Oppanna.com

ಕಂಟ ಪುಚ್ಚೆ ಪ್ರಸಂಗವು – ಭಾಗ 2

ಬರದೋರು :   ಶ್ಯಾಮಣ್ಣ    on   13/03/2015    10 ಒಪ್ಪಂಗೊ

ಶ್ಯಾಮಣ್ಣ

ಮತ್ತೆ ಎಂತಾತು?

ಕಿಶೋರ° ರಪಕ್ಕನೆ ರೂಮಿನ ಲೈಟಿನ ಸುಚ್ಚು ಹಾಕಿದ°. ಜಿಗ್ಗ ಬಿದ್ದ ಬೆಣ್ಚಿಲಿ ತಣಿಯಪ್ಪನ ಮಂಚದೆ ಮೇಗಂಗೆ ನೋಡಿದ°. ಅರೆ…. ತಣಿಯಪ್ಪನೂ ಇಲ್ಲೆ…
ಅದರ ಒಡದ ಮಂಡೆಯೂ ಇಲ್ಲೆ…. ಪುಚ್ಚೆಯೂ ಇಲ್ಲೆ. ಬೆದುರಿನ ದಂಟೆಯ ಎಲ್ಲಿದ್ದು ನೋಡಿರೆ, ಅದು ಮಡುಗಿದಲ್ಲೇ ಇದ್ದು. ಟೋರ್ಚು ಲೈಟುದೆ ಮಡುಗಿದಲ್ಲೇ ಇದ್ದು. ಸೀದಾ ಹೋಗಿ ಮೊಸರಿನ ಪಾತ್ರೆ ನೋಡಿದ°. ಅರೆ…, ಅದುದೇ ಹೇಂಗೆ ಮಡುಗಿತ್ತಿದ್ದೋ ಹಾಂಗೇ ಮಡಿಕ್ಕೊಂಡಿದ್ದು. ಅಂಬಗ ಆದ್ದು ಎಂತರ?cat

ಆದ್ದು ಇಷ್ಟೇ….

ಒಂದು ಎರಡು ಮೂರು ದಿನ ಪುಚ್ಚೆಗೆ ಕಾದು ಕೂದಿತ್ತಿದ್ದ° ಅಲ್ಲದಾ?. ಮತ್ತೆ ರಜಾ ಅಭ್ಯಾಸ ಆತಲ್ದ… ಹಾಂಗೆ ಇಂದುದೇ ನಡೀರ್ಳು ಗುಡಿ ಹೆಟ್ಟಿ ಕೂದಿಪ್ಪಗ….
ಅಲ್ಲಿಗೇ ಕಿಶೋರಂಗೆ ಕಣ್ಣು ಕೂರಿತ್ತು. ಯಾವಾಗಲೂ ಈ ಪುಚ್ಚೆದೇ ಧ್ಯಾನ ಅಲ್ಲದಾ… ಹಾಂಗಾಗಿ ಅದರದ್ದೇ ಕನಸು ಬಿದ್ದದು. ಪುಚ್ಚೆ ಬಂದಾಂಗೆ, ಇವ ಟೋರ್ಚು ಹಾಕಿ ನೋಡಿದಾಂಗೆ, ಪುಚ್ಚೆ ಹಾರಿದಾಂಗೆ, ಇವ° ಬಡುದ ಹಾಂಗೆ…..

ಆದರೆ ತಣಿಯಪ್ಪಂಗೆ ಪೆಟ್ಟು ಬಿದ್ದ ಹಾಂಗೆ ಎಂತಕೆ ಕಂಡದು? ಬಹುಶ ಒಳಮನಸ್ಸಿಲಿ ಈ ತಣಿಯಪ್ಪನೇ ಮೊಸರು ಕುಡಿತ್ತಾ ಇಪ್ಪದು ಹೇಳಿ ಇತ್ತಾ ಏನೋ ಅಲ್ಲದಾ?

ಆಷ್ಟಕ್ಕೂ ನಿಜಕ್ಕೂ ಎಲ್ಲಿಯಾದರೂ ತಣಿಯಪ್ಪ° ಆ ಮಂಚಲ್ಲಿದ್ದು, ಅದಕ್ಕೆ ಪೆಟ್ಟು ಬಿದ್ದಿದ್ದರೆ? ಕಿಶೋರನ ತೆಗಲೆ ಇನ್ನುದೇ ಢವ ಢವ ಹೇಳ್ತಾ ಇದ್ದು. ಮೈ ಇನ್ನುದೇ ಬೆಗರಿದ್ದು. ದೇವರೇ ಎಂತಾ ಕನಸು ಅದು. ಅಂಬಗ ತಣಿಯಪ್ಪ ಗೊಂತಾಗದ್ದ ಹಾಂಗೆ ಒಳ ಬಪ್ಪಲೆ ಎಡಿಗಾ? ಕಿಶೋರ° ಮುಚ್ಚಿದ ಬಾಗಿಲಿನ ನೋಡಿದ°. ಅಪ್ಪು, ಬಾಗಿಲಿಂಗೆ ಚೀಪು ಹಾಕಿದ್ದಿಲ್ಲೆ.

