Oppanna.com

“ತಣ್ಣನೆ ಆದರೂ ತಣಿಶಿ ತಿನ್ನೆಕ್ಕು”-(ಹವ್ಯಕ ನುಡಿಗಟ್ಟು–13)

ಬರದೋರು :   ವಿಜಯತ್ತೆ    on   19/08/2014    12 ಒಪ್ಪಂಗೊ

“ತಣ್ಣನೆ ಆದರೂ ತಣಿಶಿ ತಿನ್ನೆಕ್ಕು” (ಹವ್ಯಕ ನುಡಿಗಟ್ಟು-13)

ಆನುಶಾಲಗೆ ಹೋಪ ಸಮಯಲ್ಲಿ  ಎನ್ನ ಅಪ್ಪನ ಮನೆಮನೆಂದ(ನೀರ್ಚಾಲು ಗ್ರಾಮದ ಶಂಕರಮೂಲೆ)ಪೇಟಗೆ, ಈಗಾಣ ಹಾಂಗೆ ಅಡಿಗಡಿಗೆ ಬಸ್ಸು ಸರ್ವೀಸ್ ಇದ್ದತ್ತಿಲ್ಲೆಯಿದ. ಎಸ್.ಎಸ್.ಎಲ್.ಸಿ ಮುಗುದಪ್ಪಗ ಮನೆಲಿ ಕೂಬ್ಬದು, ಆ ಸಮೆಲಿ ಅಬ್ಬಗೆ ಮನೆಕೆಲಸಕ್ಕೆ ಸಕಾಯ ಮಾಡ್ಯೊಂಡು ಅಡಿಗೆ ಕೆಲಸ ಕಲಿವದು!,ಹೀಂಗಿರುತ್ತಾ  ಕೆಲವು ಸರ್ತಿ ಎಲ್ಯಾರು ಹೋಪಲಿರುತ್ತನ್ನೆ! ಉದಿಯಪ್ಪಗ ಆರು ಗಂಟಗೆ ಮುಂಡಿತ್ತಡ್ಕಂದ  ಕಾಸರಗೋಡಿಂಗೆ ಹೋವುತ್ತ ಬಸ್ಸಿಕ್ಕು. ಅದು ತಪ್ಪೀರೆ ಮತ್ತೆ ಮಜ್ಜಾನಮೇಗೇ ಉಳ್ಳೊ! ಉದಿಯಪ್ಪಗ 5-30ಕ್ಕೆ ಹೆರಡೆಕ್ಕಿದ.ಒಂದಾರಿ ಹೀಂಗೆ ಹೆರಡುತ್ತ ಗೌಜಿ!.ಅಪ್ಪನ ಒಟ್ಟಿಂಗೆ ಎಲ್ಲಿಗೋ ಹೋಪದು!.ಅಬ್ಬೆ ಮುನ್ನಾಣು ದಿನವೇ ಎಂತದೋ ಕೊಟ್ಟಿಗೆ ಮಾಡಿ ಮಡಗಿದ್ದು.ಕಿಚ್ಚಾಕಿ ಬೇಶಿದ ಕೆಲಸ ಎನ್ನದು.! ಎಂಗೊ ತಿಂಬಲೆ ಬಿಡುಸಿ ನೋಡುವಗ ಅದು ಸರೀ ಬೇಯಿಂದಿಲ್ಲೆ!. “ಎನಗೆ ಇದು ಬೇಡ. ರಜ ಅವಲಕ್ಕಿ ಕೊಡು  ಮಸರು ಹಾಕಿ ತಿಂತೆ” ಹೇಳಿದೊವು ಅಪ್ಪಂ. ಆನು ರಜ ತಣ್ಣನೆ ಮಸರು ತಿಂತೆ ಹೇಳಿಗೊಂಡು ತಣ್ಣನೆ ರಜ ಬೆಶಿ ಮಾಡ್ಳೆ ಹೆರಟೆ. ಅಷ್ಟಪ್ಪಗ  “ಇದಾ.. ಮೋಳೆ.., ತಣ್ಣನೆ ಆದರೂ ತಣಿಶಿ ತಿನ್ನೆಕ್ಕು. ಹೇಳುಗು ಮದಲಾಣವು. ಅದರ ಬೆಶಿ ಮಾಡೀರೆ ಅದರ ಸತ್ವ ಹೋತು”. ಹೇಳುತ್ತಾ ಎನ್ನಪ್ಪ. “ಇದರ ವಿಮರ್ಶೆ ಮಾಡೀರೆ; ಮನಸ್ಸಿಂಗೆ ಒತ್ತಡ ಹಾಕಿಯೊಂಬಲಾಗ ಹೇಳ್ತ ಪಾಠವೂ ಇದ್ದಿದಲ್ಲಿ”. ಹೇಳಿದೊವು. ಈಗ ತಣ್ಣನೆ ಉಂಬ ಸಂದರ್ಭಲ್ಲಿ ಮಾತ್ರ ಅಲ್ಲ  ಹೆಚ್ಚು ಕೆಲಸದ ಒತ್ತಡ  ಬೀಳುವಗಳೂ ಅಪ್ಪ  ಹೇಳಿದ ಈ ಮಾತು ನೆಂಪಾವುತ್ತಿದ.ಒಟ್ಟಿಲ್ಲಿ ಇದು ತಣ್ಣನೆ ಉಂಬ ವಿಷಯಕ್ಕೆ ಮಾಂತ್ರ ಅಲ್ಲ. ಸಹನೆ ತೆಕ್ಕೊಂಬಲಿದ್ದ ಸಿಹಿ ನುಡಿಯೂ ಆವುತ್ತು.

