Oppanna.com

ಪದ ಪರಿಚಯ

ಬರದೋರು :   ಪುಣಚ ಡಾಕ್ಟ್ರು    on   05/06/2017    3 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ನಿಧಿ:

ನಿಧೀಯತೇ ಅತ್ರ ಇತಿ ನಿಧಿಃ

ಧೀಙ್ ಧಾರಣೇ ಧಾತುವಿಂದ ನಿಧಿ ಶಬ್ದ ಉತ್ಪತ್ತಿ ಆಯಿದು

ಸ್ವರ್ಣಗುಣಾದಿಗಳ ಧಾರಣೆ ಮಾಡುವ ಕಾರಣ ನಿಧಿ

ಉದಾ : ಗುಣನಿಧಿ, ಜಲನಿಧಿ, ಸ್ವರ್ಣನಿಧಿ

 

ಅಜ್ಞಾತಸ್ವಾಮಿಕಚಿರನಿಖಾತಸ್ವರ್ಣಾದಿಃ ನಿಧಿಃ

ಯಜಮಾನ ಆರು ಹೇಳಿ ಗೊಂತಾಗದ್ದ, ತುಂಬಾ ಸಮಯಂದ ಮಣ್ಣು ಸೇರಿದ ಚಿನ್ನವೇ ಮೊದಲಾದ ಬೆಲೆಬಾಳುವ ವಸ್ತು ಸಂಗ್ರಹವೇ ನಿಧಿ.

 

ಚಿರಪ್ರನಷ್ಟಸ್ವಾಮಿಕಭೂಜಾತಧನವಿಶೇಷಃ ನಿಧಿರುಚ್ಯತೇ

ಒಡೆಯ / ವಾರಸುದಾರರಿಲ್ಲದ್ದೆ ಭೂಮಿ ಸೇರಿದ ಸಂಪತ್ತೇ ನಿಧಿ.

 

 

ನಿಧಿ ಸಿಕ್ಕಿದರೆ ಅದರ ಯಾವ ರೀತಿ ವಿನಿಯೋಗ ಮಾಡೆಕ್ಕು ಹೇಳಿ ಪ್ರಾಜ್ಞರು ನಿಯಮ ಮಾಡಿದ್ದವು:

 

ರಾಜಾ ಲಬ್ಧ್ವಾ ನಿಧಿಂ ದದ್ಯಾತ್ ದ್ವಿಜೇಭ್ಯೋsರ್ಧಂ ದ್ವಿಜಃ ಪುನಃ।

ವಿದ್ವಾನಶೇಷಮಾದದ್ಯಾತ್ ಸ ಸರ್ವಸ್ಯ ಪ್ರಭುರ್ಯತಃ।।

 

ಇತರೇಣ ನಿಧೌ ಲಬ್ಧೇ ರಾಜಾ ಷಷ್ಠಾಂಶಮಾಹರೇತ್।

ಅನಿವೇದಿತವಿಜ್ಞಾತೋ ದಾಪ್ಯಸ್ತಂ ದಂಡಮೇವ ಚ।।(ಯಾಜ್ಞವಲ್ಕ್ಯ )

 

ಮಮಾಯಮಿತಿ ಯೋ ಬ್ರೂಯಾನ್ನಿಧಿಂ ಸತ್ಯೇನ ಮಾನವಃ।

ತಸ್ಯಾದದೀತ ಷಡ್ಭಾಗಂ ರಾಜಾ ದ್ವಾದಶಮೇವ ವಾ।।(ಮನು)

 

 

ರಾಜಂಗೆ ನಿಧಿ ಸಿಕ್ಕಿದರೆ ಅದರ ಅರ್ಧಭಾಗವ ಬ್ರಾಹ್ಮಣರಿಂಗೆ ದಾನ ಮಾಡೆಕ್ಕು.

ವಿದ್ವಾಂಸನಾದ ಬ್ರಾಹ್ಮಣಂಗೆ ನಿಧಿ ಸಿಕ್ಕಿದರೆ ಅವ ಅದರ ಪೂರ್ಣ ಮಡಿಕ್ಕೊಂಬಲಕ್ಕು. ಶ್ರುತಾಧ್ಯಯನಸಂಪನ್ನ ಸದಾಚಾರಿ ಬ್ರಾಹ್ಮಣ ಎಲ್ಲೋರಿಂಗೂ ಪ್ರಭು ಸಮಾನ.

ಇತರರಿಂಗೆ ಸಿಕ್ಕಿದರೆ ಅದರಲ್ಲಿ ಆರನೇ ಒಂದಂಶ ಅವಂಗೇ ಕೊಟ್ಟು ಒಳುದ ಭಾಗವ ರಾಜನೇ ಮಡಿಕ್ಕೊಳ್ಳೆಕ್ಕು.

