Oppanna.com

“ಮರದ ಕೇಡು ಮರವನ್ನೆ ತಿಂಗು”–{ಹವ್ಯಕ ನುಡಿಗಟ್ಟು-60}

ಬರದೋರು :   ವಿಜಯತ್ತೆ    on   14/07/2016    8 ಒಪ್ಪಂಗೊ

-“ಮರದ ಕೇಡು ಮರವನ್ನೆ ತಿಂಗು”-{ಹವ್ಯಕ ನುಡಿಗಟ್ಟು-60}

ತುಂಬಿದ ಕುಟುಂಬ. ಅಜ್ಜᵒ, ಅಜ್ಜಿ, ಮಕ್ಕೊ, ಸೊಸೆಯಕ್ಕೊ, ಪುಳ್ಳ್ಯಕ್ಕೊ  ಹೇಳಿ ಹತ್ತಿಪ್ಪತ್ತು ಜೆನಂಗೊ ಆ ಮನೆಲಿ. ಅರೇ!. ಒಂದೇ ಮನೆಲಿ ಇಷ್ಟೆಲ್ಲಾ ಜೆನವಾ!? ಹೇಳಿ ಆಶ್ಚರ್ಯ ಅಕ್ಕು ನಿಂಗೊಗೆ. ಆದರೆ ಈ ಶುದ್ದಿ ಹತ್ತೈವತ್ತು ವರ್ಷ ಹಿಂದಾಣದ್ದು. ಅಪ್ಪು ತುಂಬಿದ ಸಂಸಾರಲ್ಲಿ ಒಬ್ಬೊಬ್ಬᵒ  ಒಂದೊಂದು  ನಮುನೆಲಿಕ್ಕು. ಒಳ್ಳೆದಲ್ಲಿರೆಕಾರೆ ಮನೆ ಎಜಮಾನಕ್ಕೊ ಬಹು ತಾಳ್ಮೆಲಿರೆಕು.ಅದೂ ಅತ್ತೆ-ಸೊಸೆ  36 ಅಪ್ಪಲಾಗ   63 ಆಗೆರೆಕು. ಆರಾರುದೆ ಕೇಡು ಮಾಡ್ತವರ ಕಂಡ್ರೆ  ಹೆರಿ ಅಜ್ಜಿಯಕ್ಕೊ  ಹೇಳುಗು “ಮರದ ಕೇಡು ಮರವನ್ನೆ ತಿಂಗು”  ನಮ್ಮ ಎಂತೂ ಮಾಡ್ಳೆಡಿಯ!. ಅದ್ಧೇಂಗೆ..,?.ಮನುಷ್ಯರ ಮನಸ್ಸಿನೊಳ ಇಪ್ಪಾಂಗೆ  ಮರದ ಒಳ ಅದರ ತಿರುಳಿನ ಹಾಳು ಮಾಡ್ತ ಕೇಡು ಇಕ್ಕು.  ಅದು ಮರದ ಬೊಂಡಿನ ತಿಂದು,ತಿಂದೂ ದಿನ ಹೋದಾಂಗೆ ಮರ ಎಂತ ಉಪಕಾರಕ್ಕೂ ಆಗ!. ಕೆಡುಕು ಮರ ಗಟ್ಟಿ ಇಲ್ಲದ್ದೆ; ಒಂದು ಗಾಳಿ ಬಂದರೆ ಬೀಳುಗು.ಮನುಷ್ಯರೂ ಕೇಡುಮಾಡೆಂಡಿದ್ದರೆ ಹೀಂಗೇ ಅಕ್ಕೋ!?.

ಮನುಷ್ಯರ ಕೇಡು ಅವರ ಆರೋಗ್ಯಕ್ಕೆ ಹಾಳೂಳಿ ನಮ್ಮ ಹೆರಿಯೊವು ಬಹು ಹಿಂದೆ ಅನುಭವಿಸಿದ ಅನುಭವಂಗಳ, ಹೀಂಗಿದ್ದ ಲೋಕೋಕ್ತಿ, ನುಡಿಗಟ್ಟುಗಳಲ್ಲಿ ಹೇಳೆಂಡು, ಒಳುಶೆಂಡು ಬಂದರೆ; ವಿಜ್ಞಾನಿಗೊ, ಡಾಕ್ಟ್ರಕ್ಕೊ ಈಗೀಗ ಕಂಡುಹಿಡುದು ಹೇಳ್ತವು!. ದೇಹದಾರೋಗ್ಯಕ್ಕೂ ಮನೆಯೊಳಾಣ ಒಗ್ಗಟ್ಟಿಂಗೂ ಎಷ್ಟೊಳ್ಳೆ ನುಡಿಗಟ್ಟು!.  ಹೆರಿಯೊವು ಹೇಳಿದ್ದು., ಅರ್ತು ನೆಡಕ್ಕೊಂಬವಕ್ಕೆ…,!!  ಎಂತ ಹೇಳ್ತಿ?.

—-೦—-

8 thoughts on ““ಮರದ ಕೇಡು ಮರವನ್ನೆ ತಿಂಗು”–{ಹವ್ಯಕ ನುಡಿಗಟ್ಟು-60}

  1. ಅಪ್ಪು ಗೋಪಾಲ .ನಾವು ಒಳ್ಳೆವಾದರೆ ಎಲ್ಲೋರು ಒಳ್ಳೆವೆ. ಈ ಮಾತಿನ ಎನ್ನ ಅಪ್ಪಂ ಅಂಬಗಂಬಗ ಹೇಳುಗು.

  2. ಒಳ್ಳೆದು ಕೆಟ್ಟದು ಎಲ್ಲವುದೆ ನಮ್ಮ ಒಳ ಇದ್ದು. ನಾವು ಸರಿಯಾಗಿದ್ರೆ ಎಲ್ಲವುದೆ ಸರಿಯಾಗಿಕ್ಕು. ಒಳ್ಳೆ ಮಾತು ವಿಜಯಕ್ಕ.

  3. ಮನೆಗಳಲ್ಲಿ ಸಾಮರಸ್ಯ ಇರೆಕು ಹೇಳಿ ತುಂಬಾ ಚೆಂದಕೆ ನುಡಿಗಟ್ಟಿನ ಮೂಲಕ ಪ್ರಸ್ತುತಿಪಡಿಸಿದ ವಿಜಯತ್ತಿಗೆಗೆ ಧನ್ಯವಾದಂಗೊ

  4. ಮೂವತ್ತಾರು ಅಪ್ಪಲಾಗ ಅರುವತ್ತಮೂರು ಆಯೇಕು ಹೇಳ್ತ ಪ್ರಯೋಗ ಲಾಯ್ಕಾಯಿದು ವಿಜಯಕ್ಕ.

  5. ಅರ್ಥಪೂರ್ಣ ನುಡಿಗಟ್ಟು . ಒಪ್ಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×