Oppanna.com

"ಹೊಂಡ ನೋಡದ್ದೆ ಹಾರ್ಲಾಗ"

ಬರದೋರು :   ವಿಜಯತ್ತೆ    on   04/06/2014    5 ಒಪ್ಪಂಗೊ

—“ಹೊಂಡ ನೋಡದ್ದೆ ಹಾರ್ಲಾಗ” (ಹವ್ಯಕ ನುಡಿಗಟ್ಟು-2 )
ಕೆಲವು ವರ್ಷಗಳ ಹಿಂದೆ  ಎನ್ನ ಅಪ್ಪನ ಮನೆ ಬಳಗಲ್ಲಿ,  ಮದುವೆಮಾಡಿ ಕೊಡುವ ಕೂಸಿಂಗೆ ಒಂದು ಸಂಧಾನ ಬಂತು. ಹಿಂದೆ  ಕೆಲಾವು ಕುಳವಾರುಗೊ ಜಾತಕಲ್ಲಿ ಆಗದ್ದೆ, ಇನ್ನು ಕೆಲವು ಕೂಸು.. ಮಾಣಿಗೆ ಮೆಚ್ಚಿಕೆ ಆಗದ್ದೆ, ಮತ್ತೆ ಕೆಲವು ಮನೆತನ ಹಿಡಿಯದ್ದೆ, ಹೀಂಗೆಲ್ಲ ಆಗಿ  ಆ ಕೂಸಿಂಗೆ  ಮನೆ ಬಯಿಂದಿಲ್ಲೆ. ಈಗ ಬಂದ ಕುಳವಾರು ಬಂದು ನೋಡಿ ಅಪ್ಪದ್ದೆ ಮಾಣಿಗೆ ಕೊಶಿ ಆಗಿ , ಒಟ್ಟಿಂಗೆ ಬಂದ ಹಿರಿಯವಕ್ಕೂ ಒಪ್ಪಿಗೆ ಆಗಿ ನೋಡಿದಲ್ಲಿಯೇ ಅಕ್ಕು ಹೇಳಿದೊವು. ಅಷ್ಟಪ್ಪಗ  ಕೂಸಿನ ಅಪ್ಪ, ಎನ್ನ ಅಪ್ಪನ ಒಳ ದೆನಿಗೇಳಿ  “ಹೇಂಗೆ ಬಾವಯ್ಯ, ಅವಕ್ಕೆ ಅಕ್ಕಾರೆ ನವಗೂ ಅಕ್ಕು ಈಗಳೇ ಒಪ್ಪಿಗೆ ಕೊಟ್ಟಿಕ್ಕುವೊ೦  ಆಗದೋ?” ಕೇಳಿದೊವು.  ಅಷ್ಟೊತ್ತಿಂಗೆ ಎನ್ನಪ್ಪ  “ಬೇಡ.., ಬೇಡ…, ಎರಡು ದಿನಾಣ ಅವಕಾಶ ಕೇಳುವೊ೦. ’ಹೊಂಡ ನೋಡದ್ದೆ ಹಾರ್ಲಾಗ’  ಕೂಸಿನ ಕೊಡುವದಲ್ಲೊ” ಹೇಳಿದೊವು.
ಅಪ್ಪು  ಎಷ್ಟು ಹೊಂಡ ಇದ್ದು ಹೇದು ಆಲೋಚನೆ ಇಲ್ಲದ್ದೆ  ಹಾರೀರೆ ಹೇಂಗಕ್ಕು ಪರಿಸ್ಥಿತಿ! ಅಂಬಗ  ಕೂಲಂಕುಷ ತಿಳಿಯದ್ದೆ ಮುಂದುವರುಸಲಾಗ ಅಲ್ಲೊ?  “ಎಷ್ಟು ಅರ್ತು ಆಳ ನೋಡಿ ಮಾಡೀರೂ ಈಗಾಣವು ಮದುವೆ ಕಳುದು ನಾಲ್ಕು ದಿನ   ಆಯೆಕ್ಕಾರೆ  ಡೈವೊರ್ಸು ಆವುತ್ತವು “ ಹೇದು ಹೇಳುಗು ಕೆಲವು ಅಕ್ಕ ತಂಗೆಕ್ಕೊ. ಹಾಂಗಾರೂ ಹಿರಿಯೊವು ಅರಡಿಯದ್ದೆ ಕೊಡುಸ್ಸು ತಪ್ಪಲ್ಲೊ? ಹಾಂ..! ಈ ನುಡಿ ಗಟ್ಟು ಇದೊಂದೇ ವಿಷಯಕ್ಕಲ್ಲ ನೋಡಿ!. ’ಅತೀವ ಚಿಂತನೀಯ’.ಹೇದಿದ್ದು. ಸಮಾಲೋಚನೆ ಮಾಡಿ ಮಾಡೆಕ್ಕಾದ ವಿಷಯ ಹೇಳ್ವದು ಇದರ ಅಂತರಾಳ.  ತಲೆ-ತಲಾಂತರಂದ ಬಂದ ’ನುಡಿಗಟ್ಟು’ ಹೇದರದು ನುಡಿಮುತ್ತು!.

