Oppanna.com

ಸುಭಾಷಿತ – ೨೫

ಬರದೋರು :   ಪುಣಚ ಡಾಕ್ಟ್ರು    on   09/05/2017    7 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಇಹ ಚತ್ವಾರಿ ದಾನಾನಿ ಪ್ರೋಕ್ತಾನಿ ಮಹರ್ಷಿಭಿಃ।

ವಿಚಾರ್ಯ ನಾನಾಶಾಸ್ತ್ರಾಣಿ ಶರ್ಮಣೇsತ್ರ ಪರತ್ರ ಚ।।

ಭೀತೇಭ್ಯಶ್ಚಾಭಯಂ ದೇಯಂ ವ್ಯಾಧಿತೇಭ್ಯಸ್ತಥೌಷಧಮ್।

ದೇಯಾ ವಿದ್ಯಾರ್ಥಿನೇ ವಿದ್ಯಾ ದೇಯಮನ್ನಂ ಜಿಘತ್ಸವೇ।।

 

ಪದಚ್ಛೇದ:

ಇಹ ಚತ್ವಾರಿ ದಾನಾನಿ ಪ್ರೋಕ್ತಾನಿ ಮಹರ್ಷಿಭಿಃ।

ವಿಚಾರ್ಯ ನಾನಾಶಾಸ್ತ್ರಾಣಿ ಶರ್ಮಣೇ ಅತ್ರ ಪರತ್ರ ಚ।।

ಭೀತೇಭ್ಯಃ ಚ ಅಭಯಂ ದೇಯಂ ವ್ಯಾಧಿತೇಭ್ಯಃ ತಥಾ ಔಷಧಮ್।

ದೇಯಾ ವಿದ್ಯಾರ್ಥಿನೇ ವಿದ್ಯಾ ದೇಯಮ್ ಅನ್ನಂ ಜಿಘತ್ಸವೇ।।

 

ಅನ್ವಯ/ಪ್ರತಿಪದಾರ್ಥ:

ಅತ್ರ(ಇಹಲೋಕಲ್ಲಿ) ಚ (ಮತ್ತು) ಪರತ್ರ(ಪರಲೋಕಲ್ಲಿ) ಶರ್ಮಣೇ(ಶುಭಕ್ಕಾಗಿ) ಮಹರ್ಷಿಭಿಃ(ಮಹರ್ಷಿಗಳಿಂದ) ನಾನಾಶಾಸ್ತ್ರಾಣಿ (ಬೇರೆ ಬೇರೆ ಶಾಸ್ತ್ರಂಗಳ) ವಿಚಾರ್ಯ(ವಿಮರ್ಶಿಸಿ)

ಇಹ(ಇಲ್ಲಿ) ಚತ್ವಾರಿ (ನಾಲ್ಕು) ದಾನಾನಿ (ದಾನಂಗೊ) ಪ್ರೋಕ್ತಾನಿ (ಹೇಳಲ್ಪಟ್ಟಿದು)

ಭೀತೇಭ್ಯಃ(ಭಯಗೊಂಡೋರಿಂಗೆ) ಅಭಯಂ ದೇಯಮ್(ಅಭಯದಾನ ಮಾಡೆಕ್ಕು)

ವ್ಯಾಧಿತೇಭ್ಯಃ(ರೋಗಗ್ರಸ್ತರಿಂಗೆ) ಔಷಧಂ ದೇಯಮ್ (ಔಷಧ ದಾನ ಮಾಡೆಕ್ಕು)

ವಿದ್ಯಾರ್ಥಿನೇ(ವಿದ್ಯೆ ಬೇಡುವವಕ್ಕೆ) ವಿದ್ಯಾ ದೇಯಮ್(ವಿದ್ಯಾದಾನ ಮಾಡೆಕ್ಕು)

ಜಿಘತ್ಸವೇ (ಹಸಿದವಕ್ಕೆ) ಅನ್ನಂ ದೇಯಮ್ (ಅನ್ನದಾನ ಮಾಡೆಕ್ಕು)

 

ಭಾವಾನುವಾದ:

ದಾನ ಮಾಡಿದರೆ ಇಹಪರಂಗಳೆರಡಲ್ಲೂ ಶ್ರೇಯಸ್ಸು.

