Oppanna.com

ಕಥೆ ಕಥೆ ಕಾರಣ…-ಕಾರಣವೇ ಇಲ್ಲದ್ದೆ ‘ಒಂದು ಕಥೆ’ !!

ಬರದೋರು :   ಸುವರ್ಣಿನೀ ಕೊಣಲೆ    on   26/10/2010    36 ಒಪ್ಪಂಗೊ

ಸುವರ್ಣಿನೀ ಕೊಣಲೆ

ಒಂದು ದಿನ ಪುರ್ಸೊತ್ತು ಮಾಡಿ ಬೈಲಿನೋರೊಟ್ಟಿಂಗೆ ಮಾತಾಡೆಕ್ಕು ಹೇಳಿ ಸುಮಾರು ದಿನಂದ ಗ್ರೇಶುದು,ಆದರೆ ಪುರ್ಸೊತ್ತೇ ಆಯ್ಕೊಂಡಿತ್ತಿಲ್ಲೆ. ಈಗ ಪುರ್ಸೊತ್ತೇ ಪುರ್ಸೊತ್ತು…ಈ ಅವಕಾಶವ ಬಿಡ್ಲೇಆಗ ಹೇಳಿ ತೀರ್ಮಾನ ಮಾಡಿ, ಒಂದೊಂದೇ ಕಥೆ ಬರವಲೆ ಹೆರಟೆ. ಕಥೆ ಹೇಳುವಗ ನೆಂಪಾತು, ಕಥೆಗಳ ಬಗ್ಗೆಯೇ ರಜ್ಜ ಮಾತಾಡುವ0 ಹೇಳಿ. ನಾವು ಸಣ್ಣಾದಿಪ್ಪಗ ಕಥೆ ಕೆಳಿದಷ್ಟು ಈಗಾಣ ಮಕ್ಕೊಗೆ ಸಿಕ್ಕುತ್ತಿಲ್ಲೆಯೋ ಹೇಳಿ ಎನಗೆ ಕಾಣ್ತು. ಇರಲಿ, ನಾವು ನಮ್ಮ ಬಾಲ್ಯವ ರಜ್ಜ ನೆಂಪು ಮಾಡಿಗೊಂಬ0 🙂 ಈಗ ಎಲ್ಲೋರೂ ಬೇರೆ ಬೇರೆ ಕೆಲಸಂಗಳಲ್ಲಿ busy. ಒಂದು ಹತ್ತು ನಿಮಿಷ ಎಲ್ಲ ಬಿಟ್ಟು ಹತ್ತೋ ಇಪ್ಪತ್ತೋ ಮೂವತ್ತೋ ವರ್ಷ ಹಿಂದಂಗೆ ಹೋಗಿ ಬಪ್ಪ0, ಆಗದಾ?

ಆನು ಸಣ್ಣಾದಿಪ್ಪಗ ಮನೆಲಿ ಅಮ್ಮ,  ಅಜ್ಜನ ಮನೆಗೆ ಹೋದಪ್ಪಗೆಲ್ಲಾ ಅತ್ತೆ  ತುಂಬಾ ಕಥೆ ಹೇಳುಗು…ಓ ಮೊನ್ನೆ ಎನ್ನ ಅತ್ತಿಗೆಯ ಮಗಳು ಮೂರೂವರೆ ವರ್ಷದ ’ನೀನಾ’ಗೆ ಎನ್ನ ಅಮ್ಮ ಕಥೆ ಹೇಳುವಗ ಎನಗೆ ಎನ್ನ ಹಳೆ ಕಥೆಗೊ ಎಲ್ಲ ನೆಂಪಾತು… ಗುಡುಗುಡುಗುಮ್ಮಟೆರಾಯನ ಕಥೆ, ಪುಣ್ಯಕೋಟಿಯ ಕಥೆ, ಕುದುಕ್ಕನ ಕಥೆ, ರಾಮಾಯಣದ-ಮಹಾಭಾರತದ ಕಥೆ, ಚಂದಾಮಾಮದ ಕಥೆಗೊ, ಅಲಿಬಾಬನ ಕಥೆ, ಪುಚ್ಚೆ-ನಾಯಿ ಕಥೆ…ಹೀಂಗೇ ಎಂತೆಂತದೋ….ಹೆಚ್ಚು ಹಠ ಮಾಡಿರೆ ಹೊಸ ಕಥೆಗೊ ಸೃಷ್ಟಿ ಅಪ್ಪದೂ ಇತ್ತಿದ್ದು ಕೆಲವು ಸರ್ತಿ !!  ಕಥೆ ಹೇಂಗೇ ಇರಲಿ, ಆಶ್ಚರ್ಯಂದ…ಅದು ಕಣ್ಣ ಮುಂದೆ ನಡೆತ್ತಾ ಇದ್ದೋ ಹೇಳುವ ಹಾಂಗೆ ಮೈಯೆಲ್ಲಾ ಕೆಮಿ ಆಗಿ ಕೇಳುದು !! ಮಧ್ಯೆ ಮಧ್ಯೆ ಒಂದೊಂದು ಪ್ರಶ್ನೆ ಕೇಳುದೂ ಇತ್ತು. ಉತ್ತರವೇ ಇಲ್ಲದ್ದ ಪ್ರಶ್ನೆ ಆದರೆ  ಅಮ್ಮ “ಹಾಂಗೆಲ್ಲ ಕೇಳುಲಾಗ, ಸುಮ್ಮನೆ ಕಥೆ ಕೇಳು” ಹೇಳಿ ಜೋರು ಮಾಡುಗು 😉