ತಣಿಯಪ್ಪ° ಏವಾಗಳೂ ಕೆಲಸ ಮುಗುಶಿ ಬಪ್ಪಗ ಕಸ್ತಲಪ್ಪಗ ಎರಡೋ ಮೂರೋ ಗಂಟೆ ಆವುತ್ತು. ಅದು ಬಂದಿಕ್ಕಿ ಬಾಗಿಲಿನ ಹೆರ ನಿಂದುಕೊಂಡು ಆ ಅಪರಾತ್ರಿಲಿ “ಬಾಗಿಲು ತೆಗಿಯಾ” ಹೇಳಿ ಗಲಾಟೆ ಮಾಡುದೆಂತಕೆ ಹೇಳಿ ಕಿಶೋರ° ಏವಾಗಳೂ ಬಾಗಿಲಿಂಗೆ ಚೀಪು ಹಾಕುವ ಕ್ರಮ ಇಲ್ಲೆ. ಬಾಗಿಲಿನ ಎರೆಶಿ ಮುಚ್ಚುದು. ತಣಿಯಪ್ಪ ಅದರಷ್ಟಕ್ಕೆ ಒಳಂಗೆ ಬಂದು ಮನುಗುತ್ತು. ಇವಂಗೆ ಎಚ್ಚರ ಅಪ್ಪದು, ವರಕ್ಕು ಕೆಡುದು ಎಲ್ಲ ಇಲ್ಲೆ ಅದಾ.

ಚೀಪು ಹಾಕದ್ದ ಬಾಗಿಲಿನ ನೋಡುವಗ ಕಿಶೋರಂಗೆ ಪುಚ್ಚೆ ಒಳ ಬಪ್ಪದು ಹೇಂಗೆ ಹೇಳ್ತದು ರಪಕ್ಕನೆ ತಲೆಗೆ ಹೊಕ್ಕತ್ತು. ಹೇಂಗೆ? ಚೀಪು ಹಾಕದ್ದ ಬಾಗಿಲಿನ ರಜ ನೂಕಿ ಪುಚ್ಚೆ ಒಳ ಬಪ್ಪದು, ಅಲ್ಲಿಂದಲೇ ಹೆರ ಹೋಪದು…. ಚೆ… ಗೊಂತೇ ಆಯಿದಿಲ್ಲೆನ್ನೇ ಈ ವಿಷಯ… ಇದ್ದ ಒಟ್ಟೆಗೊಕ್ಕೆ ಎಲ್ಲ ಸುಮ್ಮನೆ ಕಾಗದ, ಗೋಣಿ ತುಂಬುಸಿಗೊಂಡು ಕಷ್ಟ ಬಂದದು?

ಕಿಶೋರ° ಹೋಗಿ ಬಾಗಿಲಿನ ಚೀಪು ಹಾಕಿದ°. ಗ್ರೇಷಿದ ಹಾಂಗೇ ಆತು. ತಣಿಯಪ್ಪ° ಬಂದದು ಕಸ್ತಲಪ್ಪಗ ಗಲಾಟೆ ತೆಗದತ್ತು ಬಾಗಿಲೆಂತಕೆ ಹಾಕಿದ್ದು ಹೇಳಿ.
“ಇನ್ನೂ ಹಾಂಗೇ. ಪುಚ್ಚೆ ಕಾಟ ನಿಂಬವರೆಗೆ ಬಾಗಿಲು ಹಾಕುದು” ಹೇಳಿ ಅದರ ಸಮಾದಾನ ಮಾಡಿದ°.

ಆಮೇಲೆ ದಿನಾಗುಳೂ ಕಸ್ತಲಪ್ಪಗ ಬಾಗಿಲು ಹಾಕಿ ಚೀಪು ಹಾಕಿಯೇ ಮನುಗುಲೆ ಸುರು ಆತು. ಎರಡು ಮೂರು ದಿನ ಪುಚ್ಚೆ ಕಾಟ ಇಲ್ಲೆ. ಆದರೆ ನಾಲ್ಕನೇ ದಿನ ಪುನಾ ಪುಚ್ಚೆ ನುಗ್ಗಿದ್ದು. ಮಹಾ ಕದೀಮ ಪುಚ್ಚೆ! ಎಲ್ಲಿಯೋ ದಾರಿ ಹುಡ್ಕಿಕೊಂಡಿದು!

