Oppanna.com

”ಒಂದೋ ಆರು ಮೊಳ, ಇಲ್ಲದ್ರೆ ಮೂರು ಮೊಳ”-(ಹವ್ಯಕ ನುಡಿಗಟ್ಟು-33)

ಬರದೋರು :   ವಿಜಯತ್ತೆ    on   01/09/2015    8 ಒಪ್ಪಂಗೊ

 

’ಒಂದೋ ಆರು ಮೊಳ, ಇಲ್ಲದ್ರೆ ಮೂರು ಮೊಳ’-{ಹವ್ಯಕ ನುಡಿಗಟ್ಟು-33}

ಈ ಆರುಮೊಳ, ಮೂರು ಮೊಳ, ಹೇಳಿ ಉದಾಹರಣೆ ಕೊಟ್ಟು ಹೆರಿಯೊವು ಮಾತಾಡ್ಸು ಕೇಳುವಗ ಆನು ಸಣ್ಣಾದಿಪ್ಪಗ ಗೆಬ್ಬಾಯಿಸೆಂಡಿತ್ತಿದ್ದೆ!. ನಾಲ್ಕು ಮೊಳವೋ ಮೂರು ಮೊಳವೋ ಬೇಕಾರೆ ಎಂತ ಮಾಡುವದು?ಅದುವೇ ಇಲ್ಲಿಪ್ಪ ವಿಷಯ.

ಮದಲಿಂಗೆ ಒಂದಾರಿಆರೋವಸ್ತ್ರ ನೆಯಿತ್ತ ಒಂದು ನೇಕಾರನತ್ರೆ; ನಾಲ್ಕು ಮೊಳದ್ದೊ,ಐದು ಮೊಳದ್ದೊ ಹಾಳಿತಕ್ಕೆ ನೆಯಿದು ಕೊಡು ಹೇಳಿದವಡ. ಅದು ಒಂದಾರಿ ಕೊಟ್ಟದು ಆರು ಮೊಳದ್ದು.ಅದು ಹಾಳಿತ ಸರಿ ಇಲ್ಲೇದಪ್ಪಗ ಮತ್ತೊಂದಾರಿ ಮೂರು ಮೊಳದ ವಸ್ತ್ರ. ಅದಕ್ಕೆ ಆ ಹಾಳಿತ ಅರಡಿಯೆಕ್ಕನ್ನೆ!.ಅಲ್ಲಿಂದ ಸುರುವಾತಿದ ಈ ಆಡಿಕೆ ಮಾತು. ಅದಿರಳಿ; ಕೆಲವು  ಸರ್ತಿ ಅಡಿಗೆಯೋ ಪಾಕಾಯಿತನವೊ ಏನಾರು ಮಾಡಿದ್ದು ಹೆಚ್ಚಾದರೆ; ಇದೆಷ್ಟು ಮಾಡಿ ಮಡುಗುವದು?.ಅತ್ಯೋರ ಬತ್ತಳಿಕೆಂದ ಒಂದು ಬಾಣ ಬಂತು ಹೇದು ಮರುದಿನ ರಜ ಕಮ್ಮಿ ಮಾಡಿತ್ತಿದ ಸೊಸೆ. ಅಂದು ಸಾಕಾಗದ್ದೆ ಬಂತು.ಎಲ್ಲೋರು ಸಮಾ ಉಂಡವೊ ಏನೊ!. ಅತ್ಯೋರು ಸುಮ್ಮನೆ ಕೂರುಗೊ?!. ಅಂಬಗಳೆ ಮತ್ತೊಂದು ಬಾಣ ಬಿಟ್ಟತ್ತು. “ಒಂದೋ ಆರುಮೊಳ ಇಲ್ಲದ್ರೆ ಮೂರು ಮೊಳ. ಈ ಹಾಳಿತ ಗೊಂತಪ್ಪಲೇ ಇಲ್ಯೊ?”. ಇದು ಅತ್ತೆ-ಸೊಸೆ ವಿಷ್ಯಕ್ಕೆ ಸಂಬಂದ ಪಟ್ಟದು ಮಾಂತ್ರವೋ? ಅಪ್ಪಲೇ ಅಲ್ಲ.ಎರಡು ಕೂಸುಗೊ ಇದ್ದರೆ ಒಂದಕ್ಕೆ ಕಂಡಾಬಟ್ಟೆ ಸೇಳೆ, ಇನ್ನೊಂದಕ್ಕೆ ಅಗತ್ಯಕ್ಕೆ ತಕ್ಕಷ್ಟೂ ಇಲ್ಲೆ.ಬಿಚ್ಚೋಲೆ ಗೌರಮ್ಮ!.[ನಮ್ಮ ಕೊಡಗಿನ ಗೌರಮ್ಮ ಅಲ್ಲ.ಅದು ಬೆಂಡೋಲೆ,ಕರಿಮಣಿ ತನ್ನಲ್ಲಿ ಮಡಿಗೆಂಡೇ ಬಾಕಿ ಎಲ್ಲ ಆಭರಣಂಗಳ ಬಿಚ್ಚಿಕೊಟ್ಟದಾಡ ಗಾಂಧೀಜಿಗೆ.]