ದಾನಂಗಳಲ್ಲೆಲ್ಲಾ ಶ್ರೇಷ್ಠವಾದ ನಾಲ್ಕು ದಾನಂಗಳ ಮಹರ್ಷಿಗೋ ಇಲ್ಲಿ ಹೇಳಿದ್ದವು.

 

ಅನ್ಯದಾನ: ಇದು ಕ್ಷಣಿಕತೃಪ್ತಿದಾಯಕ ಆದರೂ ಒಬ್ಬ ಹಸಿದವಂಗೆ ಆ ಕ್ಷಣಲ್ಲಿ ಬೇಕಪ್ಪದು ಅನ್ನ ಮಾತ್ರ. ನಂತರವೇ ಅವಂಗೆ ಬೇರೆದರ ಚಿಂತೆ. ಹಾಂಗಾಗಿ ಮೊದಲ ದಾನ ಅನ್ನದಾನವೇ.

 

ವಿದ್ಯಾದಾನ: ಯಾವಜ್ಜೀವವೂ ತೃಪ್ತಿ ಕೊಡುವೊದು ವಿದ್ಯೆ. ಹಾಂಗಾಗಿ ವಿದ್ಯಾದಾನದ ಪುಣ್ಯ ಅದಕ್ಕಿಂತ ಶ್ರೇಷ್ಠ

 

ಔಷಧದಾನ: ಈ ದೇಹವೆಂಬ ದೇವಾಲಯಕ್ಕೆ ಆರೋಗ್ಯ ಭಾಗ್ಯ ಇದ್ದರಷ್ಟೇ ಅಲ್ಲಿ ಜೀವನೆಂಬ ದೇವರು ಇಪ್ಪಲೆ ಸಾಧ್ಯ. ರೋಗಿಯೊಬ್ಬಂಗೆ ಆರೋಗ್ಯ ದಾನ ಮಾಡುವ ಪುಣ್ಯ ಬಹಳ ಶ್ರೇಷ್ಠ.

 

ಅಭಯದಾನ: ಭಯಂಗಳಲ್ಲಿ ಅತಿ ದೊಡ್ಡದು ಮೃತ್ಯು ಭಯ.

ಯಾವದೇ ಭಯ ಇದ್ದರೂ, ಮೃತ್ಯುಭಯವೇ ಇದ್ದರೂ ಅಭಯ ನೀಡಿ ಸಂತೈಸುದಕ್ಕಿಂತ ದೊಡ್ಡ ದಾನ ಇನ್ನೊಂದಿಲ್ಲೆ

7 thoughts on “ಸುಭಾಷಿತ – ೨೫

  1. ಪಾಠ ಮಾಡ್ತಾಂಗೆ ಹೇದಿ. ಒಪ್ಪ

  2. ನಾಲ್ಕು ದಾನಂಗಳ ಬಗ್ಗೆ ವಿವರವಾದ ಸುಭಾಷಿತ.
    ಒದಗಿಸಿದ ಡಾಕ್ಟ್ರಿಂಗೆ ಧನ್ಯವಾದಂಗೊ

  3. ಒಳ್ಳೆಯ ಸುಭಾಷಿತ.ಶ್ರೇಷ್ಠ ದಾನಂಗೊ ಯೇವದೆಲ್ಲ ಹೇದು ತಿಳಿಶಿ ಕೊಟ್ಟ ಡಾಕ್ಟರ್ ಅಣ್ಣಂಗೆ ಅಭಿನಂದನೆ.

  4. ನಾಲ್ಕು ದಾನಂಗಳ ಮಹತ್ವವ ಚೆಂದಕೆ ವಿವರುಸಿದ ಸುಭಾಷಿತ. ಜೀವನ ಸಾರ್ಥಕ ಅಪ್ಪಲೆ ನಿಜವಾಗಿಯೂ ಬೇಕಾದ ಕಾರ್ಯಂಗೊ. ಬೈಲಿಲ್ಲಿ ಸುಭಾಷಿತಂಗೊ ರಜತ ಪರ್ವವ ದಾಂಟಿದ್ದಕ್ಕೆ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×