Oppanna.com

“ರಚ್ಚೆಂದ ಬಿಡ,ಗೂಂಜಿಂದ ಬಿಡ”-( ಹವ್ಯಕ ನುಡಿಗಟ್ಟು-91)

ಬರದೋರು :   ವಿಜಯತ್ತೆ    on   06/06/2017    19 ಒಪ್ಪಂಗೊ

“ರಚ್ಚೆಂದ ಬಿಡ,ಗೂಂಜಿಂದ ಬಿಡ”-(ಹವ್ಯಕ ನುಡಿಗಟ್ಟು-91)

ಸಣ್ಣಾದಿಪ್ಪಗಣ ಒಂದು ಪ್ರಸಂಗ! ಚಾವಡಿಲಿ ತಮ್ಮಂದ್ರು ಎರಡು ಜೆನವೂ ಎಂತದೋ ವಿಷಯಕ್ಕೆ ಲಡಾಯಿ ಮಾಡ್ಳೆ ಸುರುಮಾಡಿದೊವು.ಅತ್ತೂ-ಇತ್ತೂ ಹೊಯಿಕ್ಕಯಿ ಮಾಡುದು ನಿಲ್ಲುತ್ತೇ ಇಲ್ಲೆ.ಅಬ್ಬೆ ಅವರ ಎರಡು ಜೆನರನ್ನೂ ಬಿಡುಸಲೆ ನೋಡಿದ್ದು ಪ್ರಯೋಜನ ಆತಿಲ್ಲೆ.

ಅಬ್ಬೆ ಹೆರ ಬಂದು, “ಇದಾ..,ಇವರ ಇಬ್ರ ವಾದಾಂಟ ಮುಗಿತ್ತಿಲ್ಲೆ.ರಚ್ಚೆಂದಲೂ ಬಿಡುತ್ತಿಲ್ಲೆ,ಗೂಂಜಿಂದಲೂ ಬಿಡುತ್ತಿಲ್ಲೆ. ಇವರ ಎಳದು ತೆಕ್ಕಂಡು ಹೋಗಿ ಹೆರಾಂಗೆ” ಹೇಳಿತ್ತಬ್ಬೆ ಅಪ್ಪನತ್ರೆ.

ಅವಕ್ಕೆ ರಜ ಬುದ್ಧಿಮಾತು ಹೇಳಿರೂ ಪ್ರಯೋಜನ ಕಾಣದ್ದಿಪ್ಪಗ; ಅಪ್ಪᵒ ಅವರಿಬ್ಬರನ್ನೂ ಜಾಲಿಂಗೆ ಎಳಕ್ಕೊಂಡು ಬಂದು ನಿಲ್ಲಿಸಿದೊವು. ಅಲ್ಲಿಯೂ ಬಿಡದ್ದೆ ಜಗಳ ಮಾಡುಸ್ಸು ಕಾಂಬಗ ಜಾಲ ತಲೆಲಿದ್ದ ಬೆಳೂಲ ಕಟ್ಟವ ಎಳಕ್ಕೊಂಡು ಬಂದು ಅವರ ಮಧ್ಯಲ್ಲಿ ಮಡಗಿದೊವು. ರಜ ಹೊತ್ತು ಇಬ್ರೂ ಅತ್ತೂ ಇತ್ತೂ ಮೋರೆ ಮಸಕ್ಕೊಂಡು ನೋಡಿಕ್ಕಿ, ಮತ್ತೆ ಹುಳಿ ಹುಳಿ ನೆಗೆ ಮಾಡೆಂಡು, ಅವರವರ ಪಾಡಿಂಗೆ ಹೋದೊವು ಹೇಳುವೊಂ.

