Oppanna.com

ಹಳ್ಳೀಗ್ ಕರೆಯಾ

ಬರದೋರು :   ಕಲ್ಪನಾ ಅರುಣ್    on   03/08/2014    1 ಒಪ್ಪಂಗೊ

ಬರ್ರೋ ಬರ್ರೋ ಹಳ್ಳೀಗೆ
ನಿಂಗೊ ಬನ್ನಿ ಹಳ್ಳೀಗೆ||
ಅಡ್ಕೆ ದರಾ ಯೇರಿದ್ದು
ತೆಂಗ್ನಕಾಯಿ ತುಟ್ಟಿ ಆಯ್ದು
ಅಕ್ಕಿ ಬೆಲ್ಲಾ ಬೇಳೆ ಕಾಳು
ಗಗನಾ ಮುಟ್ಟಿದ್ದು||

ಹಳ್ಳಿ ಕಡೆಗೆ ಬನ್ನಿ ನಿಂಗೊ
ತೋಟಾ ಗದ್ದೆ ಸಾಗ್ವಳಿ ಮತ್ತೆ
ಬೆಳೆ ಮಾರಿ ಲಾಭಾ ತಕಳಿ
ಖುಶಿ ಜೀವ್ನ ಕಂಡ್ಕಂಡಿ ಬಾಳಿ ನಿಂಗೊ||

ಆಳು ಕಾಳ್ನ ನೋಡ್ಕಂಡಿ
ಸನೆ ಬಾಳೆ ಬೆಳೆಸ್ಕಂಡಿ
ತೋಟ್ದ ಮನೆ ಕಟ್ಕಳಿ ಆರಾಮಾಗಿ
ಹಳ್ಳಿ ಜೀವ್ನ ಕಲ್ತಕಳಿ ನಿಧಾನಾಗಿ||

ಹಳ್ಳೀಲಿರೊ ಸಮಾಧಾನಾ
ಪೇಟೆ ಹುಡ್ಕದ್ರೂಇಲ್ಲೆ ಇಲ್ಲೆ
ಗಜಿಬಿಜಿ ಗೊಂದ್ಲಾ ಮರ್ತು
ನೆಮ್ಮದಿಯಾಗಿ ಉಸ್ರಾ ಬಿಡಿ||

ಶುದ್ದ ಗಾಳಿ ಚೊಕ್ಕಾ ಬದ್ಕು
ಗಲೀಜು ಗದ್ಲಾಯಿರದಾ ಚುರುಕು
ರೋಗ ರುಜಿನಾ ದೂರಾ ಸರಿಸಿ
ನಿರಾಳ ಬದ್ಕಾ ಹಳ್ಳೀಲ್ ನಡೆಸಿ||

ಸಾದಾತನಾ ಸರಳಾ ಮನಸು
ಹಳ್ಳೀ ಮನೆಗ್ ಭಾಳಾ ಸೊಗಸು
ಪೇಟೆಲಿಪ್ಪೊ ಸಣ್ಣತನಾ ಗುಡ್ಸಿ ಗುಂಡಾತರಾ
ಹಳ್ಳೀಗ್ ಬಂದ್ರೆ ದೊಡ್ಡ ಕೈ ಬಾಯಲ್ಲೋ ತಮ್ಮಾ ತಂಗಿ||

One thought on “ಹಳ್ಳೀಗ್ ಕರೆಯಾ

  1. ಸಾದಾತನ,ಸರಳ ಮನಸು ಎಲ್ಲೋರಿಂಗೂ ಬಹು ಸೊಗಸು.ಕರೆ ಕೊಟ್ಟದು ಕೊಶಿಯಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×