Oppanna.com

ಕೂಳಕ್ಕೋಡ್ಳು ಶ್ರೀಮತಿ ಪಾರ್ವತಿಗೆ, 2014ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ

ಬರದೋರು :   ವಿಜಯತ್ತೆ    on   27/10/2014    11 ಒಪ್ಪಂಗೊ

ಕೊಡಗಿನಗೌರಮ್ಮ ಸ್ಮಾರಕ ದತ್ತಿನಿಧಿ ಹಾಂಗೂ ಗೋಕರ್ಣಮಂಡಲ ಮಾತೃಮಂಡಳಿ ಸಹಯೋಗಲ್ಲಿ ಅಖಿಲಭಾರತ ಮಟ್ಟದ ವ್ಯಾಪ್ತಿಲಿ ಪ್ರತಿವರ್ಷ ನೆಡದುಬಪ್ಪಹಾಂಗೆ ಈ ಸರ್ತಿಯೂ ಒಂದು ಕಥಾಸ್ಪರ್ಧೆ ನೆಡೆಶಿ ಅದರ ಫಲಿತಾಂಶ ಬಯಿಂದು. ಪ್ರಶಸ್ತಿ ವಿಜೇತೆ ತಂಗೆಕ್ಕೊ ಪ್ರಥಮಃ- ಈ ಸರ್ತಿ ಶ್ರೀಮತಿ ಪಾರ್ವತಿ ಕೂಳಕ್ಕೋಡ್ಳು ಬರದ “ಕಿಟ್ಟಣ್ಣ” ಹೇಳ್ತ ಕತಗೆ ಮೊದಲನೆ ಬಹುಮಾನ ಸಿಕ್ಕಿದ್ದು. ಕೂಳಕ್ಕೋಡ್ಳು ಮಹಾಬಲೇಶ್ವರ ಭಟ್ಟರ ಸಹಧರ್ಮಿಣಿಯಾದ ಈ ತಂಗಗೆ ಎರಡು ವರ್ಷ ಹಿಂದೆ ಇದೇವೇದಿಕೆಲಿ ದ್ವಿತೀಯಬಹುಮಾನ ಬಯಿಂದು.ಅದರಿಂದ ಮತ್ತೆ ಅವು ಸಾಹಿತ್ಯ ಕ್ಷೇತ್ರದ ಬೇರೆ ಗೆಲ್ಲುಗಳಲ್ಲೂ ಕೈಯಾಡಿಸುತ್ತಾ ಇದ್ದು; ಕೆಲವು ಪೇಪರುಗೊಕ್ಕೆಲ್ಲ ಕತೆ,ಲೇಖನ, ಬರದು ಪ್ರಕಟ ಆವುತ್ತಾ ಇದ್ದು, ನಮ್ಮ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಆವುತ್ತಾ ಇಪ್ಪ “ವಿಷುವಿಶೇಷ ಸ್ಪರ್ಧೆ” ಲಿಯೂ ಭಾಗವಹಿಸಿ ಹೋದ ವರ್ಷ ಹಾಸ್ಯಲೇಖನಕ್ಕೆ ದ್ವಿತೀಯ,ಈ ವರ್ಷ ಪ್ರಬಂಧಕ್ಕೆ ಪ್ರಥಮ ಸಿಕ್ಕಿದ್ದು ಹೇಳ್ವದರ ಇಲ್ಲಿ ನೆಂಪುಮಾಡಿಗೊಂಬೊಂ.ಹಾಂಗೇ ಕಾಸರಗೋಡಿನ ಕರಾವಳಿಸಾಂಸ್ಕೃತಿಕ ಪ್ರತಿಷ್ಠಾನದವು ನೆಡೆಶುವ ಅಂಚೆಕಾರ್ಡು ಕತಾಸ್ಪರ್ಧೆ,ರಾಜ್ಯ ಮಟ್ಟದ ಕವನ ಸ್ಪರ್ದೆಲಿಯೂ ಬಹುಮಾನ ಬಯಿಂದು. “ಮೈಸೂರು ಗ್ರಾಮಾಂತರ ಬುದ್ಧಿಜೀವಿಬಳಗ” ಹೇಳ್ತ ಒಂದು ಸಂಘದವರ ಕವನ ಸ್ಪರ್ದೆಲಿಯೂ ಈ ತಂಗಗೆ ಬಹುಮಾನ ಬಯಿಂದು.

