Oppanna.com

“ನುಣ್ಣಂಗಿದ್ದವರ ಬಣ್ಣ ಬೇರೆ” (ಹವ್ಯಕ ನುಡಿಗಟ್ಟು–6)

ಬರದೋರು :   ವಿಜಯತ್ತೆ    on   01/07/2014    6 ಒಪ್ಪಂಗೊ

’ನುಣ್ಣಂಗಿದ್ದವರ ಬಣ್ಣ ಬೇರೆ’- (ಹವ್ಯಕ ನುಡಿಗಟ್ಟು—6)

ಹಿಂದೆ ಅಜ್ಜನ ಮನೆಲಿ ಅವರ, ಎಲೆ ತಿಂಬ ಚಙಾಯಿ ಒಬ್ಬ ಬಂದುಕೊಂಡಿಕ್ಕು,  ಪಟ್ಟಾಂಗ  ಹಾಕುಲೆ. ಬಹುಶಃ ಬಂಟನೋ ಆಗಿರೆಕು.ಹತ್ರಾಣ ಕೆಲವು ಮನಗೊಕ್ಕೂ ಹೋಕು. ಬ್ರಾಹ್ಮಣರಲ್ಲಿ ಬಂಟ್ರುಗೊಕ್ಕೆ ಮರ್ಯಾದೆ ರಜ್ಜ ಹೆಚ್ಚಿಗೆಯಿದ! ಅದೂ ಅಲ್ಲದ್ದೆ ಈ ಮನುಷ್ಯ ಜೆಮ್ಮಿ(ಗೆದ್ದೆ,ತೋಟ ಇಪ್ಪ ಜೆನ).ಇಲ್ಲಿಗೆ ಬಂದರೆ  ’ಎಲೆಮರಿಗೆ’ ಎಳದು ಮಡಗಿಯೊಂಡು ಎಲೆಜಗುಕ್ಕೊಂಡು ಕೂದುಗೊಂಗು ಪಂಚಾಯಿತಿಗೆ ಮಾಡ್ಲೆ. ಆ ಊರ, ಈ ಊರ ವರ್ತಮಾನ, ಅಡಕ್ಕೆ ಬೆಳೆ, ಗೆದ್ದೆ ಬೆಳೆ ಒಟ್ಟಿಂಗೆ  ಹತ್ರಾಣ  ಮನುಷ್ಯರ ಹೊಗಳುದು,ತೆಗಳುದು ಎಲ್ಲ ಇಕ್ಕು. ಅಜ್ಜ  ಹೂಂ…ಹಾಂ ಹೇಳಿ ಹೂಂಕುಟ್ಟುಗಷ್ಟೆ.

ಅದು ಹೋದ ಮತ್ತೆ ಎಂಗೊ ಪುಳ್ಳಿಯಕ್ಕೊ ಆರಾರು; “ಆರ ಕತೆ ಅಜ್ಜ ಆ ಬಂಟ  ಹೇಳಿಗೊಂಡಿದ್ದದು? ನಿಂಗೊ ಅಂತೇಹೂಂಕುಟ್ಟಿದ್ದಲ್ಲದ್ದೆ ನಿಂಗಳ ಅಭಿಪ್ರಾಯ ಹೇಳಿದ್ದೇಇಲ್ಲಿ?” ಕೇಳಿರೆ,

“ಹಾಂ.. ಹಾಂಗಿದ್ದವರತ್ರೆ ನಾವೆಂತದೂ ಮರುವಡಿ ಹೇಳ್ಲಾಗ. ಅದು ಹಾಂಗಿಪ್ಪ ಜೆನ! ಇಲ್ಲಿ ಅವರ ದೂರಿರೆ; ಅಲ್ಲಿ ನಮ್ಮ ದೂರುಗು!. “ನುಣ್ಣಂಗಿದ್ದವರ ಬಣ್ಣ ಬೇರೆ” ಹೇದೊಂದು ಮಾತಿದ್ದು. ಕಾಂಬಲೆ ಅದು ಸಜ್ಜನ ಅಷ್ಟೆ! ಇಲ್ಲಿ ಮಾತಾಡುವಾಗ ನವಗೆ ಬೇಕಾದ ಹಾಂಗೆ ಮಾತಾಡಿಕ್ಕಿ ಇಲ್ಲಿಂದ ತಿರಿಗಿಯಪ್ಪಗ ನವಗೆ ವಿರೋದವೇ ಮಾತಾಡುಗು. ಹೀಂಗಿಪ್ಪವರತ್ರೆ ಜಾಗ್ರತೆಯಾಗಿರೆಕು”. ಹೇಳಿದೊವು.

