Oppanna.com

ದೇವರಿದ್ದನ?

ಬರದೋರು :   ಶ್ಯಾಮಣ್ಣ    on   02/01/2014    12 ಒಪ್ಪಂಗೊ

ಶ್ಯಾಮಣ್ಣ

ದೇವರಿದ್ದನ?deva
ಎನ್ನ ಕೆಲಸ ಆನು ಮಾಡ್ತೆ
ನಿನ್ನ ಕೆಲಸ ನೀನು ಮಾಡು
ಅವನ ಕೆಲಸ ಅವನೆ ಮಾಡ್ಳಿ
ಇವನ ಕೆಲಸ ಇವನೆ ಮಾಡ್ಳಿ
ಎನ್ನ ಕೆಲಸ, ನಿನ್ನ ಕೆಲಸ
ಅವನ ಕೆಲಸ, ಇವನ ಕೆಲಸ
ಆರೂ ಕೂದು ಮಾಡದ್ರಿದಾ,
ಎಲ್ಲೋರ ಕೆಲಸ ಮಾಡ್ಳೆ
ದೇವರಿದ್ದನ?
ಎಮ್ಮೆಗೊಕ್ಕೆ ಹುಲ್ಲು ಹಾಕು
ದನಕ್ಕಿಷ್ಟು ಹಿಂಡಿಹಾಕು
ನಾಯಿಗೊಕ್ಕೆ ಅಶನ ಹಾಕು
ಕುದುರೆಗೊಕ್ಕೆ ಕುಡುವ ಬೇಶಿ
ಪುಚ್ಚೆಗೊಕ್ಕೆ ಹಾಲು ಹಾಕು
ಕಾಲು ನೀಡಿ ಕೂದರೆಂತ
ಕೆಲಸ ಆರು ಮಾಡುದು?
ಎಲ್ಲೋರ ಕೆಲಸ ಮಾಡ್ಳೆ
ದೇವರಿದ್ದನ?
ಮೊನ್ನೆ ಕಳ್ತು, ನಿನ್ನೆ ಕಳ್ತು
ಇಂದು ಕಳಿಗು ನಾಳೆ ಕಳಿಗು
ದಿನವು ಕಳಿಗು, ವಾರ ಕಳಿಗು
ತಿಂಗಳೋ ವರ್ಷವೋ
ಕಳುದೆ ಕಳಿಗು ಕೂದರೆ
ಕಳುದರೆಂತ ಬಿಟ್ಟರೆಂತ
ಆನು ಕೂಪೆ ಹೇಳಿರೆ
ಎಲ್ಲೋರ ಕೆಲಸ ಮಾಡ್ಳೆ
ದೇವರಿದ್ದನ?
ಕೆಲಸ ಬೇಕು ಉಣ್ಣೆಕ್ಕಾರೆ
ಬೊಗಸೆ ತುಂಬ ತಿನ್ನೆಕ್ಕಾರೆ
ಹೊಟ್ಟೆ ಅಷ್ಟೂ ತುಂಬೆಕ್ಕಾರೆ
ಆನು ನೀನು ಅವಂದೆ ಇವಂದೆ
ನಮ್ಮ ಕೆಲಸ ನಾವೆ ಮಾಡಿ,
ದೇವರೆಂತಕೆ?
ದೇವರಿದ್ದ ಅಲ್ಲಿಯೇ
ಲೋಕ ನೋಡಿ
ಸಲಹುಲೆ.

12 thoughts on “ದೇವರಿದ್ದನ?

