Oppanna.com

“ಸುಟ್ಟವು ತಿಂದರೆ ಸಾಲದೊ, ಗುಳಿ ಎಣುಸೆಕ್ಕೊ?”-(ಹವ್ಯಕ ನುಡಿಗಟ್ಟು-96)

ಬರದೋರು :   ವಿಜಯತ್ತೆ    on   10/07/2017    19 ಒಪ್ಪಂಗೊ

“ಸುಟ್ಟವು ತಿಂದರೆ ಸಾಲದೊ,ಗುಳಿ ಎಣುಸೆಕ್ಕೊ?”-(ಹವ್ಯಕ ನುಡಿಗಟ್ಟು-96)

ಎನ್ನಪ್ಪᵒ ಹೇಳೆಂಡಿದ್ದ ಮಾತು ನೆಂಪಾವುತ್ತು. ಸೀರೆಯೋ,ಅಂಗಿ,ವೇಸ್ಟಿಯೋ ತಂದಪ್ಪಗ ಬಿಡುಸಿ ನೋಡಿಕ್ಕಿ ಎಂಗೊ “ಅದರ ಕ್ರಯ ಎಷ್ಟು?”ಕೇಳಿದರೆ..

“ಕ್ರಯ ಎಷ್ಟೊ, ಸುಟ್ಟವು ತಿಂದರೆ ಸಾಲದೊ  ನಿನ ಗುಳಿ ಎಣುಸುವ ಕೆಲಸ ಎಂತಕೆ!?”. ಕೇಳುಗಿದ.

ಹೀಂಗೊಂದಿನ ಎನ್ನ ದೋಸ್ತಿ ಒಂದು ಮದುವಗೆ ಹೋಪಲಿದ್ದೂಳಿ ಮಧ್ಯಾಹ್ನ ಹನ್ನೊಂದು ಗಂಟೆ ಅಪ್ಪಗಳೇ ಶಾಲೆಂದ ಹೋಗಿಕ್ಕಿ, ಎರಡು ಗಂಟೆಪ್ಪಗ ಬಂತು. ಮದುವೆ ಶುದ್ದಿ ಕೇಳಿದೆ. ಕೂಸಿನ ಕಡೆವು  ಸಂಬಂಧದೊವು” ಹೇಳಿಯಪ್ಪಗ,.  ಮದುವೆ ಗೌಜಿ, ವಿವರ ಎಲ್ಲಾ ಮಾತಾಡಿಯಪ್ಪಗ  ,”ಮಾಣಿ ಎಲ್ಯಾಣವᵒ” ಕೇಳಿದೆ. “ಗೊಂತಿಲ್ಲೆ, ಮದುವೆ ಊಟ ಉಂಡಿಕ್ಕಿ ಬಂದೆ ಬೇರೆ ವಿವರ ಗೊಂತಿಲ್ಲೆ” ಹೇಳಿತ್ತು. ಅಷ್ಟಪ್ಪಗ ಎನ ನೆಂಪಾತು “ಸುಟ್ಟವು ತಿಂದಾತು. ಗುಳಿ ಎಣುಸಿದ್ದಿಲ್ಲೆ ಅಲ್ಲೊ?”.

ಅಪ್ಪು,ಅಪ್ಪು ಹೇಳೆಂಡು ನೆಗೆ ಮಾಡಿತ್ತು.

ಗೆಣವತಿ ದೇವರ ನೈವೇದ್ಯಕ್ಕೆ  ಮದಾಲು ಸುಟ್ಟವು  ನೆಂಪಕ್ಕಿದ. ಹಾಂಗೇ ಹವ್ಯಕರಲ್ಲಿ  ಈ ಗಾದೆ ತುಂಬಾ ಚಾಲ್ತಿಲಿಪ್ಪದು.

ಮಾತು ಹೇಳೆಕ್ಕಾದ, ಅಥವಾ ವಿವರ ಅರಡಿಯದ್ರೆ, ಅಗತ್ಯ ಇಲ್ಲೇಳಿ ಆದರೆ “ನಿನ ಸುಟ್ಟವು ತಿಂದರೆ ಸಾಲದೋ ಗುಳಿ ಎಣುಸೆಕ್ಕೋ ಕೇಳುಗಿದ ಮದಲಾಣವು.

——-೦——

19 thoughts on ““ಸುಟ್ಟವು ತಿಂದರೆ ಸಾಲದೊ, ಗುಳಿ ಎಣುಸೆಕ್ಕೊ?”-(ಹವ್ಯಕ ನುಡಿಗಟ್ಟು-96)

  1. ಇಂದ್ರನ ಪುತ್ತೂರು ಸುದ್ದಿ ಪೇಪರಿನ ೨ನೆ ಪುಟ;ಲ್ಲಿ ಇದ್ದು ವಿಜಯಕ್ಕ.

  2. ಈ ನುಡಿಗಟ್ಟು ಕೇಳಿ ಗೊಂತಿಲ್ಲೆ.
    ತಿಳುಶಿದ್ದಕ್ಕೆ ಧನ್ಯವಾದಂಗೊ ವಿಜಯತ್ತಿಗೆಗೆ.
    ಹಾಲು ತಪ್ಪಲೆ ಹೋದವಂಗೆ ಎಮ್ಮೆಯ ಕ್ರಯ ಎಂತಗೆ ಹೇಳ್ತ ಅರ್ಥಲ್ಲಿ ಕನ್ನಡಲ್ಲಿ ಒಂದು ಗಾದೆ ಕೇಳಿದ್ದೆ.