5 thoughts on “"ಹೊಂಡ ನೋಡದ್ದೆ ಹಾರ್ಲಾಗ"

  1. ನುಡಿಗಟ್ಟು ಸೂಕ್ತ ;ಬರೆದದ್ದು ಅರ್ಥಪೂರ್ಣ

  2. ಅರ್ಥಪೂರ್ಣ ನುಡಿಗಟ್ಟು .ಧನ್ಯವಾದ ವಿಜಯತ್ತೆ .

  3. ವಿಜಯತ್ತೆ,
    ಭಾರೀ ಲಾಯ್ಕದ ನುಡಿಗಟ್ಟು ಬೈಲಿಂಗೆ ಇಳಿಶಿದ್ದಿ. ಯಾವಾಗಲೂ ನೆಂಪು ಮಾಡಿಕ್ಕೊಳ್ಳೆಕ್ಕಾದ ಮಾತು ಇದು.
    ನಾವು ಯಾವುದೇ ವಿಷಯಲ್ಲಿ ಆದರೂ ಜಾಗ್ರತೆ ಮಾಡಿಗೊಳ್ಳೆಕ್ಕು. ಕೂಸಿನ ಮದುವೆ ಮಾಡಿ ಕೊಡುದಾಗಿಕ್ಕು, ಕೂಸಿನ ಮನೆ ತುಂಬುಸುದಾದಿಕ್ಕು ಯಾವುದೇ ಆದರೂ ತುಂಬಾ ಜಾಗ್ರತೆಲಿ ನಿರ್ಧಾರಕ್ಕೆ ಬರೆಕ್ಕು ಹೇಳಿ ನಮ್ಮ ಹೆರಿಯೋರು ಹೇಂಗೆ ಹೇಳುದು ಅಲ್ಲದಾ?
    ನಿಂಗೊ ಹೇಳಿದ ಹಾಂಗೆ ಈಗಾಣ ಕಾಲಲ್ಲಿ ಎಂತದೋ ಸಮಸ್ಯೆ ಕಾಣುತ್ತಾ ಇದ್ದು. ಬಹುಶ ಎಲ್ಲೊರೂ ಹೀಂಗೆ ಆಲೋಚನೆ ಒಂದರಿ ಮಾಡಿದರೆ ಮುಂದೆ ಬಪ್ಪ ಅನಾಹುತಂಗಳ ತಪ್ಪುಸುಲೆಡಿಗು. ನಿತ್ಯ ಜೀವನಲ್ಲಿ ಹೀಂಗಿಪ್ಪ ಮಾತುಗಳ ಎಲ್ಲೊರೂ ನೆಂಪು ಮಡಿಕ್ಕೊಂಬ ಹಾಂಗೆ ಆಗಲಿ..

  4. ಖಂಡಿತ, ನುಡಿಮುತ್ತು ಇದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×