ಕೆಲವು ಕಥೆಗೊ ಮನಸ್ಸಿಂಗೆ ನಾಟಿ, ನೀತಿಯ ಜೀವನಲ್ಲಿ ಅಳವಡಿಸಿಗೊಂಡರೆ.. ಇನ್ನು ಕೆಲವು ಕಥೆಗಳ ಸತ್ಯ ಹೇಳಿ ನಂಬಿದ್ದರ ಗ್ರೇಶಿ ನೆಗೆ ಬತ್ತು ಈಗ !! ಉದಾಹರಣೆಗೆ, ಪುಣ್ಯಕೋಟಿಯ ಕಥೆ, ಕೇಳಿದವಕ್ಕೆ ಆರಿಂಗಾರೂ ಕಣ್ಣಿಲ್ಲಿ ನೀರು ತುಂಬದ್ದೇ ಇರ..ಹಾಂಗೇ ಎಂದಿಂಗೂ ಅಳಿಯದ್ದೆ ಮನಸ್ಸಿಲ್ಲಿ ಪುಣ್ಯಕೋಟಿ ಜೀವಂತ ಇಕ್ಕು. ಇನ್ನು ಕೆಲವು ಕಥೆಗೊ ಇದ್ದು, ಸಣ್ಣಾದಿಪ್ಪಗ ಅದರ ಕೇಳಿ ಅಸಾಧ್ಯವ ಸತ್ಯ ಹೇಳಿ ನಂಬಿರ್ತು ನಾವು, ಉದಾಹರಣೆಗೆ ಗುಡುಗುಡುಗುಮ್ಮಟೆರಾಯನ ಕಥೆ ಇತ್ಯಾದಿ… ಕೇಳಿದ್ದರ ಎಲ್ಲ ನಂಬುವ ಆ ಮುಗ್ಧತೆ ಈಗ ಇಲ್ಲೆ, ಅದೂ ಅಲ್ಲದ್ದೆ ಪ್ರತಿಯೊಂದು ವಿಚಾರವನ್ನೂ ಹತ್ತು ಸರ್ತಿ ಆಲೋಚನೆ ಮಾಡಿ ವಿಮರ್ಶಿಸಿ ಮತ್ತೆಯೇ ನಂಬುದು ಈಗ! ಅದಿರಲಿ…. ಆನು ಎನಗೆ ನೆಂಪಿದ್ದ ಕಥೆ ಒಂದರ ಹೇಳ್ತೆ, ನಿಂಗಳೂ ನಿಂಗೊಗೆ ನೆಂಪಿದ್ದ ಅಜ್ಜಿಯೋ ಅಮ್ಮನೋ ಆರಾರು ಹೇಳಿದ ಯಾವುದಾರೂ ಒಂದು ಕಥೆಯ ಇಲ್ಲಿ ಹೇಳಿ[ ಒಂದು ಕಾಲು ಗಂಟೆ ಪುರ್ಸೊತ್ತು ಮಾಡಿ ಬರೇರಿ.. ಬರವ ಪ್ರಯತ್ನ ಮಾಡಿ]

ಇದರಿಂದ ಎಂತ ಪ್ರಯೋಜನ ಹೇಳಿ ಕೇಳ್ತೀರಾ? ಪೈಸಿನ ಲಾಭ ಅಂತೂ ಇಲ್ಲೆ, ಆದರೆ…ಒಂದಷ್ಟು ಸಮಯ ನಾವು  ನಮ್ಮ ಹಿಂದಾಣ ನೆಂಪುಗಳ ಹಸಿರು ಮಾಡಿಗೊಂಬಲಕ್ಕು…. ಬೇರೆಲ್ಲ  tension  ಮರತ್ತು ನೆಗೆಮಾಡ್ಲಕ್ಕು…ನಮ್ಮ ಮಕ್ಕೊಗೆ ಪುಳ್ಳಿಯಕ್ಕೊಗೆ ಹೇಳುಲೆ ಹೊಸ/ಹಳತ್ತು ಕಥೆಗೊ  ಸಿಕ್ಕುಗು….. ಹೀಂಗೆ, ಬೆಲೆ ಕಟ್ಟುಲಾಗದ್ದ ಕೆಲವು ಸಂತಸದ ಕ್ಷಣಂಗಳ ನಮ್ಮದಾಗ್ಸಿಗೊಂಬಲಕ್ಕು………………………… ಕೆಲವರಿಂಗೆ ಇದೆಲ್ಲಾ ಮಕ್ಕಳಾಟಿಕೆ ಹೇಳಿ ಕಂಡರೂ…. ಆನಂತೂ always ready for  these things.

ಈಗ ಒಂದು ಕಥೆ ಹೇಳ್ತೆ, ಎಂತದೂ ಪ್ರಶ್ನೆ ಕೇಳದ್ದೆ ಸುಮ್ಮನೆ ಓದೆಕು ಎಲ್ಲೋರೂ.. ಆತ, [ನಿಂಗೊ ಕೇಳುವ ಪ್ರಶ್ನೆಗೆ ಎನ್ನ ಹತ್ತರೆ ಉತ್ತರ ಖಂಡಿತಾ ಇರ ಹೇಳಿ ಎನಗೆ ಗೊಂತಿದ್ದು ;)]