  1. ಪದ್ಯ ಲಾಯಿಕಾಯಿದು ಶ್ಯಾಮಣ್ಣ . ನಮ್ಮ ಕೆಲಸ ನಾವೆ ಮಾಡಿ, —ಇಲ್ಲಿ ” ಮಾಡ್ವ°” ಹೇಳುವ ಪದ ಹೆಚ್ಚು ಸಮಂಜಸ ಅಲ್ಲದೋ ?
    ಇದರ ಓದಿ ಡಾ . ರಮಾನಂದ ಬನಾರಿಯವರ ”ದೇವರು ” ಹೇಳುವ ಶೀರ್ಷಿಕೆಯ ಕವನ ನೆನಪ್ಪಾವುತ್ತು . ಕೊಳಲು ಹೇಳುವ ಕವನ ಸಂಕಲನ್ನಲ್ಲಿಪ್ಪದು .
    ‘ದೇವರು ದೇವರು’ ಎನ್ನುವೆಯಲ್ಲ;
    ಎಲ್ಲಿದ್ದಾನೆ ? ತೋರಮ್ಮ
    ದೇವಸ್ಥಾನದೊಳಿದ್ದರೆ ಹೋಗಿ
    ನೋಡಿ ಬರುವ ನೀ ಬಾರಮ್ಮ
    ದೇವರು ಎಂದರೆ ಯಾರಮ್ಮ?
    ದೇವರಿಗೇನು ಕೋಪವೆ ? ಅವನು
    ಏತಕೆ ಮಾತಾಡುವುದಿಲ್ಲ ?
    ಕರೆದರೆ ನಾನು ಬರುವುದೇ ಇಲ್ಲ
    ಎಲ್ಲಿದ್ದಾನೊ ತಿಳಿಯೊಲ್ಲ !
    ಒಮ್ಮೆಯು ಚೆ೦ಡಾಡುದುವುದಿಲ್ಲ
    ದೇವರು ಎಂದರೆ ಒಳ್ಳೆಯ ಮನಸು !
    ದೇವರು ಎಂದರೆ ಪ್ರೀತಿ
    ದೇವರು ಎಂದರೆ ಒಳ್ಳೆಯ ನಡತೆ ;
    ಅದುವೇ ಬದುಕುವ ರೀತಿ !
    ಅದುವೇ ಬದುಕುವ ನೀತಿ !

  2. ಪದ್ಯ ಲಾಯಿಕ ಆಯಿದು ಶ್ಯಾಮಣ್ಣಾ…. ಬೇಗ ಒಂದು ಕಥೆದೇ ಬರದು ಬೈಲಿಲಿ ಹಾಕಿ ಆತಾ?..

  3. ನುಡಿಗೆ ಗೆರೆ,ಗೆರೆಗೆ ನುಡಿ ಪೂರಕ.ಚೆಂದದ ನಡೆ.

  4. ದೇವರಿದ್ದ ಅಲ್ಲಿಯೇ
    ಲೋಕ ನೋಡಿ
    ಸಲಹುಲೆ.
    ಒಳ್ಳೆ ಆಶಯ, ಒಳ್ಳೆ ಕವನ, ಅದಕ್ಕೊಪ್ಪುವ ಚೆಂದದ ಗೆರೆ ಚಿತ್ರ.

  5. ಎಲ್ಲೋರ ಕೆಲಸ ಮಾಡ್ಳೆ
    ದೇವರಿದ್ದನ? — ಚೋದ್ಯವೂ ಪರಿಹಾರವೂ ಲಾಯ್ಕ ಇದ್ದು . ಶ್ಯಾಮಣ್ಣನ ಕವನ ಕೊಶಿ ಕೊಟ್ಟತ್ತು.

  6. ನವ್ಯ ಕವನ ಬರವ ಶಾಮಣ್ಣ, ತಾಳಬದ್ಧವಾಗಿ ಪದ್ಯ ಬರದ್ದರ ಕಂಡಪ್ಪಗ ಮತ್ತಷ್ಟು ಕೊಶಿ ಆತು. ಚಿತ್ರವೂ ಚೆಂದ, ಭಾವನೆಯೂ ಚೆಂದ. ವಾಹ್ !

  7. ಪದ್ಯ ಲಾಯ್ಕ ಆಯಿದು ಶ್ಯಾಮಣ್ಣ

  8. ಪಷ್ಟುಕ್ಲಾಸು ಆಯ್ದು ಇದು ಶ್ಯಾಮಣ್ಣ. ಚಿತ್ರವುದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×