ಕಿಶೋರಂಗೆ ಪುನಾ ಈ ಪುಚ್ಚೆಗೆ ಕಾದು ಕೂಪ ಪ್ರಾರಬ್ದ ಸುರು ಆತು. ಈ ಸರ್ತಿ ಹೇಂಗಾರು ಈ ಪುಚ್ಚೆಗೆ ಬುದ್ದಿ ಕಲಿಶೆಕ್ಕೇ ಹೇಳಿ ಕಿಶೋರ° ನಿರ್ಧಾರ ಮಾಡಿದ°.

ರೂಮಿನ ಬಾಗಿಲು ಹಾಕಿ, ಚೀಪು ಸಿಕ್ಕುಸಿ, ಹಾಸಿಗೆ ಮೇಲೆ ದಂಟೆಯನ್ನುದೇ ಟೋರ್ಚನ್ನುದೇ ಹತ್ತರೆ ಮಡಿಕ್ಕೊಂಡು, ಹೊದಕ್ಕೆ ಹೊದ್ದುಕೊಂಡು ಕೂದ°.

ವರಕ್ಕು ಬತ್ತು ಹೇಳಿ ಕಂಡಕೂಡ್ಲೆ ಕೈಗೆ ಕಾಲಿಂಗೋ ಚೂಂಟಿಗೊಂಡು, ವರಕ್ಕು ಬಾರದ್ದ ಹಾಂಗೆ ನೋಡಿಗೊಂಡು ಕೂದ°.

ಸಾದಾರಣ ಒಂದು ಗಂಟೆ ನಡೀರ್ಳು, ಮೊಸರಿನ ಪಾತ್ರೆ ಹತ್ತರೆ ಸಣ್ಣಕ್ಕೆ ಶಬ್ದ ಆತು.

ರಜ ತೊಡೆಗೆ ಚೂಂಟಿದ°. ಬೇನೆ ಆತು. ಸರಿ ಎಚ್ಚರ ಇದ್ದು. ರಪ್ಪ ಟೋರ್ಚು ತೆಗದು, ಸುಚ್ಚು ಒತ್ತಿ ಮಡುಗಿದ°, ಪುನಾ ನಂದದ್ದ ಹಾಂಗೆ.
ದಂಟೆ ತೆಗದ°, ಬೀಜಿ ಬಡುದ°. ಪುಚ್ಚೆ ಹಾರಿತ್ತು. ಇವನ ಗುರಿ ತಪ್ಪಿತ್ತು. ತೆಗದ್ದು ಮಂಚಂದ ಕೆಳ ಹಾರಿದ°, ಪುಚ್ಚೆಯ ಹೊಡೇಂಗೆ ಪುನಾ ದಂಟೆ ಬೀಜಿದ°. ಪುಚ್ಚೆ ಪುನಾ ಅತ್ಲಾಗಿ ಹಾರಿತ್ತು. ಅದಕ್ಕೆ ಸುಲಾಬಲ್ಲಿ ಹೆರ ಓಡ್ಲೆ ದಾರಿ ಇಲ್ಲೆ. ಇವ° ಪುನಾ ಅದರ ಹೊಡೆಂಗೆ ದಂಟೆ ಬೀಜಿದ°. ಪುನಾ ತಪ್ಪಿತ್ತು. ಅಷ್ಟೆಲ್ಲ ಸುಲಾಬಲ್ಲಿ ಪುಚ್ಚೆಗೆ ಬಡಿವಲೆ ಎಡಿತ್ತಿಲ್ಲೆ ಭಾವ. ಅದೆಂತ ಒಡ್ಡಿಸಿಕೊಂಡು ಕೂರ್ತಾ? Cat Slip

ಹೊತ್ತುಸಿ ಮಡುಗಿದ ಟೋರ್ಚಿನ ಬೆಣ್ಚಿಲಿ
ಕಿಶೋರ° ಪುಚ್ಚೆಗೆ ಬಡುದಾ°…
ಪೆಟ್ಟಿನ ತಪ್ಪುಸಿ ಓಡುವ ಪುಚ್ಚೆಗೆ
ಬಡಿವಲೆ ದಂಟೆಯ ಹಿಡುದಾ°…
ಮಂಚದ ಆ ಕಡೆ, ಕುರ್ಶಿಯ ಈಕಡೆ
ಪುಚ್ಚೆಗೆ ಗುರಿಯಾ ಹಿಡುದಾ°
ತಪ್ಪುಸಿ ತಪ್ಪುಸಿ, ಹಾರುತ ಕುಣಿಯುತ,
ದಂಟೆಯ ದಡ ದಡ ಬಡುದಾ°.