0
ಹಾಂಕಾರದ ಕೆಪ್ಪೆ

ಒಂದು ಊರಿತ್ತಡ, ಅಲ್ಲಿ ಒಂದು ದೊಡಾಆಆಆ…. ಕೆರೆ ಇತ್ತಡ. ಊರಿನ ಜೆನಂಗೊಕ್ಕೆ ಎಲ್ಲದಕ್ಕೂ ಅಲ್ಲಿಂದಲೇ ನೀರು, ಪಾತ್ರೆ ತೊಳೆವಲೆ, ವಸ್ತ್ರ ಒಗವಲೆ, ಮೀವಲೆ, ತೋಟಕ್ಕೆ ನೀರು ಹಾಕುಲೆ, ಎಮ್ಮೆ-ದನ ಮೈ ತೊಳವಲೆ..ಹೀಂಗೆ ಎಲ್ಲದಕ್ಕೂ ಅದೇ ಕೆರೆಯೇ ಗತಿ ಅಡ. ಕೆರೆಲಿ ಒಂದು ಕೆಪ್ಪೆ ಇತ್ತಡ, ಅದಕ್ಕೆ ತುಂಬಾ ಹಾಂಕಾರ ಅಡ. ಅದು ಯಾವಗಲೂ ’ಇದು ಎನ್ನ ಕೆರೆ,ಇದು ಎನ್ನ ಕೆರೆ, ಇಲ್ಲಿ ಬೇರೆ ಆರೂ ಎನ್ನ permission ಇಲ್ಲದ್ದೆ ಬಪ್ಪಲಾಗ’ ಹೇಳಿ ಹೇಳುಗು. ಆದರೆ ಕೆಪ್ಪೆಯ ಮಾತಿನ ಆರು ಕೇಳ್ತವು ಬೇಕನ್ನೆ? ಕೆಪ್ಪೆ ದಿನಾಗ್ಲೂ ಹೀಂಗೇ ಹೇಳುಗಡ ಆದರೆ ಎಂತದೂ ಆಯ್ದಿಲ್ಲೆ ! ಒಂದು ದಿನ ಕೆಪ್ಪೆಗೆ ದೊಡ್ಡ ಕೋಪ ಬಂತಡ…… ಎನ್ನ ಕೆರೆಯ ನೀರಿನ ಎನ್ನ ಅನುಮತಿ ಇಲ್ಲದ್ದೆ ಎಲ್ಲೋರೂ ಉಪಯೋಗ್ಸುತ್ತೀರಾ? ಎನ್ನ ಮಾತಿಂಗೆ ಬೆಲೆಯೇ ಇಲ್ಲೆಯಾ? ಹಾಂಗಾರೆ ಮಾಡ್ತೆ ನಿಂಗೊಗೆ ಬಗೆ ಹೇಳಿ ಹೇಳಿತ್ತಡ..ಮತ್ತೆ ಕೆರೆಯ ನೀರಿನ ಎಲ್ಲ ಕುಡಿವಲೆ ಶುರು ಮಾಡಿತ್ತಡ !! ಅಷ್ಟು ದೊಡ್ಡ ಕೆರೆಯ ನೀರಿನ ಕುಡುದು ಕೆಪ್ಪೆಯ ಹೊಟ್ಟೆ ದೊಡ್ಡ ಅಪ್ಪಲೆ ಶುರು ಆತಡ….ದೊಡ್ಡ… ದೊಡ್ಡ… ದೊಡ್ಡ..ಹೊಟ್ಟೆ ಆತಡ, ಊರಿನ ಜೆನಕ್ಕೆ ತಲೆ ಬೆಶಿ ಆತಡ… ಜೆನ ಎಷ್ಟೇ ಕೇಳಿಗೊಂಡರೂ ಕೆಪ್ಪೆ ಕುಡುದ ಕೆರೆಯ ನೀರಿನ ಹೆರ ಹಾಕಿದ್ದೇ ಇಲ್ಲೆಡ. ಹೀಂಗಾರೆ ನಾವೆಂತ ಮಾಡುದು ನೀರಿಂಗೆ ಹೇಳಿ. ಅಂಬಗ ಊರಿಲ್ಲಿ ಇಪ್ಪ ಬುದ್ಧಿವಂತ ಮಾಣಿ ಒಬ್ಬಂಗೆ ಒಂದು  idea ಬಂತಡ…. ಅಂವ ಹಾಂಕಾರದ ಕೆಪ್ಪೆ ಹತ್ತರೆ ಹೋಗಿ ಅದರ ಹೊಟ್ಟೆಗೆ ಒಂದು ಸೂಜಿಲಿ ಕುತ್ತಿದ0 ಅಡ. ಕೆಪ್ಪೆಯ ಹೊಟ್ಟೆ ಒಟ್ಟೆ ಆಗಿ, ನೀರೆಲ್ಲ ಹೆರ ಬಂದು ಕೆರೆ ತುಂಬಿತ್ತಡ. ಕೆಪ್ಪೆ ಹೊಟ್ಟೆ ಒಡದು ಸತ್ತತ್ತಡ.”

ಈ ಕಥೆಯ ನೀತಿ ಎಂತರ ಹೇಳಿರೆ  ’ಹಾಂಕಾರ ಹೆಚ್ಚಾದರೆ ಎಂದಿಂಗೂ ಒಳ್ಳೆದಲ್ಲ, ನಮ್ಮ ಹತ್ತರೆ ಇಪ್ಪದರ ನಾಲ್ಕು ಜೆನಕ್ಕೆ ಹಂಚಿ ಉಪಯೋಗ್ಸೆಕು’ ಹೇಳಿ.  ಒಂದು ಕೆಪ್ಪೆ ಇಡೀ ಕೆರೆಯ ನೀರು ಕುಡಿವದು ಹೇಂಗೆ? ಕೆಪ್ಪೆ ಮಾತಾಡಿದ್ದು ಹೇಂಗೆ? ಇತ್ಯಾದಿ ಪ್ರಶ್ನೆ ಕೇಳೆಡಿ. ಅದೆಲ್ಲ ಎನಗೂ ಗೊಂತಿಲ್ಲೆ…… ಸಣ್ಣಾದಿಪ್ಪಗ ಕೆಪ್ಪೆ ಇಡೀ ಕೆರೆಯ ನೀರು ಕುಡುತ್ತಡ ಹೇಳುವಗ ಬಾಯಿ ಒಡದು ಕಥೆ ಕೇಳಿಗೊಂಡಿತ್ತಿದ್ದೆ ಆನು, ಹೀಂಗಿದ್ದ ಪ್ರಶ್ನೆಗೊ ಬೈಂದೇ ಇಲ್ಲೆ ತಲೆಗೆ !!

ಇಲ್ಲಿಗೆ ಎನ್ನ ಒಂದು ಕಥೆ ಮುಗುತ್ತು….[ಈ ಕಥೆಯ ಎನಗೆ ಎನ್ನ ಅಜ್ಜನ ಮನೆ ಅತ್ತೆ ಹೇಳಿದ್ದು..ಎನಗೆ ನಾಲ್ಕೋ ಐದೋ ವರ್ಷ ಆದಿಪ್ಪಗ…] ನಿಂಗೊ ಆರಾರು ಪ್ರಯತ್ನ ಮಾಡ್ತೀರಾ?

36 thoughts on “ಕಥೆ ಕಥೆ ಕಾರಣ…-ಕಾರಣವೇ ಇಲ್ಲದ್ದೆ ‘ಒಂದು ಕಥೆ’ !!

