Oppanna.com

ನೀನು ನೀನೆ…..ಆನು ಆನೆ (?)

ಬರದೋರು :   ಅನು ಉಡುಪುಮೂಲೆ    on   05/05/2012    10 ಒಪ್ಪಂಗೊ

ಅನು ಉಡುಪುಮೂಲೆ

” ನೀನು ನೀನೇ ಇಲ್ಲಿ ನಾನು ನಾನೇ….” ಸಿನೇಮ ಪದ್ಯದ ಬಗ್ಗೆ ಹೇಳ್ತಾ ಇದ್ದೆ ಹೇಳಿ ಗ್ರೇಶೆಡಿ ಹೀಂಗೇ ಹೊತ್ತು ಹೋಪಲೆ ಒಂದು ಶುದ್ದಿ ಅಷ್ಟೆ.

ನಾವು ಯಾವಾಗಲು ನಾವೇ ಆಗಿರೆಕ್ಕು. ಇನ್ನೊಬ್ಬರ ವ್ಯಕ್ತಿತ್ವವ ಅನುಕರಣೆ ಮಾಡ್ಲೆ ಆಗ. ಹಾಂಗೇಳಿ ಇನ್ನೊಬ್ಬರ ಒಳ್ಳೆ ಗುಣವ ಅನುಸರಿಸಿದರೆ ತಪ್ಪಲ್ಲ. ಆದರೆ ಅನುಕರಣೆ ಮಾಡುಗ ನಮ್ಮ ವ್ಯಕ್ತಿತ್ವವ ಕಳಕ್ಕೊಂಬಲೆ ಆಗ ಅಷ್ಟೆ.

ಪ್ರತಿಯೊಂದು ವಸ್ತುವಿಲೂ ಕೊರತೆ ಕಂಡುಹುಡ್ಕುದು ಮನುಷ್ಯನ ಒಂದು ಸಾಮಾನ್ಯ ಗುಣ. ನಾವು ಹೇಂಗೇ ಇದ್ದರೂ ಇನ್ನೊಬ್ಬಂಗೆ ಹೇಳ್ಲೆ ಅವಕಾಶ ಇದ್ದೇ ಇರ್ತು. ನಾವು ನಮಗೆ ಬೇಕಾದ ಹಾಂಗೆ ಮನೆ ಕಟ್ಟುಸುವಾಗ ಆರೋ ಬಂದು ಅದು ಹಾಂಗಲ್ಲ ಹೀಂಗೆ ಇರೆಕ್ಕಿತ್ತು ಹೇಳ್ತವು. ಇನ್ನೊಬ್ಬ ಬಂದು ಹೀಂಗಲ್ಲ ಹೇದು ಮತ್ತೊಂದು ರೀತಿ ಹೇಳ್ತವು . ಎಲ್ಲೋರ ಮೆಚ್ಚುಸುಲೆ ಎಡಿಗೋ…?  ನವಗೆ ಹೇಂಗೆ ಬೇಕೋ ಹಾಂಗೇ ಮಾಡೆಕ್ಕಲ್ಲದಾ……….

ಆದರೆ ಆರಾದರು ಒಳ್ಳೆ ಸಲಹೆ ಕೊಟ್ಟರೆ ತೆಕ್ಕೊಂಬದರಲ್ಲಿ ತಪ್ಪಿಲ್ಲೆ.