ಆರಿಂಗಾದರೂ ನಿಧಿ ಸಿಕ್ಕಿ ರಾಜಂಗೆ ಹೇಳದೆ ಮಡಿಕ್ಕೊಂಡದು ಗೊಂತಾದರೆ ಆ ವ್ಯಕ್ತಿ ಶಿಕ್ಷಾರ್ಹ(ಯಾಜ್ಞವಲ್ಕ್ಯ ಸ್ಮೃತಿ)

 

ಒಂದು ವೇಳೆ ಆರಿಂಗಾದರೂ ಅಜ್ಞಾತ ನಿಧಿ ಸಿಕ್ಕಿದರೆ ಅದರ ನಿಜವಾದ ವಾರಸುದಾರ ಬಂದು ಅದರ ರೂಪಸಂಖ್ಯಾದಿಗಳ ಹೇಳಿ ಎನ್ನದೇ ಹೇಳಿ ರಾಜನಲ್ಲಿ ಸತ್ಯ ಹೇಳಿದರೆ ನಿಧಿಯ ಆರನೇ ಒಂದು ಅಥವಾ ಹನ್ನೆರಡನೇ ಒಂದು ಭಾಗವ ಅವಂಗೆ ರಾಜ ಕೊಡೆಕ್ಕು (ಮನು ಸ್ಮೃತಿ)

 

ಕುಬೇರನ ನವನಿಧಿಗೊ:

 

ಮಹಾಪದ್ಮಶ್ಚ ಪದ್ಮಶ್ಚ ಶಂಖೋ ಮಕರಕಚ್ಛಪೌ। ಮುಕುಂದಕುಂದನೀಲಾಶ್ಚ ಖರ್ವಶ್ಚ ನಿಧಯೋ ನವ।।

 

 

ಮಹಾಪದ್ಮ, ಪದ್ಮ ಶಂಖ ಮಕರ, ಕಚ್ಛಪ, ಮುಕುಂದ, ಕುಂದ, ನೀಲ, ಖರ್ವ ಇವು ಒಂಬತ್ತು ಕುಬೇರನ ನವನಿಧಿಗೊ.

ಕೆಲವು ಕಡೆ ಖರ್ವ ಬದಲು ವರ್ಚ ಹೇಳ್ತವು.ಇದರ ಬಿಟ್ಟು ಎಂಟೇ ನಿಧಿಗಳ ಉಲ್ಲೇಖವೂ ಇದ್ದು.

 

ಪದ್ಮಿನೀ ನಾಮ ಯಾ ವಿದ್ಯಾ ಲಕ್ಷ್ಮೀಸ್ತಸ್ಯಾಧಿದೇವತಾ।

ತದಾಧಾರಾಶ್ಚ ನಿಧಯಸ್ತಾನ್ಮೇ ನಿಗದತಃ ಶ್ರುಣು।।

 

ಲಕ್ಷ್ಮಿಯೇ ಅಧಿದೇವತಯಾದ ಪದ್ಮಿನೀ ವಿದ್ಯೆ ಈ ಎಲ್ಲಾ ನಿಧಿಗೊಕ್ಕೆ ಆಧಾರ. ಸತ್ಯಲ್ಲಿ ಋಜು ಜೀವನ ನಡೆಸುವವರ ಮೇಲೆ ಈ ನಿಧಿಗಳ ದೃಷ್ಟಿ ಬೀಳ್ತು.

 

 

ಗುಣಾನುಸಾರ ಈ ನಿಧಿಗೊ ಮೂರು ವಿಧ:

ಸಾತ್ವಿಕ, ತಾಮಸ, ರಾಜಸ

 

ಪದ್ಮ ಮಹಾಪದ್ಮಂಗೊ ಸಾತ್ವಿಕ ನಿಧಿಗೊ

ಮಕರ ಕಚ್ಛಪಂಗೊ ತಾಮಸ ನಿಧಿಗೋ

ಮುಕುಂದ ರಾಜಸ ನಿಧಿ

ಕುಂದ ಸತ್ವರಜೋಗುಣಯುಕ್ತ

ನೀಲ ಸತ್ವತಮೋಗುಣಯುಕ್ತ

ಶಂಖ ರಜಸ್ತಮೋಗುಣಯುಕ್ತ

 

ಯಾವ ನಿಧಿಯ ಅನುಗ್ರಹ ಆವುತ್ತೊ ಆಯಾ ಗುಣಸ್ವಭಾವದ ಗುಣಸಂಪತ್ತು ಅವನದ್ದಾವುತ್ತು.