ಹಾಂಗೇ ಆಚೀಚೆ ಮನೆವು ಕೆಲವು ಸಮಯ ಭಾರೀ ಒಳ್ಳೆದಲ್ಲಿಕ್ಕು. ಮತ್ತೆ ಕೆಲವು ಸಮಯ ಮಾತೇ ಇರ. ಒಟ್ಟಾರೆ ಹದ ತಪ್ಪಿ ಒಂದರಿ ಹೆಚ್ಚು,ಇನ್ನೊಂದರಿ ಕಮ್ಮಿ ಆತತ್ಕಂಡ್ರೆ ಈ ನುಡಿಗಟ್ಟಿನ ಬಳಸುದು ಹೇದು ಗೊಂತಾತು.

 

8 thoughts on “”ಒಂದೋ ಆರು ಮೊಳ, ಇಲ್ಲದ್ರೆ ಮೂರು ಮೊಳ”-(ಹವ್ಯಕ ನುಡಿಗಟ್ಟು-33)

  1. ಓದಿ ಒಪ್ಪಕೊಟ್ಟವಕ್ಕೆಲ್ಲರಿಂಗು ಧನ್ಯವಾದಂಗೊ . ಅಪರೂಪಕ್ಕೆ ಶ್ರೀಯಕ್ಕ ಬಂದು ಒಪ್ಪಕೊಟ್ಟದು ಸಂತೋಷಾತು

  2. ಗಾದೆ ವಿವರಣೆ ಒಳ್ಳೆದಾಯಿದು ಚಿಕ್ಕಮ್ಮ

  3. ವಿಜಯತ್ತೇ..,
    ನಾವು ನಿತ್ಯ ಉಪಯೋಗ ಮಾಡುವ ಆಡುಮಾತಿನ ಲಾಯ್ಕಲ್ಲಿ ವಿವರ್ಸಿದ್ದಿ. ಬಹುಷ ಹೆಚ್ಚಿಗೆ ಉಪಯೋಗ ಅಪ್ಪ ಮಾತು ಇದುವೇಯೋ ಹೇಳಿ ಆವುತ್ತು, ಅಲ್ಲದಾ? ನಮ್ಮ ಹೆರಿಯೋರು ಅವರ ಅನುಭವಲ್ಲಿ ಹೇಳಿದ ಮಾತುಗ ನವಗೆ ಎಲ್ಲಾ ಕೆಲಸ ಮಾಡುವಾಗ ಸೂತ್ರದ ಹಾಂಗೆ ನೆಂಪಾವುತ್ತು. ಶೋಕಾಯಿದು..
    ಹರೇರಾಮ.

  4. ಬೈಲಿಲ್ಲಿಯೂ ಹಾಂಗೆ ಅಪ್ಪಲೆ ಸುರುವಾಯಿದು.ವಿವರಣೆ ಲಾಯಕಾಯಿದು ವಿಜಯಕ್ಕ.