ನಾವು ಮಕ್ಕಳ ವಿಷಯಲ್ಲಿ ಯಾವಾಗಲೂ ಒಂದು ತಪ್ಪು ಮಾಡ್ತು . ಮಕ್ಕ ಕಲಿವದರಲ್ಲಿ ಹಿಂದೆ ಬಿದ್ದ ಕೂಡ್ಲೆ  ಬೇರೆ ಮಕ್ಕಳ ತೋರ್ಸಿ ‘ ನೋಡು ಆ ಮಾಣಿಯ , ಎಷ್ಟು ಹುಶಾರಿದ್ದ°.  ನೀನು ಬರೇ ದಡ್ಡ. ಏನೂ ಪ್ರಯೋಜನ ಇಲ್ಲದ್ದವ°.  ಲೆಕ್ಕ ಭರ್ತಿಗೆ ಅಕ್ಕಷ್ಟೆ . ಎಂತಕಾದರೂ ಹುಟ್ಟಿದೆಯೋ…? ‘ ಹೇದು ಹಂಗುಸಿ ಮಾತಾಡ್ತು. ಅದು ಸರಿಯಲ್ಲ. ಅವಕ್ಕೆ ಯಾವ ವಿಷಯ ಸರಿ ಅರ್ಥ ಆವುತ್ತಿಲ್ಲೆ ಅದರ ಹೇದು ಕೊಡೆಕ್ಕು.

ಎಲ್ಲಾ ಮಕ್ಕಳೂ ಒಂದೇ ರೀತಿ ಇಪ್ಪಲೆ ಸಾಧ್ಯ ಇಲ್ಲೆ. ಎಲ್ಲೋರಲ್ಲೂ ಒಂದೊಂದು ಪ್ರತಿಭೆ ಇರ್ತು. ಅದರ ಕಂಡು ಹಿಡುದು ಆ ವಿಷಯಲ್ಲಿ ಮುಂದೆ ಬಪ್ಪಲೆ ಅನುಕೂಲ ಆವುತ್ತ ಹಾಂಗೆ ಮಾಡೆಕ್ಕಾದ್ದು ಹೆರಿಯೊರಾದ ನಮ್ಮ ಕರ್ತವ್ಯ. ಅದು ಬಿಟ್ಟು ಅವರ ಹಂಗುಸಿರೆ ಅವರಲ್ಲಿ ಕೀಳರಿಮೆ ಬೆಳದು ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ ಆವುತ್ತವು.

” ಮಕ್ಕಳಾಟಿಕೆ ಚೆಂದ ಮತ್ತೆ ಯೌವನ ಚೆಂದ ಮುಪ್ಪಿನಲಿ ಚೆಂದ ನರೆ ಗಡ್ಡ……” ಆನು ಕುಂಞಿ ಅಗಿಪ್ಪಗ ಎನ್ನ ಲೂಟಿ ನೋಡಿ ಎನ್ನ ಅಜ್ಜ ಹೇಳಿಗೊಂಡಿದ್ದ ಪದ್ಯ ಇದು.

ಯಾವುದು ಹೇಂಗೆ ಇರೆಕ್ಕೋ ಹಾಂಗೇ ಇದ್ದರೆ ಚೆಂದ. ಪುಚ್ಚೆ ಪುಚ್ಚೆಯ ಹಾಂಗೆ ಇದ್ದರೇ ಚೆಂದ. ಹುಲಿ ಹುಲಿಯ ಹಾಂಗೇ ಇದ್ದರೆ ಚೆಂದ.

ಯಾವುದೇ ವಸ್ತುವಿನ  ಒಂದು ಮಿತಿಯ ವರೆಗೆ ಬಗ್ಗುಸುಲೆ ಎಡಿಗು. ಮತ್ತೂ ಬಗ್ಗುಸಿದರೆ ಮುರುದು ಹೋಕು. ಮಕ್ಕ ಲೂಟಿ ಮಾಡಿದರೆ ನಾವು ಬೈತ್ತು. ಹಾಂಗೇಳಿ ಮಕ್ಕೊ ಸುದ್ದಿ ಇಲ್ಲದ್ದೆ ಮೂಲೆಲಿ ಕೂದರೆ………. ಎಂತಾತಪ್ಪ ಹೇದು ಹೆದರಿ ಡಾಕುಟ್ರ ಹತ್ತರಂಗೆ ಓಡ್ತು.

