Oppanna.com

“ಕಿರುಬೆರಳು ಬೀಗಿರೆ ಎಷ್ಟು ಬೀಗ್ಗು”–(ಹವ್ಯಕ ನುಡಿಗಟ್ಟು-94)

ಬರದೋರು :   ವಿಜಯತ್ತೆ    on   02/07/2017    15 ಒಪ್ಪಂಗೊ

 

“ಕಿರು ಬೆರಳುಬೀಗಿರೆ ಎಷ್ಟು ಬೀಗ್ಗು!”-(ಹವ್ಯಕ ನುಡಿಗಟ್ಟು-94)

 

ಮದಲಿಂಗೆ ಹೇಳಿರೆ, ಒಂದೈವತ್ತು ವರ್ಷ ಹಿಂದಂಗೊರೆಗೆ  ಹವ್ಯಕರ ಪ್ರತಿಯೊಂದು  ಮನೆಲಿಯೂ ತುಂಬಿದ ಸಂಸಾರ!.ಗೆಂಡ-ಹೆಂಡತಿಗೆ ಹತ್ತು-ಹನ್ನೆರಡು ಮಕ್ಕೊ!.ದಂಪತಿಗೊ ಮೂರ್ನಾಲ್ಕು ಜೆನ,ಕೆಲವು ಕಡೆ ಹೆಚ್ಚಿಗಿಪ್ಪಲೂ ಸಾಕು.(ಮಗಳಕ್ಕೊ ಮದುವೆಯಾಗಿ ಹೋಗಿರ್ತವು). ಇವರ ಅಬ್ಬೆ-ಅಪ್ಪᵒ (ಪ್ರಾಯ ಆದೋರು), ಈ ನಾಲ್ಕೈದು ದಂಪತಿಗಳ ಎಲ್ಲಾ ಮಕ್ಕಳೂ ಒಟ್ಟು ಸೇರಿ, ಹತ್ತ್ಮೂವತ್ತೋ,ಐವತ್ತೋ, ಜೆನ ಒಂದು ಮನೆಲಿಕ್ಕಿದ. ರಜೆಲಿ ಅಜ್ಜನಮನೆಲಿ ಸೇರುದು. ಮಾಂಬಳವೋ ಹಪ್ಪಳವೋ ಪುಳ್ಳಿಯಕ್ಕೊಲ್ಲ ಸೇರುವದು ಅಜ್ಜಯಕ್ಕಳೊಟ್ಟಿಂಗೆ ಸಕಾಯಕ್ಕೆ.(ಈಗಾಣವು ಖಂಡಿತ ಸೇರವು ಅನುಮಾನ ಇಲ್ಲೆ).

ಆನು ಸಣ್ಣದಿಪ್ಪಗ ಒಂದು ದೊಡ್ಡರಜೆಲಿ, ಮಾವಿನಣ್ಣಿನ ಸಮಯ.ಅಜ್ಜನ ಮನೆಲಿ ಬೆಲ್ಲಮಾವು ಹೇಳಿ ಇಕ್ಕಿದ. “ಹೆರ್ಕಿ ತಂದದು ಸಾಲ ಮಾಂಬಳ ಎರೆಕಾರೆ ಇನ್ನೂ ರಜ ಬೇಕಾತು” ಹೇಳಿ ಅಜ್ಜಿ ಹೇಳಿಯಪ್ಪಗ; ಅಜ್ಜಿಯ ಸಣ್ಣ ಪುಳ್ಳಿ ಒಬ್ಬᵒ  “ಆನು ಮರಕ್ಕೆ ಹತ್ತಿ ಮರಂದ ಅಲುಗುಸಿ ತತ್ತೆ”. ಹೇಳಿ ಶಿಫಾರಸ್ಸು ಕೊಚ್ಚಿಗೊಂಡು ಓಡಿದᵒ. ಸಾಹಸಿ ಸಣ್ಣ ಪುಳ್ಳಿ.

ಆದರೆ ಅವಂಗೆ ಎಡ್ತತ್ತಿಲ್ಲೆ.ಅವᵒ ಅಂತೇ ಕೈಬೀಸಿಗೊಂಡು ಬಂದಪ್ಪಗ ಅಜ್ಜᵒ ; “ಕಿರು ಬೆರಳು ಬೀಗಿರೆ ಎಷ್ಟು ಬೀಗ್ಗು. ನೀನೊಂದರಿ ಮರಹತ್ತಿ ಅಲುಗುಸು ಒಪ್ಪಕುಞ್ಞ್ “ ಹೇಳಿ ಮಾವನ ಹತ್ತುಸಿ,  ಮಾವಿನಹಣ್ಣು ಒಂದು ಕುರುವೆ ತೆಕ್ಕಂಡು ಬಂದೊವು ಹೇಳುವೊಂ.

