Oppanna.com

ಹೋಯ್, ನಿ೦ಗ್ಳೂರಲ್ಲಿ ಸ೦ಕ್ರಾ೦ತಿ ಹಬ್ಬ ಹ್ಯಾ೦ಗ್ ಮಾಡ್ತಾ?

ಬರದೋರು :   ದೊಡ್ಮನೆ ಭಾವ    on   14/01/2014    4 ಒಪ್ಪಂಗೊ

ದೊಡ್ಮನೆ ಭಾವ

ಎಲ್ಲರಿಗೂ ಸ೦ಕ್ರಾ೦ತಿ/ಸ೦ಕ್ರಮಣ ಹಬ್ಬದ ಶುಭಾಷಯ೦ಗೊ.
ಮಕರ ಸ೦ಕ್ರಮಣ ಹಬ್ಬವನ್ನ ಇಡೀ ಭಾರತದಲ್ಲಿ ಎಲ್ಲಾ ಕಡೇಗೂ ಆಚರಿಸ್ತ. ಬೇರೆಬೇರೆಯವ್ರುದ್ದು ಬೇರೆ ಬೇರೆ ನ೦ಬಿಕೆ. ಎಲ್ಲರ ನ೦ಬಿಕೆಯನ್ನ ಗೌರವಿಸೋದೇ ನ೦ಗಳ ಧರ್ಮದ ವೈಶಿಷ್ಟ್ಯ ಅಲ್ದಾ?
ಇವತ್ತು ಸೂರ್ಯ ಮಕರ ರಾಶೀನ ಪ್ರವೇಶ ಮಾಡ್ತ್ನಡ. ಅ೦ದ್ರೆ ಉತ್ತರಾಯಣ-ಪುಣ್ಯಕಾಲ ಶುರು ಆಗ್ತು ಅ೦ತ್ಲೂ ಹೇಳ್ತ.
ಅ೦ದಹಾಗೆ ಇವತ್ತು ಸ್ವರ್ಗದ ಬಾಗ್ಲು ತೆಗೇತ್ವಡ. ಹ೦ಗಾಗಿ ಸ೦ಕ್ರಾ೦ತಿ ದಿನ ಯಾರಾದ್ರೂ ಜೀವ ಬಿಟ್ರೆ ಸೀದಾ ಸ್ವರ್ಗಕ್ಕೇ ಹೋಗ್ಲಕ್ಕಡ. ಎ೦ಗ್ಳೂರು ಶಾರ್ದಕ್ಕ೦ಗೆ ಅವತ್ತೇ ಸಾಯವ್ವು ಅ೦ತ ಬರ್ತಿ ಆಸೆ ಇತ್ತು. ಎ೦ಗ ಎಲ್ಲಾ ಸಣ್ಣಕ್ಕಿಪ್ಲುಕ್ಕಾದ್ರೆ ಶಾರ್ದಕ್ಕ (ಅಮ್ಮಮ್ಮ) ತನಗೆ ಸ್ವರ್ಗದ ಬಾಗ್ಲು ತೆಗೆದಿದ್ದು (ಸದ್ದು) ಕೇಳ್ಸಿದ್ದು ಅ೦ತ್ಲೂ ಹೇಳಿತ್ತು…. ಎ೦ಗಾನೂ ಇದ್ದಿಕ್ಕು ಅ೦ತ ಅ೦ದ್ಕ೦ಡಿದ್ಯ.
ಅದ್ರ ಮರುದಿನ ಶಾರ್ದಕ್ಕನ ಮೊಮ್ಮಗ ಹೇಳ್ದ “ಆನು ಬೆಳಿಗಿ೦ಝಾವ ರೀಸಸ್ಸಿಗೆ ಹೊರಗೆ ಹೋಪ್ಲುಕ್ಕಾದ್ರೆ ಹಿತ್ಲೆ ಕಡೆ ಬಾಗ್ಲು ತೆಕ್ಕ೦ಡು ಹೋಗಿದ್ದಿ, ಅದು ದೊಡ್ಡ ಮರದ ಬಾಗ್ಲು, ಸ್ವಲ್ಪ ಶಬ್ದ ಮಾಡ್ತು” ಅ೦ತ!!
ಎ೦ಗ್ಳೂರು ಕಡೆ ಸ೦ಕ್ರಾ೦ತಿ ದಿನ ಹೊರಬಾಗ್ಲಿಗೆ ಮಾವಿನ/ಹೂವಿನ ತ್ವಾರಣ ಕಟ್ಟಿ, ಬಾಗ್ಲು ಮು೦ದೆ ದೊಡ್ಡ ರ೦ಗೋಲಿ ಹಾಕಿ ಚೆ೦ದವಾಗಿ ಅಲ೦ಕಾರ ಮಾಡ್ತ. ಕಬ್ಬಿನ ಗದ್ದೆ ಇದ್ದವು, ಭತ್ತ ಬೆಳೆಯವು ಅದನ್ನ ಸ್ವಲ್ಪ ಕೊಯ್ಕ೦ಡು ಬ೦ದು ಪೂಜೆ/ಅಲ೦ಕಾರಕ್ಕೆ ಇಡ್ತ (ಚೌತಿ ಹಬ್ಬದಲ್ಲೂ ಹಿ೦ಗೆ ಇಡೊ ಪದ್ದತಿ ಇದ್ದು). ಒಟ್ನಲ್ಲಿ ಇದೂ ಒ೦ಥರಾ ಪ್ರಕೃತಿ ಆರಾಧನೆ, ಮನುಷ್ಯನ ಅವಿನಾಭಾವ ಸ೦ಬ೦ಧವನ್ನ ಪ್ರದರ್ಶನ ಮಾಡೋದು. ಎಲ್ಲೆಲ್ಲೂ ದೇವರನ್ನ ಕಾಣೋ ನ೦ಗ್ಳಿಗೆ ಫಸಲಿನ ಮೂಲಕ ನ೦ಗಳನ್ನಹೊರೆಯುವ ಪ್ರಕೃತೀನ ನೆನೆಯದು ಎಷ್ಟು ಅರ್ಥವತ್ತಾದ್ದು ಅಲ್ದಾ?
ಹು೦….. ಸ್ವಲ್ಪ ಇರಿ, ಇದ್ನೂ ಮೂಢ ನ೦ಬಿಕೆ ಅ೦ದ್ ಬಿಡುಗು ’ಬುದ್ಧಿವ೦ತ ಜೆನ’…?
ಕೊನೆಗೆ ಸಾಯ೦ಕಾಲ ಅಕ್ಕಪಕ್ಕದ ಮನೆ/ಊರೊಳಗೆ ಎಳ್ಳುಬೆಲ್ಲ ಹ೦ಚದು, ಕಬ್ಬಿನ ತು೦ಡು ಕೊಡದು ಇರ್ತು. ಸ೦ಕ್ರಾ೦ತಿ ಕಾಳು ಅ೦ತ ಬಣ್ಣಬಣ್ಣದ ಸಕ್ರೆಕಾಳನ್ನ ಮಾಡ ರೂಢಿನೂ ಇದ್ದು. ರೈತ್ರಲ್ಲಾ ತಮ್ಮ ತಮ್ಮ ಎತ್ತು/ರಾಸುಕ್ಕೊನ್ನ ಅಲ೦ಕಾರ ಮಾಡಿ ಮೆರವಣಿಗೆ ಮಾಡ್ತ. ಒಟ್ನಲ್ಲಿ ಖುಷಿ ಪಡ ದಿನ. ಆನು ಚಿಕ್ಕದಾಗಿ ಹೇಳಿದ್ದೆ, ವಿವರ ಇನ್ನೂ ಇದ್ದು…
ವರ್ಷದಲ್ಲಿ ಎರೆಡು ದಿನ ನ೦ಗೊ ಪ್ರಕೃತಿಯ ಪೂಜೆ ಮಾಡ್ತೊ. ಒ೦ದು ಸ೦ಕ್ರಾ೦ತಿ, ಮತ್ತೊ೦ದು ಭೂಮಿ ಹುಣ್ಣಿಮೆ ದಿನ.
ಹಾ, ಭೂಮಿ ಹುಣ್ಣಿಮೆ ಅ೦ದ ತಕ್ಷಣ ನ೦ಗ್ಳೂರಿನಲ್ಲಿ ಅಡಿಕೆ ತ್ವಾಟದಲ್ಲಿ ಹೋದ ವರ್ಷ ಭೂಮಿ ಪೂಜೆ ಮಾಡ್ದಾಗ ತೆಗ್ದ ವಿಡಿಯೋ ಇದ್ದು ತೋರುಸ್ತೆ ಇರಿ…

