Oppanna.com

ಸುಭಾಷಿತ – ೨೭

ಬರದೋರು :   ಪುಣಚ ಡಾಕ್ಟ್ರು    on   27/05/2017    4 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ವ್ಯಾಲಾಶ್ರಯಾಪಿ ವಿಫಲಾಪಿ ಸಕಂಟಕಾಪಿ।

ವಕ್ರಾಪಿ ಪಂಕಿಲಭವಾಪಿ ದುರಾಸದಾsಪಿ।।

ಗಂಧೇನ ಬಂಧುರಿಹ ಕೇತಕಪುಷ್ಪವಲ್ಲೀ।

ಏಕೋ ಗುಣಃ ಖಲು ನಿಹಂತಿ ಸಮಸ್ತದೋಷಾನ್।।

 

ಪದಚ್ಛೇದ:

ವ್ಯಾಲಾಶ್ರಯಾ ಅಪಿ ವಿಫಲಾ ಅಪಿ ಸಕಂಟಕಾ ಅಪಿ।

ವಕ್ರಾ ಅಪಿ ಪಂಕಿಲಭವಾ ಅಪಿ ದುರಾಸದಾ ಅಪಿ।।

ಗಂಧೇನ ಬಂಧುಃ ಇಹ ಕೇತಕಪುಷ್ಪವಲ್ಲೀ।

ಏಕಃ ಗುಣಃ ಖಲು ನಿಹಂತಿ ಸಮಸ್ತದೋಷಾನ್।।

 

ಅನ್ವಯ:

ಕೇತಕಪುಷ್ಪವಲ್ಲೀ ವ್ಯಾಲಾಶ್ರಯಾ ಅಪಿ ವಿಫಲಾ ಅಪಿ ಸಕಂಟಕಾ ಅಪಿ ವಕ್ರಾ ಅಪಿ ಪಂಕಿಲಭವಾ ಅಪಿ ದುರಾಸದಾ ಅಪಿ ಇಹ (ಸ್ವ)ಗಂಧೇನ (ಸರ್ವೇಷಾಂ) ಬಂಧುಃ (ಅಸ್ತಿ)

ಏಕಃ (ಸದ್)ಗುಣಃ ಸಮಸ್ತದೋಷಾನ್ ನಿಹಂತಿ

 

ಪದ-ಅರ್ಥ:

ವ್ಯಾಲಾಶ್ರಯಾ = ಹಾವುಗೊಕ್ಕೆ ಆಶ್ರಯ ಕೊಡುವ

ವಿಫಲಾ = ಹಣ್ಣು ಇಲ್ಲದ(ಫಲರಹಿತ)

ಸಕಂಟಕಾ = ಮುಳ್ಳುಗಳಿಂದ ಕೂಡಿದ

ವಕ್ರಾ = ಡೊಂಕು ಡೊಂಕಾದ

ಪಂಕಿಲಭವಾ = ಕೆಸರಿಪ್ಪ ಜಾಗೆಲಿ ಹುಟ್ಟಿದ್ದು

ದುರಾಸದಾ = ಸುಲಭಲ್ಲಿ ಸಿಕ್ಕದ್ದದು

ಕೇತಕಪುಷ್ಪವಲ್ಲೀ = ಕೇದಗೆ ಗಿಡ

ಗಂಧೇನ ಬಂಧುಃ = ಪರಿಮಳದ ಕಾರಣ ಬಂಧು

ಏಕಃ ಗುಣಃ = ಒಂದೇ ಒಂದು ಒಳ್ಳೆಯ ಗುಣ

ಸಮಸ್ತದೋಷಾನ್ ನಿಹಂತಿ = ಎಲ್ಲಾ ದೋಷಂಗಳ ನಾಶ ಮಾಡ್ತು

 

ಭಾವಾರ್ಥ:

 

ಕೇದಗೆ ಬಲ್ಲೆಲಿ ಹಾವುಗೊ ಇರ್ತು. ತಿಂಬಲೆಡಿವ ಹಾಂಗಿಪ್ಪ ಹಣ್ಣೂ ಅದರಲ್ಲಿಲ್ಲೆ. ಮುಳ್ಳುಗಳಂದ ಕೂಡಿ ಹತ್ತರೆ ಹೋಪಲೂ ಕಷ್ಟ. ಡೊಂಕು ಡೊಂಕಾದ ಗೆಡುಗೊ ಬಲ್ಲೆ ಬೆಳದು ನೋಡ್ಲೂ ಚೆಂದ ಇಲ್ಲೆ. ಕೆಸರಟೆ ಜಾಗೆಲಿ ಬೆಳವದು. ಕೇದಗೆ ಹೂಗಿನ ಕೊಯ್ವದೂ ಕಷ್ಟ.

 

ಇಷ್ಟೆಲ್ಲಾ ದೋಷಂಗೊ ಇದ್ದರೂ ಕೇದಗೆಯ ಒಂದೇ ಒಂದು ಗುಣ ಅದರ ಪರಿಮ್ಮಳ.

ಆರನ್ನೂ ಆಕರ್ಷಿಸುವ ಆ ಗುಣ ಎಲ್ಲಾ ದೋಷಂಗಳ ಮುಚ್ಚುತ್ತು.

4 thoughts on “ಸುಭಾಷಿತ – ೨೭

  1. ಒಂದು ಅರ್ಥಪೂರ್ಣ ಸುಭಾಷಿತ.ಸಕಾರಾತ್ಮಕ .

  2. ಹೀಂಗಿಪ್ಪ ಸುಭಾಷಿತಂಗೊ ನಿತ್ಯ ನೂತನ.

  3. ತುಂಬಾ ಅರ್ಥಗರ್ಭಿತ ಸುಭಾಷಿತ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×