Oppanna.com

“ಕಡುದ ನೀರು ಕಟ್ಟಕ್ಕೆ ಬಾರ”- {ಹವ್ಯಕ ನುಡಿಗಟ್ಟು–21}

ಬರದೋರು :   ವಿಜಯತ್ತೆ    on   23/11/2014    3 ಒಪ್ಪಂಗೊ

“ಕಡುದ ನೀರು ಕಟ್ಟಕ್ಕೆ ಬಾರ”—[ಹವ್ಯಕ ನುಡಿಗಟ್ಟು—21]
ಮದಲಿಂಗೆ ಅಡಕ್ಕೆ ತೋಟ ಹೇಳಿರೆ ತೋಡು,ಹಳ್ಳ,ಹೊಳೆ, ಹೀಂಗೆ ನೀರಿನ ಹರಿವು ಇಪ್ಪಲ್ಲಿಯೇ ಮಾಡುಸ್ಸಿದ. ಬೇಸಗೆ ಬಂದಪ್ಪದ್ದೆ ಅದಕ್ಕೆ ಕಟ್ಟ ಕಟ್ಟಿಕ್ಕಿ ಎರ್ಕಿದ ನೀರಿನ;ತೋಟದ ಓಳಿಗೆ ಹರಿವಲೆ ಬಿಟ್ಟು ತೋಟದ ತಟ್ಟಿಂಗೆಲ್ಲ ಹಾಳೆ ಕಿಳ್ಳಿಲಿ ಚೇಪುಗು.ಕಟ್ಟಲ್ಲಿ ನೀರು ಕಮ್ಮಿಆಗಿ ಹರಿವು ನಿಂದಪ್ಪಗ ಒಂದೋ ಜೊಟ್ಟೆ ಮೊಗದು ಹಾಕುಗು[ಈಗಾಣವಕ್ಕೆ ’ಜೊಟ್ಟೆ’ ’ತೊಯಿದಂಬೆ’ ಹೇಳಿರೆ ಗೊಂತಕ್ಕೊ!ಉಮ್ಮಪ್ಪ].ಜೊಟ್ಟಗೆ ಮೂರು ಜೆನ ಬೇಕು.ಎರಡುಜೆನ ಎಳವಲೆ, ಒಬ್ಬ ಮೊಗಚ್ಚಲೆ. ಅಲ್ಲದ್ರೆ ತೊಯಿದಂಬೆಲಿ ತೋಟದ ಓಳಿಗೆ ಹಾಕಿ ತೋಕುಗು.ಇದಕ್ಕೆ ಒಬ್ಬನೆ ಸಾಕು.ಇದಲ್ಲಿ ಜ್ಜೊಟ್ಟೆಯಷ್ಟು ನೀರು ಬಾರ!. ಮತ್ತೆ-ಮತ್ತೆ ಪಂಪು,ಎಂಜಿನು ಬಂತು. ಗುಡ್ಡಗಳಲ್ಲೂ ಕೊಳವೆ ಬಾವಿ ಮಾಡಿ, ತೋಟ ಮಡಗಿದೊವು!.ಕೆಲವು ಸರ್ತಿ ಅಕಾಲಲ್ಲಿ ಮಳೆಂದಾಗಿಯೋ ಕಟ್ಟಿದ ಕಟ್ಟ ಕಡಿಗಿದ.ಎರ್ಕಿದ ನೀರೆಲ್ಲ ಕಡುದು ಹೋಗಿ ಓಪಾಸು ಕಟ್ಟೆಕ್ಕಾಗಿ ಬಕ್ಕು.ಆದರೆ ಈ ಕಡುದು ಹೋದ ನೀರು ಮತ್ತೆ ಸಿಕ್ಕಯಿದ. ಓಪಾಸು ಎರ್ಕಿಯೇ ಆಯೆಕ್ಕಷ್ಟೆ!.ಹೀಂಗಿದ್ದ ಅನುಭವಿಗೊ ನಮ್ಮ ಹೆರಿಯೊವು ಈ ನುಡಿಗಟ್ಟಿನ ಮಾಡಿದೊವು.