  1. ಕುಪ್ಪಾಯ ಹಾಕುತ್ತವು ಕರಿ ಗೂಡಿನೊಳ.
    ಮದಲಿ೦ಗೆ ಕರಿ ಗೂಡು ಕಮ್ಮಿ ಇತ್ತು ,ಇದು ಆ ಕಾಲದ ಕತೆ ಅದ.
    ಒಪ್ಪ೦ಗಳೊಟ್ಟಿ೦ಗೆ

  2. ಈಗಾಣ ಬ್ಯಾರ್ತಿಗೊ ಸೊಪ್ಪು ಕಡಿವಲೂ ಇಲ್ಲೆ ತಪ್ಪಲೂ ಇಲ್ಲೆ ಎಲ್ಲಾ ದುಬಾಯಿ ಬ್ಯಾರಿಗಳ ಹೆ೦ಡತ್ತಿಯಕ್ಕೊ.ಹಾ೦ಗಾಗಿ ಕೆಲಸಕ್ಕೆ ಬತ್ತ ಚಿ೦ತೆಯೇ ಇಲ್ಲೆ.ಮಕ್ಕಳ ಮ೦ಕಟ್ಸಲೆ ಕತೆ ಅಷ್ಟೆ ಬ್ಯಾರ್ತಿ ಈಗ ನೆಡು ಇರುಳದರು ಕುಪ್ಪಯ ಹರುದರೆ ಹೋಗಿ ಹೊಸತ್ತು ತಕ್ಕಷ್ಟೆ.ಮತ್ತೆ ದಬ್ಬಣಲ್ಲಿ ಮೆಟ್ಟೊ ಗೋಣಿಯೋ ಹರುದರೆ ಹೊಲಿವಲೆಡಿಗಷ್ಟೆ ಕುಪ್ಪಯಕ್ಕೆ ಸೂಜಿಯೇ ಆಯೇಕಷ್ಟೆ.ಏನಾದರೂದಾರಿ ಇದ್ದರೆ ಹೇಳು.ಒಪ್ಪ೦ಗಳೊಟ್ಟಿ೦ಗೆ

  3. ಶ್ಯಾಮಣ್ಣೋ ಒ೦ದು ದಬ್ಬಣ ಕೊಟ್ರಾಗದೊ ಹೇಳಿರೆ ಸೂಜಿ ಸಿಕ್ಕಿತ್ತೊ?ಕತೆ ಮು೦ದೆ ಹೋಗಾ.ಇನ್ನು ಪ್ರದೀಪ ಹೇಳಿದ ಹಾ೦ಗಿಪ್ಪ ಪೆರಟ್ಟು ಕತಗೊ ಎಲ್ಲ ಎ೦ಗಳತ್ರ ಹಳೆ ಕಾಲದ್ದು ಸಾಕಷ್ಟು ಇದ್ದು ಆದರೆ ಬೈಲಿನೋರು ಪರಬ್ಬ೦ಗೆ ಪ್ರಾಯ ಹೋಕಿ೦ಗೆ ಇದೆನ್ತರ ಮುದಿ ಪ್ರ೦ದು ಹೇಳ್ಲಾಗಾನೆ ಹೇಳಿ ಅದರ ಎಲ್ಲ ಖಾಸಗಿ ಭೇಟಿಗೆ ಬಾಕಿ ಮಡಗುತ್ತೆ ಆಗದೊ.ಇನ್ನೊದು ಶ್ಯಾಮಣ್ಣ ಹೇಳಿದ ಅಜ್ಜಿ ಕತೆಲಿ ಒ೦ದು ಚೂರು ಅರ್ಥ ಆಯಿದಿಲ್ಲೆ.ಅಜ್ಜಿ ಸಣ್ಣ ಪ್ರಾಯಲ್ಲಿ ಸತ್ತು ಹೋದ್ದದು ಹೇ೦ಗೆ?ಶ್ಯಾಮಣ್ಣ ಏನಾರು ಮಸಲತ್ತು ಮಾಡಿದನೊ?ಅಜ್ಜಿಗೂ ಸಣ್ಣ ಪ್ರಾಯಕ್ಕು ಹೊ೦ದಾಣಿಕೆ ಹೇ೦ಗೆ?ಇನ್ನು ಪುಟ್ಟಣ್ಣ ನ ಕತೆ ಈಗಳೇ ಮುಗುದರೆ ಎ೦ಗಳ ಹಾ೦ಗಿಪ್ಪವು ಇಲ್ಲಿವರೆಗೆ ಎತ್ತಿದ್ದು ಹೇ೦ಗೆ ಹೇಳಿ ಸ೦ಶಯ.ಪ್ರಕಾಶೊ ಬಯಲಿನೋರ ಹೆದರುಸೆಡ ಪ್ರಾಯಕ್ಕೆ ಬ೦ದ ಮಕ್ಕೊ ತು೦ಬಾ ಇದ್ದವು.ನೀನು ಬೀಲ ಹೋದ ಕುದ್ಕನೊ ಬೀಲ ಇದ್ದ ಕುದ್ಕನೊ?ಒಪ್ಪ೦ಗಳೊಟ್ಟಿ೦ಗೆ

    1. ಸೂಜಿ ಸಿಕ್ಕದ್ದೆ ಕಥೆ ಮುಂದೆ ಹೋಗ. ಬ್ಯಾರ್ತಿಯ ಕುಪ್ಪಾಯ ಹೊಲಿವಲೆ ಎಡಿಯ… ಕುಪ್ಪಾಯ ಹೊಲಿವಲೆ ಎಡಿಯದ್ದ್ರೆ ಬ್ಯಾರ್ತಿ ಹುಲ್ಲು ಹೆರವಲೂ, ಸೊಪ್ಪು ಕಟ್ಟ ತಪ್ಪಲೂ ಬಾರ. ಹಾಂಗಾಗಿ ಕತೆ ಮುಂದೆ ಹೋಗದ್ದ್ರೂ ದಬ್ಬಣ ಕೊಟ್ರೆ ಕುಪ್ಪಾಯ ಆದರೂ ಹೊಲಿಗನ್ನೇ… ಹೇಳಿ ಎನ್ನ ಅಭಿಪ್ರಾಯ್…

  4. Laykitthu kathe.

    Hange sannadippaga Abbe helida kathe yella nempathu. Kelavu nentru kooda manage bandare kathe helugu. Kathe heluvavu bandare koshi appadu.