ಈಗ ಪುಚ್ಚೆಗೆ ಹೆದರಿಕೆ ಕೂದತ್ತು. ಇವ° ಇಂದು ಎನ್ನ ತಲೆ ಒಡೆತ್ತ°, ಎನಗೆ ಉಳಿಗಾಲ ಇಲ್ಲೆ ಹೇಳಿ ಪುಚ್ಚೆ ಗ್ರೇಶಿತ್ತಾಯ್ಕು. ಕಡೇ ಉಪಾಯ ಹೇಳಿ ಸೀದಾ ಇವನ ಮೇಲಂಗೇ ಹಾರಿತ್ತು. ಪುಚ್ಚೆ ಮೇಲಂಗೇ ಹಾರಿತ್ತು ಹೇಳಿ ಕಿಶೋರಂಗೆ ಅಂದಾಜಾತು. ಗಡಿಬಿಡಿಲಿ ಪುನಾ ಎಳದ್ದು ಬೀಜಿದ°, ಈ ಸರ್ತಿ ಬೀಜಿದ್ದು “ಟಾಪ್” ಹೇಳಿ ತಾಗಿದ ಶಬ್ದ ಕೇಳಿತ್ತು.

ಆದರೆ ತಾಗಿದ್ದು ಪುಚ್ಚೆಗೆ ಅಲ್ಲ. ಕಪಾಟಿಲಿ ಮಡುಗಿತ್ತಿದ್ದ ಉಪ್ಪಿನ ಕಾಯಿಯ ಕುಪ್ಪಿಗೆ. ಇವನ ಪೆಟ್ಟಿನ ರಬಸಕ್ಕೆ ಕುಪ್ಪಿ ಹೊಡಿ ಹೊಡಿ ಆತು. ಒಳ ಇತ್ತಿದ್ದ ಉಪ್ಪಿನ ಕಾಯಿ ರಟ್ಟಿ, ಎಸರಿನ ಸಮೇತ ಇವನ ತಲೆ ಮೇಗಂಗೆ ಬಿದ್ದತ್ತು. ಉಪ್ಪಿನ ಕಾಯಿಲಿ ಇತ್ತಿದ್ದ ಮಾವಿನ ಮೆಡಿಗ ಎಲ್ಲ ರೂಮಿಲಿ ಹರಡಿ ಬಿದ್ದತ್ತು. ತಲೆಗೆ ಬಿದ್ದ ಎಸರು ಕಣ್ಣಿಂಗೆ ಇಳುದು ಮೂಗಿನ ಮೇಲಂದ ಕೆಳಂಗೆ ಬಾಯಿಗೆ ಬಂತು. ಕಣ್ಣು ಉರಿವಲೆ ಸುರು ಆತು. ಕಿಶೋರ° ಈಗ ಪುಚ್ಚೆಯ ಬಿಟ್ಟಿಕ್ಕಿ ಓಡಿ ರೂಮಿನ ಲೈಟಿನ ಸುಚ್ಚು ಹಾಕಿದ°. ಮತ್ತೆ ಬಾಗಿಲು ತೆಗದು ಹೆರ ನೀರು ತುಂಬುಸಿ ಮಡುಗಿದ ಬಕೇಟಿನ ಹತ್ತರಂಗೆ ಓಡಿದ°. ಒಟ್ಟಿಂಗೆ ಬಾಯಿಗೆ ಇಳುದ ಉಪ್ಪಿನ ಕಾಯಿ ಎಸರಿನ ನಾಲಗೆಲಿ ನೆಕ್ಕಿದ್ದ°, ಹಾಳಪ್ಪಲಾಗನ್ನೆ. ಈ ಗಲಾಟೆಲಿ ತೆಗದ ಬಾಗಿಲಿಂದ ಪುಚ್ಚೆ ಹೆರ ಓಡಿತ್ತು.

ಬಕೆಟಿಲಿ ಇತ್ತಿದ್ದ ನೀರಿಂದ ತಲೆ ಮೋರೆ ತೊಳಕ್ಕೊಂಡ°. ಕಣ್ಣು ಉರಿವಲೆ ಸುರು ಆತು. ಸರೀ ನೀರು ಹಾಕಿ ಕಣ್ಣುದೆ ತೊಳಕ್ಕೊಂಡ°. ಮೊರೆ ಹೊಗೆತ್ತ ಇದ್ದು. ಆದರೆ ಎಂತ ಮಾಡ್ಳಾವುತ್ತು?