ಆರೇ ಆದರೂ ಇಬ್ರೂ ಮಾತಿಲ್ಲಿ ಆಗಲೀ ಕೈಲಿ ಆಗಲೀ ಹೊಯಿಕ್ಕಯಿ ಮಾಡುವದಕ್ಕೆ “ರಚ್ಚೆಂದಲೂ ಬಿಡ,ಗೂಂಜಿಂದಲೂ ಬಿಡ” ಹೇಳ್ತವು. ಹೇಳಿರೆ, ಹಲಸಿನಕಾಯಿ ಕೊರವಗ ರಚ್ಚೆಂದಲೂ ಗೂಂಜಿಂದಲೂ ಸೊಳೆ ಬಿಟ್ಟು,ಎಳಕ್ಕಿ ಬಂದರೇ ಸೊಳೆ ಆಯಿತ್ತ ಮುಂದಾಣ ಕೆಲಸ ಅಕ್ಕಷ್ಟೆ. ಹಾಂಗೆ ರಚ್ಚೆಂದಲೂ ಗೂಂಜಿಂದಲೂ ಬಿಡದ್ದ ಸೊಳೆಯ ಆವಲೂ ಎಡಿಯ. ಕೆಲವು ಜೆನ ಚರ್ಚೆ ಮಾಡುವಗಳೂ ಅಷ್ಟೆ. ಆನು ಮೇಲು,ತಾನು ಮೇಲೂಳಿ ಪಟ್ಟು ಬಿಡದ್ದೆ, ಚರ್ಚೆ ಮಾಡುವಗಳೂ ಈ ಮಾತಿನ ಬಳಕೆ ಮಾಡುತ್ತವು.

—–೦—-

19 thoughts on ““ರಚ್ಚೆಂದ ಬಿಡ,ಗೂಂಜಿಂದ ಬಿಡ”-( ಹವ್ಯಕ ನುಡಿಗಟ್ಟು-91)

    1. ನಮ್ಮ ಅಶ್ವಿನಿ ಕಾಮೆಂಟ್ಸ್ ಹಾಕಿದ್ದಿಲ್ಲೆ ಹೇದು ಹೇಳಿತ್ತು. ಹಾಂಗಾಗಿ ಇದು ಬೇರೆ ಅಶ್ವಿನಿ ಹೇಳಿ ಕಾಣುತ್ತು.

  1. ಅಶ್ವಿನಿಗೆ ಒಪ್ಪಣ್ಣನ ಬೈಲಿಂಗೆ ಸುಸ್ವಾಗತ ಹೇದು ಹೇಳಲಕ್ಕು. ಅಶ್ವಿನಿ ಹೇದರೆ ಎನ್ನ ತಮ್ಮ ಶಿವರಾಮ ಜೋಯಿಶನ ಮಗಳು. ಆನು ಒಂದೊದರಿ ಅದರ 1ನೇ ನಕ್ಷತ್ರ ಹೇದು ಹೇಳುತ್ತೆ. ಅಶ್ವಿನಿ ನಕ್ಷತ್ರ ದ ಉದಯ ಒಪ್ಪಣ್ಣನ ಬೈಲಿಲ್ಲಿ ಇನ್ನೂ ಬೆಳಕು ಬರಲಿ.

    1. ಆನು ಕುಂಞಣ್ಣನ ಕಾಮೆಂಟ್ಸ್ ಏಕೆ ಬಾರದ್ದು ಹೇದು ಗ್ರೇಶಿಯೊಂಡಿತ್ತಿದ್ದೆ.

  2. ಶಿವರಾಮ, ಸಾರು ಹೋಗಲಿ, ಕೊದಿಲು ಹೋಗಲಿ ಹೇದು ಹೇಳುವ ಹಾಂಗೆ ನೀನು ಹೇಳುತ್ತೆ ಅನ್ನೆ ಮಾರಾಯ. ಲೇಖನ ಬರವಲೆ ರಜ ಸಮಯ ಆವುತ್ತು ಹೇದು ಹೇಳಲೆ ಬಯಸುತ್ತೆ.