ಅಷ್ಟಪ್ಪಗ ಒಂದು ಸಿನೇಮದ ಕಥೆ ನೆಂಪಾತಿದ……ನಾಯಕ ಕೆಟ್ಟ ಕೆಲಸದ , ಕೆಟ್ಟ ಮನುಷ್ಯರ ವಿರುದ್ಧ ಯಾವಾಗಲೂ ಹೋರಾಟ ಮಾಡ್ತಾ ಇರ್ತ°. ಅದರಂದಾಗಿ ಅವಂಗೆ ಒಂದು ಒಳ್ಳೆ ಕೆಲಸ ಕೂಡ ಸಿಕ್ಕುತ್ತಿಲ್ಲೆ.  ಅವನ ಅಪ್ಪಂಗೆ ಅವ° ಹಾಂಗೆ ಜಗಳ ಮಾಡ್ಯೊಂಡು ಇಪ್ಪದು ಇಷ್ಟ ಆವುತ್ತಿಲ್ಲೆ. ಕೊನೆಗೆ ಅವನ ಅಮ್ಮನ ಒತ್ತಾಯಕ್ಕೆ ಒಪ್ಪಿ ಇನ್ನು ಮುಂದೆ ಜಗಳ ಮಾಡ್ತಿಲ್ಲೆ ಹೇದು ಪ್ರಮಾಣ ಮಾಡ್ತ°.  ಮುಂದೊಂದು ದಿನ ಅವನ ಕುಟುಂಬದವಕ್ಕೇ ಕೆಟ್ಟ ಜನರಿಂದಾಗಿ  ಕಷ್ಟ ಬತ್ತು. ಆದರೆ ಅವ° ಅದಕ್ಕೂ ತನಗೂ ಸಂಬಂಧವೇ ಇಲ್ಲೆ ಹೇಳ್ತ ಹಾಂಗೆ ಇರ್ತ°. ಆಗ ಅವನ ಅಮ್ಮ ಜೋರು ಮಾಡ್ತು. ಆಗ ಅವ° ತಾನು ಕೊಟ್ಟ ಮಾತಿನ ನೆನಪ್ಸುತ್ತ°. ಆಗ  ಅಮ್ಮ ‘ ಇಂಥ ಸಂದರ್ಭಲ್ಲಿ ಹೇಂಗೆ ಇರೆಕ್ಕೋ ಹಾಂಗೇ ಇರು ಮಾರಾಯ’ ಹೇದು ಹೇಳ್ತು. ಮತ್ತೆ ಎಂತಾದಿಕ್ಕು ಹೇದು ಹೇಳುದು ಬೇಡ ಅಲ್ಲದಾ………

ನಾವು ಎಲ್ಲಾ ವಿಷಯಕ್ಕೂ ನಮ್ಮದೇ ಆದ ಒಂದು ಕಲ್ಪನೆ ಬೆಳಸಿಗೊಂಡು ಇರ್ತು. ಆ ಕಲ್ಪನೆಗೆ ಸರಿಯಾಗಿ ಆ ವಿಷಯ ಮೂಡಿ ಬಾರದ್ದರೆ ನಮಗೆ ಬೇಜಾರಾವುತ್ತು.  ಯಾವುದನ್ನೇ ಆಗಲಿ ಅದು ಹೇಂಗಿದ್ದೋ ಹಾಂಗೇ ಒಪ್ಪ್ಯೊಂಬಲೆ ಮನಸ್ಸು ತಯಾರಿರ್ತಿಲ್ಲೆ.

