Oppanna.com

ಸುಭಾಷಿತ -೨೯

ಬರದೋರು :   ಪುಣಚ ಡಾಕ್ಟ್ರು    on   14/06/2017    4 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಸುಖಂ ಸ್ವಪಿತ್ಯನೃಣವಾನ್ ವ್ಯಾಧಿಮುಕ್ತಶ್ಚ ಯೋ ನರಃ।

ಸಾವಕಾಶೈಸ್ತು ಯೋ ಭುಂಕ್ತೇ ಯಸ್ತು ದಾರೈರ್ನ ಸಂಗತಃ।।

 

ಪದಚ್ಛೇದ:

ಸುಖಂ ಸ್ವಪಿತಿ ಅನೃಣವಾನ್ ವ್ಯಾಧಿಮುಕ್ತಃ ಚ ಯಃ ನರಃ।

ಸಾವಕಾಶೈಃ ತು ಯಃ ಭುಂಕ್ತೇ ಯಃ ತು ದಾರೈಃ ನ ಸಂಗತಃ।।

 

ಅನ್ವಯ/ಪ್ರತಿಪದಾರ್ಥ:

ಯಃ(ಯಾವ) ನರಃ(ವ್ಯಕ್ತಿ) ಅನೃಣವಾನ್(ಋಣ ಇಲ್ಲದೋನು), ವ್ಯಾಧಿಮುಕ್ತಃ (ರೋಗ ಇಲ್ಲದ್ದೋನು) ಚ (ಮತ್ತು) ಸಾವಕಾಶೈಃ(ನಿಧಾನವಾಗಿ) ಯಃ (ಆರು) ಭುಂಕ್ತೇ(ಉಣ್ಣುತ್ತನೋ)

ತು (ಹಾಗೂ) ಯೇ(ಆರು) ದಾರೈಃ(ಹೆಂಡತಿಯ) ನ ಸಂಗತೇ(ಸಾಂಗತ್ಯ ಹೊಂದಿದ್ದಯಿಲ್ಲೋ) ಸಃ (ಅವ) ಸುಖಂ (ಸುಖವಾಗಿ) ಸ್ವಪಿತಿ (ಒರಗುತ್ತ)

 

ಭಾವಾರ್ಥ:

ಸಾಲಸೋಲ ಇಲ್ಲದ್ದೋನು, ರೋಗಂಗಳಂದ ಮುಕ್ತಿ ಹೊಂದಿದವ,

ನಿಧಾನವಾಗಿ ಸಾವಕಾಶವಾಗಿ ಊಟಮಾಡುವವ ಮತ್ತು ಸ್ತ್ರೀ ಸಾಂಗತ್ಯ ಇಲ್ಲದವ ಯಾವಾಗಲೂ ಸುಖವಾಗಿ ಒರಗುಗು.

 

ಚಿಂತೆ ಇಲ್ಲದವಂಗೆ ಸಂತೆಲಿಯೂ ಒರಕ್ಕು ಬಕ್ಕು. ಸಾಲ ಇದ್ದರೆ ಚಿಂತೆ ತಪ್ಪಿದ್ದಲ್ಲ.ಸಾಲ ಇಲ್ಲದ್ದವ ಸುಖಲ್ಲಿ ಒರಗುಗು

 

ಆರೋಗ್ಯ ಸರಿ ಇಲ್ಲದ್ದೆ ಒರಗದ್ದವ ರೋಗಂದ ಬಿಡುಗಡೆ ಅಪ್ಪಗ ಒರಗುಗು.

 

ವಾಯು ಸಂಚಾರಕ್ಕೆ ತಕ್ಕಷ್ಟು ಹೊಟ್ಟೆಲಿ ಜಾಗೆ ಒಳಿವಾಂಗೆ ನಿಧಾನವಾಗಿ ಉಂಡರೆ ಲಾಯ್ಕ ಒರಕ್ಕು ಬಕ್ಕು. ಅದು ಬಿಟ್ಟು ಗಬಗಬನೆ ಮೂಗಿಂಗೆ ಮುಟ್ಟ ತಿಂದರೆ ಒರಕ್ಕು ಸರಿಯಾಗಿ ಬಾರ.

 

 

ಧಾರ್ಮಿಕ ಚೌಕಟ್ಟು ಮೀರಿದ ಸ್ತ್ರೀ ಸಾಂಗತ್ಯ ಇದ್ದರೆ ಅದು ಕಾಮುಕತೆ. ಕಾಮುಕಂಗೆ ಯಾವತ್ತೂ ನಿದ್ದೆ ಬಾರ. ಕಾಮವ ತ್ಯಜಿಸಿವ ಸುಖವಾಗಿ ಒರಗುಗು.

 

ವಿದುರನೀತಿಲಿಯೂ ಇದನ್ನೇ ಹೇಳ್ತ: ಹೃತಸ್ವಂ ಕಾಮಿನಂ ಚೋರಂ ಆವಿಶಂತಿ ಪ್ರಜಾಗರಾಃ :-

ಸಂಪತ್ತು ಕಳಕ್ಕೊಂಡವಂಗೆ, ಕಾಮುಕಂಗೆ, ಕಳ್ಳಂಗೆ ಒರಕ್ಕು ಬಾರ.

4 thoughts on “ಸುಭಾಷಿತ -೨೯

  1. ನಿಶ್ಚಿಂತಿತನಾಗಿ, ನಿರೋಗಿಯಾಗಿ ಸರಿಯಾಗಿ ಒರಗೆಕ್ಕಾದರೆ ಯಾವ ರೀತಿಯ ಜೀವನ ಶೈಲಿ ಅಳವಡಿಸೆಕ್ಕು ಹೇಳಿ ಚೆಂದಕೆ ವಿವರಿಸಿದ ಸುಭಾಷಿತ.
    ಒದಗಿಸಿದ ಡಾಕ್ಟ್ರಿಂಗೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×