾಶಯಂಗೊ. ಮತ್ತೆ… ಏವಗಳೂ ಬಪ್ಪ ಎನ್ನ ಬಾವನೋರ ಮಗ ಸೇಡಿಗುಮ್ಮೆ ಗೋಪಾಲನ ಕಾಣ್ತಿಲ್ಲೆ!. ಗೋಕರ್ಣ ದೇವಸ್ಥಾನ ನಮ್ಮ ಗುರು ಪರಂಪರೆಲಿಯೇ ಒಳಿಯೆಕ್ಕು ಹೇಳ್ತಾ ಶ್ರೀರಾಮ ಕಾಪಾಡಲಿ ಹೇಳಿ ನಾವೆಲ್ಲೋರೂ ಒಕ್ಕೊರಲಿಂದ ಪ್ರಾರ್ಥಿಸುವೊಂ

  12. ನಿಂಗೊ ಪುರಿಸೋತ್ತು ಮಾಡಿ ಇಂತಹ ಲೇಖನ ಬರೆದರೆ ಎಲ್ಲೋರಿಂಗೂ ಉಪಕಾರ , ವಿಚಾರಂಗ ಲಾಯ್ಕಾಲ್ಲಿ ಮೂಡಿ ಬಯಿಂದು

  13. ತಾಮರೆ ತಿಕ್ಕುದು ಹೇಳುತ್ತಾ ವಿಷಯ ನಮ್ಮ ತಲೆಮಾರಿಂಗೆ ನಿಂದಿದು. ಮತ್ತಾಣ ತಲೆಮಾರಿನವಕ್ಕೆ ಹಾಂಗೆ ಹೇದರೆ ಎಂತ್ಸು ಹೇದೇ ಗೊಂತಿರ.

  14. ನುಡಿಗಟ್ಟು ಬೆಸ್ಟಾಯಿದು.
    ವಿಜಯಕ್ಕ, ಈಗಾಣ ಜವ್ವನಿಗರತ್ರೆ “ಎಣ್ಣೆ ಹಾಕುತ್ತದು” ಹೇಳಿರೆ ಅವರ ಅರ್ಥ ಬೇರೆ ಇಕ್ಕು. ತಮಾಷಗೆ ಹೇಳಿದೆ ಅಷ್ಟೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×