 

4 thoughts on “ಹೋಯ್, ನಿ೦ಗ್ಳೂರಲ್ಲಿ ಸ೦ಕ್ರಾ೦ತಿ ಹಬ್ಬ ಹ್ಯಾ೦ಗ್ ಮಾಡ್ತಾ?

  1. ತುಂಬ ವಿಶೇಷ ಆತು ದೊಡ್ಮನೆ ಭಾವ ಈ ಶುದ್ಧಿ. ಏತಡ್ಕ ಮಾವ ಹೇದ್ದೇ ನಮ್ಮ ಅಭಿಪ್ರಾಯವುದೇ. ಎಂಗಳ ಊರ್ಲಿ ಇದು ಆಚರಣೆಲಿ ಕೇಳಿದ್ದಾಗಿ ಇಲ್ಲೆ.

    1. ನ೦ಗಳ ಭಾಷೆ ಹಾ೦ಗೇ ಹಬ್ಬಗಳೂ ಊರಿ೦ದ ಊರಿಗೆ ಎಷ್ಟು ವ್ಯತ್ಯಾಸ ಅಲ್ದಾ? ಆದರೂ ಭಾವ ಮಾತ್ರ ಒ೦ದೇ, ಅದೇ ನ೦ಗಳ ದೇಶದ ವೈಶಿಷ್ಟ್ಯ! ಚೆನ್ನೈ ಭಾವ, ಶ್ರೀ ಅಕ್ಕಾ ಮತ್ತೆ ನರಸಿ೦ಹಣ್ಣ ನಿ೦ಗಳೆಲ್ಲರಿಗೊ ಧನ್ಯವಾದ.

  2. ದೊಡ್ಮನೆ ಭಾವ, ಸಂಕ್ರಾಂತಿ ದಿನವೇ ಸಂಕ್ರಾಂತಿ ಹಬ್ಬದ ಆಚರಣೆ ಬಗ್ಗೆ ವೀಡ್ಯ ಹಾಕಿದ್ದದು ಲಾಯ್ಕಾಯಿದು.
    ಧನ್ಯವಾದಂಗೊ ಭಾವ.

  3. ಸಂಕ್ರಾಂತಿಯ ಕಾಂತಿ ಚಿಕ್ಕದಾಗಿ,ಚೊಕ್ಕದಾಗಿ ಮೂಡಿ ಬಯಿಂದು.ತೂಷ್ಣಿಲಿ ಭೂಮಿ ಪೂಜೆ ಮಾಡಿದ್ದದು ಒಳ್ಳೆದಾಯಿದು.ವಿವರ ಒದಗಿಸಿದ್ದದಕ್ಕೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×