ಪುನಾ ಒಳ ಬಂದು ನೋಡಿರೇ… ದೇವರೇ…. ಉಪ್ಪಿನಕಾಯಿ ಇಡೀ ರೂಮಿಲಿ ಹರಡಿ ಬಿದ್ದಿದು. ಮಾವಿನ ಮೆಡಿ ಎಲ್ಲ ಅತ್ತಿತ್ತೆ ರಟ್ಟಿದ್ದು. ಕಿಶೋರಂಗೆ ಹೊಟ್ಟೆಗೆ ಪೀಶ ಕತ್ತಿ ಹಾಕಿದಾಂಗೆ ಆತು. ಚೆ… ಹೇಂಗಿತ್ತಿದ್ದು ಈ ಉಪ್ಪಿನ ಕಾಯಿ? ತಣಿಯಪ್ಪ° ನೋಡಿರೇ ಸೂಸೈಡ್ ಮಾಡಿಗೊಂಗು, ಉಪ್ಪಿನ ಕಾಯಿ ಹಾಳಾತನ್ನೆ ಹೇಳಿ. ಕಿಶೋರಂದ ಜಾಸ್ತಿ ಅದಕ್ಕೆ ಉಪ್ಪಿನ ಕಾಯಿ ಮರ್ಲು. ಕೆಲವು ಸರ್ತಿ ಅದಕ್ಕೆ ಕೊದಿ ತಡೆಯದ್ದೆ ಕಿಶೋರಂಗೆ ಗೊಂತಾಗದ್ದ ಹಾಂಗೆ ನಾಲ್ಕು ಮೆಡಿ ಎಲ್ಲ ತಿಂದದು ಇದ್ದಿಕ್ಕು. ನಿಂಗಳುದೆ ಎಲ್ಲಿಯಾದರೂ ಅದರ ರುಚಿ ನೋಡಿರೇ ಮತ್ತೆ ಬಿಡೆಯಿ. ಉಪ್ಪಿನ ಕಾಯಿ ಹೇಳಿರೆ ಅಷ್ಟು ಲಾಯ್ಕದ, ಜೀರಿಗೆ ಮಾವಿನಕಾಯಿ ಮೆಡಿಯ ಉಪ್ಪಿನ ಕಾಯಿ ಅದು.

ಕಿಶೋರ° ಈ ಉಪ್ಪಿನ ಕಾಯಿಯ ತಂದದು ಅವನ ಅಜ್ಜಿ ಮನೆಂದ . ಸ್ವತಾ ಕಿಶೋರನ ಅಜ್ಜಿಯೇ ಆ ಉಪ್ಪಿನ ಕಾಯಿ ಹಾಕುದು.ಕಿಶೋರ° ಶಾಲೆಗೆ ಹೋಯಿಕೊಂಡಿತ್ತ ಕಾಲಲ್ಲಿ, ಅಷ್ಟೇ ಅಲ್ಲ, ಈಗಳುದೆ ಎಲ್ಲಿಯಾದರೂ ಮಾವಿನ ಮೆಡಿ ಬಿಟ್ಟ ಕಾಲಕ್ಕೆ ಅವನ ಅಜ್ಜಿ ಮನೆಗೆ ಹೋದರೆ, ಅವನ ಅಜ್ಜಿ ಅವನ ಹತ್ತರೆ
“ಏ ಕಿಶೋರ, ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋಪನೋ?” ಹೇಳಿ ಕೇಳುಗು. “ಹೋಪ… ಹೋಪ..” ಹೇಳಿ ಕಿಶೋರ° ಕುರ್ವೆ ತೆಕ್ಕೊಂಡು ಚೋಮನ ಒಟ್ಟಿಂಗೆ ಹೋಗಿ ಮೆಡಿ ಹೆರ್ಕಿಕೊಂಡು ಬಕ್ಕು. ಅಜ್ಜಿಯೇ ಸ್ವತ ಅದರ ಬೇಯಿಶಿ, ಹೊರಡಿ ಕಡದು, ಕೂಡಿ, ಉಪ್ಪಿನ ಕಾಯಿ ಹಾಕುದು. ಹಾಂಗಾಗಿ ಕಿಶೋರಂಗೆ ಈ ಉಪ್ಪಿನ ಕಾಯಿ ಹೇಳಿರೆ ಬಾರಿ ಪ್ರೀತಿ. ಆದರೆ ಈಗ ಇನ್ನೂ ಎಂತ ಮಾಡ್ಳಾವುತ್ತು. ಹೋತನ್ನೇ. ಇನ್ನೂ ಪುನ ಹೋದಿಪ್ಪಗ ತರಕ್ಕಷ್ಟೇ. ಈಗ ಕೂದುಗೊಂಡು ರೂಮು ಕ್ಲೀನು ಮಾಡ್ಳೆ ಸುರು ಮಾಡಿದ°. ತಣಿಯಪ್ಪ° ಪ್ರೆಸ್ಸಿಂದ ಬಪ್ಪಲಪ್ಪಗೆ ಇವನ ಕ್ಲೀನು ಮುಗುತ್ತು.

