Oppanna.com

“ತಲಗೆರದ ನೀರು, ಕಾಲಿಂಗಿಳಿಯದ್ದಿರ-(ಹವ್ಯಕ ನುಡಿಗಟ್ಟು-69)

ಬರದೋರು :   ವಿಜಯತ್ತೆ    on   12/10/2016    7 ಒಪ್ಪಂಗೊ

ತಲಗೆರದ ನೀರು ಕಾಲಿಂಗಿಳಿಯದ್ದಿರ”--(ಹವ್ಯಕ ನುಡಿಗಟ್ಟು-69)

ಆನು ಪ್ರಾಥಮಿಕ ಹಂತಲ್ಲಿ ಅಜ್ಜನ ಮನೆಲಿದ್ದೊಂಡು ಶಾಲಗೆ ಹೋದ್ದು.ಅಜ್ಜᵒ ,ಅಜ್ಜಿ, ಮಾವಂದ್ರು, ಭಾವಂದ್ರು ಹೇಳಿ  ಮನೆತುಂಬ ಜೆನವೂ ಇದ್ದತ್ತಿದ. ಅಜ್ಜಿ, ಒಂದಾರಿ ಆರತ್ರೋ  ದಾಯಾದಿಗಳ ವಾದಾಂಟದ ಶುದ್ದಿ ಹೇಳುವಗ “ತಲಗೆರದ ನೀರು ಕಾಲಿಂಗಿಳಿಯದ್ದಿರ, ಅಸಮಾಧಾನದ  ಹೇಳುವ ಮಾತು ಅವರ ಬಾಯಿಂದ ಬಂತು. ಅಷ್ಟಪ್ಪಗ ಆಚಿಗೆ ಇತ್ತಿದ್ದ ಅಜ್ಜನತ್ರೆ “ತಲಗೆರದ ನೀರು ಕಾಲಿಂಗಿಳುದರೆಂತಾತಜ್ಜᵒ?”  ಎನ್ನ ಕುತೂಹಲದ ಪ್ರಶ್ನೆ.

“ಉಮ್ಮಪ್ಪ.., ನಿನ್ನಜ್ಜಿ ಹತ್ರೇ ಕೇಳು”. ಹೇಳಿ.. ಬಿಟ್ಟೊವು. ಅಜ್ಜಂಗೆ ಆ ಮಾತಿನ ಪೂರ್ವಾಪರ ಗೊಂತಿಲ್ಲದ್ದೆ ಅಲ್ಲ!, ಎನ್ನ ಅಲ್ಲಿಂದ ಸಾಗಹಾಕಲೇಳಿ ಎನ ಅರ್ಥ ಆತು ಹೇಳುವೊᵒ . ಕೆಲವು ಸರ್ತಿ ಹಾಂಗಿದ್ದ ಪ್ರಶ್ನಗೆ ಅಜ್ಜನತ್ರಂದ ಉತ್ತರ ಸಿಕ್ಕುಗು.  ಹ್ಞೂಂ. ಈಗ ಅಜ್ಜಿ ಹತ್ರೆ ಕೇಳಿರೂ ಉಪಯೋಗ ಇಲ್ಲೇಳೆಂಡು ಸುಮ್ಮನಾದೆ.

ಎನ ಹತ್ತೊರುಷದ ಪ್ರಾಯ ಅಂಬಗ.  ಆ ಸಮಯಲ್ಲಿ ಮೈಗೆ ಆನು ಮೀವದಾದರೆ ತಲಗೆ ಮೀಶುದು ಅಜ್ಜಿ. ಮದಲಾಣ ಅಜ್ಜಿಯಕ್ಕೊಗೆ ಬೇಗಕ್ಕೆ ನಿರ್ಮಲ ಆತೂಳಿ ಕಾಂಬಲಿಲ್ಲೆ. ಗೊಂಪಾಕಿ,ಬಾಗೆ ಹೊಡಿಯೂ ಸೇರ್ಸಿ, ನಾಲ್ಕು ಸರ್ತಿ ತಿಕ್ಕಿಕ್ಕಿ ಮತ್ತೆ  ಝೊರೋನೆ ಬೆಶಿ ಬೆಶಿ ನೀರು ಎರವಗ “ಸಾಕಿನ್ನು ನಿಂಗೊ ತಲಗೆರದ ಬೆಶಿ ನೀರೆಲ್ಲಾ ಕಾಲಿಂಗೆತ್ತುವಗಳೂ ಬೆಶಿ-ಬೆಶಿ ಇದ್ದಿದ ಹೇಳಿದೆ”.