ಶ್ರೀಮತಿ ಪಾರ್ವತಿ ಕೂಳಕ್ಕೋಡ್ಳು

ದ್ವಿತೀಯಃ-ಎರಡ್ನೇ ಬಹುಮಾನ ಸೋದರಿ,ಶ್ರೀಮತಿ ಸಿಂಧುರಾವ್ ಇವರ “ಪಾರಿಜಾತ” ಕತಗೆ ಬಯಿಂದು.ಉತ್ತರಕನ್ನಡ ಸಾಗರ ಮೂಲದವಾದ ಸಿಂಧುರಾವ್, ತನ್ನ ಪತಿ,ಎರಡು ಪುಟ್ಟ ಮಕ್ಕಳೂ ಇಪ್ಪ ಸಂಸಾರ. ಬೆಂಗಳೂರಿಲ್ಲಿ ಸಾಫ಼್ಟ್ ವೇರ್ ಕಂಪೆನಿಯೊಂದರ ಉದ್ಯೋಗಿ. ಇವರ ಕೆಲವು ಕತಗೊ ಪತ್ರಿಕೆಲಿ ಪ್ರಕಟ ಆಯಿದು.ಹಾಂಗೇ ’ಕೆಂಡಸಂಪಿಗೆ’ ಹೇಳ್ತ ಅಂತರ್ಜಾಲ ವೆಬ್ ಮ್ಯಾಗಜಿನ್ ಲ್ಲಿ ಕಾಲಂ ಬರೆತ್ತಾ ಇದ್ದಿದ್ದವು. ತನ್ನ ಸ್ವಂತ ಬ್ಲಾಗಿಲ್ಲಿ ಕತೆ,ಕವನ ಬರೆತ್ತಾ ಇದ್ದವು.

ಶ್ರೀಮತಿ ಸಿಂಧು ಬೆಂಗಳೂರು

ತೃತೀಯಃ-ಈಗ ಮೂರ್ನಾಲ್ಕು ವರ್ಷಂದ ಏವತ್ತೂ ಕತೆ,ಕವನ,ಲೇಖನ ಬರೆತ್ತಾ ಇದ್ದು ಎಲ್ಲೋರಿಂಗೂ ಪರಿಚಯ ಇಪ್ಪ;ಧರ್ಮತ್ತಡ್ಕ ಚೆಕ್ಕೆಮನೆ ವೆಂಕಟಕೃಷ್ಣಭಟ್ಟರ ಧರ್ಮಪತ್ನಿ ಪ್ರಸನ್ನಾ.ವಿ. ಈ ತಂಗಗೆ ಮೂರನೇ ಬಹುಮಾನ ಸಿಕ್ಕಿದ್ದು.2010 ರಲ್ಲಿ ಇದೇ ವೇದಿಕೆಲಿ ಇವಕ್ಕೆ ಎರಡ್ನೇ ಬಹುಮಾನ ಬಯಿಂದು.ಅದರಿಂದ ಮತ್ತೆ ಈ ಪ್ರಸನ್ನ…ಮನೆಒಳ,ಎಷ್ಟುಅಡಿಗೆಮಾಡಿತ್ತೋಅಷ್ಟೇಸಾಹಿತ್ಯಕೃಷಿಯೂ ಮಾಡುಗು!.ಹೊಸದಿಗಂತ,ಉದಯವಾಣಿ,ಪತ್ರಿಕೆಲಿ, ಎಲ್ಲಾ ನಿಯತಕಾಲಿಕಂಗಳ ವಿಶೇಷಾಂಕಲ್ಲಿ ಇದರ ಕತೆಯೋ ಲೇಖನವೋ ಇಕ್ಕು!. ಹಾಂಗೇ ಆಚ ವರ್ಷ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದಲೂ ಪ್ರಸನ್ನನ ಕತಗೆ ದ್ವಿತೀಯ ಬಹುಮಾನ ಬಯಿಂದು.ಮತ್ತೆ..ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನಂದ ಕತೆ,ಕವನಕ್ಕೆ ಪುರಸ್ಕಾರ,ಮೈಸೂರು ಗ್ರಾಮಾಂತರ ಬುದ್ಧಿಜೀವಿಗಳ ಬಳಗಂದ ಕವನಕ್ಕೆ ಪುರಸ್ಕಾರ ಸಿಕ್ಕಿದ್ದು. ಹೀಂಗೆ ಜನಮಾನಸಲ್ಲಿ ಗುರುತಿಸಿಯೊಂಡ ಅಪರೂಪದ ಗೃಹಿಣಿ ಪ್ರಸನ್ನ!.

