Oppanna.com

“ತರ್ಕಕ್ಕೆ ಉದಾಸೀನವೇ ಮದ್ದು-(ಹವ್ಯಕ ನುಡಿಗಟ್ಟು-66)

ಬರದೋರು :   ವಿಜಯತ್ತೆ    on   17/09/2016    4 ಒಪ್ಪಂಗೊ

“ತರ್ಕಕ್ಕೆ  ಉದಾಸೀನವೇ ಮದ್ದು.”-(ಹವ್ಯಕ ನುಡಿಗಟ್ಟು-66)

“ಈಗಾಣ ಮಕ್ಕೊ ಒಂದೂ ನಾವು ಹೇಳಿದಾಂಗೆ ಕೇಳ್ತವಿಲ್ಲೆ.ಅವು ಹೇಳಿದಾಂಗೇ ನಾವೇ ಕೇಳೆಕ್ಕು.ಎಂತಾರು ಹಠ ಹಿಡುದತ್ಕಂಡ್ರೆ ಅಂಬಗ ಅದು ಆಗಿಯೇ ಸಿದ್ಧ”. ಒಂದು ಜೆಂಬಾರಲ್ಲಿ ಸೇರಿದ  ‘ಕಳ’ ಲ್ಲಿ ಮಾತಾಡ್ತಾ ಇದ್ದಿದ್ದᵒ  ಒಬ್ಬ ಕುಞ್ಞಿ ಮಾಣಿಯ ಅಪ್ಪᵒ. “ಅದಪ್ಪು.ಎನ್ನ ಮಗನೂ ಹಾಂಗೇ ಇದ್ದ ಬುದ್ದಿಯವᵒ!.ಅದಲ್ಲ ಹಾಂಗೆ  ತರ್ಕ ಹಿಡಿವಲಾಗಾಳಿ ಹೇಳಿರೆ ದಾಕಲಾವುತ್ತೇ ಇಲ್ಲೆ”.ಮತ್ತೊಬ್ಬನ ಉವಾಚ.

“ಎಲ್ಲಾ ಮಕ್ಕಳೂ ಶಾಲೆಲಿ ಬೇರೆ ಮಕ್ಕಳ ನೋಡಿ ಕಲಿವದಿದ!. ನೋಡಿ ಕಲಿವ ಪ್ರಾಯ ಅಲ್ಲೊಪ್ಪಾ!.ನಾವೆಷ್ಟು ಬಡುಕ್ಕೊಂಡ್ರೂ ಗುಣ ಇಲ್ಲೆ ಮಿನಿಯ!”.  ಇನ್ನೊಂದಕ್ಕನ ಹೇಳಿಕೆ.

“ದೊಡ್ಡವೇ ಗೆಂಟು ಪಿಟ್ಕಾಯಿಗಳಾಂಗೆ ಮಾಡ್ತವು ಇನ್ನು ಮಕ್ಕಳ ಹೇಳಿ ಗುಣ ಇದ್ದೊ?” ಒಂದು ಅಜ್ಜಿ ತನ್ನ ಹೇಳಿಕೆ ಮುಂದುವರುಸುತ್ತಾ. “ನಮ್ಮಲ್ಲಿ  ಗುರಹಿರಿಯರಿಂಗೆ  ಗೌರವಕೊಡೆಕು, ಅವು ಹೇಳಿದ ಹಾಂಗೆ ಸಣ್ಣವು ಕೇಳೆಕ್ಕು, ಹೇಳುವ ಸಂಸ್ಕಾರ  ಇದ್ದತ್ತು ಮದ್ಲೆ.ಆದರೆ ಈಗ ಆರು ಕೇಳ್ತᵒ. ತಲೆ-ತಲಾಂತರಂದ ಬಂದ  ಈ ಸಂಸ್ಕೃತಿಗೆ ಒಪ್ಪತೂಕ ಇದ್ದು.ಅಪ್ಪನೋ ಅಬ್ಬೆಯೋ ಅತ್ತೆಯೋ ಹೇಳುವ ಹಿತನುಡಿಗಳ ತೆಕ್ಕೊಳೆಕ್ಕು.ನಾವು ನಮ್ಮ ಹೆರಿಯೊವುಹೇಳಿದ್ದರ ಕೇಳಿಯೊಂಡಿದ್ದತ್ತು ಆದರೆ ಈಗಾಣವು ಅದೆಲ್ಲ ಬೇಡ ಹೇಳ್ತ ತರ್ಕ”.ಅಜ್ಜಿಯ ಅಸಮಾಧಾನದ ಮಾತು ಬಂತು.

