Oppanna.com

“ಮಾತಿಲ್ಲಿ ಬರೆಕು ಮನಸ್ಸಿನ ರೂಪ”–(ಹವ್ಯಕ ನುಡಿಗಟ್ಟು-16)

ಬರದೋರು :   ವಿಜಯತ್ತೆ    on   10/09/2014    5 ಒಪ್ಪಂಗೊ

”ಮಾತಿಲ್ಲಿ ಬರೆಕು ಮನಸ್ಸಿನ ರೂಪ”—(ಹವ್ಯಕ ನುಡಿಗಟ್ಟು-16)

’ಮಾತುಬೆಳ್ಳಿ  ಮೌನ ಬಂಗಾರ’ಹೇಳ್ತ  ಮಾತೊಂದಿದ್ದು. ಕೆಲವು ಸರ್ತಿ, ಮಾತು ಹೇಳದ್ದರ ಮೌನ ಹೇಳುಗು. ಅದು ಮಾತಿಂದಲೂ  ಸತ್ಪರಿಣಾಮ ಅಕ್ಕು!.ಆದರೆ,  ನಾವಾಡ್ತ ಮಾತಿದ್ದನ್ನೆ, ಅದು ಮನಸ್ಸಿನ ಬಿಚ್ಚಿ ಮಡುಗಿ ಪ್ರಾಮಾಣಿಕವಾಗಿರೆಕು!.ಮಾತಿಂದಲೇ ಕೋಪ!, ಮಾತಿಂದ ದ್ವೇಷ!, ಮಾತಿಂದಲೇ ಸ್ನೇಹ!. ಹಾಂಗೇ ಮಾತಿಲ್ಲಿ ಒಂದು, ಮನಸ್ಸಿಲ್ಲಿ ಇನ್ನೊಂದು!  ಪ್ರಕಟ ಆವುತ್ತ ಮನುಷ್ಯರೂ ಇದ್ದವು.ಅದು ನವಗೆಲ್ಲ ಗೊಂತಿದ್ದ ಹಾಂಗೆ ನಾಟಕ . ಈ ನಾಟಕಲ್ಲಿ ಎರಡು ನಮುನೆ ಇದ್ದು.ಒಂದು ಕಲಾ ಪ್ರದರ್ಶನ ಆದರೆ; ಇನ್ನೊಂದು, ಇನ್ನೊಬ್ಬನ  ಮೆಚ್ಚುಸಲಿಪ್ಪ ಅಸ್ತ್ರ!  ಕೆಲವು ಸರ್ತಿ ಇದು ಘೋರ ಆಗಿ   ’ಗೋಮುಖ ವ್ಯಾಘ್ರ’ ಅಪ್ಪದೂ ಇದ್ದು!!.  ಇದು ಇನ್ನೊಬ್ಬನ ಸೋಲುಸಲಿಪ್ಪ ’ಕೆಣಿ’ಯೂ ಅಪ್ಪು.ಹೀಂಗಿದ್ದ ಕಂಟಕರು ನಮ್ಮೊಳ ಸೇರಿಗೊಂಡರಿದ್ದನ್ನೆ.., ಅದು ತೀರಾ ಅಪಾಯ!!.ಈಗ ನಮ್ಮ ಶ್ರೀ ಸಂಸ್ಥಾನದವಕ್ಕೆ ತಂದೊಡ್ಡಿದ ಕುತ್ತು ಇಂತವರಿಂದಲೇ ಬಂದದು ಹೇಳಿ ನೆಂಪಾವುತ್ತು!!.ಒಳ ಸೇರುವಗ ಗೋವು. ಮತ್ತೆ,  ವ್ಯಾಘ್ರರು!!

ಆದರೆ.. ಮನಸ್ಸಿಲ್ಲಿದ್ದದರನ್ನೆ ಮಾತಿಲ್ಲಿ ಸಾತ್ವಿಕತೆಲಿ ಹೇಳಿದರೆ; (ಸಮಯ,ಸಂದರ್ಭ ಹೊಂದಿಯೊಂಡು) ಅಂತವಕ್ಕೆ ಸತ್ಯಾದಿಗರು ಹೇಳುಗು. ಅವರ ನಡತೆಯ ಸಮಾಜವೂ ಮೆಚ್ಚುತ್ತು. ಆದರೆ..ಗೋಮುಖ ವ್ಯಾಘ್ರರು ಜನಮಾನಸಲ್ಲಿ ಬಾಳ್ವಿಕೆ ಕಮ್ಮಿ!. ಅವಕ್ಕೆ ಮನ್ನಣೆಯೂ ಇಲ್ಲೆ!. ನಾವೆಲ್ಲ ಕಾಯಾ,ವಾಚಾ, ಮನಸಾ ಪ್ರಾಮಾಣಿಕವಾಗಿ, ಶುದ್ಧವಾಗಿಪ್ಪೊ೦. ಹೇಳ್ತಾ ಇಲ್ಲಿಗೆ ಮುಗುಶುತ್ತೆ. ಎಲ್ಲೋರು ಓದಿ ಒಪ್ಪ ಕೊಡಿ.