ಶ್ರೀಮತಿ ಪ್ರಸನ್ನಾ.ವಿ. ಚೆಕ್ಕೆಮನೆ

ತೀರ್ಪುಗಾರರುಃ-ನವಗೆ ಬಂದ ಕತಗಳ ಮೌಲ್ಯಮಾಪನ ಮಾಡ್ಳೆ ಸಂತೋಷಲ್ಲಿ ಒಪ್ಪಿಗೊಂಡವು ಮೂರುಜೆನ ಸಾಹಿತ್ಯ ವರೇಣ್ಯರು.ಮೊದಲನೆಯದಾಗಿ, ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಪ್ರೊಫೆಸರಾಗಿದ್ದು ಈಗ ವಿಶ್ರಾಂತ ಜೀವನ, ಸಾಹಿತ್ಯಕ್ಷೇತ್ರವನ್ನೇ ಮುಂದುವರ್ಸಿಗೊಂಡಿಪ್ಪ ನಮ್ಮ ಅರ್ತಿಕಜೆ [ವಿ.ಬಿ.ಅರ್ತಿಕಜೆ] ಅಣ್ಣ. ಎರಡ್ನೇವು ಕನ್ನಡ ವಿಭಾಗದ ಮಾಸ್ಟ್ರಾಗಿದ್ದು ಈಗ ನಿವೃತ್ತಿ ಜೀವನಲ್ಲೂ ಗಡಿನಾಡು ಕಾಸರಗೋಡಿನ ಸಿರಿಗನ್ನಡ ವೇದಿಕೆಯ ಅಧ್ಯಕ್ಷರೂ ಹತ್ತು ಹಲವು ಶಿಬಿರ ನೆಡೆಶ್ತಾ ಇಪ್ಪವೂ ಆದ ವಿ.ಬಿ.ಕುಳಮರ್ವ. ಇನ್ನೊಬ್ಬ ನೀರ್ಚಾಲು ಶಾಲೆಲಿ ಕಲಾವಿಭಾಗದ ಮಾಸ್ಟ್ರಾಗಿದ್ದು ಈಗ ವಿಶ್ರಾಂತ ಜೀವನಲ್ಲೂ ಸಾಹಿತ್ಯ ಕೃಷಿಮಾಡ್ತಾ ಇಪ್ಪ ಬಾಲಮಧುರಕಾನನ[ ನಮ್ಮಒಪ್ಪಣ್ಣ ಬಯಲಿನ ಬಾಲಣ್ಣ] .

ಬಹುಮಾನ ಕೊಡ್ತ ಸಮಾರಂಭಃ- ಇದೇ ನವೆಂಬರ 4ಕ್ಕೆ ಮಾಣಿಮಠಲ್ಲಿ ಅಪ್ಪ “ಲಲಿತಾಸಹಸ್ರನಾಮ ಹವನ” ಸಂದರ್ಭಲ್ಲಿ ಮಜ್ಜಾನ ಮೇಗೆ 2-30ಕ್ಕೆ ಕಾರ್ಯಕ್ರಮ ಮಾಡುವದು ಹೇಳಿ ನಿರ್ಣಯಿಸಿದ್ದು. ಎಲ್ಲರೂ ಬಂದು ನಮ್ಮ ಹವ್ಯಕ ಅಕ್ಕ-ತಂಗೆಕ್ಕಳ ಸಾಹಿತ್ಯ ಪ್ರತಿಭೆಯ ಗುರುತಿಸಿಗೊಂಡು ಇನ್ನೂ ಮುಂದೆ ಬೆಳವಲೆ ಬೆನ್ನುತಟ್ಟುವ ಕೆಲಸ ಮಾಡುವೊಂ.

11 thoughts on “ಕೂಳಕ್ಕೋಡ್ಳು ಶ್ರೀಮತಿ ಪಾರ್ವತಿಗೆ, 2014ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ

  1. ಶ್ರದ್ಧೆಲಿ ಈ ಸ್ಪರ್ಧೆಯ ಯಶಸ್ವಿಯಾಗಿ ಪ್ರತಿ ಒರಿಶವು ನೆಡೆಶಿಗೊ೦ಡು ಬಪ್ಪ ನಿ೦ಗೊಗೆ ಹಾ೦ಗೂ ಸ್ಪರ್ಧೆಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಕ್ಕೆ ಹಾ೦ಗೂ ವಿಜೇತರಿ೦ಗೆ ಅಭಿನ೦ದನಗೊ.

  2. ಶುಭ ಹಾರೈಸಿದ ಎಲ್ಲೋರಿಂಗೂ ಹಾರ್ದಿಕ ಪ್ರಣಾಮ೦ಗೊ .