 

 

ಪದ್ಮ ನಿಧಿಯ ಅನುಗ್ರಹ ಆದವಂಗೆ ಅವನ ಮಕ್ಕೊ ಮೊಮ್ಮಕ್ಕಳ ವರೆಗೂ ಧಾರಾಳತನ ಸಾತ್ವಿಕ ಗುಣ ಸ್ಥಿರವಾದ ಸಾತ್ವಿಕ ಐಶ್ವರ್ಯ ಸಿಕ್ಕುತ್ತು ಚಿನ್ನ ಬೆಳ್ಳಿ ತಾಮ್ರ ಮೊದಲಾದ ಧಾತುಗಳ ಹೊಂದಿ ಅದರ ಕ್ರಯವಿಕ್ರಯಾದಿ ಮಾಡ್ತ.

ಯಜ್ಞಯಾಗಾದಿಗಳ ತಾನೂ ಮಾಡಿಗೊಂಡು ಮಾಡುವವಕ್ಕೆ ಸಹಾಯ ಮಾಡಿಕೊಂಡು ಇರ್ತ.

ಯಥೇಚ್ಚವಾದ ಐಶ್ವರ್ಯ ಕ್ರಮಾಗತವಾಗಿ ಅವನದ್ದಾವುತ್ತು.

 

 

ಸತ್ವಾಧಾರವಾದ ಮಹಾಪದ್ಮದ ಅನುಗ್ರಹ ಆದವ ಸತ್ವಗುಣಿಯಾಗಿ

ಪದ್ಮರಾಗ, ಮುತ್ತು ಹವಳ ಮೊದಲಾದ ಸಂಪತ್ತಿನ ಹೊಂದಿ ಅದರ ಕ್ರಯವಿಕ್ರಯಾದಿ ಮಾಡ್ತ. ಸಜ್ಜನರಿಂಗೆ ದಾನ ಮಾಡ್ತ.

ತಾನೂ ತನ್ನ ಸಂತಾನವೂ ಸಾತ್ವಿಕರಾಗಿ ಅವನ ಸಂಪರ್ಕ ಪಡದೋವು ಕೂಡ ಸಾತ್ವಿಕ ಆವುತ್ತವು.

 

 

ತಾಮಸವಾದ ಮಕರವೆಂಬ ನಿಧಿಯ ಅನುಗ್ರಹ ಆದವ ಸುಶೀಲನಾಗಿದ್ದು ತಾಮಸ ಪ್ರಧಾನ ಗುಣ ಹೊಂದುತ್ತ. ಬಿಲ್ಲುಬಾಣಖಡ್ಗವೇ ಮೊದಲಾದ ಆಯುಧಸಂಗ್ರಹ ಹೊಂದಿ ರಾಜರಿಂಗೆ ಮಿತ್ರನಾಗಿರ್ತ. ಆಯುಧಂಗಳ ಕ್ರಯವಿಕ್ರಯ ಮಾಡಿ ಅವಕ್ಕೆ ಪ್ರಿಯನಾಗಿ ಇರ್ತ.

ಈ ನಿಧಿಯ ಅನುಗ್ರಹ ಪುತ್ರ ಪೌತ್ರರಿಂಗೆ ಒಳಿತ್ತಿಲ್ಲೆ.

ಸಂಪತ್ತಿಂಗಾಗಿ ದಸ್ಯು(ದುರ್ಜನ)ಗಳೊಟ್ಟಗೆ ಹೋರಾಟಲ್ಲಿ ಅವ ನಾಶಹೊಂದುವ ಸಾಧ್ಯತೆಯೂ ಇದ್ದು.

 

 

ಕಚ್ಛಪವೆಂಬ ತಾಮಸ ನಿಧಿಯ ಅನುಗ್ರಹ ಆದವ ತಾಮಸಗುಣಿಯಾಗಿ ದುರ್ಜನರಲ್ಲಿ ಮಾತ್ರ ವ್ಯಾಪಾರವ್ಯವಹಾರ ಮಾಡ್ತ. ಏಕಾಕಿಯಾದ ಇವ ಆರನ್ನೂ ನಂಬುವ ಜೆನ ಅಲ್ಲ. ಸಕಲಸಂಪತ್ತು ಇದ್ದರೂ ಯಾವಾಗಲೂ ವ್ಯಾಕುಲನಾಗೇ ಇರ್ತ. ಸಂಪತ್ತು ನಾಶ ಅಪ್ಪ ಹೆದರಿಕೆ ಅವಂಗೆ. ಆರಿಂಗೂ ಕೊಡದ್ದೆ ತಾನೂ ಉಣ್ಣದ್ದೇ ಅವನ ಸಂಪತ್ತು ಭೂಮಿ ಸೇರ್ತು.

 

 

ಮುಕುಂದ ಹೇಳ್ತ ನಿಧಿ ರಾಜಸ. ಅದರ ದೃಷ್ಟಿ ಆರ ಮೇಲೆ ಆವುತ್ತೊ ಅವ ರಾಜಸ ಗುಣ ಹೊಂದುತ್ತ.