ಮನ್ನೆ ಹಾಂಗೇ ಆತಿದಾ…. ಆನು ಗೋಕರ್ಣಕ್ಕೆ ಇದುವರೆಗೆ ಹೋಗಿತ್ತಿಲ್ಲೆ. ಎನ್ನ ಯಜಮಾನ್ರು  ಮದಲೆ ಹೋಗಿಪ್ಪಗ ತೆಗದ ಪಟವ  ನೋಡಿತ್ತಿದ್ದೆ. ಹಾಂಗಾಗಿ ಅಲ್ಲಿಯ ವಾತಾವರಣದ ಕಲ್ಪನೆ ಇದ್ದತ್ತು. ಎಂಗ ಕಳುದ ರಜೆಲಿ ಗೋಕರ್ಣ, ಅಶೋಕೆ ಎಲ್ಲ ಹೋದೆಯ°. ಎಲ್ಲ ಆನು ನೆನಸಿದ ಹಾಂಗೇ ಇದ್ದತ್ತು. ಆದರೆ ಓಂ ಬೀಚಿನ ಬಗ್ಗೆ ಎನ್ನ ಕಲ್ಪನೆ ಬೇರೆಯೇ ಇದ್ದತ್ತು. ತೆರೆಗೊ  ಹಿಂಡು ಹಿಂಡಾಗಿ ಬಂದು ದಡಕ್ಕೆ ಅಪ್ಪಳ್ಸುದು…..ನೀರು ಹೊರಳ್ಯೊಂಡು ಹೊರಳ್ಯೊಂಡು ಬಂದು ಬಂಡೆಕಲ್ಲಿಂಗೆ ಬಡುದು ಹಾರುದು……  ಆದರೆ ಎಂಗ ಹೋದಿಪ್ಪಗ ಸಮುದ್ರ ಸತ್ತ ಹಾಂಗೆ ಬಿದ್ದೊಂಡು ಇದ್ದತ್ತು !!!!!!!!!!!!

ಶಾಂತವಾಗಿಪ್ಪ ಸಾಗರವೂ ನೋಡ್ಳೆ ಚೆಂದವೇ… ಆದರೆ ಎನ್ನ ಕಲ್ಪನೆಲಿ ಇದ್ದದು ಬೇರೆಯೇ . ಹಾಂಗಾಗಿ ಎನಗೆ ಆ ವಾತಾವರಣ ನೀರಸ ಅನ್ಸಿತ್ತು.

ಇಪ್ಪದರ ಇಪ್ಪ ಹಾಂಗೇ ಒಪ್ಪ್ಯೊಂಡರೆ ಮನಸ್ಸಿಂಗೆ ಅಪ್ಪಿ ತಪ್ಪಿಯೂ ಬೇಜಾರಾಗ ಹೇಳುವ ಮಾತು ಎಷ್ಟು ಸತ್ಯ!

ನಮ್ಮ ವ್ಯಕ್ತಿತ್ವ  ಗಾಳಿ ಬೀಸುದರ ನೋಡ್ಯೊಂಡು  ಹಾರುವ ಗಾಳಿಪಟದ ಹಾಂಗೆ ಆಗದ್ದೆ  ಹರಿವ ನೀರಿನ ನಡೂಕೆ ಇಪ್ಪ ಬಂಡೆಯ ಹಾಂಗೆ ಇರೆಕ್ಕು. ನಮ್ಮ ಕಲ್ಪನೆಯ ಹಕ್ಕಿ ಆಕಾಶಲ್ಲಿ ಎಷ್ಟು ಎತ್ತರಕ್ಕೆ ಹಾರಿದರೂ ಜೀವನ ನಡೆಶುದು ಇದೇ ಭೂಮಿಲಿ ಹೇಳ್ತ ಸತ್ಯವ ಮರವಲೆ ಆಗ.

ಆನು ಮದಲು ಹಾಂಗಿತ್ತಿದ್ದೆ , ಈಗ ಹಾಂಗಿಲ್ಲೆ . ಈಗೀಗ ಆವುತ್ತಾ ಇದ್ದು ಹಾಂಗೇ ಇರೆಕ್ಕಾಗಿತ್ತೋ ಏನೋ ಹೇದು . ಅಲ್ಲಲ್ಲ ಹೀಂಗಿಪ್ಪದೇ ಸರಿ . ಆನು ಹಾಂಗಿತ್ತಿದ್ದೆ ಹಾಂಗಾಗಿ ಈಗ ಹಾಂಗಿರೆಕ್ಕು ಹೇದು ಎಂತ ಇಲ್ಲೆ. ಆದರೂ ಹೀಂಗಿಪ್ಪಗ ಹಾಂಗಿರೆಕ್ಕು ಹೇದು ಆವುತ್ತು. ಹಾಂಗಿಪ್ಪಗ ಹೀಂಗಿರೆಕ್ಕು ಹೇದು ಆಯಿದು. ಅಕೇರಿಗೆ ಹಾಂಗೂ ಇಲ್ಲೆ ಹೀಂಗೂ ಇಲ್ಲೆ ಹೇದು ಆಗದ್ದರೆ ಸಾಕು………………………………………….

