Oppanna.com

ಹೇಂಗೆ?

ಬರದೋರು :   ಕೇಜಿಮಾವ°    on   30/09/2012    5 ಒಪ್ಪಂಗೊ

ನಮ್ಮಲ್ಲಿ ವರ್ಷಾಂತಲ್ಲಿ ಉಡುಗರೆ ಕೊಡ್ತ ಕ್ರಮ ಇದ್ದಲ್ಲದೋ.
ಒಂದೊಂದು ಸೀಮೆಲಿ ಒಂದೊಂದು ಕ್ರಮ ಇದ್ದ ಹಾಂಗೆ ಕಾಣ್ತು.
ಕೊಟ್ಟ ಮನೆಲಿ ನಾವು ಆರಿಂಗೆಲ್ಲ ಉಡುಗರೆ ಕೊಡೆಕು, ಉಡುಗರೆ ಅಲ್ಲ ಅದು,ನಿಜವಾಗಿ ಅದು ಚೆಂಡಿ ಮಾತಲೆ ಕೊಡುದು ಹೇಳಿ ಎನ್ನ ತಿಳುವಳಿಕೆ.
ಇದರ ಬಗ್ಗೆ ಆರಾರೂ ಗೊಂತಿಪ್ಪವು,ಒಪ್ಪಣ್ಣಂಗೆ ಗೊಂತಿಕ್ಕು,ಅಲ್ಲದ್ದರೆ ಬಟ್ಟ ಮಾವಂಗೆ ಗೊಂತಿಕ್ಕು.ಚೆನ್ನೈ ಭಾವ° ವಿವರ್ಸಿರೂ ಅಕ್ಕು.
ಅಂತೂ ನವಗೆ ನಮ್ಮ ಜಾತಿಯ ಕಾರ್ಯಕ್ರಮಂಗಳಲ್ಲಿ ಯಾವ ಆಚರಣೆ ಹೇಂಗೆ ಮಾಡ್ಸು ಹೇದು ಗೊಂತಾಯೆಕ್ಕಾಯಿದು.
ಗೊಂತಿಪ್ಪವು ಹೇಳುವಿರೋ?

ಕೇಜಿಮಾವ°
Latest posts by ಕೇಜಿಮಾವ° (see all)

5 thoughts on “ಹೇಂಗೆ?

  1. ಅದು ಉಡುಗೊರೆ ಅಲ್ಲ, ಚೆಂಡಿ ಮಾತಲೆ ಕೊಡುದು – ಜಿಜ್ಞಾಸೆಗೆ ಒಳ್ಳೆ ವಿಷಯ. ಈ ಸಂಪ್ರದಾಯ ಎಂತಕೆ, ಹೇಂಗೆ ಬಂತು ಹೇಳುದರ ವಿವರವಾಗಿ ಶುದ್ದಿ ಬರದರೆ ಒಳ್ಳೆದಿತ್ತು.

  2. ನಮ್ಮ ಕಡೆಲಿ ವರ್ಷಾಂತದ ದಿನ ಹೊಸ ವಸ್ತ್ರ ಕೊಡುವ ಕ್ರಮ ಇದ್ದು .
    ಆದರೆ ಉತ್ತರ ಕನ್ನಡಲ್ಲಿ ಉತ್ತರಕ್ರಿಯೆಗೆ ಬಪ್ಪಗ (ಆ ಮನೆಗೆ ಕೂಸು ಕೊಟ್ಟೋರು , ತಂದೋರು ) ಹೊಸ ವಸ್ತ್ರ ತಂದು ಕೊಡುವ ಕ್ರಮ ಇದ್ದು . ನಮ್ಮಲ್ಲಿ ಆ ಕ್ರಮ ಇಲ್ಲೆ. ಇನ್ನು ಒಂದು ವರ್ಷದ ವರೆಗೆ (ವರ್ಷಾಂತದ ವರೆಗೆ ) ಆ ಮನೆಯವು ಜವುಳಿ (ಹೊಸ ವಸ್ತ್ರ) ತೆಗವಲೆ ಇಲ್ಲೆ ಆ ಕಾರಣಂದ ಆ ಸಂದರ್ಭಲ್ಲಿ ತಂದು ಕೊಡ್ತವು. ಮೊದಲೆಲ್ಲ ಹಬ್ಬಕ್ಕೆ ಮಾಂತ್ರ ಹೊಸ ವಸ್ತ್ರ ತೆಗವದು ಹೇಳ್ತ ಕ್ರಮ ಇತ್ತದಲ್ಲದಾ…? ಈಗಾಣ ಹಾಂಗೆ ತಿಂಗಳಿಂಗೆ ನಾಲ್ಕು ಸರ್ತಿ ತೆಗವಲೆ ಇಲ್ಲೆನ್ನೇ… ಹಾಂಗಾಗಿ ಆ ಕ್ರಮ ಬಂದದಡ. ಅಲ್ಲಿ ವರ್ಷಾಂತಕ್ಕೆ ಕೊಡುವ ಕ್ರಮ ಇಲ್ಲೆಡ.