ಅಪ್ಪು.ಹಾಂಗಿದ್ದೊವು ನಮ್ಮ ನೆಡುಕೆ  ಎಷ್ಟೋ ಜೆನ ಇರ್ತವಲ್ಲೊ? ನಮ್ಮ ಗುಟ್ಟು ಅರಡಿವಲೆ ನಮ್ಮ ಕೆಣಕ್ಕಿಕ್ಕಿ; ಆಚಿಕೆ ಹೋಗಿ ಒಂದಕ್ಕೆ ಹತ್ತು ಸೇರ್ಸಿ  ಬೇರೆ ಕಡೆ ಬಿಕ್ಕಿ, ವಿಕೃತ ಸಂತೋಷ ಪಡುವವೇ ಹೆಚ್ಚಿನವೂ ಇದ್ದವು. ಇನ್ನು ಕೆಲವು ಜೆನರ, ವೆಕ್ತಿಯ ನೋಡಿಯಪ್ಪಗ ಪಾಪದವ, ಸಜ್ಜನ, ಹೇಳಿ ಕಂಡರೂ ಅವರ ಗುಣ,ದೋಷ ಅರ್ತಪ್ಪಗ ಅದಕ್ಕೆ ವಿಪರೀತವೇ ಇರ್ತವು. ಇಂತವರ ನೋಡಿ,ಅನುಭವಿಸಿಯೇ ಮದಲಾಣವು ’ನುಣ್ಣಂಗಿದ್ದವರ ಬಣ್ಣ ಬೇರೆ’ಹೇಳ್ತ ಹೇಳಿಕೆ ಮಾಡಿ ಮಡಗಿದ್ದವು. ಈ ನಮುನೆ ಜೆನಂಗಳ ನಮ್ಮ ಪರಿಸರಲ್ಲಿ, ನಿತ್ಯ ಜೀವನಲ್ಲಿ, ನಿಂಗೊಗೂ ಅನುಭವ ಇಕ್ಕು. ಎಂತ ಹೇಳ್ತಿ?

6 thoughts on ““ನುಣ್ಣಂಗಿದ್ದವರ ಬಣ್ಣ ಬೇರೆ” (ಹವ್ಯಕ ನುಡಿಗಟ್ಟು–6)

  1. ಹರೇರಾಮ, ನಮ್ಮ ಹೆಡ್ಮಾಸ್ಟ್ರಿಂಗೆ ಕೊಲಮು ಬದಲಿ ಹೋತೋಳಿ? ಶಾಲೆಯ ಶುದ್ದಿ ಹೇಳಿ ಗಡಿಬಿಡಿಗೆ ಒಪ್ಪಕೊಟ್ಟದು ’ನುಡಿಗಟ್ಟಿನ ’ ಪಾರ ಆಗಿಹೋತೋಳಿ. ತೊಂದರೆಯಿಲ್ಲೆ. ಬಿಡಿ.. ಒಪ್ಪ ಬರದ ಎಲ್ಲರಿಂಗೂ ಧನ್ಯವಾದಂಗೊ

  2. ಆಯಿದಪ್ಪಾ ಆಯಿದು.
    ಹೀಂಗಿರ್ತೋರ ಸಾವಾಸದ ಅನುಭವ ನವಗೂ ಆಯಿದು.
    ನಮ್ಮ ಜಾಗ್ರತೆಲಿ ನಾವಿದ್ದುಗೊಂಡು ಇಂಥವರೊಟ್ಟಿಂಗೆ ಎಷ್ಟು ಬೇಕೋ ಅಷ್ಟೇ ಮಡುಗಿಯೊಂಡರೆ ನವಗೇ ಕ್ಷೇಮ ಹೇಳ್ತದರ ನಿಂಗೊ ಈ ನುಡಿಗಟ್ಟಿನ ಉದಾಹರಣೆ ತೆಕ್ಕೊಂಡು ನೆಂಪುಮಾಡಿದ್ದು ಒಳ್ಳೆದಾತು ವಿಜಯತ್ತೆ..

  3. ಶ್ಯ್ಯಾಂಭಟ್ ದರ್ಭೆ ಮಾರ್ಗ,, ಮುಖ್ಯ ಮಾಸ್ಟ್ರು, ಶ್ರೀಭಾರà says:

    ವಿಜಯತ್ತಗೆ ಧನ್ಯವಾದ, ಶಾಲೆಯ ಶುದ್ದಿಗೊ ಹೀಂಗೆ ಬತ್ತಾ ಇರಲಿ. ಶ್ರೀ ಗುರುದೇವತಾನುಗ್ರಹಂದ ಮೊನ್ನೆ ನೆಟ್ಟ ಗೆಡುಗೊ ಬೆಳದು ಫಲಪುಷ್ಪ ನೀಡಲಿ.

  4. ಅಪ್ಪು ಇನ್ತೋವು ತುಂಬಾ ಜನಂಗ ಇದ್ದವು ನಮ್ಮ ಜಾಗ್ರತೆಲಿ ನಾವಿರಕ್ಕು ಹೇಳುದರ ಇದು ತಿಳಿಸುತ್ತು ಅಲ್ಲದ ?ಒಳ್ಳೆ ನುಡಿಗಟ್ಟು ವಿಜಯಕ್ಕ ತಿಳಿಸಿದ್ದಕ್ಕೆ ಧನ್ಯವಾದಂಗ

  5. “ಅತಿ ವಿನಯಂ …..” ಮಾತುದೆ ಇದ್ದಲ್ಲದೋ..? ಇದೆಲ್ಲ ಅನುಭವಿಗೋ ಅರ್ತು ಗೊಂಡು ಹೇಳಿದ ಮಾತುಗೋ.

  6. ಅಪ್ಪು.ಕೆಲವು ಜೆನಕ್ಕೆ ಒಕ್ಕುವ ಅಭ್ಯಾಸ.ಅವರ ವಿಷಯ ಹೇಳದ್ದೆ ನಮ್ಮದರ ಮಾಂತ್ರ ಕೇಳುವದು.ಮತ್ತೆ ಊರಿಡೀ ಪ್ರಚಾರ.ಇಂತವರ ಬಗ್ಗೆ ಎಚ್ಚರಿಕೆ ಅಗತ್ಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×