12 thoughts on ““ತಣ್ಣನೆ ಆದರೂ ತಣಿಶಿ ತಿನ್ನೆಕ್ಕು”-(ಹವ್ಯಕ ನುಡಿಗಟ್ಟು–13)

  1. ತಣಿಶುದು ಹೇಳಿದರೆ ಸಮಸ್ಥಿತಿಗೆ ತಪ್ಪದು ಎಂಬ ಅರ್ಥವೂ ಇದ್ದು. ಅದಕ್ಕೆ ತಣ್ಣನೆಯನ್ನೂ ತಣಿಶಿ ಉಂಬದು ಅಥವಾ ತಣ್ಣೀರನ್ನೂ ತಣಿಶಿ ಕುಡಿವದು ಅಥವಾ ತಾಳ್ಮೆಲಿ ಇಪ್ಪದು .

  2. ಓದಿ ಬೆನ್ನುತಟ್ಟುವ ಉಡುಪು ಮೂಲೆಅಣ್ಣಂಗೆ ಸಹಿತ ಒಪ್ಪಕೊಟ್ಟ ಎಲ್ಲರಿಂಗೂ ವಂದನೆ ಹೇಳ್ತಾಇದ್ದೆ

  3. “ತಣ್ಣೀರಾದರೂ ತಣೀಶಿ ಕುಡಿಯೇಕು” ಹೇಳುವ ಗಾದೆ ಮಾತಿನ ಕೇಳಿದ್ದೆ.ಇದು ಸಯಿತ ಅದೇ ಅರ್ಥವ ಕೊಡುತ್ತು.ಸ್ವಾರಸ್ಯಪೂರ್ಣವಾದ ಇ೦ಥ ಗಾದೆಗೊ ಭಾಷಾ ಸೌ೦ದರ್ಯವನ್ನುದೆ ಹೆಚ್ಚುಸುತ್ತು.ತು೦ಬಾ ಕೊಶಿಯಾತಕ್ಕ ನಿ೦ಗಳ ವಿವರಣೆ ಓದಿ.ಅಭಿನ೦ದನಗೊ.

