Oppanna.com

“ಗಟ್ಟಿ ಆದರೆ ರೊಟ್ಟಿ, ತೆಳ್ಳಂಗಾದರೆ ತೆಳ್ಳವು” {ಹವ್ಯಕ ನುಡಿಗಟ್ಟು-62}

ಬರದೋರು :   ವಿಜಯತ್ತೆ    on   01/08/2016    6 ಒಪ್ಪಂಗೊ

ಗಟ್ಟಿ ಆದರೆ ರೊಟ್ಟಿ, ತೆಳ್ಳಂಗಾದರೆ ತೆಳ್ಳವು”-{ಹವ್ಯಕ ನುಡಿಗಟ್ಟು-62}

ಕೆಲವು ವರ್ಷ ಹಿಂದೆ ಒಂದು ಕೂಡು ಕುಟುಂಬಲ್ಲಿ ಪಾಲು ಪಂಚಾತಿಗೆ ಸುರುವಾತು.ಆ ಮನೆಲಿ ಮೂರುಜೆನ ಅಣ್ಣ-ತಮ್ಮಂದ್ರು.ಎರಡು ಜೆನ ಅಕ್ಕ-ತಂಗೆಕ್ಕೊ ಎಲ್ಲೋರಿಂಗೂ ಮದುವೆ ಆಗಿ ಮಕ್ಕಳೂ ಆಯಿದೊವು. ಪಾಲಪ್ಪಗ ಹೆರಿಯವನೂ ಕಿರಿಯವನೂ ತಮ್ಮ,ತಮ್ಮ ತರ್ಕಲ್ಲಿ ತನ್ನ- ತನ್ನ ಮೂಗಿನ ನೇರಕ್ಕೇ ಆಯೆಕ್ಕೂಳಿ ಮಾತು ತೆಗದರೆ; ಎರಡ್ನೇವ ಹೆಚ್ಚಿನ ಚರ್ಚಗೆ ಹೋಗದ್ದೆ ತಟಸ್ಥವಾಗಿಪ್ಪದನ್ನೇ ರೂಡಿ ಮಾಡಿಗೊಂಡᵒ. ಕೂಸುಗೊಕ್ಕೆ ಜಾಗೆಲಿ ಹಿಶೆ ಕೊಡ್ಳಿಲ್ಲೆ. ಅಬ್ಬೆಯ ಚಿನ್ನಲ್ಲಿ  ರಜ,ರಜ ಕೊಡುವೋಳಿ  ದೊಡ್ಡವᵒ ಹೇಳುವಗ “ಅದಲ್ಲ.., ಆಸ್ತಿಲಿಯೂ  ರಜ ರಜ ಪಾಲುಕೊಡ್ಳೇ ಬೇಕು”.ಇದು, ಸಣ್ಣವನ ವಾದ. ಅಂಬಗ ಎರಡ್ನೇವನತ್ರೆ ; ದೊಡ್ಡವ ಕೇಳಿದᵒ.ಅದಕ್ಕೆ.., “ನೀನು ಹೇಳಿದಾಂಗೇ ಅಕ್ಕು.ಕೂಸುಗೊಕ್ಕೆ ಚಿನ್ನಾಭರಣಲ್ಲಿ ಕೊಟ್ಟ್ರೆ ಸಾಕೂಳಿ”   ಉತ್ತರ ಬಂತು. ಅಕ್ಕನೂ ತಂಗೆಯೂ ಎರಡ್ನೇವನತ್ರೆ ಮಾತಾಡುವಾಗ ನಿಂಗೊಗೆ ಜಾಗೆಲಿಯೂ  ರಜ-ರಜ  ಹಿಶೆ ಕೊಡೆಕಾದ್ದು ನ್ಯಾಯ ಹೇಳ್ತ ಉತ್ತರವನ್ನೂ ಕೊಟ್ಟᵒ.