    Aararu nammlli hiriyaru Havyaka Makkala Katha Sangrha heli yenthadaru pusthakava matthu baraddava?
    Hange yavudoo pusthaka illadre adondu karya ayekkathu. Nammde kathe, thala thalantharntha bandadu namma samskruthiya bhagave aagi hoydu. Aa kathago maratthu hopalaga. Pusthaka roopalli hera tharekku.

    Yentha helthi.

  5. ಮನ್ನೆ ಎಂಗಳ ಊರಿಲ್ಲಿ ಒಂದು – ಅತೀ ಸಣ್ಣ ಕಥೆ ಬರವ ಸ್ಪರ್ಧೆ ಇತ್ತು. ಅದರಲ್ಲಿ ಎರಡೇ ಲೈನ್ ಕಥೆ ಬರದ ನಮ್ಮ ಪುಟ್ಟಣ್ಣಂಗೆ ಪಸ್ಟ್ ಪ್ರೈಸ್ ಬಂತು. ಕಥೆ ಓದಿ
    “ಮೊನ್ನೆ ನನ್ನ ಮದುವೆ ಆಯಿತು.ಇಲ್ಲಿಗೆ ನನ್ನ ಕಥೆ ಮುಗಿಯಿತು.”

    1. ಪ್ರಕಾಶ ಭಾವ,ಸಣ್ಣ ಕಥೆಯೋ ಇದು?? ಮುಗಿಯದಾ ಕಾದಂಬರಿ..

    2. ಹೆ..ಹೆ…ಮೊನ್ನೆ ಮದುವೆ ಆದ್ದು ಒಪ್ಪಣ್ಣಂದು… ಅವನ ನೀನು ಹೀಂಗೆ ತಮಾಷೆ ಮಾಡುದಾ? ಅಥವಾ ಈ ಕತೆ ಅವನೇ ಬರದ್ದಾ?

      1. ಒಪ್ಪಣ್ಣ ಮುನ್ನುಡಿಲಿ ಇದ್ದ°,ಅಷ್ಟೇ..

      2. ಇದು ನೆತ್ರಕೆರೆ ಶಾಮಣ್ಣನೋ?

          1. ಓ!! ಧಾರಾಳ.ಅಂದ್ರಾಣ ದಿನಂಗಳ ಮರವದು ಹೇಂಗಪ್ಪಾ? ಒಂದರಿ ಹಳತ್ತೆಲ್ಲ ನೆಂಪಾತು. ೭೭ರ ಎಮರ್ಜೆನ್ಸಿ.ಆನು ವಂಶಿ ಕಲ್ತದು.ನಮ್ಮ ಒಂದು ರಾತ್ರಿಯ ಬಸ್ಸು ಪ್ರಯಾಣ.ಇನ್ನೂ ತುಂಬಾ!! ಭಾರೀ ಖುಶಿ ಆತದ.ಪರಿಚಯ ಮಾಡ್ಸಿದ ಒಪ್ಪಣ್ಣಂಗೆ ಹೇಂಗೆ ಥ್ಯಾಂಕ್ಸ್ ಹೇಳೆಕ್ಕೋ ಗೊಂತಾವುತ್ತಿಲ್ಲೆ…

          2. ಫಣಿರಾಮಚಂದ್ರನ “ಬೀದಿಗೆ ಬಿದ್ದವರು” ಟೀವಿ ಹೊಸ ಧಾರಾವಾಹಿಲಿ ಅಭಿನಯಿಸಿದ ಹೆಸರುಗಳಲ್ಲಿ ಪುತ್ತೂರಿನ ಒಂದು ಹೆಸರು (ಕುಕ್ಕಿಲ) ಕಂಡತ್ತು. ನಿಂಗೊಗು ಆ ಹೆಸರಿಂಗೂ ಎಂತಾರು ಸಂಬಂಧ ಇದ್ದೊ ? ಸುಮ್ಮನೇ ಕುತೂಹಲಲ್ಲಿ ಕೇಳಿದೆ ಅಷ್ಟೆ.

          3. ಕುಕ್ಕಿಲ ಹೇಳಿರೆ ವಿಟ್ಲದ ಹತ್ರೆ. ಅದರಲ್ಲಿ ಬಪ್ಪ ವಿಷಯ ಗೊಂತಿಲ್ಲೆ

          4. ಎಮರ್ಜೆನ್ಸಿಲಿ ನಮ್ಮ ಗ್ರೂಪಿನ ಒಂದು ಸರ್ತಿ ಪೋಲೀಸುಗ ವಿಟ್ಳ ಕಾಲೇಜಿಂದ ಅರೆಸ್ಟ್ ಮಾಡಿ ಕೊಂಡೊಪಗ ಹನ್ನೊಂದು ಜನರಲ್ಲಿ ನೀನುದೆ ಒಬ್ಬ ಆಗಿತ್ತಿದೆ ಅಲ್ಲದಾ? ಹಾಂಗೆ ವಿವೇಕಾನಂದ ಕಾಲೇಜಿಲಿ ನಿನ್ನ ಯಕ್ಷಗಾನದ ಸ್ತ್ರೀವೇಷದೆ ನೆಂಪಾವುತ್ತು…

  6. ಶ್ಯಾಮಣ್ಣೊ ಎನಗೂ ಒ೦ದು ಕತೆ ನೆ೦ಪಾತದ ಮುಗಿಯದ್ದ ಕತೆ.ಒ೦ದು ಊರಿಲ್ಲಿ ಒ೦ದು ಮಾಪುಳುತ್ತಿ ಇದ್ದತಾಡ ಒ೦ದು ದಿನ ಅದರ ಕುಪ್ಪಾಯ ಹರುದತ್ತಡ ಅ೦ಬಗ ಅದು ಒ೦ದು ಸೂಜಿಯು ನೂಲು ತೆಕ್ಕೊ೦ಡು ಬಾವಿಕರೇಲಿ ಕೂದೊ೦ಡು ಕುಪ್ಪಯ ಹೊಲಿವಲೆ ಹೆರಟತ್ತಾಡ ಸೂಜಿಗೆ ನೂಲು ಹಾಕುವಾಗ ಸೂಜಿ ಬಾವಿಗೆ ಬಿದ್ದತ್ತಡ ಇನ್ನು ಕತೆ ನೀನೇ ಮುಗುಸೇಕು.(ಸೂಜಿ ಸಿಕ್ಕದ್ದೆ ಕತೆ ಮು೦ದೆ ಹೋಗ).ಒಪ್ಪ೦ಗಳೊಟ್ಟ್ಟಿ೦ಗೆ

    1. ಮಾವಾ, ಹೂಂ ಹೇಳಿರೆ ಬಾವಿಗೆ ಬಿದ್ದ ಸೂಜಿ ಸಿಕ್ಕುಗೋ.. ಹೂಂಗುಟ್ಟಿಗೋ೦ಡೇ ಬಾಕಿ ಆನು.