“ಆಗಲಿ.., ಕೆಸರು ಸರೀ ಹೋಗದ್ರೆ ಹೇನಕ್ಕು ತಲೆಲಿ”. ಹೇಳುವಗ, ಮೇಗಾಣ ಪ್ರಕರಣ ಮರದೋದ್ದು ಎನ ನೆಂಪಾತಿದ!.

ಎನ್ನ ತಲೆ ಚೆಂಡಿ ಉದ್ದಿ ಮುಂಡಾಸು ಕಟ್ಟುವಗ ಕೇಳಿದೆ. “ಮನ್ನೆ ಒಂದು ದಿನ ನಿಂಗೊ ’ತಲಗೆರದ ನೀರು ಕಾಲಿಂಗಿಳಿಯದ್ದಿರ’ ಹೇಳಿದ್ದೆಂತಕೆ ಅದರ ಅರ್ಥ ಎಂತರಜ್ಜಿ” ಕೇಳಿದೆ?.

ಅದುವೋ.., ತಲೆ ಹೇಳಿರೆ, ನಮ್ಮ ಶರೀರದ ಹೆರಿಭಾಗ .ಕಾಲು ಹೇಳಿರೆ ಕಿರಿಭಾಗ. ತಲಗೆ  ಬೆಶಿ-ಬೆಶಿ ನೀರೆರದ್ದುದೆ ಹಾಂಗೇ ಕಾಲಿಂಗೊರೆಗೆ ಎತ್ತಿತ್ತು. ಹೇಳ್ತೆಲ್ಲೋ. ಹಾಂಗೇ ಇದೂದೆ. ನಮ್ಮಂದ ದೊಡ್ಡವಕ್ಕೆ, ಹೆರಿಯೋರಿಂಗೆ, ನಾವು ಒಳ್ಳೆದು ಮಾಡಿರೆ ನವಗೂ ಮುಂದೆ ಒಳ್ಳೆದು ಸಿಕ್ಕುಗು, ಕೆಟ್ಟದು, ಕೇಡು ಮಾಡಿರೆ ನವಗೂ ಕೆಟ್ಟದಕ್ಕು. ಹಾಂ.., ಇದರ ಅರ್ಥ-ಸಮಜಾಯಿಷಿಕೆ ಮಾಡಿಯೊಂಡ್ರೆ ಸಾಲ.., ಮುಂದೆ ನೆಂಪು ಬೇಕು” ಹೇಳಿದೊವು.

ನಮ್ಮ ಹಿಂದಾಣ ತಲೆಮಾರಿಂದ ಹೀಂಗೆ ಸಾಗುತ್ತಾ ಇಪ್ಪ ಹಿತನುಡಿಗಳ ನುಡಿಗಟ್ಟಿನ, ನಾವುದೆ ಮುಂದಾಣವಕ್ಕೆ ಒಳೂಶೆಕ್ಕಾದ ಅಗತ್ಯತೆ ಇದ್ದಲ್ಲಾ ಎಂತ ಹೇಳ್ತಿ?.

( ಈ ನುಡಿಗಟ್ಟು ಎನ್ನ ಲಿಸ್ಟಿಲ್ಲಿ ಇನ್ನೂ ರಜ ಮುಂದೆ ಇದ್ದತ್ತು. ಮನ್ನೆ ಆರೋ ಬಯಲಿನ ಬಂಧುಗೊ ಈ ಪ್ರಸ್ತಾಪ ಮಾಡಿದವು. ಅದೀಗಳೇ ಅಕ್ಷರ ರೂಪಕ್ಕೆ ಬಂತು.) .