  3. ಈಗಲೂ ಕೆಲವರು ಇದ್ದವು..ಮೇಣ ಇಪ್ಪ ಹಲಸಿನ ಕಾಯಿಯೂ ಇದ್ದು

  4. ಈ ಗಾದೆ ಗೊಂತಿದ್ದು. ಆದರೆ ಈಗಾಣ ಮಕ್ಕೊಗೆ ಗೊಂತಿರ

  5. ಮಿತ್ತಮೂಲೆ ಶಿವರಾಮ ಜೋಯಿಷ ರೆ, ನಿಮಗೆ ಹಲಸಿನ ಹಣ್ಣು ಪ್ರೀತಿಯಡ.

  6. ಹಲಸಿನಕಾಯಿಗೀಗ ಇದು ಅನ್ವಯ ಆವ್ತೋ ಇಲ್ಯೋ ಮನುಷ್ಯರಿಂಗಂತೂ ಆಯಿಕ್ಕೊಂಡೇ ಇದ್ದಪ್ಪೋ ಅಲ್ಲಲ್ಲಿ. ಎಣ್ಣೆ ಪಸೆ ಮಾಡಿ ಸರಿಮಾಡಿಕ್ಕಟ್ಟೆ ಮತ್ತೆ

  7. ಆನು ಹೇಳಿದ್ದು ಸರಿ, ಆನು ಹೇಳಿದ್ದು ಸರಿ ಹೇಳಿ ಸುಮ್ಮನೇ ಲಡಾಯಿ ಮಾಡಿಕ್ಕಿ ಅದರಲ್ಲಿ ಆರೂ ಜೈಸಲೂ ಇಲ್ಲೆ, ಸೋಲಲೂ ಇಲ್ಲೆ. ಸುಮ್ಮನೇ ಕೆಟ್ಟ ಹಟ ಹಿಡುದಪ್ಪಗ ಈ ಮಾತು. ನಮ್ಮ ಮಕ್ಕಳ ಚ್ಯೂಯಿಂಗ್ ಗಮ್ಮಿನ ಹಾಂಗೆ. ಜಗುದಷ್ಟೂ ಮುಗಿವಲಿಲ್ಲೆ.

  8. ವಾದಲ್ಲಿ ಇಬ್ರೂ ಸಮರ್ಥರಾದರೆ ಈ ಗಾದೆ ಸರೀ ಅನ್ವಯ ಅಕ್ಕು.

    1. ಅಪ್ಪು ಭಾವಯ್ಯ, ಹಾಂಗಿಪ್ಪ ವಾದಾಂಟಕ್ಕೇ ಈ ಗಾದೆ ಉಪಯೋಗ. ಒಬ್ಬ ತಳಿಯದ್ದೆ ಕೂದ ಪ್ರಸಂಗಕ್ಕೆ ಈ ಮಾತು ಬಳಸುತ್ತೊವಿಲ್ಲೆ.

  9. ಗಮ್ಲೆಸ್ ಹಲಸಿನ ಕಾಯಿ ಬಂದು ಈ ಗಾದೆಯ ಉಪಯೋಗ, ಒಂದು ರಜ ಕಮ್ಮಿ ಆಯಿದು.

    1. ಉಪಯೋಗ ಕಮ್ಮಿ ಆಯಿದಿಲ್ಲೆ ಶಂಕರಣ್ಣ.ಇಲ್ಲೆಲ್ಲ ಮೇಣ ಇಪ್ಪ ಹಲಸಿನ ಕಾಯಿಯೇ ಇಪ್ಪದು. ಗಾದೆಯ ಮದಲೇ ಬಳಸೆಂಡಿದ್ದವು ಈಗಳೂ ಬಳಸುತ್ತೊವು. ಈಗಾಣವಕ್ಕೆ ಈ ನುಡಿಗಟ್ಟು, ಗಾದಗೊ ಎಲ್ಲಾ ಎಲ್ಲಿ ಗೊಂತಿದ್ದು. ಹೀಂಗೆ ಬರದು ಒಳುಶೀರೆ; ಇದ್ದತ್ತೂಳಿಯಾದರೂ ಗೊಂತಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×