ಅರ್ಥ ಆತೋ…? ಅರ್ಥ ಆಗದ್ದರೆ ಅರ್ಥ ಆಯಿದಿಲ್ಲೆ ಹೇಳಿ , ಅರ್ಥ ಆದರೆ ಅರ್ಥ ಆತು ಹೇಳಿ , ಅರ್ಥ ಆಗಿಯೂ ಅರ್ಥ ಆಯಿದಿಲ್ಲೆ ಹೇಳಿ ಹೇಳೆಡಿ , ಅರ್ಥ ಆಗದ್ದೆ ಅರ್ಥ ಆಯಿದು ಹೇಳಿ ಅನರ್ಥ ಮಾಡಿ ಹಾಕೆಡಿ………………

ನೀರು ಹೊರಳ್ಯೊಂಡು ಬಂದು ಬಂಡೆಗೆ ಜೆಪ್ಪುದು
ವರಗ್ಯೊಂಡು ಇಪ್ಪ ಸಮುದ್ರ.....

10 thoughts on “ನೀನು ನೀನೆ…..ಆನು ಆನೆ (?)

  1. ಲಾಯಿಕಾಯಿದು ಅನುಪಮ… ಉತ್ತಮ ವಿಷಯ…
    ~ಸುಮನಕ್ಕ…

  2. ಹಾಂಗೂ ಹೀಂಗೂ ಹೇಂಗೇ ಇರಲಿ; ನೀನು ನಿನ್ನ ಹಾಂಗೆ ಇರು -ಹೇಳುವ ಸಂದೇಶ.ಧನ್ಯವಾದ.ಕಡೆಂಗೋಡ್ಲು ಶಂಕರ ಭಟ್ಟರ ಕವಿತೆ ಒಂದರಲ್ಲಿ ಹೇಳಿದ ಹಾಂಗೆ-ಸುಗ್ಗಿಯಿರಲಿ,ಮಾಗಿಯಿರಲಿ ಹಿಗ್ಗಿ ಹಿಗ್ಗಿ ಕಳೆಯುವ..ಎಂತಾದರು ಎಲ್ಲಾದರು ಪಂತ ಹಿಡಿದು ಬದುಕುವ…

  3. ಹಾಂಗೂ ಹೀಂಗೂ ಹೇಂಗೇ ಇರಲಿ; ನೀನು ನಿನ್ನ ಹಾಂಗೆ ಇರು -ಹೇಳುವ ಸಂದೇಶ.ಧನ್ಯವಾದ.

  4. ಜೀವನಲ್ಲಿ ಏವದನ್ನೂ ಬಯಸದ್ದೆ ಸಕಲವನ್ನೂ ಸ್ವೀಕಾರ ಮಾಡುವ ಕಲೆಯ ಕಲ್ತರೆ ನೆಮ್ಮದಿಯ ದಾರಿ ಕಾ೦ಗು. ( Never expect anything in life but accept everything).ಕಲಿವ ಪ್ರಯತ್ನ ಮಾಡುವ°.
    ಸರಳ ಸ೦ದೇಶಕ್ಕೆ ಧನ್ಯವಾದ ಅಕ್ಕಾ.

  5. ಅರ್ಥ ಆತು ಅರ್ಥ ಆತು ಅರ್ಥ ಆತು.

    ವಿಷಯ ಅಪ್ಪಾದ್ದೆ. ಒಪ್ಪೆಕ್ಕಾದ್ದೆ. ಒಪ್ಪಿತ್ತು.

    ಚಿಕ್ಕವಾಗಿ ಚೊಕ್ಕವಾಗಿ ಚಂದ ಆಯ್ದು ಹೇಳಿ ಒಪ್ಪ ಹೇಳಿತ್ತು ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×