  4. ಹರೇರಾಮ, ಅಪ್ಪು ಬಾಲಣ್ಣ, ಅದರ ಹೆಸರು ಕೇಳುವಗಳೇ ಕೊದಿ-ಕೊದಿ ಅವುತ್ತು . ಅಪರೂಪದ ನಿಂಗಳ ಒಪ್ಪ ನೋಡಿ ಸಂತೋಷಾತು .

  5. ವಿಜಯಕ್ಕ , ಆ ತಣ್ಣನೆ ಮಸರು ಉಂಬಾಗ ಭಾರೀ ಕೊಶಿ ಇತ್ತಲ್ಲದೋ! ಅದಕ್ಕೆ ಒಂದು ಮೆಡಿ ಉಪ್ಪಿನ ಕಾಯಿ ಕೂಡಿಯೊಂಡು ಉಂಡರೆ ಬೇರೆಂತ್ಸು ಬೇಡ ಅಷ್ಟು ರುಚಿ ಹಾ!

    * ಲೇಖನ ಲಾಯಕ್ಕಯಿದು ವಿಜಯಕ್ಕಾ .ಇನ್ನುದೆ ಗಾದೆಗೋ ಬರಲಿ .

  6. ಒಳ್ಳೆಯ ಬುದ್ಧಿ ಮಾತು ಕೂಡ ಇದು ,ನಿರೂಪಣೆಯೂ ಲಾಯ್ಕ ಆಯಿದು ವಿಜಯಕ್ಕ

  7. ಹರೇರಾಮ, ಈ ಚೆನ್ನೈ ಭಾವನ ಏಕೆ ಕಾಣ್ತೇ ಇಲ್ಲೇ! ಗ್ರಹಿಶಿಯೊಂಡಿತ್ತಿದ್ದೆ .ನರಸಿಂಹ ಅಣ್ಣಂಗೂ ಚೆನ್ನೈಭಾವಂಗೂ ಧನ್ಯವಾದಂಗೊ

  8. ಚಳಿ ಹಿಡುದವಂಗೆ ತಣ್ಣನೆಯ ತೆಳಿ ಕೊಟ್ಟ ವಡ.ಅದರ ಕುಡಿವದು ಹೇಂಗೆ?ಸ್ಥಿತ ಪ್ರಜ್ಞಂಗೆ ಮಾಂತ್ರ ಎಡಿಗಷ್ಟೆ.ಒಳ್ಳೆದಾಯಿದು ವಿಜಯಕ್ಕ.

  9. ಅಪ್ಪೂಳಿ ವಿಜಯತ್ತೆ ಹೇದ್ದು ಸಮ.ಪ್ರಿಜ್ಜಿಂದ ತೆಗದ ತಣ್ಣೀರಿಂಗೇ ಐಸುಕಲ್ಲು ಹಾಕಿ ಕುಡಿವವ° ಆನು. ದಾಕುದಾರಕ್ಕೊ ಮಾಂತ್ರ ಇದಕ್ಕೆ ಒಪ್ಪುತ್ತವಿಲ್ಲೆ ಛೆ

    1. ತಣ್ಣೀರಿನ ತಣಿಸಿ ಕುಡಿಯಿರಿ ಚೆನ್ನೈ ಭಾವ -ಫ್ರಿಜ್ಜಿಲಿ ಮಡುಗಿ ತೆಗೆದು ಕುಡಿಯಿರಿ,ಐಸು ಗಟ್ಟಿ ಹಾಕುದು ಬೇಡ !

  10. ತಣ್ಣೀರನ್ನೇ ಆದರೂ ತಣಿಸಿ ಕುಡಿಯುವ ಸ್ವಭಾವ -ಹೇಳಿರೆ ಅಷ್ಟು ಸಮಾಧಾನದ ವ್ಯಕ್ತಿ ಹೇಳಿ ಹೇಳುದು ಕೇಳಿದ್ದೆ. ಚಿಕ್ಕಮ್ಮನ ನುಡಿಗಟ್ಟು ಇದೇ ಧಾಟಿಲಿ ಇದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×