ಇದಾಗಿ ಮತ್ತೆ ಎರಡು ದಿನ ಪುಚ್ಚೆ ಬಯಿಂದಿಲ್ಲೆ. ಎರಡು ದಿನ ಕಳುದು ಅಪ್ಪಗ ಪುಚ್ಚೆ ಪುನಾ ಪ್ರತ್ಯಕ್ಷ.

ಇನ್ನೂ ಕಿಶೋರಂಗೆ ತಡವಲೆ ಎಡಿಗಾಯಿದಿಲ್ಲೆ. ಎರಡುದಿನ ಕೂದು ಎಂತ ಮಾಡ್ಲಕ್ಕು ಹೇಳಿ ಆಲೋಚನೆ ಮಾಡಿದ°. ಕಡೆಂಗೆ ಒಂದು ಉಪಾಯ ಹೊಳದತ್ತು.

ಆ ದಿನ ಕಿಶೋರ° ಹಾಲಿಂಗೆ ನೆರವು ಎರದ್ಡಾಯಿಲ್ಲೆ. ಹಾಲಿನ ಹಾಂಗೆ ಪಾತ್ರೆಲಿ ಮಡುಗಿದ°. ಒಂದು ಉದ್ದದ ವಯರು, ಕರೆಂಟಿನ ಬಲ್ಬಿಂಗೆ ಹಾಕುತ್ತಲ್ಲದ, ಹಾಂಗಿಪ್ಪದು ತಂದ°. ಕಸ್ತಲಪ್ಪಗ ಮನುಗುದಕ್ಕೆ ಮೊದಲು ಆ ವಾಯರಿನ ಒಂದು ಕೊಡಿಯ ಪಾತ್ರೆಲಿ ಹಾಲಿನ ಒಳ ಹಾಕಿದ°. ಇನ್ನೊಂದು ಕೊಡಿಯ ಕರೆಂಟಿನ ಸುಚ್ಚು ಇಪ್ಪಲ್ಲಿ ಪ್ಲಗ್ಗು ಹಾಕುಲೆ ಇಪ್ಪ ಒಟ್ಟೆಲಿ ತುರ್ಕಿಸಿ ಮಡುಗಿದ°. ಪ್ಲಗ್ಗಿನ ಸುಚ್ಚು ಹಾಕಿ ಮಡುಗಿದ°. ತಣಿಯಪ್ಪ° ಬಂದು ಮುಟ್ಟ. ಅದು ಪ್ರೆಸ್ಸಿಂಗೆ ಹೋಗಿ ಆಯಿದು. ಬಾಗಿಲಿನ ಚೀಪು ಹಾಕಿ ಮಡುಗುವ ಕಾರಣ ಅದಕ್ಕೆ ಒಳ ಬಪ್ಪಲೆಡಿಯ. ಈಗ ಹಾಲಿಂಗೆ ಎಲೆಟ್ರಿ ಕರೆಂಟು ಮುಟ್ಟುತ್ತಾ ಇದ್ದು. ಎಲ್ಲಿಯಾದರೂ ಆರ್ತಿಂಗೆ ಮುಟ್ಟಿದರೆ ಎಂತಕ್ಕು ಗೊಂತಿದ್ದಲ್ಲದ?p

ಸಾದಾರಣ ಒಂದು ಗಂಟೆಕಸ್ತಲೆಗೆ ಭಾವ…. ನಡೀರ್ಳು “ಠಪ್” ಹೇಳಿ ಒಂದು ಶಬ್ದ ಕೇಳಿತ್ತು, ಒಟ್ಟಿಂಗೆ ಪುಚ್ಚೆಯ “ಮ್ಯಾಂ ” ಹೇಳ್ತ ಅರ್ಬಾಯಿ. ಒಟ್ಟಿಂಗೆ ಪಾತ್ರೆ ಬಡಲ್ಲನೆ ಬಿದ್ದ ಶಬ್ದ. ಕಿಶೋರ° ರಪ್ಪ ಎದ್ದ°. ಲೈಟಿನ ಸುಚ್ಚು ಹಾಕಿದ°… ಪ್ಲಗ್ಗಿನ ಸುಚ್ಚು ತೆಗದ°. ನೋಡಿರೇ, ಪಾತ್ರೆ ಕೆಳ ಬಿದ್ದು ಹಾಲೆಲ್ಲ ಚೆಲ್ಲಿದ್ದು. ಪುಚ್ಚೆಯ ಪತ್ತೆ ಇಲ್ಲೆ.