  5. ಇಂದಿರತ್ತೆ,ಅದಿತಿ, ರಘು ಮುಳಿಯ ಧನ್ಯವಾದಂಗೊ. ಅದಿತಿಯ ಅಂದ್ರಾಣ ಮಕ್ಕಳಾಟಿಕೆ ಓದಿ ಎನಗೂ ನೆಗೆ ಬಂತಿದ!.

  6. ರಸವತ್ತಾದ ವಿವರಣೆ ಅತ್ತೆ , ನುಡಿಗಟ್ಟೂ ಲಾಯ್ಕ ಇದ್ದು . ಧನ್ಯವಾದ೦ಗೊ.
    (ಇತ್ತೀಚಿಗೆ ಕೊಡಗಿನ ಗೌರಮ್ಮನ ಎಲ್ಲಾ ಕತೆಗಳ ಓದಿದೆ . ನೂರು ವರ್ಷ ಹಿಂದೆ ಬರದದ್ದು ಆದರೂ ಎಲ್ಲಾ ಕಾಲಕ್ಕೂ ಪ್ರಸ್ತುತವೇ. ಅವರ ಬರವಣಿಗೆಯ ಶೈಲಿ, ಪುಸ್ತಕವ ಸರಾಗ ಓದುಸಿಗೊಂಡು ಹೋವುತ್ತು .ಮಡಿಕೇರಿಗೆ ಗಾಂಧೀಜಿ ಬಂದ ವಿವರಂಗಳ ಓದಿ ಮನಸ್ಸು ತುಂಬಿತ್ತು)

  7. ಪಂಜಸೀಮೆಲಿ ಇದರನ್ನೇ “ಅರಾದ್ರೆ ಆರು ಮೂರಾದ್ರೆ ಮೂರು” ಹೇಳಿ ಉಪಯೋಗುಸುತ್ತವು. ಎಂಗ ಸಣ್ಣ ಇಪ್ಪಗ ಜೆಡೆ ನೇಯ್ಲೆ ಕೂತಿಪ್ಪಗ ಅಮ್ಮ “ಚೂರು ಮುಂದೆ ಕೂರು” ಹೇಳಿರೆ ಕೈಗೆ ಸಿಕ್ಕದಷ್ಟು ದೂರ ಕೂರುದು, “ಹತ್ರ ಬಾ ಕೂಸೇ” ಹೇಳಿಯಪ್ಪಗ ಹೋಗಿ ಮೊಟ್ಟೆ ಮೇಲೆ ಕೂರುದು ಮಾಡಿಕೊಂಡಿತ್ತಿದ್ದೆ. (ಆನು ಹಾಂಗೆ ಬೇಕೂಳಿಯೇ ಮಾಡಿಕೊಂದಿದ್ದದು, ತಮಾಷೆಗೆ 🙂 ) ಅಷ್ಟಪ್ಪಗ ಎನ್ನ ಅಮ್ಮ “ಅರಾದ್ರೆ ಆರು ಮೂರಾದ್ರೆ ಮೂರು ಹೇಳಿ ಮಾಡ್ತು, ಸರಿ ಕೂರು” ಹೇಳಿ ಜೋರು ಮಾಡಿಕೊಂಡಿತ್ತು.

  8. ಈ ನುಡಿಗಟ್ಟಿನ ಅಂಬಗಂಬಗ ಆನು ಬಳಸುತ್ತಾ ಇರ್ತೆ…ಒಂದೋ ವಿಪರೀತ , ಅಲ್ಲದ್ರೆ ಇಲ್ಲಲೇ ಇಲ್ಲೇ ಹೇಳಿ ಇಪ್ಪಾಗ ಆನು ಈ ನುಡಿಗಟ್ಟಿನ ಹೇಳುತ್ತಾ ಇರ್ತೆ.ತುಂಬಾ ಅರ್ಥಗರ್ಭಿತವಾದ ನುಡಿಗಟ್ಟು- ಪರಿಚಯಿಸಿದ್ದಕ್ಕೆ ವಿಜಯಕ್ಕಂಗೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×