  3. [ಒಳುದ ಮಕ್ಕೊಗೆ ಕೊಡೆಕು ಹೇದು ಇಲ್ಲೆ ] – ಅಪ್ಪು. ನಿಜ. ಆದರೆ, ಸಭೇಲಿ ಒಟ್ಟಿಂಗೆ ಕೂದೊಂಡಿಪ್ಪಗ ಒಬ್ಬಂಗೆ ಕೊಟ್ಟಿಕ್ಕಿ ಇನ್ನೊಬ್ಬಂಗೆ ಕೊಡದ್ದಿಪ್ಪದು ಹೇಂಗೆ ಹೇದು ದಾಕ್ಷಿಣ್ಯಂದ ಅದೂ ಸುರುವಾದ್ದು. ಹಾಂಗೇ ಕೆಲವು ದಿಕ್ಕೆ ಒಬ್ಬಂಗೆ ವಸ್ತ್ರ-ಸೀರೆ ಕೊಟ್ಟಿಕ್ಕಿ ಬಾಕಿದ್ದೋರಿಂಗೆ ಕವರು/ಗ್ಲಾಸು/ಬಟ್ಳು/ಪಾತ್ರೆ ಕೊಡುತ್ತದೂ ಕಾಣ್ತು. ಇನ್ನು., ಅಂಗಡಿಗೆ ಹೋಗಿ ನಿನಗೆ ಬೇಕಾದಾಂಗಿಪ್ಪ ವಸ್ತ್ರವೋ ಅಂಗಿಯೋ ನೀನೇ ತೆಕ್ಕೊ (ಎನ ಪುರುಸೊತ್ತಿಲ್ಲೆ ಹೋಪಲೆ!!) ಹೇಳ್ತ ತಪ್ಪು ಗ್ರಹಿಕೆಂದ ಕವರು / ನೋಟಿನ ಸುರುಟಿ ಕೈಲಿ ಮಡಿಸಿ ಮಡುಗುತ್ತದು ಶುರುವಾದ್ದಾಗಿರೆಕು!!. (ಇದಲ್ಲದೋ ನಮ್ಮಲ್ಲಿ ಕಷ್ಟ ! – ಒಬ್ಬ ಒಂದು ಸುರುಮಾಡಿರೆ (ಕಾರಣಾಂತರಂದ ವಾ ಗೊಂತಿಲ್ಲದ್ದೆ) ಮತ್ತೊಬ್ಬನೂ ಅದನ್ನೇ ಮಾಡುಸ್ಸು!☺ ) ಇದೂ ಅಗತ್ಯ ಇಲ್ಲೆ. ಮತ್ತೆ.., ವಸ್ತ್ರ ಕೊಡುವದೂ ಕೂಡ ವಿದೇಶಿ ನಿರ್ಮಿತ ಝರಿವಸ್ತ್ರವೋ, ಪಟ್ಟೆಸೀರೆಯೊ ಅಗತ್ಯ ಇಲ್ಲೆ. ಸಾಮಾನ್ಯ ನಿತ್ಯ ಸುತ್ತತ್ತ ನಮೂನೆದು ಸಾಕು.

  4. ಹಾಂಗೆ ಕಂಡದರ ಇಲ್ಲಿ ಹೇಳಿದ್ದು.ಎನ್ನ ಸಾಮಾನ್ಯ ಜ್ಞಾನ ಹೇಳ್ತು ಈ ಮಾತಲೆ ಕೊಡುದು ಎಲ್ಲೊರೂ ಅಲ್ಲ.ಉದಾಹರಣಗೆ ಒಬ್ಬ° ಅವನ ಮಗಳ ಮಾವನೋರ ಕಾರ್ಯಕ್ರಮಲ್ಲಿ ಒಳುದ ಮಕ್ಕೊಗೆ ಕೊಡೆಕು ಹೇದು ಇಲ್ಲೆ ಅದು ಶುಭ ಕಾರ್ಯಲ್ಲಿ ಕೊಟ್ಟ ಹಾಂಗಲ್ಲ ಹೇಳ್ತದು ಎನ್ನ ಅಭಿಪ್ರಾಯ.ಹಿಂದಾಣ ಕಾಲಲ್ಲಿ ನಾವು ಆರ್ಥಿಕವಾಗಿ ಬಲವಾಗಿಲ್ಲದ್ದಿಪ್ಪಾಗ,ಅದರಲ್ಲೂ ಒಂದು ವರ್ಷ ವ್ರತಲಿಪ್ಪಗ ದುಡಿಯದ್ದೆ ಸಂಪಾದನೆ ಇಲ್ಲದ್ದ ಕಾರಣ ಈ ಕ್ರಮ ಸುರುವಾದ್ದೋ?

