Oppanna.com

“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)

ಬರದೋರು :   ವಿಜಯತ್ತೆ    on   05/06/2017    8 ಒಪ್ಪಂಗೊ

 

“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)

ನೆರೆಕರೆ, ನೆಂಟ್ರಿಷ್ಟರೂಳಿ ಭೇಟಿಯಪ್ಪಗ, ಸುಖ-ದುಕ್ಕ ಕೇಳುವದು ಇಪ್ಪದೇ. ಹೀಂಗೊಂದು ಜೆಂಬಾರಕ್ಕೆ ಆನು ಹೋದ ಸಂದರ್ಭಲ್ಲಿ ; “ಅಪ್ಪೊ ಭಾವಯ್ಯಾ ಮನ್ನೆ ಆರೋ ಕುಳವಾರು ಬಂದು ಕೂಸಿನ ನೋಡಿಕ್ಕಿ ಹೋಯಿದವಾಡ, ಎಂತಾತದು?” ಕೇಳಿದ  ಒಬ್ಬ .

“ಅದೆಂತರ  ಅಪ್ಪದು! ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ ಮಾಡಿದ್ದ ಸಂಧಾನ ಹಾಕಿದವ!”

ಈ ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ ಹೇಳಿರೆ ಎಂತ ಅರ್ಥ!?, ಅಪ್ಪನತ್ರೆ ಕೇಳಿದೆ. ಅದಕ್ಕೆ ಅವು ಹೇಳಿದೊವು

“ನೋಡು,ಮೋಳೇ  ಬೆಳೂಲ ರಾಶಿಲಿ ಹಲಸಿನ ಕಾಯಿ ಕಡುದು ಕಡಿಮಾಡಿ ಹಾಕಿ ನೋಡು! ಅದು ನಿನ ಉಪಕಾರಕ್ಕೆ ಸಿಕ್ಕ. ಹಲಸಿನಕಾಯಿ ಮೇಣಕ್ಕೆ ಬೆಳೂಲು ಅಂಟಿ ನಿಂದು ನಿನ ಅದರ ಎಳಕ್ಕಲೆ ಕಷ್ಟ!, ಆವಲೂ ಎಡಿಯ!!.

“ಮಾಡಿದ ಕೆಲಸ ಸರೀ ಸುಸೂತ್ರ ಆಗದ್ದಕ್ಕಿದ ಈ ಮಾತು ಹೇಳುವದು”, ಹೇಳಿದವು ಎನ್ನಪ್ಪ. ಈ ಮಾತಿನ ನಿಂಗಳ ಹೆರಿಯವೂ ಹೇಳುವದು ಕೇಳಿಪ್ಪಿ, ಎಂತ ಹೇಳ್ತಿ?.

8 thoughts on ““ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)

  1. ಲಾಯ್ಕ ಗಾದೆ ,ಸಮರ್ಥ ವಿವರ.ಚಿಕ್ಕಮ್ಮ ಇದೆಲ್ಲ ಪುಸ್ತಕ ಮಾಡಿ

  2. ಚೆನ್ನೈ ಭಾವ ಹೇದರೆ ಅರ್ತಿಕಜೆ ಶ್ರೀ ಕೃಷ್ಣ ಭಾವನೊ ಎಂತ?

  3. ಗಾದೆ ಒಳ್ಳೆ ದಿದ್ದು. ಆನು ಈ ಗಾದೆಯ ಮದಲು ಕೇಳಿ ದ್ದಿಲ್ಲೆ.

  4. ವಿಜಯತ್ತಿಗೆ,
    ಆನು ಈ ನುಡಿಗಟ್ಟು ಕೇಳಿತ್ತಿದ್ದೆ. ಆದರೆ ಸರಿಯಾಗಿಅರ್ಥ ಆದ್ದು ನೀನು ವಿವರಿಸಿದ ಮತ್ತೆಯೇ
    ಧನ್ಯವಾದಂಗೊ

    1. ಶರ್ಮಭಾವ, ಎನಗೆ ಹೀಂಗಿದ್ದೆಲ್ಲ ಎನ್ನ ಅಪ್ಪನತ್ರಂದ ಬಂದ ಬಳುವಳಿ. ನಿನ ಗೊಂತಿದ್ದಾಂಗೆ; ಅವು ಮಾತು ಮಾತಿಂಗೆ ಗಾದೆ -ನುಡಿಗಟ್ಟು ಹೇಳಿ ಸಮಜಾತಿಶಿಕೆ ಕೊಡುಗಿದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×