    2. (ಸೂಜಿ ಸಿಕ್ಕದ್ದೆ ಕತೆ ಮು೦ದೆ ಹೋಗ)
      ಸೂಜಿಯೇ ಆಯೆಕ್ಕಾ? ಒಂದು ದಬ್ಬಣ ಕೊಟ್ರೆ ಆಗದಾ?

    3. ಮಾಪ್ಪಳೆಗ ಬಾಂಕು ಕೊಡುದು ಎಂತಗೆ ಹೇಳಿ ಒಂದು ಸಣ್ಣ ಕತೆ.

      ಒಂದು ದಿನ ಅಲ್ಲಾನೂ ಹನುಮಂತನೂ ಆರಿಂಗೆ ಹೆಚ್ಚು ಶಕ್ತಿ ಹೇಳಿ ನೋಡುಲೆ ಒಂದು bet ಕಟ್ಟಿದವು. ಅದರಲ್ಲಿ ಇಬ್ಬರೂ ಪರಸ್ಪರ ಒಂದೊಂದು ಗುದ್ದುದು ಹೇಳಿ rule ಮಾಡಿದವು. ಅಲ್ಲಾ toss win ಆದ ಕಾರಣ 1st ಅಲ್ಲಾ ಹನುಮಂತಂಗೆ ಗುದ್ದುದು ಹೇಳಿ ತೀರ್ಮಾನ ಆತು. ಹಾಂಗೆ ಅಲ್ಲಾ ಹನುಮಂತಂಗೆ ಒಂದು ಗುದ್ದಿತ್ತು. ಅಷ್ಟಪ್ಪಗ ಹನುಮಂತಂಗೆ ಸಣ್ಣ ನುಸಿ ಕಚ್ಚಿದ ಹಾಂಗೆ ಆತಡ. ಈಗ ಹನುಮಂತನ ಸರದಿ. ಹನುಮಂತ ಬಿಗಿ ಮುಷ್ಟಿ ಹಿಡಿದು ಅಲ್ಲಾನ ಬೆನ್ನಿಂಗೆ ಒಂದು ಗುದ್ದಿತ್ತಡ. ಅಷ್ಟಪ್ಪಗ ಅಲ್ಲಾ ಕಾಣೆ..!
      ಅಂದಿಂದ ಮಾಪ್ಪಿಳ್ಳೆಗ ಅಲ್ಲಲ್ಲಿ ಪಳ್ಳಿ ಕಟ್ಟಿ “ಅಲ್ಲಾ… ಇಲ್ಲಲ್ಲಾ… ಪೋಯಲ್ಲಾ… ” ಹೇಳಿ ಬಾಂಕು ಕೊಡುಲೆ ಶುರು ಮಾಡಿದವು.

  7. ಎನಗೊಂದು ಕತೆ ಗೊಂತಿದ್ದು…
    ಒಂದು ಊರಿಲಿ ಒಂದು ಅಜ್ಜಿ ಇತ್ತಿದ್ದಡ… ಅದು ಸಣ್ಣ ಪ್ರಾಯಲ್ಲಿಯೇ ಸತ್ತೋಗಿರ್ತಡ..!!! 🙂 😉

  8. ಸಣ್ಣಾದಿಪ್ಪಗ ಪುಣ್ಯಕೋಟಿಯ ಕಥೆ ಕೇಳಿ ಎಷ್ಟುದೇ ಕೂಗಿದ್ದೆಯ…

    1. … ಅಂದು ಅರ್ಬುದ ಹೆಸರಿನ ಚಂಡವ್ಯಾಘ್ರದ ಮನಸ್ಸು ಕರಗಿತ್ತು, ಪಶ್ಚಾತಾಪ ಆತು… ಪುಣ್ಯಕೋಟಿಯ ಸತ್ಯದ.. ಧರ್ಮದ ನಡವಳಿಕೆ,ಜೀವನವ ನೋಡಿ.
      ಆದರೆ ಇಂದು ಪುಣ್ಯಕೋಟಿಯ ನೋವಿನ ಕಣ್ಣೀರು ಕಟುಕರ ಮನಸ್ಸಿನ ಏಕೆ ಮೃದು ಮಾಡ್ತಿಲ್ಲೆ? ಮೊನ್ನೆ “meet ur meat” ಹೇಳಿ ಒಂದು ವಿಡಿಯೊ ನೋಡಿದೆ Facebookಲ್ಲಿ, ಕಣ್ಣಿಲ್ಲಿ ನೀರು ಬಂತು…. 🙁 🙁

  9. ಅದು ಡೋ೦ಕ್ರು ಕೆಪ್ಪೆ ಅಲ್ಲದೊ?? 😀 🙂

    ಹಾ ಮತ್ತೆ… 😀

    {…ಅಲ್ಲಿಂದಲೇ ನೀರು, ಪಾತ್ರೆ ತೊಳೆವಲೆ, ವಸ್ತ್ರ ಒಗವಲೆ, ಮೀವಲೆ, ತೋಟಕ್ಕೆ ನೀರು ಹಾಕುಲೆ, ಎಮ್ಮೆ-ದನ ಮೈ ತೊಳವಲೆ..}

    ಯೋ ದೇವರೆ… 😛 ಈ ಬೆ೦ಗ್ಳೂರಿ೦ಗೆ ಬಪ್ಪಗ ದಾರಿಲ್ಲಿ ಸಿಕ್ಕುವ ಕೆ೦ಗೇರಿ ಹೊಳೆ ಮಣ್ಣು ಅಲ್ಲನ್ನೆ…???!!!! ಈ ತೊಳೆತ್ತ , ಒಗೆತ್ತ ನೀರಿನ ಕುಡಿಸು ಹೇ೦ಗಪ್ಪಾ??? ಉಮ್ಮಪ್ಪ…. ಆರಿ೦ಗೆ ಗೊ೦ತು…!! 😀 🙂