ಅಕ್ಕನೂ ತಂಗೆಯೂ ಅವರವರಷ್ಟಕೇ ಮೋರೆ-ಮೋರೆ ನೋಡೆಂಡು, “ಎರಡ್ನೇ ಅಣ್ಣ ಎರಡೂ ಕಡೆಂದ ಇದ್ದᵒ. ಅವನ ಮನಸ್ಸು ಎಂತ ಹೇಳ್ತು?, ಆಯೆಕ್ಕಾದ್ದು ಹೇಂಗೆ?  ಹೇಳುವ ಅಭಿಪ್ರಾಯ ಸಿಕ್ಕಿಕ್ಕ. ಹಿಟ್ಟು ಗಟ್ಟಿ ಆದರೆ ರೊಟ್ಟಿ ಹಸ್ಸಿತ್ತು. ತೆಳ್ಳಂಗಾದರೆ ತೆಳ್ಳವು ಎರದತ್ತು”.ಹೇಳೆಂಡೊವು.

ಅವರವರ ಮೋರಗೆ ತಕ್ಕ ಮಾತಾಡೆಕ್ಕಾದ್ದು ಸರಿ. ಆದರೆ ಎಲ್ಲಾ ಸಂದರ್ಭಗಳಲ್ಲೂ ಅಲ್ಲ!.  ಹೀಂಗಿದ್ದ ಉದಾಹರಣೆ ನಿಂಗಳ ಅನುಭವಲ್ಲೂ ಬಂದಿಕ್ಕು. ಎಂತ ಹೇಳ್ತಿ?.

—–೦—-

6 thoughts on ““ಗಟ್ಟಿ ಆದರೆ ರೊಟ್ಟಿ, ತೆಳ್ಳಂಗಾದರೆ ತೆಳ್ಳವು” {ಹವ್ಯಕ ನುಡಿಗಟ್ಟು-62}

  1. ತಪ್ಪಾದ್ದರ ಸರಿ ಮಾಡಲೆಡಿತ್ತು ,ಮಾಡಿರೆ ಆತು

  2. ಮತ್ತೊಂದು ಸೂಚನೆ.. ನುಡಿಗಟ್ಟು ,ಇದು 62 ಆಯೆಕ್ಕಾದ್ದು ಮೇಗಾಣ ಹೆಡ್ ಲೈನಿಲ್ಲಿ 63 ಆಯಿದು.ಅದಕ್ಕೆ ಬಯಲಿನವರತ್ರೆ ಕ್ಷಮೆ ಕೇಳಿಗೊಳ್ತೆ.

  3. ಒಪ್ಪ ಕೊಟ್ಟ ಸೇಡಿಗುಮ್ಮೆ ಗೋಪಾಲ, ಬೊಳುಂಬು ಗೋಪಾಲ,ಶೀಲಾ ಎಲ್ಲರಿಂಗೂ ಧನ್ಯವಾದಂಗೊ.ಈ ಸರ್ತಿದು ಓದಿ.ನಿಂಗೊ ಆ ಪದ ಬಳಸುದರ ಕೇಳಿದ್ದೀರೋ. ಹೇಂಗೆ ಹೇಳಿ.

  4. ಅಡ್ಡ ಗೋಡೆಲಿ ದೀಪ ಮಡಗಿದ ಹಾಂಗೆ ಹೇಳಲಕ್ಕೊ. ಆರ ವಿರೋಧ ಕಟ್ಟಿಯೊಂಬಲೂ ಅವ ತಯಾರಿಲ್ಲೆ.
    ಚೆಂಡು ಬಂದ ಹಾಂಗೆ ಬ್ಯಾಟಿಂಗು ಹೇಳಿ ಹೇಳುವನೊ ?

  5. ಹೇಂಗಾದರೂ ಅಕ್ಕು ,ಅವಂಗೆ ! ಕತೆ ಸಹಿತ ಅರ್ಥ ವಿವರಿಸಿದ್ದು ಚೊಕ್ಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×