ಅಂದು ಓಡಿದ ಪುಚ್ಚೆ ಮತ್ತೆ ಇಂದ್ರಾಣವರೆಗೆ ಬಯಿಂದಿಲ್ಲೆಡ ಭಾವ.

10 thoughts on “ಕಂಟ ಪುಚ್ಚೆ ಪ್ರಸಂಗವು – ಭಾಗ 2

  1. ಕಥೆ ರೈಸಿದ್ದು ಶ್ಯಾಮಣ್ಣ… ಮುಂದಾಣ ಕಥೆಯ ನಿರೀಕ್ಷೆಲಿ….

  2. ಕಥೆ ರೈಸಿದ್ದು ಶ್ಯಾಮಣ್ಣಾ…
    ಆನು ಇನ್ನೂ ರೆಜಾ ಉದ್ದ ಹೋಕು ಹೇಳಿ ಗ್ರೇಶಿಂಡು ಇತ್ತಿದ್ದೆ.

  3. * ಆ ಕಿಶೋರನ ಅಜ್ಜಿ ಮನೆಗೆ ಹೋವ್ತ ದಾರಿ ಹೇಳಿಕ್ಕಿ ಶಾಮಣ್ಣ ಈ ವರ್ಷ ಎಂಗೊಗೆ ಎಲ್ಲೂ ಮಾವಿನ ಮೆಡಿ ಸಿಕ್ಕಿದ್ದೇ ಇಲ್ಲೆ

    * ಅಂತೂ ತೆನ್ನಾಲಿ ರಾಮಕೃಷ್ಣ ಪುಚ್ಚೆ ಸಾಂಕಿದ ಕತೆ ಕಿಶೋರನು ಓದಿದ್ದ ಹೇಳಿ ಗೊಂತಾತು

    * ಶಾಮಣ್ಣ …ಕತೆ ಪಷ್ಟಾಯಿದು ಮಿನಿಯಾ (ಚಿತ್ರವುದೇ)

    1. (ಮಾವಿನ ಮೆಡಿ ಸಿಕ್ಕಿದ್ದೇ ಇಲ್ಲೆ)
      ಈ ಸರ್ತಿ ತುಂಬಾ ಜೆನಂಗ ಮೆಡಿಯ ಕೊಯ್ವಲೆ ಚೋಮ ಬ೦ದರೆ ಕುರ್ವೆ ತಪ್ಪಲೆ ಹೋದ ಕಾರಣ ನಿಂಗೊಗೆ ಮೆಡಿ ಸಿಕ್ಕ ಬಾಲಣ್ಣ. 🙂

  4. ಶ್ಯಾಮಣ್ಣನ ಕಂಟ ಪುಚ್ಚೆಗೆ ಹತ್ತುದಿನಂದ ಕಾದು ಕೂದೊಂಡಿದ್ದಿದ್ದೆ. ಕಡೆಂಗುದೆ ಬಂತದ. ಕಿಶೋರಣ್ಣನ ಪ್ಲಾನು ಸೂಪರ್ ಆಯಿದು. ಕಂಟ ಪುಚ್ಚೆ ಇನ್ನು ಬೈಲಿಂಗೆ ಬಪ್ಪಲಿಲ್ಲೆ ಹೇಳಿ ಬೇಜಾರಾತು. ಆನು ಒಂದೊಳ್ಳೆ ಪತ್ತೇದಾರಿ ಕತೆ ಧಾರಾವಾಹಿ ಆಗಿ ಬತ್ತಾ ಇದ್ದು ಹೇಳೊ ಕೊಶಿಲಿದ್ದಿದ್ದೆ. ಸಿಸಿಟಿವಿ ಲಿ ಪುಚ್ಚೆ ಬತ್ತಾ ಇಪ್ಪ ಸೀನು ಲಾಯಕಿತ್ತು. ಅದರ ನೋಡುವಗ, ಟಿವಿ ೯ ನವರ ನೆಂಪಾತು!
    ಪುಚ್ಚೆಗೆ ಬಡಿವಗ ಬಂದ ವೀರಾವೇಶದ ಪದ್ಯ ಒಳ್ಳೆ ರೈಸಿದ್ದು, ಚೆಂಡೆಪೆಟ್ಟು ಬೀಳೆಕು, ಇನ್ನುದೆ ರೈಸುಗು.
    ಶ್ಯಾಮಣ್ಣನ ಇನ್ನೊಂದು ಕಥೆಗೆ ಕಾಯ್ತಾ ಇದ್ದೆ.