5 thoughts on ““ಮಾತಿಲ್ಲಿ ಬರೆಕು ಮನಸ್ಸಿನ ರೂಪ”–(ಹವ್ಯಕ ನುಡಿಗಟ್ಟು-16)

  1. ಹರೇರಾಮ,,,,ನಿನ್ನ ಮನಸ್ಸಿನ ಬಿಚ್ಚಿ ಮಡಗಿದ್ದೆ ಲಲಿತಾ ,ಸರಿ ನೀನು ಹೇಳುತಿಪ್ಪದುccccccccccccccccccccccccccccccccccccccccccccccccccccc

  2. ವಿಜಯಕ್ಕಾ ವಿನಾಶಕಾಲೇ ವಿಪರೀತ ಬುದ್ಧಿ: ಅಲ್ದಾ? ಎಲ್ಲಾ ಅವತಾರಗಳೂ ದುಷ್ಟನಿಗ್ರಹಕ್ಕೆ ಹೇಳೇ ಅಜು.ಆದ್ರೆ ನಂಗ್ಳ ಗುರುಗಳಿಗೆ ಎದುರಾದ ದುಷ್ಟಶಕ್ತಿ ಉಳಿದ ಯಾವ ರಾಕ್ಷಸರಿಗಿಂತ ಭಿನ್ನ ಅಲ್ದಾ? ಜ್ನಮಾಂತರಗಳ ಪಾಪ ಅವಳ ರೂಪದಲ್ಲಿ ಬಂಜು ಅನ್ನಸ್ತು ನಂಗೆ. ಆದ್ರೆ ಈ ಸಮಾಜದ ಉದ್ಧಾರ ಮಾಡಲು ಹೋಗಿ ನಂಗ್ಳ ಗುರುಗಳಿಗೆ ಅದೆಂತಾ ಕಡುಕಷ್ಟ ಎದ್ರಸಕಾತು? ಇರಲಿ, ಬೆಳಗಾದ ಕೂಡ್ಲೇ ಹೊಳೆಹೊಳೆವ ಸೂರ್ಯ ಬಂದೇ ಬತ್ತ. ಕ್ಷಣಕಾಲ ಹಿಡಿದ ಗ್ರಹಣ ಕೊಡವಿ ಸರಿಸಿ ನಂಗ್ಳ ಗುರುಗಳು ಮತ್ತಿಷ್ಟು ಪ್ರಕಾಶಮಾನವಾಗಿ ಮಿಂಚತ್ರು. ಆದರೂ ನಾಯಿ ಕಚ್ಚಿದ ಸನ್ಯಾಸಿ ಅಂದ್ಹಾಂಗೆ ಸನ್ಯಾಸಿಯೇ ಆದ್ರೂ ನಾಯಿ ಕಚ್ಚಿದ ನೋವು ಎದ್ರಸಲೇಬೇಕಾತು. ಜಗತ್ತನ್ನೇ ಕಾಯುವ ಆ ಜೀವವ ಹಿಂಡಿ…ಹಿಂಡಿ… ನೋವನ್ನೇ ಆಹಾರವಾಗಿಸಿದ್ದು ಮಾತ್ರ ಅರಗಿಸಿಕೊಳ್ಳಲಾಗದ ಸತ್ಯ.ಲಕ್ಷಗಟ್ಟಲೇ ಒಳ್ಳೆಯೋರಿದ್ರು ಒಂದು ದುಷ್ಟಶಕ್ತಿ ಇದ್ರೆ ಹೇಂಗೆ ಎಲ್ಲವ್ದನ್ನೂ ಅಸ್ತವ್ಯಸ್ತ ಮಾಡ್ಲಕ್ಕು ಹೇಳುಲೆ ಇದೇ ಸಾಕ್ಷಿ ನೋಡು. ತಾನು ನಾಶವಾದದ್ದಲ್ಲದೇ ತನ್ನ ಕುಲಕೋಟಿಯನ್ನೇ ನಾಶಮಾಡುಲೆ ಪಣತೊಟ್ಟು ವ್ಯವಹಾರ ಮಾಡ್ದ , ಸ್ತ್ರೀ ಕುಲಕ್ಕೇ ಕಳಂಕವೆನಿಸಿದ ಆ ಹೆಣ್ಣೆಂಬ ರಾಕ್ಷಸಿಗೆ ಎಂತ ಕೊನೆ ಬಕ್ಕು? ಎಷ್ಟೆಲ್ಲಾ ಜನರ ಕಣ್ಣೀರಿಗೆ ಕಾರಣವಾದ ಅವಳ ಅಂತ್ಯ ಹೇಂಗಕ್ಕು. ನಾ ಬದುಕಿದ್ದಾಗಲೇ ..ಅವಳಂತ್ಯ ನೋಡಿ ಜಗತ್ತಿಗೆ ಸತ್ಯ ಸಾರುವಾಸೆ ನಂಗೆ. ಗುರುಕೃಪೆ ಜಗ ಪೊರೆಯಲಿ…ಲಲಿತಾಲಕ್ಷ್ಮೀ