ಅಷ್ಟಪ್ಪಗ  ಒಬ್ಬᵒ  ಅಜ್ಜᵒ  ಕೇಳ್ಸಿಗೊಂಡವᵒ ಮಾತಿಂಗೆ ತೊಡಗಿ.., “ಅವು ಹೇದಾಂಗೆ ಕೇಳಿರೆ….ಇದಾ.., ಹಾಂಗೆ ಮತ್ತಾಣ ಸರ್ತಿ ತಮ್ಮ ತರ್ಕವೇ ನೆಡೆಕೂಳಿ ಹಠ ಹಿಡುದು ಹಾಂಕಾರ ತೋರ್ಸುತ್ತೊವು.  ಈಗ ಕೊಡದೊಳದಿಕೆ ಆನೆಯ ಹೊಗುಸಿ ಕೊಡೆಕೂಳಿ  ಹೇಳುತ್ತೊಂದು ಮಾಣಿ. ಹಾಂಗೇ ಮಾಡ್ಳೆಡಿಗಾ?. ಅದಕ್ಕೆ ಉದಾಸೀನ ತೋರ್ಸೆಂಡು ಸುಮ್ಮನೆ ಕೂಬ್ಬದೇ ಮದ್ದು ಹೇಳುದರಲ್ಲಿ ಎಳ್ಳಷ್ಟೂ ಸಂಶಯ ಇಲ್ಲೆ.ಇದು ದೊಡ್ಡವಕ್ಕೂ ಅನ್ವಯಿಸುತ್ತು.  ’ಎನ್ನ ಕೆಮಿ ಕಾಶಿಗೆ ಹೋಯಿದು’(ಎನ್ನ ಪ್ರಥಮ ನುಡಿಗಟ್ಟಿಲ್ಲಿದ್ದಿದು ) .ಹೇಳಿಂಡು ಕೂದು ಒಂದೆರಡು ಸರ್ತಿ ಪ್ರಯೋಗ ಮಾಡಿ ನೋಡಿ. ಮತ್ತೆ ಮಕ್ಕೊಗೆ ತೆಳಿವಾಡು ಆದ ಮತ್ತೆ, ಸಮಾದಾನಂದ ವಿಷಯ ಮನದಟ್ಟು ಮಾಡಿ”.ಹೇಳಿದೊವು ಆ ಹೆರಿಯೊವು.

ಮಕ್ಕೊ ಉಣುತ್ತಿಲ್ಲೇಳಿ ತರ್ಕಹಿಡುದು ಕೂದರೆ ಎನ್ನಬ್ಬೆ ಹತ್ರೆ, ಅಪ್ಪᵒ  ಹೇಳ್ತದು ಕೇಳಿದ್ದೆ  “ ದಣಿಯ ಒಸವಲೆ ಹೋಗೆಡ; ಹದಕ್ಕೆ ಹೇಳಿರೆ ಸಾಕು. ಹಶುವಪ್ಪಗ ಉಣ್ಣದ್ದೆ ಎಲ್ಲಿಗೆ ಹೋಕು?”

ನೂರಕ್ಕೆ ನೂರು ಸತ್ಯವಾದ ಮಾತಿದು. ನಿಂಗಳೂ ಪ್ರಯೋಗ ಮಾಡಿ ನೋಡ್ಳಕ್ಕು.

——೦——

4 thoughts on ““ತರ್ಕಕ್ಕೆ ಉದಾಸೀನವೇ ಮದ್ದು-(ಹವ್ಯಕ ನುಡಿಗಟ್ಟು-66)

  1. ಗೋಪಾಲಣ್ಣ ಓದುಗರು ಅಪೇಕ್ಷೆಪಟ್ಟು ಪ್ರೋತ್ಸಾಹಿಸಿದರೆ ಪುಸ್ತಕ ಮಾಡುವೊಂ. ಅನಿಸಿಕೆ ಹೇಳ್ಲೆ ಏವಗಳೂ ಬತ್ತ ಬೊಳುಂಬು ಓಪಾಲನ ಕಾಂಬಲೇ ಇಲ್ಲೆ ಜಾನ್ಸಿತ್ತಿದ್ದೆ. ಬೇರೆಲ್ಲ ಒತ್ತಡಲ್ಲಿ ಬರವಲೇ ಆವುತ್ತಿಲ್ಲೆ. ಇದೀಗ ಇನ್ನೊಂದು ಬರವಲೆ ಹೆರಟಿದೆ. ಅಂಬಗ ಮೊದಲಾಣದ್ದರ ಓದಿದ್ದವೊ ನೋಡೆಡದೊ?. ಹಾಂಗೆ ನೋಡಿದೆ. ಒಪ್ಪ ಕೊಟ್ಟವಕ್ಕೆಲ್ಲೊರಿಂಗೂ ಧನ್ಯವಾದ ಹೇಳ್ತಾ ಗೋಪಾಲನ ಹಿತನುಡಿಗೆ ಮನಸಾ…….

  2. ವಿಜಯಕ್ಕನ ನುಡಿಗಟ್ಟಿನ ವಿವರಣೆ ಎಡೆಲಿ ಹವ್ಯಕ ಭಾಷೆಯ ಅಪರೂಪದ ಶಬ್ದಂಗಳ ನೋಡ್ಳುದೆ ತುಂಬಾ ಚೆಂದ. ಮಿನಿಯ, ಪಿಟ್ಕಾಯಿ, ತೆಳಿವಾಡ್ಲು, ಒಸವದು. ಎಲ್ಲಿಯೂ ಕಾಂಬಲೆ ಸಿಕ್ಕದ್ದ ಅಪ್ಪಟ ಹವ್ಯಕ ಶಬ್ದಂಗಳ ಕಂಡು ಕೊಶಿಯಾತು. ನುಡಿಗಟ್ಟಿನ ಪುಸ್ತಕ ಪ್ರಕಟಣೆಗೆ ಕಾಲ ಕೂಡಿ ಬತ್ತಾ ಇದ್ದು.

  3. ಪ್ರಸ್ತುತ ಕಾಲಕ್ಕೆ ತಕ್ಕುದಾದ ನುಡಿಗಟ್ಟು ಸರಿ ಯಾಗಿದ್ದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×