    1. (ಪತ್ತೇದಾರಿ ಕತೆ ಧಾರಾವಾಹಿ ಆಗಿ ಬತ್ತಾ ಇದ್ದು)
      ಬೊಳುಂಬು ಭಾವಂಗೆ ಪತ್ತೇದಾರಿ ಕತೆ ಹೇಳಿರೆ ಬಾರಿ ಇಂಟ್ರೆಸ್ಟ್ ಇದ್ದಾ ಹೇಳಿ? 🙂

  5. ಪುಚ್ಚೆಯ ಪಟವೂ ರೈಸಿದ್ದು, ಕತೆಯೂ ರೈಸಿದ್ದು. ಅಲ್ಲ ಹಾಂಗೆ ಒರಕ್ಕೆಟ್ಟರೆ ಮರದಿನ ಆಪೀಸಿಂಗೆ ಕೆಲಸಕ್ಕೆ ಹೋವ್ಸೆಂಗೆ ಭಾವ! ನವಗೆ ಒಂದಿನ ಆಟಕ್ಕೋಗಿ ಒರಕ್ಕೆಟ್ರೆ ಎಡಿತ್ತಿಲ್ಲೆ ಹೇದು ನೆಡು ಇರುಳಪ್ಪಗ ಆಟಕ್ಕೋದಲ್ಲಿಂದ ಜಾರುತ್ತು.

    ಪುಚ್ಚೆಯ ಹಿಡಿವಲೆ ಹೇದು ಒಂದು ತಿಂಗಳ ಮಟ್ಟಿಂಗೆ ಒಂದು ಗೂರ್ಕನ ಮಾಡಿರೆ ಹೇಂಗೆ. ಉಮ್ಮ, ಅಂತು ಅಂದು ಓಡಿದ ಪುಚ್ಚೆ ಇಂದ್ರಾಣವರೆಂಗೆ ಬಯಿಂದಿಲ್ಲೆ ಹೇಯಿದಿ. ಇನ್ನಾ ತಲೆಬೆಶಿ ಎಂಸಕೆ ಅಲ್ಲದ. ಚೇ ಈಗ ಹಾಲೂ ಚೆಲ್ಲಿತ್ತು ಮದಲೆ ಉಪ್ಪಿನಕ್ಕಾಯಿ ಬರಣಿಯೂ ಒಡದತ್ತು. ಇನ್ನು ಬಂದರೆ ಎಂತಿಕ್ಕಪ್ಪ ಅಲ್ಲಿ? ಸಕ್ಕರೆ ಕರಡಿಗೆಯೋ. ಬೇಡ ಬೇಡ. ಆ ಕಂಟಪುಚ್ಚೆ ಬಾರದ್ದೇ ಇರಳಿ. ಕಿಶೋರಂಗೆ ಉಪದ್ರವೂ ಆಗದ್ದೆ ಇರಳಿ ಮುಂದಂಗೆ.

    1. (ಅಂತು ಅಂದು ಓಡಿದ ಪುಚ್ಚೆ ಇಂದ್ರಾಣವರೆಂಗೆ ಬಯಿಂದಿಲ್ಲೆ)
      ಎರಡು ದಿನ ಕಳುದಪ್ಪಗ, ಆ ಪುಚ್ಚೆ ಮಾರ್ಗ ದಾಂಟುವಗ ಯಾವದೋ ರಿಕ್ಷದ ಅಡಿಂಗೆ ಬಿದ್ದು ಸತ್ತತ್ತು ಹೇಳುವ ವಿಷಯ ಅಲಾಯುದ ಭಾವ… 🙂

  6. ತಣ್ಣಂಗೆ ಇರುಳು,ಆ ತನಿಯಪ್ಪ ತಣ್ಣನೆ ಹಾಲು ಕುಡಿವೊ ಹೇದು ಕುಡಿದಿದ್ದರೆ, ಎಂತಾವುತಿತ್ತು, ಭಾವ..?

    1. ಬಾಗಿಲು ಹಾಕಿ ಚೀಪು ಹಾಕಿತ್ತಿದ್ದು ಬಾವ… ತನಿಯಪ್ಪಂಗೆ ಒಳ ಬಪ್ಪಲೆ ಅವಕಾಶವೇ ಇತ್ತಿಲ್ಲೇ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×