Oppanna.com

“ತುಪ್ಪದ ಪಾಕಕ್ಕೆ ಕೆಟ್ಟುಕಾಯಿ ಒಗ್ಗರಣೆ ಕೊಟ್ಟ ಹಾಂಗೆ”–{ಹವ್ಯಕ ನುಡಿಗಟ್ಟು 25}

ಬರದೋರು :   ವಿಜಯತ್ತೆ    on   19/03/2015    5 ಒಪ್ಪಂಗೊ

–“ತುಪ್ಪದ ಪಾಕಕ್ಕೆ, ಕೆಟ್ಟೆಣ್ಣೆಯ ಒಗ್ಗರಣೆ ಹಾಂಗೆ”-[ಹವ್ಯಕ ನುಡಿಗಟ್ಟು-25]–

 

ಪರಿಚಯದ ಒಬ್ಬ ಮಾಣಿಗೆ ಮದುವೆ ನಿಜಾತಿದ. ಮದುವೆ ನಿಜಾಯೆಕ್ಕಾರೆ; ಮದಾಲು ಕೂಸು ನೋಡ್ಳೆ ಹೋಯೆಕ್ಕಲ್ಲೊ.ಹೋದವು.ಕೂಸು ನೋಡಿಕ್ಕಿ,ಇಡ್ಳಿ,ಒಡೆ,ಕೇಸರಿಪ್ಪಾತ್ ತಿಂದು, ಕಾಫಿ ಕುಡುದಿಕ್ಕಿ ಬಂದವು.ಮಾಣಿ ಹತ್ರೆ ಒಪ್ಪಿಗೆ ಆತೊ ಕೇಳಿಯಪ್ಪಗ ಮಾಣಿ, ಹಸುರು ನಿಶಾನೆ ತೋರ್ಸಿದ. ಹಾಂಗೇ ಅವನ ಅಬ್ಬೆ; ಅಪ್ಪನ ಮೋರೆ ನೋಡಿತ್ತು. ನಿಂಗಳ ಅಭಿಪ್ರಾಯ ಎಂತದು? ಕೇಳುವ ಹಾಂಗೆ!. “ನಿನಗೆ ಅಕ್ಕು ಹೇಳಿ ಕಂಡ್ರೆ ಒಪ್ಪಿಗೆ ಕೊಡುವೊಂ.” ಹೇಳಿಂಡು  ಹೆಂಡತ್ತಿಯ ಮೋರೆ ನೋಡಿದಂ. ಅದು “ಕೂಸೆಲ್ಲ…ಚೆಂದಇದ್ದನ್ನೆ..! ಆದರೆ ಅದಕ್ಕೆ   ಅಣ್ಣ-ತಮ್ಮಂದ್ರು ಇಲ್ಲೆ!.ಒತ್ತೆಪ್ಪೋಕಂ” ಹೇಳ್ತ ಒಗ್ಗರಣೆ ಕೊಟ್ಟತ್ತು.ಅಷ್ಟಪ್ಪಗ, “ತುಪ್ಪದ ಪಾಕಕ್ಕೆ ಕೆಟ್ಟೆಣ್ಣೆಯ ಒಗ್ಗರಣೆ ಕೊಟ್ಟಹಾಂಗೆ” ನೀನು ಮಾತಾಡೆಡ ಮಿನಿಯ!.ಹೆಂಡತ್ತಿಯ ಆಕ್ಷೇಪ ಮಾಡಿದಂ.

ಇನ್ನೊಂದಾರಿ ಒಂದು ಮದುವೆ ಊಟಕ್ಕೆ ಹೋಗಿಪ್ಪಾಣ ಕತೆ. ಒಳ್ಳೆ ದೊಡಾ  ಮದುವೆಯಿದ. ಕಾಪಿಗೆ ಸೆಟ್ ದೋಸೆ,ಚಪಾತಿ,ಇಡ್ಳಿ, ಹೀಂಗಿದ್ದರೊಟ್ಟಿಂಗೆ ಎರಡು ಸ್ವೀಟ್, ಎರಡು ಖಾರ, ಊಟಕ್ಕೆ ಸಾದಾರಣ  ಆರು ಬಗೆ ಸ್ವೀಟ್ ಮತ್ತೆ ಈಗಾಣ   ಘೀರೈಸೋ, ಪಲಾವೋ ಹೀಂಗೆಲ್ಲ ಇದ್ದೊಂಡು ಮದುವೆ ರೈಸಿತ್ತು. ಮದುವೆ ಕಳಿಶಿಗೊಂಡು ಹೆರ ಬಪ್ಪಾಗ ಎನ್ನ ಚಙಾಯಿ, “ವಿಜಯಕ್ಕಾ, ಎಂತ ಮಾಡಿದರೆಂತ ಮನೆವು, ಬಂದವರತ್ರೆ ಒಂದು ಶಬ್ಧ ಮಾತಾಡ್ಸಲೆ ಬಯಿಂದವಿಲ್ಲೆ” ಹೇಳಿತ್ತು. ಅಪ್ಪು. ಕೆಲವು ಜೆನ ಅವರ ಆಡಂಬರ ತೋರ್ಸಲೆ ಹೀಂಗೆಲ್ಲಾ ಮಾಡುದು ಹೇಳಿಗೊಂಡೆಯೊಂ. ಒಟ್ಟಿಲ್ಲಿ  ಈ ನುಡಿಗಟ್ಟಿನ ಸಾರಾಂಶ “ಎಲ್ಲಾ ಬಣ್ಣ ಮಸಿ ನುಂಗಿತು” ಹೇಳ್ತ ಅರ್ಥ ಬತ್ತು.

 

 

 

 

5 thoughts on ““ತುಪ್ಪದ ಪಾಕಕ್ಕೆ ಕೆಟ್ಟುಕಾಯಿ ಒಗ್ಗರಣೆ ಕೊಟ್ಟ ಹಾಂಗೆ”–{ಹವ್ಯಕ ನುಡಿಗಟ್ಟು 25}

  1. ತಣಿಯುಂಡಮರ್ದಮ್ ಗೋಮೂತ್ರದಿಂದೆ ಬಾಯ್ವೂಸಿದವೊಲ್ [ಪಂಪ ಭಾರತ] -ನೆನಪಾತು.

  2. ಒಳ್ಳೆ ನುಡಿಗಟ್ಟು, ವಿಜಯತ್ತೆ

  3. ತುಪ್ಪದ ಪಾಕಕ್ಕೆ ಕೆಟ್ಟೆಣ್ಣೆ ಒಗ್ಗರಣೆ ವಿವರಣೆ ಲಾಯಕ ಆಯಿದು. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×