ವೀಣೆಕೊಳಲುಮೃದಂಗಾದಿಗೀತವಾದ್ಯ ಸಂಗೀತ ನೃತ್ಯಾದಿಗಳಲ್ಲಿ ಆಸಕ್ತನಾಗಿ ಅದರಿಂದಲೇ ಧನಸಂಪಾದನೆ ಮಾಡ್ತ.

ತನ್ನ ಹೊಗಳುವ ವಂದಿಮಾಗಧಸೂತವಿಟವನಿತೆಯರಿಂಗೆ ಅನಗತ್ಯ ಖರ್ಚು ಮಾಡ್ತ. ಕುಲಟೆ ಸ್ತ್ರೀಸಹವಾಸ ಮಾಡಿ ಅಹರ್ನಿಶಿ ಭೋಗಲ್ಲಿ ಮುಳುಗಿರ್ತ.

 

ಕುಂದವೆಂಬ ಸತ್ವರಜೋಗುಣಯುಕ್ತ ನಿಧಿಯಿಂದ ಅವಲೋಕಿತನಾದವ ಅದೇ ಗುಣಯುಕ್ತನಾಗಿರ್ತ

ಸಮಸ್ತ ಸ್ವರ್ಣಾದಿ ಧಾತು, ರಕ್ತ ವೈಢೂರ್ಯಾದಿ ರತ್ನ, ವಾದ್ಯಾದಿಗಳ ಹೊಂದಿ ಅದರ ಕ್ರಯವಿಕ್ರಯಾದಿಂದ ಸಂಪಾದನೆ ಮಾಡ್ತ.

ಸ್ವಜನರಿಂಗೂ ಅತಿಥಿ ಅಭ್ಯಾಗತರಿಂಗೂ ಆಧಾರವಾಗಿರ್ತ.

ಅವಮಾನವ ಸಹಿಸ, ಸ್ತುತಿ ಪ್ರೀತಿಯಿಂದ ಸಂತೋಷಪಡ್ತ.

ಮೃದುಗುಣಂದ ಬೇಕಾದ್ದರ ಪಡೆತ್ತ.

ದೊಡ್ಡ ಸಂಸಾರ ದೀರ್ಘಾಯುಷ್ಯ ಹೊಂದಿ ಪುತ್ರಪೌತ್ರಾದಿವರೆಗೆ ಸುಖ ಹೊಂದುತ್ತ.

 

ನೀಲವೆಂಬ ನಿಧಿ ಸತ್ವತಮೋಗುಣಯುಕ್ತ.

ಇದರಂದ ದೃಷ್ಟನಾದವಂಗೆ ಸಹವಾಸಿಗಳ ಸ್ನೇಹ ಬೇಡ. ಬೇರೆಯವರ ಸ್ನೇಹ ಮಾಡ್ತ

ಹತ್ತಿ ವಸ್ತ್ರ ಧಾನ್ಯ ಫಲ ಪುಷ್ಪ ಶಂಖ ಶುಕ್ತಿ ಕಾಷ್ಠ (ಒಣಗಿದ ಮರ) ಗಳ ಕ್ರಯವಿಕ್ರಯಂದ ಸಂಪಾದನೆ ಇವನದ್ದು. ಕೆರೆ ಅಣೆಕಟ್ಟೆ ಉದ್ಯಾನಾದಿ ಜನೋಪಯೋಗಿ ಕೆಲಸ ಮಾಡ್ತ.

 

 

ರಜಸ್ತಮೋಗುಣಯುಕ್ತ ಶಂಖನಿಧಿದೃಷ್ಟನಾದವ ಏಕಾಕಿಯಾಗಿ ಸುಖಪಡುವ ಗುಣದವ. ಹೆಂಡತಿ ಮಕ್ಕೊ ಗೆಳೆಯರಿಂಗೂ ಕೊಡುವ ಜಾಯಮಾನ ಅಲ್ಲ. ಸ್ವಪೋಷಣೆ ಮಾತ್ರ ಇವನ ಗುರಿ

 

ಇವಿಷ್ಟು ಒಂದೊಂದೇ ನಿಧಿಗಳ ಗುಣಂಗೊ

ಮಿಶ್ರ ನಿಧಿ ದೃಷ್ಟಿ ಆದರೆ ಮಿಶ್ರ ಗುಣಂಗೊ ಬಕ್ಕು

 

 

ಆಧಾರ:: ಶಬ್ದಕಲ್ಪದ್ರುಮ, ವಾಚಸ್ಪತ್ಯಂ ಅಮರಕೋಶ

3 thoughts on “ಪದ ಪರಿಚಯ

  1. ತುಂಬಾ ವಿಷಯ ಇದ್ದು,ಅಪೂರ್ವ ವಿವರ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×