ತನ್ನಿಂದ ಹಾಯದ್ದ ಕೆಲಸಾದರೂ ಉತ್ಸಾಹ ತೋರುಸುದು ಮಾತ್ರ. ಅದರ  ಮಾಡ್ಳೆ ಎಡಿಗಾಗದ್ದರೆ  ಹೆರಿಯೊವು  ಈ ಗಾದೆಯ ಬಳಸುತ್ತೊವು.

—–೦—–

 

15 thoughts on ““ಕಿರುಬೆರಳು ಬೀಗಿರೆ ಎಷ್ಟು ಬೀಗ್ಗು”–(ಹವ್ಯಕ ನುಡಿಗಟ್ಟು-94)

  1. ನೆಗೆ ಮಾಡ್ತಾಂಗೆ ಇದ್ದರೂ ವ್ಯಂಗ್ಯ ಲಾಯಕ ಇದ್ದಪ್ಪೋ

  2. ಕಿಂಕಿಣಿ ಬೆರಳು ಬೀಗಿರೆ ಎಷ್ಟು ಬೀಗುಗು?
    ಗಾದೆ ಆನು ಕೇಳಿದ್ದೆ. ಒಳ್ಳೆದಾಯಿದು.ಉದ್ದು ಉಬ್ಬಿರೆ ಮದ್ದಳೆ ಅಕ್ಕೋ? ಹೇಳಿ ಹೇಳ್ತವು.

  3. ಕಿಂಕಿಣಿ ಬೆರಳು ಹೇಳಿರೆ ಸರಿ ಆವುತಿತ್ತು

  4. ವಿಜಯಕ್ಕ, ಮರಿ ಪರಬ್ಬೆ ಆಂಟಲಾ ಬಿಸ ಪರಬ್ಬೆ ಅತ್ತು ಹೇದು ಹೇಳುವ ಹಾಂಗೆ ನಿನ್ನ ಗಾದೆ ಹಳತ್ತಾದರೂ ವಿಷಯ ಅಗಾಧವಾದುದು ವಿಜಯಕ್ಕ. ಧನ್ಯವಾದಗಳು.

  5. ಕಿಂಕಿಣಿ ಬೆರಳು ಬೀಗಿರೆ ಎಷ್ಟು ಬೀಗುಗು. ನುಡಿಗಟ್ಟು ಲಾಯಕಿದ್ದು. ಸಣ್ಣವು ಯೇವಾಗಳೂ ಸಣ್ಣವೇ, ಅವಕ್ಕೆ ದೊಡ್ಡ ಕಾರ್ಬಾರು ಮಾಡ್ಳೆಡಿಯ.
    ಇದಕ್ಕೆ ಸರಿ ವಿರುದ್ಧ ನುಡಿಗಟ್ಟು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಹೇಳುವನೊ ವಿಜಯಕ್ಕ ?

    1. ಬೊಳುಂಬು ಗೋಪಾಲ ಅಂಬಗ ಕಿಂಕಿಣಿ ಬೆರಳು ಹೇಳಿಯೇ ಬರವನೋ? ಎನ್ನ ಹೆರಿಯವು ಹಾಂಗೆ ಹೇಳೆಂಡಿದ್ದರೂ ಈಗಾಣವು ಕೆಲವು ಜೆನ ಕಿರುಬೆರಳು ಹೇಳ್ತ ಕಾರಣ ಆನು ಹಾಂಗೆ ಬರದೆ.

  6. ಪ್ರತಿಯೊಂದು ನುಡಿಗಟ್ಟಿಂಗೂ ಒಂದೊಂದು ಸೂಚಿತ ಅರ್ಥ.

    1. ಅಪ್ಪು ಭಾವಯ್ಯ. ಹಾಂಗಿದ್ದ ಸಂದರ್ಭಕ್ಕೆ ಹುಟ್ಟಿದ ಮಾತಿದ ಅದು.. ಇಲ್ಲಿ ಅಜ್ಜನಮನೆ ಅಜ್ಜ ’ಕಿಂಕಿಣಿ ಬೆರಳು’ ಹೇಳುಗು. ಆನಿಲ್ಲಿ ಕಿರು ಬೆರಳೂಳಿ ಉಲ್ಲೇಖ ಮಾಡಿದ್ದೆ .ಎಲ್ಲೋರಿಂಗು ಆ ಶಬ್ಧ ಅರ್ಥಆಗಾಳಿ.

    1. ನಿಂಗೊ ಸ್ಪಂಧಿಸಿದ್ದು ಕೊಶಿಯಾತು ಶಂಕರಣ್ಣ…ಸಾದಾರಣ ಗಾದಗೊ ಜಾನಪದೀಯಲ್ಲಿ, ಮಾತಿಲ್ಲಿ ಬಳಸುತ್ತಾ ಬಂದದು. ಕೆಲಾವು ನವಗೊಂತಿರುತ್ತಿಲ್ಲೆ. ಎನಗೂ ಗೊಂತಿಲ್ಲದ್ದು ಅದೆಷ್ಟೋ ಇಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×