Oppanna.com

“ಮನೆ ಎಜಮಾನ ಮೆಟ್ಟುಕಲ್ಲಿನ ಹಾಂಗೆರೆಕು” [ಹವ್ಯಕ ನುಡಿಗಟ್ಟು-19]

ಬರದೋರು :   ವಿಜಯತ್ತೆ    on   05/11/2014    2 ಒಪ್ಪಂಗೊ

ಮನೆ ಎಜಮಾನ ಮೆಟ್ಟುಕಲ್ಲಿನ ಹಾಂಗಿರೆಕು—[ಹವ್ಯಕ ನುಡಿಗಟ್ಟು-19]

ಮನಗಳಲ್ಲಿ ಕಾರ್ಬಾರು ಮಾಡುತ್ತವಕ್ಕೆ ಮನೆ ಎಜಮಾನ ಹೇಳ್ತು ನಾವು, ಮನೆಲಿದ್ದ ಎಲ್ಲೋರ ಸುಖ-ದುಃಖವನ್ನೂ ಆ  ಎಜಮಾನ ನೋಡಿಗೊಂಡು, ಎಲ್ಲೋರಿಂಗೂ ಬೇಕಾದ ಹಾಂಗೆ ಒಪ್ಪಿಗೆ ಆವುತ್ತ ಹಾಂಗೆ ನೆಡಕ್ಕೊಳೆಕ್ಕಾರೆ ಅದೆಷ್ಟು ತಾಳ್ಮೆ ಇದ್ದರೂ ಸಾಲ!.ಸ್ಥಿತಿ-ಗತಿಲಿ ಪಾಪದವಾದರೆ, ಮನೆತುಂಬ ಜೆನವೂ ಇದ್ದರೆ  ಅವನ ಪರಿಸ್ಥಿತಿ  ಕೇಳುವದೇ ಬೇಡ!! ಮದಲಾಣ ಕಾಲಲ್ಲಿ ಗವರ್ಮೆಂಟು ಕೆಲಸವೂ ಇರಯಿದ. ಖರ್ಚಿಗೆ ತತ್ವಾರ. ಮನೆ ಒಳ ಇದ್ದ ಮನುಷ್ಯರ ಹೊಟ್ಟೆ-ಬಟ್ಟೆ ನೋಡಿಗೊಳೆಕ್ಕು!. ಒಟ್ಟಿಂಗೆ ಹಟ್ಟಿಲಿದ್ದ ದನಗಳ,ತೋಟ ಇದ್ದವಕ್ಕೆ ಕೆಲಸದಾಳುಗಳ ಸಂಬಳ!! ಇದೆಲ್ಲ ಆಯೆಕ್ಕು.ಮನೆ ಒಳಾಣ ಹೆಮ್ಮಕ್ಕಳತ್ರೆ ವ್ಯವಹರುಸೆಕ್ಕಾರು ಜಾಗ್ರತೆ ಬೇಕು!, ಅಬ್ಬೆ ಹೇಳಿದ ಹಾಂಗೆ ಕೇಳಿರೆ, ಹೆಂಡತ್ತಿಗೆ ಕೋಪ ಬಕ್ಕು,ಹೆಂಡತ್ತಿ ಹೇಳಿದ ಹಾಂಗೆ ಕೇಳಿರೆ, ಅಬ್ಬಗೆ ಪಿಸುರು ಎಳಗ್ಗು!. ಅಪ್ಪನ ಮನೋಭಿಲಾಷೆ ಬೇರೆಯೇ ಇಕ್ಕು.ಮಕ್ಕಳ ಬೇಡಿಕೆಯೋ ಇನ್ನೊಂದು ನಮುನೆ!!. ಈ ಎಲ್ಲ ಮಜಲುಗಳ ಮರ್ಯಾದಿಗೆ ದಾಂಟಿ ಬಪ್ಪದೊಂದು ಹರಸಾಹಸವೇ ಸರಿ!.!. ಈಗೀಗ ಕೂಡುಕುಟುಂಬ ಹೋಗಿ, ಗೆಂಡ-ಹೆಂಡತಿ ಮಾಂತ್ರ ಇದ್ದಲ್ಲಿ  ಇಂತಾ ಸಮಸ್ಯೆ ರಜ ಕಮ್ಮಿ ಹೇಳ್ಲಕ್ಕು.ಆದರೂ ಎಜಮಾನ ಆದವಂಗೆ ಒತ್ತಡ ಕಮ್ಮಿಯೇನಲ್ಲ!. ಎಷ್ಟೇ ಮೆಟ್ಟಿ ತೊಳುದರೂ ಸಹಿಸೆಂಡಿಪ್ಪ ಮೆಟ್ಟು ಕಲ್ಲಿನ ಹಾಂಗಿರೆಕು ಹೇದೊಂಡು ಹೋಲಿಕೆ ಕೊಡುಸ್ಸು ನಮ್ಮ ಹೆರಿಯವು,  ಸಹಿಸುತ್ತ ಸಹನೆಯ ಶಕ್ತಿಗೊಂದು ಸಂದೇಶ.

2 thoughts on ““ಮನೆ ಎಜಮಾನ ಮೆಟ್ಟುಕಲ್ಲಿನ ಹಾಂಗೆರೆಕು” [ಹವ್ಯಕ ನುಡಿಗಟ್ಟು-19]

  1. “ಇದ್ದರೂ ಸಾಲ,ಇಲ್ಲದ್ದರೂ ಸಾಲ”ಇಂದ್ರಾಣ ಪರಿಸ್ಥಿತಿ.ಎಷ್ಟು ತಾಳ್ಮೆ ಇದ್ದರೂ ಸಾಲ.ಒಳ್ಳೆದಾಯಿದು ವಿಜಯಕ್ಕ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×