—–೦——

7 thoughts on ““ತಲಗೆರದ ನೀರು, ಕಾಲಿಂಗಿಳಿಯದ್ದಿರ-(ಹವ್ಯಕ ನುಡಿಗಟ್ಟು-69)

  1. ವಿಜಯತ್ತೆ,
    ಹೆರಿಯೋರ ಈ ಮಾತು ನಮ್ಮ ಪ್ರತಿ ನಡೆನುಡಿಲೂ ನೆಂಪಾಯೆಕ್ಕಪ್ಪದು ಅಲ್ಲದಾ? ನಾವು ಇನ್ನೊಬ್ಬಂಗೆ ಒಳ್ಳೆದು ಮಾಡಿದರೂ ಕೆಟ್ಟದು ಮಾಡಿದರೂ ಅದರ ಅನುಭವಿಸಲೇಬೇಕು. ನಾವು ನೆಡದು ಮುಂದಾಣವಕ್ಕೆ ದಾರಿ ತೋರ್ಸೆಕ್ಕು ಅಲ್ಲದಾ?

  2. ’ನಂದಿ’ ಹೇಳಿರೆ ಶಿವನ ವಾಹನ .. ’ನಂದಿಕೈ” ಅಲ್ಲಿ, ಶಿವಕ್ಷೇತ್ರ ಇಪ್ಪಲೆ ಸಾದ್ಯತೆ ಇದ್ದು. ಮತ್ತೆ ’ನಂದಿಗ್ರಾಮ’ ಹೇಳಿ ಇದ್ದಾಡ. ರಾಮ ವನವಾಸ ಮಾಡಿ ಹಿಂತಿರುಗಿ ಬಪ್ಪಲ್ಲಿವರೆಗೆ ಭರತ ವಾಸಮಾಡಿದ ಜಾಗೆ ಹೇಳಿ ರಾಮಾಯಣಲ್ಲಿ ಕೇಳಿದ ನೆಂಪು. ಅದರಿಂದ ಹೆಚ್ಚಿಗೆ ನವಗೆ ಅರಡಿಯ ( ಯಮ್. ಕೆ. ಎಸ್. ಹೇಳಿರೆ ಈ ಬಂಧು ಆರೂಳಿ ಗೊಂತಾತಿಲ್ಲೆನ್ನೆ!)

  3. ಈಗ ಹಿಂದಾಣ ತಲೆಮಾರಿನ ಕಾ0ಬಲೇ ಬೇಕಾಗಿ,
    ಎನ್ನ ಭಾವಯ್ಯ ಒಬ್ಬ0ಗೆ ಹಿ0ದೆ ದೂರದ ಊರಿ0ಗೆ ,
    ಹೋದ ಕಾರಣ ”ನ0ದಿಕೈ ”ಹೇಳುವ ಜಾಗೆಗೆ
    ಹೋಪಲೆ ದಾರಿ ಬೇಕಾತು.
    ಅದು ಮಲೆಯಾಳಲ್ಲಿ ರಜಾ ಬೇರೆ ಶಬ್ದ ಇಪ್ಪಲೂ ಸಾಕು.
    ಅದು ಮನೆತನವೋ /ಊರೋ /ದೇವಿಯ ಆರಾಧನಾ ಜಾಗೆಯೂ ಹೇಳಿ ಸರಿ ಅರಡಿಯ.
    ನ0ದಿ ಹೇಳುವ ಅಕ್ಷರವೇ ಹುಡುಕುಲೆ ಪ್ರಧಾನ ಇಪ್ಪದು.ಬೈಲಿಲಿ ಆರಿ0ಗಾರರು ಗೊಂತ್ತಿದ್ದರೆ ಇಲ್ಲಿ ಬೆಣಚ್ಚಿಲಿ ಹಾಕಿ.

    1. ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ, ನನ್ನ ನಂಬರ್ 09448249623

  4. ತುಂಬಾ ಲಾಯಕ ಆಯಿದು ನುಡಿಗಟ್ಟಿನ ಒಳಾರ್ಥ ವಿವರಿಸಿದ್ದು.

  5. ಅಕ್ಕ..ತುಂಬಾ ಚೆನ್ನಗಿದು..ನಿಂಗಳ ಹಿತ ನುಡಿ -..ನಮ್ಮ ಮಕ್ಕೊಗೆ ತುಂಬಾ ಖುಷಿ ಆವುತು ಇದರ ನೋಡಿ.. ಧನ್ಯವಾದಂಗೊ.
    .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×