Oppanna.com

ಸರಸ್ವತಿ ಶಂಕರ್ ಗೆ ಕಾಕೋಳು ಸರೋಜಮ್ಮ ಪ್ರಶಸ್ತಿ

ಬರದೋರು :   ಗೋಪಾಲಣ್ಣ    on   06/03/2016    5 ಒಪ್ಪಂಗೊ

ಗೋಪಾಲಣ್ಣ

ಕಾಕೋಳು ಸರೋಜಮ್ಮ ದತ್ತಿನಿಧಿ ಪ್ರಶಸ್ತಿಪ್ರದಾನಬೆಂಗಳೂರಿನ ಜಯನಗರಲ್ಲಿ ಇಪ್ಪ ಲೇಖಕಿ ಶ್ರೀಮತಿ ಸರಸ್ವತಿ ಶಂಕರ್ ಬರೆದ ಹೊಸ ಕಾದಂಬರಿ ” ಹಸಿರು ನೆಲದೆಡೆಗೆ”- ಈ ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದ ಕಾಕೋಳು ಸರೋಜಮ್ಮ ದತ್ತಿನಿಧಿ ಪ್ರಶಸ್ತಿ ಬೈಂದು.ಕುಂಬಳೆಯ ದಿ|| ಶೇಡಿಗುಮ್ಮೆ ಕೃಷ್ಣ ಭಟ್ಟರ ಹಿರಿಯ ಮಗಳಾದ ಇವು , ಡಾ|| ಶಂಕರ ಭಟ್ ಸುಳ್ಯ[ ವಿಶ್ರಾಂತ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ ;ಈಗ ಜೈನ್ ವಿಶ್ವವಿದ್ಯಾಲಯಲ್ಲಿ ಗೌರವ ಪ್ರಾಧ್ಯಾಪಕರು , ಸೂಕ್ಷ್ಮಜೀವಿಶಾಸ್ತ್ರ] ಇವರ ಕೈ ಹಿಡಿದು , ಎನ್.ಎಮ್.ಕೆ.ಆರ್.ವಿ. ಪದವಿಪೂರ್ವ ಕಾಲೇಜಿಲಿ ಗಣಿತ ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿ, ನಿವೃತ್ತೆ ಆಯಿದವು. ಈಗ ಸಾಹಿತ್ಯ ಸೇವೆಯ ಮುಂದುವರಿಸುತ್ತಾ ಇದ್ದವು.ಈ ವರೆಗೆ ೧೧ ಪುಸ್ತಕಗಳ ಬರೆದ್ದವು.ಕತೆ, ಕಾದಂಬರಿ,ಮಕ್ಕಳ ಸಾಹಿತ್ಯ, ಲೇಖನ, ಪ್ರವಾಸ ಕಥನ -ಹೀಂಗೆ ಎಲ್ಲಾ ರೀತಿಯ ಪುಸ್ತಕಂಗಳ ರಚನೆ ಇವರಿಂದ ಆಯಿದು.
ಮಾರ್ಚ್ ೨ ನೇ ತಾರೀಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಲ್ಲಿ ನಡೆದ ಕಾರ್ಯಕ್ರಮಲ್ಲಿ ಈ ಪ್ರಶಸ್ತಿಯ ಪ್ರದಾನ ಆತು. ಈ ಕಾರ್ಯಕ್ರಮಲ್ಲಿ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ,ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಶ್ರೀ ಶ್ರೀಕಂಠ ಕೂಡಿಗೆ ಮತ್ತೆ ಖ್ಯಾತ ಲೇಖಕಿ, ವೈದ್ಯೆ ಡಾ|| ವಸುಂಧರಾ ಭೂಪತಿ ಭಾಗವಹಿಸಿದ್ದವು.
ಈ ಕಾದಂಬರಿಲಿ ಸರಸ್ವತಿ ಶಂಕರ್ ಕಾಸರಗೋಡಿನ ಕನ್ನಡ ಏಕೀಕರಣ ಹೋರಾಟ ಮತ್ತೆ ಹವ್ಯಕ ಜನಜೀವನದ ಬಗ್ಗೆ ಬರೆದ್ದವು. ಬೆಂಗಳೂರಿನ ರವಿ ಪ್ರಕಾಶನ ಈ ಪುಸ್ತಕವ ಪ್ರಕಟಿಸಿದ್ದವು.೧೩-೧೨-೨೦೧೫ಕ್ಕೆ ಕುಂಬಳೆ ನಾಯಿಕಾಪಿಲಿ ಈ ಪುಸ್ತಕದ ಬಿಡುಗಡೆ ಆತು.
ಸರಸ್ವತಿ ಅಕ್ಕಂಗೆ ಅಭಿನಂದನೆಗೊ.

5 thoughts on “ಸರಸ್ವತಿ ಶಂಕರ್ ಗೆ ಕಾಕೋಳು ಸರೋಜಮ್ಮ ಪ್ರಶಸ್ತಿ

  1. ಈ ಪ್ರಶಸ್ತಿ ವಿಜೇತ “ಹಸಿರು ನೆಲದೆಡೆಗೆ” ಕಾದಂಬರಿಯ ಈಗ ಓದುತ್ತಾ ಇದ್ದೆ . ಇದು ಸುಮಾರು ಐವತ್ತು ವರುಷ ಹಿ೦ದಾಣ ಕು೦ಬಳೆ , ಕಾಸರಗೋಡು ಪರಿಸರದ ಜೀವನದ ದಾಖಲೀಕರಣವೂ ಅಪ್ಪು . ಕಾಸರಗೋಡು ಕೇರಳಕ್ಕೆ ಸೇರುವ ಕಾಲದ ಚಳುವಳಿಗಳ ತನ್ನ ವಿದ್ಯಾರ್ಥಿ ಜೀವನಲ್ಲಿ ಕಣ್ಣಾರೆ ಕಂಡ ಕತೆಗಾರ್ತಿ ಸರಸ್ವತಿ ಅತ್ತೆ ಬರದ ಒಂದು ಅತ್ಯುತ್ತಮ ಪುಸ್ತಕ ಇದು .ಕನ್ನಡ /ಹವಿಗನ್ನಡ ಸಾಹಿತ್ಯಕ್ಕೆ ಸರಸ್ವತಿ ಅತ್ತೆಯ ಸೇವೆ ಇನ್ನೂ ಹೆಚ್ಚಿಗೆ ಸಲ್ಲಲಿ ಹೇಳಿ ಪ್ರಾರ್ಥನೆಗೋ .
    ಅತ್ತೆಗೆ ಅಭಿನಂದನೆ .

  2. ಸರಸ್ವತಿ ಶಂಕರ್ ಗೆ ಅಭಿನಂದನೆ.
    ಇವಕ್ಕೆ ಕೊಡಗಿನ ಗೌರಮ್ಮ ಪ್ರಶಸ್ತಿಯೂ ಬಯಿಂದು.ಇನ್ನುದೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಹೇಳಿ ಶುಭಹಾರೈಕೆ.

  3. ಅಭಿನಂದನೆಗೊ.
    ಅಕ್ಕಂಗೆ ಇನ್ನೂ ಹಲವಾರು ಪ್ರಶಸ್ತಿಗೊ ಸಿಕ್ಕಲಿ.,
    ಸರಸ್ವತಿ ಸೇವೆ ನಿರಂತರವಾಗಿ ನಡೆಯಲಿ.,
    ಹವ್ಯಕ ಸಾಹಿತ್ಯಕ್ಷೇತ್ರಕ್ಕೂ ಇವರ ಕೊಡುಗೆ ಹರಿದು ಬರಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×