ಇಂತಹನುಡಿಗಟ್ಟುಗೊ ಬರೇ ಶಭಾರ್ಥ ಮಾಂತ್ರ ಅಲ್ಲ! ಅದಲ್ಲಿ ಒಳಾರ್ಥದ ವಿಚಾರ ಇಪ್ಪದು!. ಅನುಭವಾಮೃತ ಹೇಳ್ಲಕ್ಕು. ಮುಗುದು ಹೋದ ಸಮಯಕ್ಕೆ, ಕೈತಪ್ಪಿಹೋದ ಸಂಪತ್ತಿಂಗೆ,ಅತ್ಯಾಚಾರ,ಅನಾಚಾರಂಗಳಲ್ಲಿ ಮರ್ಯಾದಿ ಹೋದರೆ, ವಿಶೇಷವಾಗಿ ಓಡಿಹೋದ ಜವ್ವಂತಿ ಕೂಸಿನ ವಿಷಯಕ್ಕೆ, ಹೀಂಗೆ ಸುಮಾರು ಸಂದರ್ಭಲ್ಲೆಲ್ಲ ಒಟ್ಟಾರೆ ಪೂರ್ವ ಸ್ಥಿತಿಗೆ ಬಾರದ್ದ ವಿಷಯಕ್ಕೆಲ್ಲ ಈ ನುಡಿಗಟ್ಟಿನ ಉಪಯೋಗುಸುತ್ತೊವು. ಎಷ್ಟು ಅರ್ಥವತ್ತಾಗಿದ್ದಲ್ಲೊ ಹೇಳಿ ಈ ನುಡಿಗಟ್ಟು!? ಅಪ್ಪು ನಮ್ಮ ಆಸ್ತಿಯಾದ ಕಾಯೆಕ್ಕಾದ ಕಟ್ಟವ ಕಡಿವಲೆ ಬಿಡ್ಳಾಗ!.ಆದಷ್ಟು ಜತನಲ್ಲಿ ಕಾಯೆಕ್ಕು.ಆದರೆ ಎಷ್ಟೇ ಜಾಗತೆ ವಹಿಸೀರು ಕೆಲವು ಸರ್ತಿ ಕಾರ್ಯ ಮಿಂಚಿಹೋವುತ್ತನ್ನೆ!!.ಅದಕ್ಕಾಗಿಯೇ ಜೀವನಲ್ಲಿ; ಮತ್ತೆ,ಮತ್ತೆ ನೆಂಪು ಮಾಡಿಗೊಳೆಕ್ಕು. ಎಂತ ಹೇಳ್ತಿ?.

3 thoughts on ““ಕಡುದ ನೀರು ಕಟ್ಟಕ್ಕೆ ಬಾರ”- {ಹವ್ಯಕ ನುಡಿಗಟ್ಟು–21}

  1. ಹರೇರಾಮ , ಧನ್ಯವಾದಂಗೊ ನರಸಿಂಹಣ್ಣ , ತುಂಬಾ ದಿನ ಆತು ನಿಂಗಳ ಇಲ್ಲಿ ಕಾಣದ್ದೆ! ನವೀನಂಗು ಧನ್ಯವಾದ .

  2. ‘ಕಡುದ ನೀರು ಕಟ್ಟಕ್ಕೆ ಬಾರ’.ಹಾಂಗೇ ಒಡದ ಮುತ್ತು,ಆಡಿದ ಮಾತು ವಾಪಾಸು ಬಾರ.ಒಳ್ಳೆದಾಯಿದು ವಿಜಯಕ್ಕ.

  3. ನುಡಿಗಟ್ಟು ತುಂಬ ಅರ್ಥ ಪೂರ್ಣವಾಗಿದ್ದು ದೊಡ್ಡಮ್ಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×