  3. ನುಡಿಗಟ್ಟುಗೊ ತುಂಬಾ ಇದ್ದು..ನೆನಪಾವುತ್ತ ಹಂಗೆ ಬರೆಯಿರಿ ಚಿಕ್ಕಮ್ಮ.ನಮ್ಮ ಮಾತಿಲಿ ಈಗ ಗಾದೆಗೋ ಕಮ್ಮಿ ಆಯಿದು.

      1. ಈ ಗಾದೆಯ ವಿಬಿ bhavayya ಇಂದ್ರಾಣ ಸುದ್ದಿಯ ಚಿಂತನ ಗಾಥಲ್ಲಿ ಹಾಕಿದ್ದವು.

  4. ಒಳ್ಳೆ ರುಚಿ ರುಚಿಯಾದ ನುಡಿಗಟ್ಟು. ಶತಕ ಬಾರುಸುವಗ ಕೊಶಿ ಆವ್ತಾ ಇದ್ದು.

  5. ನಿನ್ನ ಇನ್ನಾಣ ಗಾದೇಲಿ ರಜ ಸೇಮಗೆ ರಸಾಯನ ಇರಳಿ ವಿಜಯಕ್ಕ‌ . ಅಂಬಗ ಪಟ್ಟಾಜೆ ವಿಜಯ ಸೇಮಗೆ ರಸಾಯನ ಮಾಡುಗು. ಅಲ್ಲ ದ್ರೂ ಮಾಡುಗು.

  6. ಶಿವರಾಮಂದೆ ನಿನಗೆ ಕೃತಜ್ಞತೆ ಹೇಳೆಕ್ಕು ವಿಜಯಕ್ಕ. ಪಟ್ಟಾಜೆ ವಿಜಯ ಸುಟ್ಟವು ಮಾಡದ್ದೆ ಬಿಡ. ಶಿವರಾಮ ನ ಕೊದಿ ಕಮ್ಮಿ ಮಾಡ್ಳೆ‌

  7. ಇನ್ನು ನಾಕು ಹಾಕಿದರೆ…ನುಡಿಗೆಂಟು ಸುಟ್ಟವು , ಭರ್ಜರಿ ೧೦೦ ಆತು ಅಲ್ಲದೋ? ಸೀವು ನೋಡಿದರೆ ೨೦೦ ದಾಂಟುವ ಅ೦ದಾಜು ! ರುಚಿ ನೋಡಿದ ಬೈಲ ಭಾವ ಹೇಳ್ಕಟ್ಟೆ .

    1. ಪಟ್ಟಾಜೆ ಶಂಕರಣ್ಣನ ಸನ್ಮನಸಿನ ಹಾರೈಕಗೆ ಎನ್ನ ಮನದಾಳದ ಧನ್ಯವಾದಂಗೊ.ಈಗ ಕೆಲವು ದಿನಂದ ನಿಧಾನ ಆದರೂ ಸರಿ ಇದ್ದಪ್ಪ.

  8. ಗಾದೆ ಒಳ್ಳೆದಿದ್ದು ವಿಜಯಕ್ಕ. ಶಿವರಾಮ ಕಮೆಂಟ್ಸ್ ಬರದು ಆತುದೆ. ಅದೇರೀತಿ ಹಾಲು ತಕ್ಕೊಂಡರೆ ಸಾಲದೊ, ಎಮ್ಮೆ ಯ ಕ್ರಯ ಎಂತಕೆ ಹೇದು ಇದ್ದು. ಒಂದು ಸೀಮಿತ ತಿಳುವಳಿಕೆಯ ದ್ರೃಷ್ಟಿಂದ ಇದು ಸರಿ. ಧನ್ಯವಾದಗಳು ವಿಜಯಕ್ಕ. ಶಿವರಾಮ ನ ಸ್ಪೀಡ್ ನೋಡಿ ಆಶ್ಚರ್ಯ ಆತು ಹೇದು ಹೇಳಲಕ್ಕು. ಶಿವರಾಮ ಯಜುರುಪಕರ್ಮ 6/9/17ಕ್ಕೆ. ಆತೊ.

  9. ಹೀಂಗಿಪ್ಪ ಗಾದೆ ಕನ್ನಡಲ್ಲೂ ಮಲಯಾಳಲ್ಲೂ ಇದ್ದು. ಅಪ್ಪ ತಿನ್ನಲ್ ಪೋರೆ ಕುಳಿ ಎಣ್ಣನೋ. ಎಲೆ ಎತ್ತೋ ಗುಂಡ ಎಂದರೆ ಉಂಡವರೆಷ್ಟು ಮಂದಿ ಎಂದು ಕೇಳಿದ.

  10. ಅಪ್ಪಪ್ಪು…. ಕೇಟತ್ತು ಕಂಡ್ರೆ ತೊಳಚ್ಚಟೆ ಹೇಳ್ತ ಸರ್ಟಿಫಿಕೇಟೂ ಇದರೊಟ್ಟಿಂಗೆ ಸಿಕ್ಕುಗಪ್ಪೋ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×