Oppanna.com

“ಸತ್ತ ಎಮ್ಮಗೆ ಹತ್ತುಕುತ್ತಿ ಹಾಲು”-{ಹವ್ಯಕ ನುಡಿಗಟ್ಟು-34}

ಬರದೋರು :   ವಿಜಯತ್ತೆ    on   07/09/2015    3 ಒಪ್ಪಂಗೊ

“ಸತ್ತ ಎಮ್ಮಗೆ ಹತ್ತು ಕುತ್ತಿ ಹಾಲು”{ಹವ್ಯಕ ನುಡಿಗಟ್ಟು-34}

ಆಚ  ಬಯಲಿನ ಬೋಚಣ್ಣಜ್ಜನ ಹೆಂಡತ್ತಿ ಅಕ್ಕಮ್ಮಕ್ಕ  ಸತ್ತತ್ತಾಡ. ಅದರ ಸೊಸೆ ಹೇದೊಂಡು ಹರಿಯೊ-  ಮುರಿಯೊನೆ ಕೂಗಿತ್ತು.ಈ ಶುದ್ದಿ ಮನೆ ಎಜಮಾನ್ತಿ  ಹೇದಪ್ಪಗ ..,

” ಸತ್ತದು ಸೊಸಗೆ ಒಳ್ಳೆದಾತಾಯಿಕ್ಕು. ಅತ್ತೆ-ಸೊಸಗೆ ಏವತ್ತೂ ವಾದಾಂಟ ಆಗೆಂಡಿದ್ದತ್ತು”.ಎಜಮಾನನ ಪ್ರತ್ಯುತ್ತರಕ್ಕೆ,

‘’ಅಯ್ಯೋ.., ಒಳ್ಳೆದಾತು ಹೇಳ್ತೀರೊ?.ಅದರ ಸೊಸೆ ಸರಸು; ಅತ್ತೆಂದಾಗಿ ಎಷ್ಟು ಉಪಕಾರ ಆಗಿಂಡಿದ್ದತ್ತು ಹೇದು ಶುದ್ದಿ ಹೇದೊಂಡು ಬಿಕ್ಕಿ-ಬಿಕ್ಕಿ ಕೂಗಿತ್ತಪ್ಪ!’’.

ಅದೆಲ್ಲಾ ಬರೀ ನಟನೆ!. ‘ಸತ್ತ ಎಮ್ಮಗೆ ಹತ್ತು ಕುತ್ತಿ ಹಾಲು’  ಹೇಳ್ತ ನಮುನೆಲಿ ಮಾತಾಡುವದಿದ.

ಹೀಂಗೆ ಅವರಿಬ್ಬರ ಮಾತುಕತೆ ಅಪ್ಪಗ; “ಆ ಅಜ್ಜಿ ಸತ್ತದಕ್ಕೂ ಈ ಸತ್ತ ಎಮ್ಮಗೆ ಹತ್ತು ಕುತ್ತಿ ಹಾಲು ಸಿಕ್ಕುವದಕ್ಕೂ ಎಂತ ಸಂಬಂಧ!?”.ಅವರ ಪುಳ್ಳಿಯ ಕುತೂಹಲ!.

ಅದಲ್ಲೇ ಇಪ್ಪದದ ವಿಷಯ!.ಪ್ರಾಕಿಲ್ಲಿ ಒಂದು ಮನೆಲಿಸುಮಾರು ಕರವು ಕರದು ಮುದಿ ಆದ ಒಣಕ್ಕಟೆ ಎಮ್ಮೆ “ಒಂದಾರಿ ಸಾಯಲಿ ಇದು” . ಸುಮ್ಮನೇ ಅಕ್ಕಚ್ಚು,ಬೆಳೂಲು ದೆಂಡ. ಹೇದು ಗ್ರೇಶೆಂಡಿಪ್ಪಗ  ಒಂದಿನ ಅದು ಕೊಟ..ಕ್ಕು ಹೇಳೇಕ್ಕೊ!. ಅದು ಸತ್ತಪ್ಪಗ ಪೇಚಾಡೆಂಡವು.ಸುಮಾರು ವರ್ಷ ಹಾಲು ಕೊಟ್ಟು ನಮ್ಮ ತಾಂಗಿದ ಎಮ್ಮೆ ಅದು.ದಿನಕ್ಕೆ ಹತ್ತು ಕುತ್ತಿ ಹಾಲು ಕರದ ಎಮ್ಮೆ. ಅದಿನ್ನು ಕೆಲವು ವರ್ಷಾದರೂ ಬದುಕ್ಕೆಕ್ಕಾತು. ಗೊಬ್ಬರಾದರೂ ಒಂದಿಷ್ಟು ಆವುತಿತು.ಇಷ್ಟು ಬೇಗ ಸಾಯಿಗೂಳಿ ಗ್ರೇಶಿದ್ದೇ ಇಲ್ಲೆ!.ತುಂಬಲಾರದ ನಷ್ಟ ಹೇಳೆಂಡೊವು. ಅಲ್ಲಿಂದ ಸುರುವಾತಿದ ಈ ನುಡಿಗಟ್ಟು!. ಸತ್ತ ಮತ್ತೆ, ಕೈ ತಪ್ಪಿ ಹೋದ ಮತ್ತೆ, ಹೊಗಳಿ ಏರ್ಸಿ ಮಡುಗುವ ಮಾತಿಂಗೆ    ಈ ನುಡಿಗಟ್ಟಿನ ಬಳಸಿಗೊಳ್ತವು.ಒಂದು ರೀತಿಲಿ ರಾಜಕಾರಿಣಿಗೊ; ವಿರೋಧ ಪಕ್ಷದೊವು ಸತ್ತಪ್ಪಗ ಮಾಡುವ ನುಡಿನಮನ ಹೇಳ್ಲಕ್ಕೊ? ನಿಂಗೊ ಹೇಳಿ.

3 thoughts on ““ಸತ್ತ ಎಮ್ಮಗೆ ಹತ್ತುಕುತ್ತಿ ಹಾಲು”-{ಹವ್ಯಕ ನುಡಿಗಟ್ಟು-34}

  1. ಎಂತಾರು ಇಲ್ಲದ್ದೆ ಆಗಿಯಪ್ಪಗಳೇ ಅದರ ನಿಜವಾದ ಬೆಲೆ ಗೊಂತಪ್ಪದು. ಇಬ್ಲೀಸಿನ ಓಲ್ಡ್ ಈಸ್ ಗೋಲ್ಲ್ಡ್ ಹೇಳಿರುದೆ ರಜ್ಜ ಈ ನುಡಿಗಟ್ಟಿನ ಹತ್ರೆ ಬತ್ತೋ ಹೇಳಿ.
    ವಿಜಯಕ್ಕ, ನಿಂಗೊ ಬರೆತ್ತಾ ಇಪ್ಪ ಹವ್ಯಕ ನುಡಿಗಟ್ಟುಗಳ ಓದುತ್ತಾ ಇದ್ದೆ. ಓದಿ ಅಪ್ಪಗ “ಅಪ್ಪದು” ಹೇಳಿ ಕಾಣುತ್ತು. ಹಳೆಯ ನುಡಿಗಟ್ಟುಗಳ ಈಗಾಣ ಮಕ್ಕೊಗೆ ಪರಿಚಯಿಸುತ್ತಾ ಇಪ್ಪದು ಸಂತೋಷದ ವಿಚಾರ.

  2. ಇದು ಎಲ್ಲ ದಿಕ್ಕೂ ಕಾಂಬಲೆ, ಕೇಳುಲೆ ಸಿಕ್ಕುತ್ತು ಈಗೀಗ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×