    1. ಯಾವ ಕೆರೆಯೋ..ಯಾವ ಊರು ಹೇಳಿ ಎನಗೂ ಗೊಂತಿಲ್ಲೆ 😉 ಒಂದು ಊರು..ಆ ಊರಿಲ್ಲಿ ಒಂದು ಕೆರೆ !!! ಕಥೆಗಳಲ್ಲಿ ಎಲ್ಲ ಹಾಂಗೆಯೇ ಅಲ್ಲದ ಇಪ್ಪದು? ನೀನು ಈ ಹೆದರಿಕೆ ಇದ್ದರೆ ನೀರೇ ಕುಡಿಯಡ !! ಕುಪ್ಪಿಲಿ ತುಂಬ್ಸಿದ ನೀರು ಸಿಕ್ಕುತ್ತನ್ನೇ, ಅದನ್ನೇ ಕುಡಿ 😉 😀 😀
      ಬೋಸ, ನೀನು ಬೆಂಗ್ಳೂರಿಂಗೆ ಏವಗ ಹೋದ್ದು? ಒಪ್ಪಣ್ಣನ ರಿಸೆಪ್ಶನ್ನಿಂಗಾ? ಅಷ್ಟು ದೊಡ್ಡ ಪೇಟೆಲಿ ದಾರಿ ತಪ್ಪಿದ್ದಿಲ್ಲೆನ್ನೇ? ಹೆಹೆಹೆ..
      ಹೇಂಗೂ ಬೆಂಗ್ಳೂರಿಂಗೆ ಹೋಯ್ದೆ ಹೇಳಿ ಆದರೆ ಆರಾರೂ ಹಲ್ಲಿನ ಡಾಕ್ಟ್ರನ ಕಂಡೂ ನಿನ್ನ ಹಲ್ಲಿನ ಸರಿ ಮಾಡ್ಸುಲಾವ್ತಿತನ್ನೆ? 😀

      1. ಆನು ಒ೦ದರಿ ಹೋಯಿದೆ ಅಕ್ಕೊ…!! 😀 ನಮ್ಮ ಮನೆ ಹತ್ರಣ ಶ೦ಬಜ್ಜ ಕರಕೊ೦ಡು ಹೊದ್ಸಿದ….
        ಬೆ೦ಗ್ಳೂರು ಪೇಟೆ ಎತ್ಲಪ್ಪಗಾ…ಯೋ…!! ದೇವರೆ.. ಬಯ೦ಕರ ನಾರಿತ್ತಿದ… ಆರೊ ಕ೦ಟುಸು ಬಿಟ್ಟವು 😀 🙂 ಹೇಳಿ ಅಜ್ಜನತ್ರೆ ಹೇಳಿಯಪ್ಪಗ ಅದು “ಕೆ೦ಗೇರಿ ಹೊಳೆ”, ಅದರಲ್ಲಿ ಈದಿ ಬೆ೦ಗ್ಳೂರಿನ ಜನ೦ಗೊ ತೊಳದು,ಮಿ೦ದು ಬಿಟ್ಟ ನೀರು… ಹಾ೦ಗೆ ಕುರೆ ನೀರು ವಾಸನೆ ಹೇಳಿದವು…. 🙂
        ಮತ್ತೆ ಬೆ೦ಗ್ಳೂರು ತಿರುಗಲೆಡಿಯಪ್ಪ….!! ಬಾರಿ ದೊಡ್ಡ ಪೇಟೆ ಅಲ್ಲದೊ… ಆನು ಒಬ್ಬನೆ ತಿರುಗಿರೆ ಕಾಣೆ ಅಪ್ಪೆ ಇದಾ..!! 😀 🙂

        {.. ಕುಪ್ಪಿಲಿ ತುಂಬ್ಸಿದ ನೀರು}

        ಕುಪ್ಪಿಲಿ ತುಂಬ್ಸಿದ ನೀರು ಕುಡುದು ಅಸಲಕ್ಕ ಅಕ್ಕೊ??? ಅನು ಮನೆಲೆ ಎನ್ನ ಅಮ್ಮ ಕೊದುಶಿ ಮಡುಗಿದ ನೀರಿ ಕುಡಿಸಿದಾ….. 🙂

        {… ಹಲ್ಲಿನ ಡಾಕ್ಟ್ರನ ಕಂಡೂ ನಿನ್ನ ಹಲ್ಲಿನ ಸರಿ ಮಾಡ್ಸುಲಾವ್ತಿತನ್ನೆ?..}

        ಹಲ್ಲಿನ ಸರಿಮಾಡಿ ಎ೦ತ್ತ ಅಪ್ಪಲಿದ್ದು?? ಕಡೆ ಹಲ್ಲು ಇದ್ದು ಸಾಕು… ಅಡಕ್ಕೆ ತಿ೦ದಲೆಡಿತ್ತು… ಸಾಕು…!! 😛

  10. ಒಳ್ಳೆ ಪ್ರಯತ್ನ.ಖ೦ಡಿತಾ ಹಳೆ ನೆ೦ಪುಗೊ ಎಲ್ಲಾ ಬ೦ತು.ಅ೦ದು ಬಯಿ ಒಡದು ಕತೆ ಕೆಳ್ತದು,ಚ೦ದಮಾಮಕ್ಕೆ ಬೇಕಾಗಿ ಒ೦ದಷ್ಟು ಪೆಟ್ಟು ಕುಟ್ಟು ಎಲ್ಲ ಚ೦ದಕೆ ನೆ೦ಪಾತು.ಇ೦ದು ಎನ್ನ ಪುಳ್ಳಿ ಕಥೆ ಹೇಳಿ ಅಜ್ಜ ಹೇಳುವಾಗ ಈ ಹಳೆ ಕತಗಳೇ ಎನಗೆ ಶ್ರೀರಕ್ಷೆ.ಸುವರ್ಣಿನೀಗೆ ಒ೦ದು ದೊಡ್ಡ Thanks.ಇನ್ನು ಪಾಯಸದ ಕತೆಯೋ ತಟ ಪಟ ಹನಿಯಪ್ಪನ ಕತೆಯೋ,ಕಾಕೆ ಗುಬ್ಬಿ ಕತೆಯೊ ಬರಲಿ.ಎನ್ನ ಹಾ೦ಗಿಪ್ಪವು ಹಳೆ ನೆ೦ಪು ಮಾಡಿ ಕೂದೋಳಿತಿಯೊ೦.ಒಪ್ಪ೦ಗಳೊಟ್ಟಿ೦ಗೆ