  3. ವಿಜಯಕ್ಕಾ ವಿನಾಶಕಾಲೇ ವಿಪರೀತ ಬುದ್ಧಿ: ಅಲ್ದಾ? ಎಲ್ಲಾ ಅವತಾರಗಳೂ ದುಷ್ಟನಿಗ್ರಹಕ್ಕೆ ಹೇಳೇ ಅಜು.ಆದ್ರೆ ನಂಗ್ಳ ಗುರುಗಳಿಗೆ ೆದುರಾದ ದುಷ್ಟಶಕ್ತಿ ಉಳಿದ ಯಾವ ರಾಕ್ಷಸರಿಗಿಂತ ಭಿನ್ನ ಅಲ್ದಾ? ಜ್ನಮಾಂತರಗಳ ಪಾಪ ಅವಳ ರೂಪದಲ್ಲಿ ಬಂಜು ಅನ್ನಸ್ತು ನಂಗೆ. ಆದ್ರೆ ಈ ಸಮ಻ಝದ ುದ್ಧಾರ ಮಾಡಲು ಹೋಗಿ ನಂಗ್ಳ ಗುರುಗಳಿಗೆ ಅದೆಂತಾ ಕಡುಕಷ್ಟ ಎದ್ರಸಕಾತು? ಇರಲಿ, ಬೆಳಗಾದ ಕೂಡ್ಲೇ ಹೊಳೆಹೊಳೆವ ಸೂರ್ಯ ಬಂದೇ ಬತ್ತ. ಕ್ಷಣಕಾಲ ಹಿಡಿದ ಗ್ರಹಣ ಕೊಡವಿ ಸರಿಸ ನಂಗ್ಳ ಗುರುಗಳು ಮತ್ತಿಷ್ಟು ಪ್ರಕಾಶಮಾನವಾಗಿ ಮಿಂಚತ್ರು. ಆದರೂ ನಾಯಿ ಕಚ್ಚಿದ ಸನ್ಯಾಸಿ ಅಂದ್ಹಾಂಗೆ ಸನ್ಯಾಸಿಯೇ ಆದ್ರೂ ನಾಯಿ ಕಚ್ಚಿದ ನೋವು ಎದ್ರಸಲೇಬೇಕಾತು. ಜಗತ್ತನ್ನೇ ಕಾಯುವ ಆ ಜೀವವ ಹಿಂಡಿ…ಹಿಂಡಿ… ನೋವನ್ನೇ ಆಹಾರವಾಗಿಸಿದ್ದು ಮಾತ್ರ ಻ರಗಿಸಿಕೊಳ್ಳಲಾಗದ ಸತ್ಯ.ಲಕ್ಷಗಟ್ಟಲೇ ಒಳ್ಳೆಯೋರಿದ್ರು ಒಂದು ದುಷ್ಟಶಕ್ತಿ ಇದ್ರೆ ಹೇಂಗೆ ಎಲ್ಲವ್ದನ್ನೂ ಅಸ್ತವ್ಯಸ್ತ ಮಾಡ್ಲಕ್ಕು ಹೇಳುಲೆ ಇದೇ ಸಾಕ್ಷಿ ನೋಡು. ತಾನು ನಾಶವಾದದ್ದಲ್ಲದೇ ತನ್ನ ಕುಲಕೋಟಿಯನ್ನೇ ನಾಶಮಾಡುಲೆ ಪಣತೊಟ್ಟು ವ್ಯವಹಾರ ಮಾಡ್ದ , ಸ್ತ್ರೀ ಕುಲಕ್ಕೇ ಕಳಂಕವೆನಿಸಿದ ಆ ಹೆಣ್ಣೆಂಬ ರಾಕ್ಷಸಿಗೆ ಎಂತ ಕೊನೆ ಬಕ್ಕು? ಎಷ್ಟೆಲ್ಲಾ ಜನರ ಕಣ್ಣೀರಿಗೆ ಕಾರಣವಾದ ಅವಳ ಅಂತ್ಯ ಹೇಂಗಕ್ಕು. ನಾ ಬದುಕಿದ್ದಾಗಲೇ ..ಅವಳಂತ್ಯ ನೋಡಿ ಜಗತ್ತಿಗೆ ಸತ್ಯ ಸಾರುವಾಸೆ ನಂಗೆ. ಗುರುಕೃಪೆ ಜಗ ಪೊರೆಯಲಿ…ಲಲಿತಾಲಕ್ಷ್ಮೀ

  4. ಅದು ಯಾವುದೇ ವ್ಯಕ್ತಿ ಆಗಿರಲಿ ಅವನ ಮೋರೆ ನೋಡಿರೆ jena hEnge ಹೇಳಿ ಗೊಂತಕ್ಕು ಹೇಳಿ ಕೆಲವು ಜೆನಂಗೊ ಹೇಳುವದು ಕೇಳಿದ್ದೆ akka. ಆಗಲಿ ಜನರ ಗುಣ ಪ್ರಕಟ ಅಪ್ಪದು ಮೊರೆಲಿ ಹೇಳುವದು ಲೊಟ್ಟೆ alla.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×