  5. ಸೂಕ್ಷ್ಮಲ್ಲಿ ಹೇಳ್ತದಾದರೆ, ಮೃತನಾದಲ್ಲಿಂದ ವರ್ಷಾಂತವರೇಂಗೆ ನಿತ್ಯ (ಪ್ರತಿದಿನ) ಮಿಂದು ಚಂಡಿಲಿ ವಾಸೋದಕ (ವಸ್ತ್ರೋದಕ), ತಿಲೋದಕ, ಪಿಂಡದಾನ ಮಾಡೇಕ್ಕಾದ್ದು ಹೇಳಿ ವಿಧಿ. ಪಿತೃಸಂಗಮ ಅಪ್ಪದು ವರ್ಷಾಂತಲ್ಲಿ. ಸಪಿಂಡೀಕರಣ ಮಾಡೇಕ್ಕಪ್ಪದೂ ವರ್ಷಾಂತಲ್ಲೇ. ಆದರೆ ಇದೆಲ್ಲ ಕಾಲತಃ ಪ್ರಾಯೋಗಿಕವಾಗಿ ಸಾಧ್ಯವಾಗದ್ದ ಕಾರಣ ಶುದ್ಧ ಕಾರ್ಯಕ್ರಮದೊಟ್ಟಿಂಗೆ ಹನ್ನೆರಡರಲ್ಲಿ ಸಪಿಂಡೀಕರಣ ಮಾಡುತ್ತು ಈಗಾಣ ಕಾಲಲ್ಲಿ. ಹಾಂಗಾಗಿಯೇ ಅಲ್ಲಿವರೇಗಾಣ ಪಿಂಡಪ್ರದಾನ ಅಂದು ಮಾಡುತ್ತದು. ಅಲ್ಲಿಂದ ವರ್ಷಾಂತದವರೇಂಗೆ ದೀಕ್ಷಾವ್ರತಲ್ಲಿ ಇಪ್ಪದು (ಯಾವ್ಯಾವ ದೀಕ್ಷೆ ಇತ್ಯಾದಿ ಇನ್ನೊಂದು ಶುದ್ಧಿಲಿ ತಿಳಿವೊ, ದೀಕ್ಷೆ ಹೇಳಿರೆ ಕೆಲವೊಂದು ವಿಷಯಂಗಳ ಮಾಡ್ಳಗ ಹೇಳ್ವ ನಿಷೇಧ), ಚಂಡಿವಸ್ತ್ರಲ್ಲೇ ಇಪ್ಪದು. ನೂತನ ವಸ್ತ್ರ ಧಾರಣೆಯೂ ಆ ಕಾಲದವರೇಂಗೆ ನಿಷಿದ್ಧ. ವರ್ಷಾಂತ ದಿನ ಕಾರ್ಯಕ್ರಮ ಎಲ್ಲ ಮುಗುದಿಕ್ಕಿ ದೀಕ್ಷಾವ್ರತ ನಿಲ್ಲುಸಿ ಚಂಡಿಮಾತುಲೆ ಕೊಡುವದು. ಇದು ಉಡುಗರೆ ಅಲ್ಲ. ಬಂದ ನೆಂಟ್ರುಗೊ ಎಲ್ಲ ಕೊಡೆಕು ಹೇದು ಏನೂ ಇಲ್ಲೆ. ಕೂಸು ಕೊಟ್ಟಲ್ಲಿಂದ, ಕೂಸು ತಂದಲ್ಲಿಂದ, ಸೋದರ ಮಾವ° ಹೀಂಗೆ ಅತೀ ಹತ್ರಾಣ ಸಂಬಂಧಿಕರು ಮಾಂತ್ರ ಕೊಡುವದು. ಇತ್ತೀಚೆಗೆ ಬಂದವು, ನೆಂಟ್ರುಗೊ ಕವರು ಕೊಡುತ್ತದು, ಉಡುಗೊರೆ ಹಾಂಗೆ ಪಾತ್ರೆ ಸಾಮಾನುಗಳ ಕೊಡುವದು ‘ಚಂಡಿಮಾತುಲೆ’ ಕೊಡುವದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ್ದಿಪ್ಪದರಿಂದ ಆವ್ತು. ಕೇಜಿಮಾವನ ಜಿಜ್ಞಾಸೆ ಬಹುಶಃ ಇದು ಬೈಲಿಂಗೇ ಗೊಂತಿರಲಿ ಹೇಳ್ವ ದೃಷ್ಟಿಂದಲೇ ಆಯ್ಕು. ಈ ಬಗ್ಗೆ ವಿಸ್ತಾರವಾಗಿ ಆರಾರು ತಿಳಿಶಿರೆ ಬಹಳ ಉತ್ತಮ ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×