Oppanna.com

ಮನೇಲಿಪ್ಪ ಮಾಣಿ ವ್ಯಥೆ

ಬರದೋರು :   ಕಲ್ಪನಾ ಅರುಣ್    on   06/07/2014    2 ಒಪ್ಪಂಗೊ

ನಮ್ಮನೆ ಮಾಣಿ
ಎಂಎ ಮಾಡಿದ್ದಾ
ತೋಟಾಗದ್ದೆ ದನಾಕರು
ನೋಡ್ಕಂಡ್ ಮನೇಲಿದ್ದಾ||

ಬೇಕಾದಾಂಗ ಇದ್ದು
ಊಟ ಆಸ್ರಿಗ್ ತೊಂದ್ರಿಲ್ಲೆ
ಮನೇವಳ್ಗೆ ಯೆಲ್ಲಾ ಸೌಕರ್ಯ
ಹಳ್ಳೀಲೂ ಇಂತಾಮನೆ ಹೇಳೂದೇ ಆಶ್ಚರ್ಯ||

ಮದ್ವೆ ವಯಸ್ಸಾತು
ಕೂಸ್ನ ನೋಡ್ತಾ ಇದ್ದೊ
ಎಲ್ಲೆಲ್ಲೂ ಜಾತ್ಕಾ ಹೊಂದ್ತಿಲ್ಲೆ
ಹೊಂದದ್ರೂ ಕೂಸು ಒಪ್ತಿಲ್ಲೆ||

ಮಾಣೀಗ್ ಮಾ ಬೇಜಾರು
ಮದ್ವೆ ಆಗ್ತ್ನಿಲ್ಲೆ ಅಂಬಾ
ಅಪ್ಪ ಅಬ್ಬೆಗಾಂತೂ ಬೇಜಾರೇ ಬೇಜಾರು
ಕೂಸ್ನ ಹುಡಿಕೊಡಿ ಯಾರಾದ್ರೂ ಪುಣ್ಣಿವಂತ್ರು||

ಹವೀಕ್ರಾದ ನಂಗೊಕೆ
ಅವೇ ಸಿಕ್ರೆ ಭಾರೀ ಖುಷಿ
ಸಸ್ಯಾಹಾರಿಯಕ್ಕೊ ಆದ್ರೂ ಅಡ್ಡಿಲ್ಲೆ ಕಡೇಪಕ್ಷ
ಸಂಸಾರ ತಾಪಾತ್ರಯಾ ಕೈಯಂತೂ ಬಿಡ್ತಿಲ್ಲೆ
ಮಾಣಿಗ್ ನೋಡ್ದ್ರೆ ಮದ್ವೆ ಕೂಡ್ ಬತ್ತಾ ಇಲ್ಲೆ||

ಗುಣಾ ಇದ್ರೇಯೆಂತದು? ರೂಪಾ ಇದ್ರೆಯೆಂತದು?
ಮನೇಲಿಪ್ಪೂ ಮಾಣೀಗೆ ಸುಖಾ ಹೇಳೂದ್ ದೂರಾ
ಅಪ್ಪ ಅಬ್ಬೆ ಸಂತೀಗ್ ಇದ್ರೆ ಕೂಸ್ನ ಕಡೇಗ್ ಭಾರಾ
ಮನೆತನಾ ಸುಖಾಯಿಲ್ಲೆ ಹೇಳೂದ್ ಭಾರೀ ಖಾರಾ||

ಮಾಣಿಗಂತೂ ತಲೆಶೂಲೆ
ಕೂಸ್ನ ಹುಡ್ಕಿ ಮನ್ಸು ಶಿಲೆ
ಸೋತು ಸೋತು ಸುಣ್ಣಾಗಿ
ದೇವ್ರ ಪಾದಕ್ ಸೊಲ್ಗೆ ಹಾಲೇ||

ದೇವ್ರೆ ಮಗಂಗ್ ಕೂಸ್ನ ಕೊಡು
ಮದ್ವೆ ಅಪ್ಪೂ ಯೋಗಾ ಕೊಡು
ನಂಗ್ಳ ಮನೆ ಉದ್ದಾರಾಗಿ
ಮುಂದ್ ಹೋಪ್ಲಕ್ ದಾರಿ ಬಿಡು||

2 thoughts on “ಮನೇಲಿಪ್ಪ ಮಾಣಿ ವ್ಯಥೆ

  1. ಹೀಂಗಿಪ್ಪ ಮಾಣಿಯ ವ್ಯಥೆಗೆ ಬೇಕಾಗಿ ಎಂತಾರೂ ಸಕಾಯ ಮಾಡುವೊ ಹೇಳಿರೆ ನವಗೆಡಿಯ. ಪದ್ಯ ಓದಿ ಬೇಜಾರಾದರೂ ಲಾಯಕಿತ್ತು.

  2. ಲಾಯಕ ಆಯಿದು .ಈ ಸಮಸ್ಯೆಗೆ ಪರಿಹಾರ ಎಂತ? ಹೆಂಗೆ ? ಕೂಸುಗಳ ಮತ್ತೆ ಅವರ ಮಾತಾಪಿತರ ಅಭಿಪ್ರಾಯಲ್ಲಿ ಸುಧಾರಣೆ ಆಯೆಕ್ಕಷ್ಟೇ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×