  3. ಒಪ್ಪಕೊಟ್ಟ ತಂಗೆ, ಲಲಿತಾಲಕ್ಷ್ಮಿಗೆ { ಎರಡು ವರ್ಷ ಹಿಂದಾಣ ಗೌರಮ್ಮ ಪ್ರಶಸ್ತಿ ವಿಜೇತೆ },ತೀರ್ಪುಗಾರರಲ್ಲಿ ಒಬ್ಬರಾದ ಬಾಲಣ್ಣಂಗೆ ,ಕೇಶವಪ್ರಕಾಶಂಗೆ,ಇಂದಿರತ್ತಗೆ ಧನ್ಯವಾದಂಗಳೊಟ್ಟಿಂಗೆ , ನಿಂಗಳ ಶುಭಾಶಯಕ್ಕೂ ಸಂತೋಷಾತು

  4. ಭಾಗವಹಿಸಿದ ಕಥೆಗಾರ್ಥಿಯರಿಗೂ ಸಂಯೋಜಿಸಿದ ವಿಜಯಕ್ಕಂಗೂ ತುಂಬ ಧನ್ಯವಾದಗಳು. ಇದು ಹೀಗೆ ಮುಂದುವರಿಯಲೆಂದು ಆಶಿಸುತ್ತೇವೆ.

  5. ಹರೇರಾಮ. ಕೊಡಗಿನ ಗೌರಮ್ಮ ಕಥಾಸ್ಪರ್ಧೆಲಿ ಭಾಗವಹಿಸಿ ವಿಜೇತರಾದ ಎಲ್ಲಾ ಸೋದರಿಯರಿಗೆ ಅಭಿನಂದನೆಗಳು. ಈ ಕೆಲಸವ ರಾಶಿ ನಿಷ್ಠೆಯಿಂದ, ಸಮರ್ಥವಾಗಿ ನಿರ್ವಹಿಸ್ತ್ನಿದ್ದ ವಿಜಯಕ್ಕನ ಕಾರ್ಯಸಾಮರ್ಥ್ಯಕ್ಕೂ ಒಂದು ಪ್ರೀತಿಪೂರ್ವಕ ನಮಸ್ಕಾರ .ಹವ್ಯಕಭಾಷೆಯ ಬೆಳವಣಿಗೆಯಲ್ಲಿ ಕೊಡಗಿನಗೌರಮ್ಮ ದತ್ತಿ ನಿಧಿ ಸಂಸ್ಥೆದು ಒಂದು ದೊಡ್ಡ ಕಾಣ್ಕೆ ಇದ್ದು ಹೇಳುದು ನನ್ನ ಅಂತರಂಗದ ಅಭಿಮಾನದ ಮಾತು. ಹರೇರಾಮ.

  6. ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಲಿ ಬಹುಮಾನ ಪಡೆದ ಮೂರೂ ಜನ ಕಥೆಗಾರ್ತಿ ಅಕ್ಕಂದಿರಿಂಗುದೆ ಶುಭ ಹಾರೈಕೆಗೋ .ನಿಂಗಳ ಸಾಹಿತ್ಯ ಕೃಷಿ ನಿರಂತರವಾಗಿ ನಡೆಯಲಿ ಹೇಳಿ ಆಶಯ.

  7. ಒಪ್ಪಕೊಟ್ಟವಕ್ಕೆ ಧನ್ಯವಾದಂಗೊ ಕತೆಯ ಕಳೆದ ವರ್ಷ ಹಾಕಿದಹಾಂಗೆ ಹವ್ಯಕವಾರ್ತೆಲಿಯೂ ಒಪ್ಪಣ್ಣ ಬಯಲಿಲ್ಲಿಯೂ ಹಾಕುತ್ತೆ -ಕಾರ್ಯದರ್ಶಿ ,ವಿಜಯತ್ತೆ.

  8. ಕಥಾ ಸ್ಪರ್ಧೇಲಿ ಭಾಗವಹಿಸಿದ ಎಲ್ಲಾ ಅಕ್ಕ೦ದ್ರಿ೦ಗೆ ಶುಭ ಹಾರೈಕೆಗೋ . ಬಹುಮಾನ ವಿಜೇತರಿಂಗೆ ಅಭಿನಂದನೆಗೋ.
    ಹವ್ಯಕ ಭಾಷಾಸಾಹಿತ್ಯದ ಬೆಳವಣಿಗೆಗೆ ವೇದಿಕೆಯಾಗಿ ನಿರಂತರ ಚಟುವಟಿಕೆಲಿ ಇಪ್ಪ “ಕೊಡಗಿನ ಗೌರಮ್ಮ ದತ್ತಿನಿಧಿ” ಯ ಬಂಧುಗೊಕ್ಕೆ ಅನಂತ ಧನ್ಯವಾದ.

  9. ಬಹುಮಾನ ವಿಜೇತರಿಂಗೆ ಹಾಂಗೂ ಭಾಗವಹಿಸಿದವಕ್ಕೆ ಅಭಿನಂದನೆ.

  10. ಅಭಿನಂದನೆಗೊ ಎಲ್ಲರಿಂಗೂ .ಕತೆಯ ಹವ್ಯಕ ವಾರ್ತೆ ಪತ್ರಿಕೆಲೂ ಈ ಬೈಲಿಲೂ ಹಾಕುವಿರೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×