    1. ನಿಂಗಳ ಹತ್ತರೆ ಎಂತಾರು ಕಥೆ ಇದ್ದರೆ ಹೇಳಿ , ಇಲ್ಲಿ ಹಾಕುವ. ಬೈಲಿನೋರಿಂಗೆ ಎಲ್ಲೋರಿಂಗೂ ಓದುಲಕ್ಕು :).
      ಎನಗೆ ಸಣ್ಣಾದಿಪ್ಪಗ ಬಾಲಮಂಗಳ,ಚಂದಾಮಾಮ, ಇತ್ಯಾದಿ ಓದಿದ್ದು ನೆಂಪಾವ್ತು. ಅದರೊಟ್ಟಿಂಗೇ ಆನು ಸಣ್ಣಾದಿಪ್ಪಗ ಟಿವಿ ಲಿ ನೋಡಿದ ಕೆಲವು ಕಾರ್ಟೂನುಗಳೂ ನೆಂಪಾವ್ತು ಡಿಸ್ನಿಲ್ಯಾಂಡ್,ಮಿಕಿ ಮೌಸ್, ಟಾಮ್ ಆಂಡ್ ಜೆರ್ರಿ, ಮೋಗ್ಲಿ ಇತ್ಯಾದಿ.ಕೆಲವೆಲ್ಲ ಮರತ್ತೇ ಹೊಯ್ದು :(. ’ಟಾಮ್ ಆಂಡ್ ಜೆರ್ರಿ ಶೋ’ ಆನು ಈಗಳೂ ನೋಡ್ತೆ !! ಪುಚ್ಚೆ ಎಲಿಯ ಎಂದಿಂಗೂ ಮುಗಿಯದ್ದ ಕಥೆ !

  11. ಒಪ್ಪಣ್ಣ ಮತ್ತೆ ಶ್ರೀಮತಿ ಒಪ್ಪಣ್ಣಂಗೆ ಶುಭಾಶಯ. ನಿಂಗೊ ಈ ಹವ್ಯಕ ಭಾಷೆಯ ಬ್ಲಾಗ್ ಸುರು ಮಾಡಿದ್ದು ಭಾರಿ ಲಾಯ್ಕಾಯಿದು. ಇದರ ಓಪನ್ ಮಾಡಿಗೊಂಡು ಕೂದರೆ ಒಂದರಿಯಾಣ ಉದಾಸಿನ ಎಲ್ಲ ಹೋವ್ತು. ಊರಿಂಗೆ ಹೋಗಿ ನಮ್ಮ ಬೇಕಾದವರ ಎಲ್ಲ ಕಂಡು ಮಾತಾಡಿದ ಹಾಂಗೆ. ನಿಂಗೊಗೆ ತುಂಬಾ ಧನ್ಯವಾದ.
    ಸುವರ್ಣಿನಿಗೆ: ಆನು ಹೇಳಿದ ಕತೆ ಎನಗೇ ರಜ್ಜ ಮರತ್ತು ಹೋಯಿದು. ಕತೆ ಹೇಳುವಗ ನಿಂಗೊ ಮಕ್ಕೊ ಎಲ್ಲ ಬಾಯಿ ಬಿಟ್ಟ್ಡು ಕೇಳಿಗೊಂಡಿದ್ದ ಹಾಂಗೆ ಈಗ ನೀನಂದೆ ಕೇಳ್ತು.ನಿಂಗೊ ಸಣ್ಣಾದಿಪ್ಪಗ, ಮತ್ತೆ ಎನ್ನ ಬಾಲ್ಯವ ಎಲ್ಲ ನೆಂಪು ಮಾಡಿದೆ ನೀನು.
    ಬೈಲಿನೋರಿಂಗೆಲ್ಲೊರಿಂಗೂ ನಮಸ್ಕಾರ.

    1. ನೀನು ಹೇಳೀದ ಸಾಬಕ್ಕಿ ಪಾಯಸದ ಕಥೆ ಎನಗೆ ಇನ್ನೂ ನೆಂಪಿದ್ದು, ಅಂಬಗ ಆನು ಅದರ imagine ಮಾಡಿಗೊಂಡಿತ್ತಿದ್ದೆ, ನಮ್ಮ ಜೆಪಿ ನಗರದ (ಪುಟ್ಟೇನಹಳ್ಳಿಯ) ಮನೆಯ ಪಕ್ಕದ ಖಾಲಿ ಸೈಟಿಲ್ಲಿ ಎಲ್ಲ ಸಾಬಕ್ಕಿ ಪಾಯಸ ತುಂಬಿ ಹರಿವ ಹಾಂಗೆ 🙂 ಈಗ ಗ್ರೇಶಿರೆ ನೆಗೆ ಬತ್ತು 🙂 ನೀನಂದೆ ಹಾಂಗೆಲ್ಲ ಎಂತಾರು imagine ಮಾಡ್ತಾಯ್ಕು,ಈಗಾಣ ಸಂದರ್ಭಕ್ಕೆ ತಕ್ಕ ಹಾಂಗೆ !! ಅಲ್ಲದಾ?

  12. ಡಾಗುಟ್ರಕ್ಕ,ಈ ಕಥೆ ವಿಧಾನಸೌಧಲ್ಲಿಯೂ ಹೇಳೆಕ್ಕು.
    ಕೆಪ್ಪೆ = ಎಡ್ಡಿ/ರೆಡ್ಡಿ / ಶಾಸಕರು
    ಬುದ್ಧಿವಂತ ಮಾಣಿ = ಆದಾಯಕರ ಇಲಾಖೆ.
    ವಾ.ವಾ.ಬೊಂಬಾಟ್ ಆಗೈತೆ ಗುರೂ.

  13. kathe sannadadaru artha, neethi iddu. Janango ee neethiya artha madikondare namma jeevana sukhamayavakku.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×